ಮನೆಯ ಪಕ್ಕದ ಜಾಗ ಖರೀದಿಗೂ ಇದೆ ವಾಸ್ತು ನಿಯಮ…

Team Udayavani, Apr 2, 2018, 5:41 PM IST

maneya-pakka.jpg

ನಮ್ಮ ದೈನಂದಿನ ಚಟುವಟಿಕೆಗಳು, ವ್ಯಾವಹಾರಿಕ, ಸಾಮಾಜಿಕ ಬದುಕಿನ ಸಂದರ್ಭಗಳು ಆಗಾಗ ಏನನ್ನಾದರೂ ಕೊಂಡುಕೊಳ್ಳುವ, ಮಾರುವ ವಿಚಾರದಲ್ಲಿ ದಿಢೀರಾದ ನಿರ್ಧಾರಗಳನ್ನು ತಳೆಯಲು ಒತ್ತಡ ತರುತ್ತಿರುತ್ತವೆ. ಆದರೆ ಮನಬಂದಂತೆ ಖರೀದಿಗೆ ಮುಂದಾಗಬಾರದು. ಯಾರೇ ಆಗಲಿ, ನಮ್ಮ ನಿವೇಶನದ ದಕ್ಷಿಣದ ಅಥವಾ ಪಶ್ಚಿಮದ ಭಾಗಗಳನ್ನು ಖರೀದಿಸಲು ಮುಂದಾಗಬಾರದು. ಕೃಷಿ ಭೂಮಿಯ ವಿಚಾರವಾಗಿಯೂ ಈ ಅಂಶವನ್ನು ಗಮನಿಸಬೇಕು.

ಪೂರ್ವದ ಜಾಗೆಯೂ, ಜಮೀನೋ ಆದರೆ ಖರೀದಿಯ ಮೂಲಕ ವಿಸ್ತರಿಸಿಕೊಳ್ಳಬಹುದು. ಎಷ್ಟು ಬೇಕಾದರೂ ಕೊಂಡುಕೊಳ್ಳಬಹುದು. ಇಂಥ ಖರೀದಿಯಿಂದ ಸಂವರ್ಧನೆಗೆ ಅವಕಾಶ ಉತ್ತಮ. ಹೀಗೆ ಕೊಂಡು ಕೊಳ್ಳುವಾಗ ಖರೀದಿಸುವವನ ಮನೆಗೆ ಪೂರ್ವ ದಿಕ್ಕಿನ ಭಾಗದ ಮುಂಬಾಗಿಲು ಆಗಿದ್ದರೆ, ಇಂಥ ಮನೆಗೆ ಉತ್ತರದಲ್ಲಿರುವ ಜಾಗವನ್ನು ಮತ್ತೆ ಪರಿಶೀಲಿಸಬೇಕು. ಏಕೆಂದರೆ, ಖರೀದಿ ಮಾಡುತ್ತಿರುವ ಜಾಗ ಖರೀದಿದಾರನ ಮನೆಯ ಸಮತಟ್ಟಿಗಿಂತ ಎತ್ತರವಾಗಿದ್ದರೆ ಖರೀದಿ ನಿಷಿದ್ಧವಾಗಿರುತ್ತದೆ.

ಇನ್ನು ಖರೀದಿಸುವವನ ನಿವೇಶನವು ಪೂರ್ವದ ಕಡೆಯಿಂದ ಈ ಶಾನ್ಯದ ಬೀದಿಯನ್ನು ದರ್ಶಿಸುತ್ತಿದ್ದರೆ ಉತ್ತರ ಜಾಗಕೊಳ್ಳುವ ಸಮಯಕ್ಕೆ ಅದರದ್ದೇ ಆದ ನಿಯಮ ಒಂದಿದೆ. ಪೂರ್ತಿ ನಿವೇಶನಕ್ಕೆ ಪೂರ್ವದ ಆಗ್ನೇಯ ಕಡಿಗೊಳಗಾಗಿದ್ದರೆ ಈ ಜಾಗವನ್ನು ಕೊಂಡು ಕೊಳ್ಳಲೇಬಾರದು. ಇದು ಗಮನಾರ್ಹ ಅಂಶ . ಇದೇ ರೀತಿ ಖರೀದಿ ಮಾಡುವವನ ನಿವೇಶನ ಪಶ್ಚಿಮ ವಾಯುವ್ಯ ಬೀದಿಯ ಕಡೆ ನೋಟ ಪಡೆದಿದ್ದರೆ ಉತ್ತರ ಜಾಗ ಕೊಳ್ಳುವಾಗ ಜಾಗ್ರತೆ ಬೇಕು. ಕೊಳ್ಳುವವನ ನಿವೇಶನಕ್ಕೆ ಈ ಉತ್ತರ ಭಾಗದ ಪಶ್ಚಿಮ ನೈಋತ್ಯವು ಕಡಿತಕೊಳಗಾಗಿದ್ದರೆ ಖರೀದಿಯನ್ನು ಕೈ ಬಿಡುವುದು ಸರಿಯಾದುದು. ನಿರ್ಲಕ್ಷ್ಯಬೇಡ.
 
ಮುಖ್ಯವಾಗಿ ಕೊಂಡು ಕೊಳ್ಳುವ ಖರೀದಿಗಾರನ ಮನೆಯ ಈಶಾನ್ಯದ ಭಾಗ ಹಿಗ್ಗುವ ಹಾಗೆ ಜಾಗದ ಖರೀದಿಗೆ ಅವಕಾಶ ನೀಡಬೇಕು. ಹಾಗಿಲ್ಲದೇ ಹೋದರೆ ಒಳ್ಳೆಯ ದಿನಗಳನ್ನು ಕಾಣುವಂತೆ ವರ್ತಮಾನ ಉತ್ಕರ್ಷವನ್ನು ಪಡೆಯದು. ಪೂರ್ವದ ಭಾಗ ಖರೀದಿಸುವಾಗಲೂ ಖರೀದಿ ಮಾಡುವವನ ಮನೆಗಿಂತಲೂ ಖರೀದಿಗೊಳಪಡುವ ಜಾಗ ಎತ್ತರದಲ್ಲಿ ಇರಲೇಕೂಡದು. ಹೀಗೆ ಕೊಳ್ಳುವ ಪೂರ್ವದ ಜಾಗ ಖರೀದಿಸುವವನ ಮನೆಯ ಈಶಾನ್ಯದ ಕೊನೆಯ ತನಕವೂ ಹರಡಿಕೊಂಡಿರಬೇಕು. ಇಲ್ಲದಿದ್ದರೆ ಕಷ್ಟವೇ.

ಖರೀದಿಯ ಸಂದರ್ಭದಲ್ಲಿ ಕೊಡಲ್ಪಡುವ ಜಾಗ ಸಂತೋಷದಿಂದ ನೀಡುವಂತಿದ್ದರೆ ಉತ್ತಮವಾದದ್ದು. ಯಾವ ಸಂದರ್ಭದಲ್ಲೂ ಮುನಿಸಿಗೆ, ಅಸಮಾಧಾನಗಳಿಗೆ ಅವಕಾಶ ಒದಗಿ ಬರಲೇಕೂಡದು. ಖರೀದಿ ಮಾಡಲ್ಪಟ್ಟ ಜಾಗ ಉಪಯೋಗಕ್ಕೆ ಕೂಡಲೇ ಸಿಗುವಂತೆ ಕಟ್ಟಡಗಳು ಎದ್ದೇಳುವುದಾದರೆ ಉತ್ತಮ. ಇಲ್ಲದಿದ್ದರೆ ಕೊಂಡವನ ಜಾಗೆಗೆ ಖರೀದಿಸಲ್ಪಟ್ಟ ಜಾಗ ಸೇರಿಕೊಂಡಾಗ ಅಖಂಡವಾಗಿ ಒಂದೇ ಆಗಿದ್ದು ಬಹಳ ಕಾಲ ಕೊಂಡವನ ಮೂಲ ಮನೆಗಿಂತ ಖರೀದಿಸಲ್ಪಟ್ಟ ಜಾಗ ತಗ್ಗಿನಲ್ಲೇ ಇರುವಂತಾಗಬಾರದು.  

ಕಟ್ಟಲ್ಪಟ್ಟಾಗಲೂ ಕಟ್ಟಿದ ಜಾಗವನ್ನು ಬಾಡಿಗೆ ಕೊಡುವುದಾದರೆ ಎತ್ತರದ ಭಾಗ ಮಾಲೀಕನಿಗೆ ಉಪಯೋಗಕ್ಕೆ ಸಿಗಬೇಕು. ತಗ್ಗಾದ ಜಾಗ ಬಾಡಿಗೆಯವನಿಗೆ ಸಿಗಬೇಕು. ಹೀಗೆ ಬಾಡಿಗೆಗೆ ತೆಗೆದುಕೊಂಡ ಜಾಗ ಯಾವುದಾದರೂ ಕಾರಣಕ್ಕೆ ಖಾಲಿ ಮಾಡುತ್ತಿರುವಂತೆಯೇ ಬೇರೊಬ್ಬ ಬಾಡಿಗೆ ದಾರ ಸಿಕ್ಕುವುದರಲ್ಲಿ ಕ್ಷೇಮವಿದೆ. ಯಾರೂ ಬರಲಿಲ್ಲವೆಂದರೆ ತಾವೇ ಖಾಲಿಯಾದ ಜಾಗವನ್ನು ಸುಮ್ಮನೆ ಬಿಡಬಾರದು. ಬಾಡಿಗೆಗೆ ಬರುವ ಜನ ವಾಸಿಸಲು ಬರುವವರೆಗೂ ಮಾಲೀಕನೇ  ಆ ಜಾಗದಲ್ಲಿ ವಾಸಿಸಬೇಕು. ಹಾಗಲ್ಲದೇ ಹೋದರೆ ಮಾಲೀಕನಿಗೆ ತೊಂದರೆಗಳು ಉದ್ಭವಿಸಲು ಅವಕಾಶ ಕೂಡಿಬರಲು ಸಾಧ್ಯ.

ಖಾಲಿಯಾಗಿರುವ ಬಾಡಿಗೆಗೆ ಇಟ್ಟ ಜಾಗ ಬಹಳ ಕಾಲ ಖಾಲಿ ಇದ್ದರೆ, ಖಾಲಿಯಾದ ಆ ಜಾಗದ ಭಾರ ಮಾಲೀಕನ ನಿವೇಶನ/ ಮನೆಯ ಮೇಲೆ ಬಿದ್ದು ಕುಸಿತದ ಸೂಚನೆ ಕಂಡಬರಲು ಸಾಧ್ಯ. ಒಟ್ಟಿನಲ್ಲಿ ಇರುವ ಮನೆಯ ಅಕ್ಕಪಕ್ಕದಲ್ಲಿ ಜಾಗ ಕಡಿಮೆ ಹಣಕ್ಕೆ ಸಿಗುತ್ತದೆ ಎಂದ ಮಾತ್ರಕ್ಕೆ ಖರೀದಿಸಿಡಬಾರದು. ಖರೀದಿಗೂ, ವಿಲೇವಾರಿಗೂ, ಸಾಧಕ ಬಾಧಕಗಳಿಂದ ನಿಯಂತ್ರಿಸಲೂ, ತನ್ನದೇ ಆದ ನಿಯಮಗಳಿವೆ. ಎಚ್ಚರ ಇರಲಿ. 

* ಅನಂತಶಾಸ್ತ್ರಿ

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.