ಗಾರೆ ಇಲ್ಲದ ಗೋಡೆ
Team Udayavani, Dec 18, 2017, 3:46 PM IST
ಹತ್ತಿಪ್ಪತ್ತು ವರ್ಷವಲ್ಲ, ನೂರು ವರ್ಷದವರೆಗೂ, ಗೋಡೆಗಳು ಗಟ್ಟಿಮುಟ್ಟಾಗಿ ಉಳಿಯಬೇಕು ಅನ್ನುವವರು ಗಾರೆ ಬಳಸದೆ ಕಲ್ಲಿನ ಗೋಡೆಗಳನ್ನು ನಿರ್ಮಿಸಬೇಕು. ಮನೆಯ ತುಂಬಾ ಗಾರೆಯಿಲ್ಲದ ಗೋಡೆಗಳು ಇರಬೇಕು ಎಂದೇನಿಲ್ಲ. ಎಲ್ಲಿ ಬೇಕೋ ಅಲ್ಲೆಲ್ಲ, ಅಗತ್ಯಕ್ಕೆ ತಕ್ಕಂತೆ ಒಳಗೋಡೆಗಳನ್ನು ಕಟ್ಟಬಹುದು.
ಗೋಡೆ ಕಟ್ಟುವಾಗ ಗಾರೆ ಬಳಸಲೇಬೇಕು ಎಂಬುದು ಕಾನೂನೇ? ಖಂಡಿತ ಇಲ್ಲ. ಏಕೆಂದರೆ, ಗಾರೆ ಬಳಸದೇ ಗೋಡೆ ಕಟ್ಟುವ ಸಂಪ್ರದಾಯ, ತಂತ್ರಜ್ಞಾನ ಅನಾದಿಕಾಲದಿಂದಲೂ ನಮ್ಮಲ್ಲಿದೆ. ಹಾಗೂ ಹೀಗೆ ಕಟ್ಟಿದ ಗೋಡೆಗಳು ಸಾವಿರಾರು ವರ್ಷ ಗಟ್ಟಿಮುಟ್ಟಾಗಿಯೂ ಉಳಿಯುತ್ತದೆ ಎಂಬುದಕ್ಕೆ ಸಾಕ್ಷಿಗಳೂ ಇವೆ. ಗಾರೆ ಬಳಸದೆ ಕಟ್ಟುವ ಗೋಡೆಗೆ ಸ್ವಲ್ಪ ಹೆಚ್ಚು ಪರಿಶ್ರಮ ಹಾಗೂ ಪರಿಣತಿ ಬೇಕಾಗುತ್ತದೆ ಎಂಬುದು ನಿಜ.
ದೇವಸ್ಥಾನಗಳಲ್ಲಿ, ಕೋಟೆ ಕೊತ್ತಲಗಳಲ್ಲಿ ಬಳಕೆ
ಸಾವಿರಾರು ವರ್ಷ ಉಳಿಯಬೇಕು ಎಂದೇ ಕಟ್ಟುವ ಪ್ರಮುಖ ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ ಹೆಚ್ಚಿನವನ್ನು ಅನೇಕವನ್ನು ಗಾರೆ ಬಳಸದೆ ಕಟ್ಟಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ- ಗಾರೆ ಬಳಸಿದರೆ, ನಮ್ಮ ಗೋಡೆಯ ಗಟ್ಟಿತನ ಅದಕ್ಕೆ ಬಳಸಲಾಗುವ ಮಿಶ್ರಣದ ಮೇಲೆಯೇ ನಿರ್ಧಾರಿತವಾಗುತ್ತದೆ. ನಾವು ಎಷ್ಟೇ ಸಿಮೆಂಟ್ ಇಲ್ಲವೇ ಸುಣ್ಣವನ್ನು ಮರಳಿಗೆ ಹಾಕಿ ಗಾರೆ ಅರೆದರೂ ಅದು ಕಲ್ಲಿನಷ್ಟು ಗಟ್ಟಿಯಾಗಿ ನಿಲ್ಲುವುದಿಲ್ಲ. ಕಡೆಗೆ ನಾವು ಗಾರೆ ಬಳಸಿ ಕಟ್ಟುವ ಗೋಡೆಗಳು ಅಬ್ಬಬ್ಬ ಅಂದರೆ ಮಿಶ್ರಣ ಎಷ್ಟು ಗಟ್ಟಿ ಇರುತ್ತದೋ ಅಷ್ಟು ಮಾತ್ರ ಗಟ್ಟಿಯಾಗಿ ಇರುತ್ತವೆ. ನೀವು ಸಿಮೆಂಟ್ ಮರಳು ಮಿಶ್ರಣವನ್ನು ಒಂದಕ್ಕೆ ಆರರಂತೆ ಬೆರೆಸಿ, ಗಾರೆ ತಿರುಗಿಸಿ, ಕಲ್ಲಿನ ಗೋಡೆ ಕಟ್ಟಿದರೆ ಅದು ಚದರ ಸೆಂಟಿಮೀಟರ್‌ಗೆ ಸುಮಾರು ಐದು ಕೆ.ಜಿಯಷ್ಟು ಭಾರ ಹೊರಬಲ್ಲದು, ಅಷ್ಟೇ!
ಅದೇ ಕಲ್ಲಾದರೆ, ಪ್ರತಿ ಚದುರ ಸೆಂಟಿಮೀಟರಿಗೆ ಸುಮಾರು ನೂರು ಕೆಜಿಯಷ್ಟು ಭಾರ ಹೊರಬಲ್ಲದು. ಹಾಗಾಗಿ ನಿಮಗೆ ಹೆಚ್ಚು ಭಾರ ಹಾಗೂ ಬಹುಕಾಲ ಬಾಳಿಕೆ ಬರುವ ಗೋಡೆ ಬೇಕೆಂದರೆ ಡ್ರೆ„ಮೆಸನ್ರಿ- ಗಾರೆ ಇಲ್ಲದ ಗೋಡೆಗಳನ್ನು ಕಟ್ಟಿಕೊಳ್ಳುವುದು ಅನಿವಾರ್ಯ.
ಗಾರೆಯ ಇತರೆ ಮಿತಿಗಳು
ಸಿಮೆಂಟ್, ಸುಣ್ಣಕ್ಕೆ ಹೋಲಿಸಿದರೆ ಮರಳು, ಕಲ್ಲುಗಳ ಗಟ್ಟಿತನ ಹಾಗೂ ಬಾಳಿಕೆ ಹೆಚ್ಚಿದ್ದು, ಯಾವುದೇ ಗೋಡೆ ಅದಕ್ಕೆ ಬಳಸಿದ ಬೆರಕೆ ವಸ್ತುವಿನಷೇr ಕಾಲ ಬಾಳುತ್ತದೆ. ಅಂದರೆ ಸುಣ್ಣ ಕೆಲಕಾಲದ ನಂತರ ಅದರ ಗಟ್ಟಿತನವನ್ನು ಕಳೆದುಕೊಳ್ಳಬಹುದು. ಸಿಮೆಂಟ್ ಕೂಡ ಕಾಲಾಂತರದಲ್ಲಿ ದುರ್ಬಲ ಹೊಂದಬಹುದು. ಸುಣ್ಣದ ಗಾರೆ ಹಾಗೂ ಸಿಮೆಂಟ್ ಮಿಶ್ರಣದಲ್ಲಿ ಅನೇಕಬಾರಿ ಗಿಡಗಳು ಬೇರೂರುವುದನ್ನು ನಾವು ನೋಡಿದ್ದೇವೆ. ಆದರೆ, ಕಲ್ಲು ಹಾಗಲ್ಲ. ಆದುದರಿಂದ ಕಲ್ಲುಗೋಡೆಯನ್ನು ಶಾಶ್ವತ ಕಟ್ಟಡಗಳಿಗೆ ಬಳಸುವುದರಿಂದ ಅನೇಕ ಲಾಭಗಳಿವೆ.
ಗಾರೆ ಇಲ್ಲದ ಗೋಡೆ ಕಟ್ಟುವಿಕೆ
ಮನೆಗೆಂದು ಪಾಯ ಇಲ್ಲವೇ, ಕಲ್ಲಿನ ಗೋಡೆ ಕಟ್ಟುವಾಗ ನಾವು ಸಾಮಾನ್ಯವಾಗಿ ಸೈಜು ಮಾಡಿದ ಕಲ್ಲುಗಳನ್ನು ಬಳಸುತ್ತೇವೆ. ಇವೆಲ್ಲವೂ ಸ್ವಲ್ಪ ಹೆಚ್ಚಾ ಕಡಿಮೆ ಅಳತೆ ಇರುತ್ತದೆಯೇ ಹೊರತು ಎಲ್ಲವೂ ಒಂದೇ ಸಮನಾಗಿ ಇರುವುದಿಲ್ಲ. ಆದರೆ ಡ್ರೆ„ಮೇಸನ್ರಿಯಲ್ಲಿ ಕಲ್ಲುಗಳು ಎಲ್ಲ ರೀತಿಯಲ್ಲಿಯೂ ಒಂದೇ ಸಮನಾಗಿ, ಮಟ್ಟಸವಾಗಿರುವಂತೆ ನೋಡಿಕೊಳ್ಳುವುದು ಅನಿವಾರ್ಯ. ಹಾಗೆಯೇ, ಒಂದು ಕಲ್ಲನ್ನು ಮತ್ತೂಂದರ ಮೇಲೆ ಇಟ್ಟರೆ ಅವು ಅಲುಗಾಡಬಾರದು. ಎಲ್ಲ ಕಲ್ಲುಗಳೂ ಒಂದೇ ಉದ್ದದ್ದಾಗಿರಬೇಕು ಎಂದೇನೂ ಇಲ್ಲ.
ಎತ್ತರ ಹಾಗೂ ಅಗಲ ಒಂದಾಗಿದ್ದು, ಉದ್ದದಲ್ಲಿ ಹೆಚ್ಚಾಕಡಿಮೆ ಇದ್ದರೂ ಪರವಾಗಿಲ್ಲ, ವರಸೆಯ ಕಡೆಯ ಕಲ್ಲನ್ನು ಮಾತ್ರ ಅಳತೆ ನೋಡಿ ಇಡಬೇಕಾಗುತ್ತದೆ. ಕೆಲವೊಮ್ಮೆ ಕಲ್ಲುಗಳು ಒಂದಕ್ಕೊಂದು ಬಿಗಿದುಕೊಳ್ಳುವ ರೀತಿಯಲ್ಲೂ ಮಾಡಿ ಗೋಡೆಗಳನ್ನು ಕಟ್ಟಲಾಗುತ್ತದೆ.
ಒಣ ಗೋಡೆಗಳ ಇತರೆ ಲಾಭಗಳು
ಕೆಲವೊಮ್ಮೆ ಗೋಡೆಗಳು ಜಾಲಾಂದ್ರದಂತೆ ಕಾರ್ಯ ನಿರ್ವಸುತ್ತವೆ. ನಿಮಗೆ ಮನೆಯೊಳಗೆ ಗಾಳಿ ಆಡಬೇಕು, ಆದರೆ ಹೊರಗಿನಿಂದ ಒಳಗೆ ಕಾಣಬಾರದು ಎಂದಿದ್ದರೆ ಆಗ ನೀವು ಒಣ ರಬಲ್ ಮೆಸನ್ರಿಗೆ ಮೊರೆ ಹೋಗಬಹುದು. ಇಲ್ಲಿ ಹೆಚ್ಚು ಮಟ್ಟಸವಾದ ಕಲ್ಲುಗಳನ್ನು ಬಳಸದೆ, ಹೆಚ್ಚಾ ಕಡಿಮೆ ಇರುವ ಕಲ್ಲುಗಳನ್ನು ಸರಿದೂಗಿಸಲು, ಸಣ್ಣ ಸಣ್ಣ ಕಲ್ಲುಚೂರುಗಳನ್ನು ಇಲ್ಲವೇ ಸಂಧಿಯನ್ನು ಬಿಡಲಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ, ಕಲ್ಲುಗಳು ಒಂದನ್ನೊಂದು ಬೆಸೆದುಕೊಳ್ಳಲು ಪ್ರಾಮುಖ್ಯತೆ ನೀಡಿ, ಸಂದುಗೊಂದುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಹೀಗೆ ಉಂಟಾದ ಸಣ್ಣಸಣ್ಣ ಸಂದುಗಳನ್ನೇ ಜಾಲಾಂದ್ರಗಳಲ್ಲಿರುವ ರಂಧ್ರಗಳಂತೆ ಬಳಸಲಾಗುತ್ತದೆ.
ಹೆಚ್ಚು ಉಷ್ಣಾಂಶವಿರುವ ಪ್ರದೇಶಗಳಲ್ಲೂ, ಹೆಚ್ಚು ಸೆಖೆ ಇದ್ದು, ಧಾರಾಳವಾಗಿ ಗಾಳಿ ಆಡಬೇಕು ಎನ್ನುವ ಪ್ರದೇಶಗಳಲ್ಲೂ ಈ ಮಾದರಿಯ ಡ್ರೆ„ ಮೇಸನ್ರಿ ಗೋಡೆಗಳನ್ನು ಕಟ್ಟಿಕೊಳ್ಳಬಹುದು. ಕಿಟಕಿ ಬಾಗಿಲು ಇಡಲು ಮಾತ್ರ ಒಂದಷ್ಟು ಗಾರೆ ಬಳಸಿ, ಮಿಕ್ಕಜಾಗದಲ್ಲಿ ಹಾಗೆಯೇ ಬಿಡಬಹುದು. ಸೂರಿನಿಂದ ನೀರು ನೇರವಾಗಿ ಈ ಮಾದರಿಯ ಗೋಡೆಗಳ ಮೇಲೆ ಬೀಳದಂತೆ ಕಾಳಜಿವಹಿಸುವುದು ಅನಿವಾರ್ಯ. ಹಾಗೆಯೇ ಇಲಿ ಹೆಗ್ಗಣ ಮನೆಯೊಳಗೆ ಬಾರದಂತೆ, ಸಾಕಷ್ಟು ಸಣ್ಣ ಸಂಧಿಗಳನ್ನು ಬಿಡುವುದು ಅಗತ್ಯ. ನಿಮ್ಮ ಮನೆಗೆ ಜಾಲಾಂದ್ರಕ್ಕಿಂತ ಹೆಚ್ಚು ಸದೃಢ ಹಾಗೂ ಹೆಚ್ಚು ಕಾಲ ಬಾಳುವ ಗೋಡೆ ಬೇಕೆಂದರೆ ಗಾರೆ ಇಲ್ಲದ ಗೋಡೆಗಳನ್ನು ಕಟ್ಟಿಕೊಳ್ಳಬಹುದು. ಇಡಿ ಮನೆ ಇದೇ ಮಾದರಿಯಲ್ಲಿ ಇರಬೇಕು ಎಂದೇನೂ ಇಲ್ಲ. ಎಲ್ಲಿ ಬೇಕೋ ಅಲ್ಲೆಲ್ಲ, ಅಗತ್ಯಕ್ಕೆ ತಕ್ಕಂತೆ ನಾವು ಒಣ ಗೋಡೆಗಳನ್ನು ಕಟ್ಟಬಹುದು. ನಮ್ಮಲ್ಲಿ ಅನೇಕ ತಂತ್ರಜ್ಞಾನಗಳು ಆವಿಷ್ಕಾರವಾಗಿ ಹೆಚ್ಚು ಬಳಕೆಯಲ್ಲಿರದೆ ಉಳಿಯುತ್ತದೆ. ಇಂಥವನ್ನು ಅಲ್ಲಲ್ಲಿ ಸ್ವಲ್ಪವಾದರೂ ಬಳಸಿದರೆ, ಪ್ರಾಚೀನ ಜ್ಞಾನ ಉಳಿಯುವುದರೊಂದಿಗೆ ಅದರ ಎಲ್ಲ ಲಾಭವನ್ನೂ ನಾವು ಪಡೆಯಬಹುದು.
ಹೆಚ್ಚಿನ ಮಾತಿಗೆ ಫೋನ್ 98441 32826
ಆರ್ಕಿಟೆಕ್ಟ್ ಕೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ಕೇಜ್ರಿವಾಲ್ ಚುನಾವಣೆಯಲ್ಲಿ ನೀಡಿದ್ದ ಒಂದೂ ಭರವಸೆ ಈಡೇರಿಸಿಲ್ಲ: ಬಿಜೆಪಿ ವಾಗ್ದಾಳಿ
2025 ‘ಸುಧಾರಣೆಗಳ ವರ್ಷ’ಎಂದು ಘೋಷಣೆ ಮಾಡಿದ ರಕ್ಷಣ ಸಚಿವಾಲಯ
Kaup: ಎಲ್ಲೂರು ಘಟಕದಲ್ಲಿ ಉಚ್ಚಿಲದ ತ್ಯಾಜ್ಯ ವಿಲೇವಾರಿ ಬೇಡಿಕೆ
Udupi: ಹುಲ್ಲು ಕೊಯ್ಯುವ ಯಂತ್ರಕ್ಕೆ ಸಿಲುಕಿದ್ದ ಹೆಬ್ಬಾವಿಗೆ ಶಸ್ತ್ರಚಿಕಿತ್ಸೆ
Video: ಚಿಂದಿ ಆಯುವ ಮಕ್ಕಳ ಕೈಯಲ್ಲಿ 500 ರ ಕಂತೆ ಕಂತೆ ನೋಟು… ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.