ಹಲಸು ಲಾಭ ಹುಲುಸು
Team Udayavani, May 14, 2018, 2:14 PM IST
ತುಮಕೂರು, ಗುಬ್ಬಿಯ ಸುತ್ತಮುತ್ತ ಅಡಿಕೆ, ತೆಂಗು, ಮಾವಿನ ಕೃಷಿಯೇ ಹೆಚ್ಚು. ಆದರೆ ಈಗ ಒಂದಷ್ಟು ರೈತರು ಹಲಸಿನ ಕಡೆಗೆ ವಾಲಿದ್ದಾರೆ. ತಾಲೂಕಿನ ಚೇಳೂರಿನಲ್ಲಿರುವ ರೈತ ಸಿದ್ಧರಾಜು, ರಾಷ್ಟ್ರೀಯ ತಳಿಸಂರಕ್ಷಕ ಪ್ರಶಸ್ತಿಯನ್ನು ಗಳಿಸಿರುವುದೂ ಕೂಡ ಇದಕ್ಕೆ ಸ್ಫೂರ್ತಿ ಇರಬಹುದು. ಈ ಹಲಸಿನ ತಳಿಯ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚಯಾಗಿತ್ತು. ಸಿದ್ದೇಶ್ ಕಂಡುಹಿಡಿದ ಈ ತಳಿಗೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ” ಸಿದ್ದು ಹಲಸು’ ಎಂದು ನಾಮಕರಣ ಮಾಡಿದ್ದು ಈ ಭಾಗದಲ್ಲಿ ಹಲಸಿನ ಕೃಷಿಗೆ ಪರೋಕ್ಷವಾಗಿ ಉತ್ಸಾಹ ತುಂಬಿಂದಂತಾಗಿದೆ.
ರುದ್ರಾಕ್ಷಿ ಹಲಸು, ಹರಿಶಿಣ, ಕೆಂಪು ವರ್ಣದ ಹಲಸು, ಜಾಣಗೆರೆ, ಚಂದ್ರ ಹಲಸು, ಶಿವಮೊಗ್ಗ ಹಳದಿ, ಮೇಣರಹಿತ ಹಲಸು, ಶಿಡ್ಲಘಟ್ಟ, ಸಿಂಗಾಪುರ್, ಮದ್ದೂರ್ ಬಿಳಿ, ಲಾಲ್‌ಬಾಗ್, ಮಂಕಳಲೆ ಚಂದ್ರ ಹಲಸು, ಸುವರ್ಣಋತು ಹಲಸು, ಸದಾನಂದ, ಲಾಲ್‌ಬಾಗ್ ಮಧುರ, ತೂಬುಗೆರೆ ಚಂದ್ರಬುಕ್ಕೆ, ಚಂದ್ರ, ಹೇಮ ಚಂದ್ರ ಹಲಸು ಹೀಗೆ, ಹಲಸಿನ ತಳಿಯಲ್ಲೂ ಹಲವು ವಿಧಗಳಿವೆ. ಇವುಗಳಲ್ಲಿ ಬಹುತೇಕ ತಳಿಗಳನ್ನು ಇಲ್ಲಿ ಬೆಳೆಯುತ್ತಾರೆ.
ಈ ಭಾಗದಲ್ಲಿ ರೈತರು ಹಲಸನ್ನು ಮಿಶ್ರ ಅಥವಾ ಬದುವಿನ ಬೆಳೆಯಾಗಿ ಬೆಳೆಯುತ್ತಾರೆ. ಇಲ್ಲಿ ಯಾವುದೇ ರಾಸಾಯನಿಕಗಳನ್ನು ಉಪಯೋಗಿಸದೆ ಬೆಳೆಸುವುದರಿಂದ ಬೇಡಿಕೆ ಹೆಚ್ಚಿಗೆ ಇದೇ ಎನ್ನುತ್ತಾರೆ ರೈತ ದೊಡ್ಡನೆಟ್ಟಕುಂಟ ಡಿ.ರಾಜೇಶ್.
ಲಾಭ ಹೇಗೆ?
ರೈತರು ಒಂದು ಹೆಕ್ಟೇರಿನಲ್ಲಿ ಅಂದಾಜು 100 ಮರಗಳನ್ನು ಬೆಳೆಸಬಹುದು. ಇವು ನಾಲ್ಕು ಅಥವಾ ಐದು ವರ್ಷಗಳಲ್ಲಿ ಕಾಯಿ ಬಿಡಲು ಪ್ರಾರಂಭಿಸುತ್ತದೆ. ಕಸಿ ಮಾಡಿದ ಸಸಿಗಳಾದರೆ 3 ವರ್ಷಕ್ಕೆ ಕಾಯಿ ಬಿಡುತ್ತವೆ.
10 ವರ್ಷ ವಯಸ್ಸಾದ ಮರವು ಸುಮಾರು 100 ರಿಂದ 150 ಕಾಯಿಗಳನ್ನು ಬಿಡುತ್ತದೆ. ಒಂದು ಕಾಯಿಗೆ 100ರೂ. ಸಿಕ್ಕರೂ ಲಾಭವೋ ಲಾಭ.
ಹಲಸು, ಬಹುಬಳಕೆಯ ಹಣ್ಣು. ಇದರ ಚಿಪ್ಸ್‌ಗೆ ಹೆಚ್ಚು ಬೇಡಿಕೆ ಇದೆ. ಒಂದು ಕೆಜಿ ಚಿಪ್ಸ್ ಗೆ 400 ರೂ. ಬೆಲೆ ಇದೆ. ನಾವು ಮಾಡುವ ಹಪ್ಪಳ ಮತ್ತು ಚಿಪ್ಸ್ ಅನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಸಾವಯವ ಕೃಷಿ ಮಾಡುತ್ತಿರುವ ಅಮ್ಮನಘಟ್ಟದ ಮಂಜುಳ.
– ಕೆಂಪರಾಜು ಜಿ.ಆರ್.ಗುಬ್ಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.