ಓಬಿರಾಯನ ಕಾಲದ್ದು ಕಾಯಿನ್ ಬೂತ್
Team Udayavani, Jul 20, 2020, 2:45 PM IST
ಸಾಂದರ್ಭಿಕ ಚಿತ್ರ
ಸಂಪರ್ಕ ಮಾಧ್ಯಮದಲ್ಲಿ ಎಸ್‌ಟಿಡಿ ಬೂತ್‌ಗಳ ಜಮಾನ ಅಂತ್ಯವಾಗಲು ಲ್ಯಾಂಡ್ ಲೈನುಗಳ ಉದಯ ಕಾರಣವಾಯಿತು. ಬೂತ್ ಮುಂದೆ ಕ್ಯೂ ನಿಂತು ಕಾಲ್ ಮಾಡುವುದು, ಯಾವ ಯಾವ ಹೊತ್ತಿಗೋ ಕರೆ ರಿಸೀವ್ ಮಾಡಲು ಕಾದು ಕುಳಿತುಕೊಳ್ಳುವ ತಾಪತ್ರಯಗಳನ್ನು ಇಲ್ಲವಾಗಿಸಿದ್ದು ಲ್ಯಾಂಡ್‌ಲೈನ್ ಫೋನುಗಳು. ಆದರೆ ಲ್ಯಾಂಡ್‌ಲೈನ್ ಫೋನುಗಳಿಗೆ ಒಂದು ಡೌನ್ ಸೈಡ್ ಇತ್ತು. ಅದೆಂದರೆ ಎಲ್ಲೆಂದರಲ್ಲಿ ಬಳಸಲು ಸಾಧ್ಯವಾಗದೇ ಇರುವುದು. ಅಂದರೆ, ಮನೆಯಿಂದ ಹೊರಬಿದ್ದಾಗ ಕಾಲ್ ಮಾಡಲು ಕಷ್ಟವಾಗುತ್ತಿದ್ದಿತು.
ಆಗಿನ್ನೂ ಮೊಬೈಲ್ ಜಮಾನಾ ಆರಂಭವಾಗಿರಲಿಲ್ಲ. ಅಂಥ ಸಂದರ್ಭದಲ್ಲಿ, ಮನೆಯಿಂದ ಹೊರಗೆ ಕರೆ ಮಾಡಲು ನೆರವಾಗಿದ್ದು ಕಾಯಿನ್ ಫೋನ್ ಬೂತ್‌ಗಳು. ಒಂದು ರೂ. ಹಾಕಿ ಅವಧಿ ಮುಗಿದು ಬೀಪ್ ಸೌಂಡು ಕೇಳಿಬಂದು, ಕಾಲ್ ಇನ್ನೇನು ಕಟ್ ಆಗಿಬಿಡಬೇಕು ಎನ್ನುವಷ್ಟರಲ್ಲಿ ಮತ್ತೂಂದು ಕಾಯಿನ್ ಹಾಕಿ ಮಾತನಾಡುವುದು ಎಲ್ಲರಿಗೂ ಅಭ್ಯಾಸವಾಗಿ ಹೋಗಿತ್ತು. ಮನೆಗಳಲ್ಲಿ ಲ್ಯಾಂಡ್‌ಲೈನ್ ಫೋನ್ ಇಲ್ಲದವರಿಗೆ ಕಾಯಿನ್ ಫೋನ್ ಬೂತ್‌ಗಳು ವರದಾನ ವಾಗಿದ್ದವು. ಹೆಚ್ಚಿನ ಶುಲ್ಕ ಬೇಡದ ಬೂತ್‌ಗಳನ್ನು ಎಲ್ಲೆಂದ ರಲ್ಲಿ ಅಳವಡಿಸಿರುತ್ತಿದ್ದುದರಿಂದ, ಅದನ್ನು ಹುಡುಕಿಕೊಂಡು ಅಲೆಯುವ ಅಗತ್ಯವೂ ಇರುತ್ತಿರಲಿಲ್ಲ.
ಇಂದಿಗೂ ಕೆಲವೆಡೆಗಳಲ್ಲಿ ಕಾಯಿನ್ ಫೋನ್ ಬೂತುಗಳನ್ನು ಕಾಣಬಹುದು. ಆದರೆ ಇಂದಿನ ಅನ್‌ಲಿಮಿಟೆಡ್ ಕಾಲ್ ಭರಾಟೆ ನಡುವೆ, ಹಿಂದಿದ್ದ ಪ್ರಾಮುಖ್ಯತೆಯನ್ನು ಕಾಯಿನ್ ಬೂತ್ ಫೋನುಗಳು ಕಳೆದುಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ
Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ
ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.