ಫಿಲಿಫೈನ್ಸ್ ಎಗ್ ಫ್ರೂಟ್ ಇಲ್ಲೂ ಬೆಳೆಯಬಹುದು
Team Udayavani, Sep 24, 2018, 6:00 AM IST
ಇಪ್ಪತ್ತು ವರ್ಷಗಳ ಹಿಂದೆ ಸ್ಟೀವನ್ ತಂದೆ, ಎಲ್ಲಿಂದಲೋ ತಂದ ಎಗ್ ಫ್ರೂಟ್ ಬೀಜವನ್ನು ಬಿತ್ತಿ ತಯಾರಿಸಿದ ಗಿಡ ಇದೀಗ ಮರವಾಗಿ ಬೆಳೆದಿದೆ. ಶೇ. 50ರಷ್ಟು ನೆರಳು, ಬೇಸಗೆಯಲ್ಲಿ ಬುಡ ತಂಪಿಡುವಷ್ಟು ನೀರು ಕೊಟ್ಟರೆ ಪರದೇಶದ ಹಣ್ಣ ನಮ್ಮಲ್ಲೂ ಬೆಳೆಯಬುದು ಅನ್ನೋದನ್ನು ತೋರಿಸಿದ್ದಾರೆ ಬೆಳ್ತಂಗಡಿಯ ಈ ಸ್ಟೀವನ್.
ಬೆಳ್ತಂಗಡಿಯ ಪೆರೊಡಿತ್ತಾಯಕಟ್ಟೆಯ ಅಲಂಗಾಯಿಯಲ್ಲಿರುವ ರೈತ ಸ್ಟೀವನ್ ಡಿಸೋಜರ ಅಡಕೆಯ ತೋಟದೊಳಗೆ ಎಗ್ ಫ್ರೂಟ್ ಮರ ಗೊಂಚಲು ಗೊಂಚಲಾಗಿ ಹಣ್ಣುಗಳನ್ನು ಬಿಟ್ಟಿದೆ. ಮಳೆಗಾಲ ಆರಂಭವಾದ ಮೇಲೆ ಅದು ಪಕ್ವವಾಗುವುದು ವಾಡಿಕೆ. ಹಸುರಾಗಿರುವ ಸಿಪ್ಪೆ, ಹಳದಿ ವರ್ಣಕ್ಕೆ ತಿರುಗುತ್ತ ಕಡು ಹಳದಿಯಾದಾಗ ಮೃದುವಾಗುತ್ತದೆ. ಹೊರಗಿನ ಸಿಪ್ಪೆ ಬಿರಿದು ಕೈಯಿಂದ ತೆಗೆಯುವಷ್ಟು ಮೆತ್ತಗಾಗುತ್ತದೆ.
ಒಳಗಿರುವ ಹಳದಿ ವರ್ಣದ ತಿರುಳು ಹೋಳಿಗೆಯ ಒಳಗಿರುವ ಕಡಲೇಬೇಳೆ ಹೂರಣದ ಹಾಗೆ ಹಿಟ್ಟಿನಂತಿದ್ದು ಸಿಯಾದ ಸ್ವಾದ ಹೊಂದಿದೆ. ಮನ ಸೆಳೆಯುವ ಪರಿಮಳವಿದೆ. ಸೇಬಿಗಿಂತ ದೊಡ್ಡ ಗಾತ್ರವಿರುವ ಹಣ್ಣನ್ನು ಹಾಗೆಯೇ ತಿನ್ನಬಹುದು. ಮಿಲ್ಕ್ಷೇಕ್, ಐಸ್‌ಕ್ರೀಮ್ ಮೊದಲಾದ ತಯಾರಿಕೆಗಳಿಗೂ ಒಗ್ಗುತ್ತದೆ.
ಇಪ್ಪತ್ತು ವರ್ಷಗಳ ಹಿಂದೆ ಸ್ಟೀವನ್ ತಂದೆ, ಎಲ್ಲಿಂದಲೋ ತಂದ ಎಗ್ ಫ್ರೂಟ್ ಬೀಜವನ್ನು ಬಿತ್ತಿ ತಯಾರಿಸಿದ ಗಿಡ ಇದೀಗ ಮರವಾಗಿ ಬೆಳೆದಿದೆ. ಶೇ. 50ರಷ್ಟು ನೆರಳು, ಬೇಸಗೆಯಲ್ಲಿ ಬುಡ ತಂಪಿಡುವಷ್ಟು ನೀರು ಮುಖ್ಯವಾಗಿ ಬೇಕು. ಮಳೆಯ ನೀರು ಬುಡದಲ್ಲಿ ನಿಲ್ಲದೆ ಹರಿದು ಹೋಗಬೇಕು. ಸಾವಯವ ಗೊಬ್ಬರ ಕೊಟ್ಟರೆ ಎಗ್ ಫ್ರೂಟ್ ಮರವು ಆರೇಳು ವರ್ಷಗಳಲ್ಲಿ ಫಲ ಕೊಡುತ್ತದೆ.
ಗೊಬ್ಬರ ಕೊಡದಿದ್ದರೂ ಮಣ್ಣಿನಲ್ಲಿರುವ ಪೋಷಕಾಂಶಗಳಿಂದಲೇ ಅದು ಆಹಾರ ಸ್ವೀಕರಿಸುತ್ತದೆ ಎನ್ನುತ್ತಾರೆ ಸ್ಟೀವನ್. ಹಳದಿ ಸಪೋಟಾ ಎಂದೂ ಹೆಸರಿರುವ ಎಗ್ ಫ್ರೂಟ್ ಪೌಟೇರಿಯಾಕಾಂ ಪಿಚಿಯಾನಾ ಎಂಬ ವೈಜಾnನಿಕ ಹೆಸರು ಪಡೆದಿದೆ. ನಿತ್ಯ ಹರಿದ್ವರ್ಣದ ಮರ. ಮೂಲತಃ ಫಿಲಿಫೈನ್ ದೇಶದ ಸಸ್ಯವಾದರೂ ಹಲವು ದೇಶಗಳಲ್ಲಿ ಕೃಷಿಯಾಗುತ್ತಿದೆ.
ಹಣ್ಣಿನೊಳಗಿರುವ ಬೀಜದಿಂದ ಗಿಡ ತಯಾರಿಸಿ ನೆಟ್ಟರೆ ಫಸಲು ಬರುವುದು ನಿಧಾನ. ಗ್ರಾಫ್ಟ್ ಕಸಿಯ ಗಿಡ ಶೀಘ್ರ ಹಣ್ಣು ಕೊಡುವುದಂತೆ. ಒಂದು ಮರದಿಂದ 500ರ ವರೆಗೂ ಹಣ್ಣನ್ನು ಪಡೆಯಬಹುದು. ಕೊಬ್ಬು, ಪೊ›ಟೀನ್, ರಂಜಕ, ಸುಣ್ಣ, ಕಬ್ಬಿಣ, ಬಿ ಜೀವಸಣ್ತೀ, ಕೆರೋಟಿನ್ ಮೊದಲಾದ ಪೋಷಕಾಂಶಗಳಿರುವ ಈ ಹಣ್ಣು ಆರೋಗ್ಯದ ದೃಷ್ಟಿಯಿಂದ ಲಾಭದಾಯಕ. ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡುತ್ತದೆ.
ಎದೆಯುರಿ, ಅಧಿಕ ರಕ್ತದ ಒತ್ತಡಗಳಿಗೂ ಮದ್ದಾಗುವುದಂತೆ. ತೊಗಟೆ ಮತ್ತು ಬೇರುಗಳಿಂದಲೂ ವಿವಿಧ ರೋಗನಾಶಕ ಚಿಕಿತ್ಸೆ ಮಾಡುತ್ತಾರೆಂಬ ವಿವರಗಳಿವೆ. ಮರಕ್ಕೆ ಕೊಂಬೆ ಸಾಯುವ ರೋಗ ಬರುತ್ತದೆ. ಆಗ ಆ ಕೊಂಬೆಯನ್ನು ಕತ್ತರಿಸದಿದ್ದರೆ ಇಡೀ ಮರವನ್ನು ರೋಗ ವ್ಯಾಪಿಸುತ್ತದೆ. ಎಲೆ ಚುಕ್ಕಿ ರೋಗವೂ ಬಾಧಿಸುವುದುಂಟು. ಗಾಳಿಗೆ ಕೊಂಬೆ ಮುರಿಯುತ್ತದೆ. ಹಣ್ಣು ಮರದಲ್ಲೇ ಆದರೆ ಅದನ್ನು ಚೀಲ ಕಟ್ಟಿ ಕೊಯ್ಯಬೇಕು.
ನೆಲಕ್ಕೆ ಬಿದ್ದರೆ ಹಣ್ಣು ಒಡೆದು ಹೋಗುತ್ತದೆ. ಕೆಳಗೆ ಬಿದ್ದ ಹಣ್ಣಿಗೆ ಕೀಟಗಳು ತಕ್ಷಣ ಆವರಿಸುತ್ತವೆ. ಹೀಗಾಗಿ ಮಾರುಕಟ್ಟೆಗೆ ಸಾಗಿಸುವುದು ಕಷ್ಟವಾಗಿದೆ ಎನ್ನುತ್ತಾರೆ ಸ್ಟೀವನ್. ಕೇರಳ, ತಮಿಳುನಾಡು, ಮಹಾರಾಷ್ಟ್ರಗಳ ರೈತರು ಇದನ್ನು ವ್ಯಾಪಕವಾಗಿ ಬೆಳೆದು ಮಾರುಕಟ್ಟೆಗೆ ಒಯ್ಯುತ್ತಾರೆ. ಈ ತಂತ್ರಜಾnನವನ್ನು ತಿಳಿದುಕೊಂಡರೆ ಇದರ ಅಧಿಕ ಕೃಷಿ ಮಾಡಿದರೂ ಗೆಲ್ಲಬಹುದೆನಿಸುತ್ತದೆ. ಮೂವತ್ತು ಅಡಿಯವರೆಗೆ ಎತ್ತರ ಬೆಳೆಯುವ ಈ ಮರ ನೂರಾರು ವರ್ಷ ಬದುಕುತ್ತದಂತೆ.
* ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.