ಪ್ಲಾನ್‌ ಮಾಡಿದ್ರೆ ಕಾಸು ಉಳಿಯುತ್ತೆ !


Team Udayavani, Feb 25, 2019, 12:30 AM IST

home-sss.jpg

ಜನ ಭವಿಷ್ಯವನ್ನು ತಿಳಿಯಲು ಆಕಾಶಕಾಯಗಳ ಮೊರೆಹೋಗುತ್ತಾರೆ. ಕನಸಿನ ಮನೆ ಹೇಗೆ ಕಟ್ಟಬಹುದು? ಅನ್ನೋ ಭವಿಷ್ಯ ತಿಳಿಯಲು ಮಾಡಬೇಕಾದ ಒಂದೇ ಒಂದು ಸಂಗತಿ ಎಂದರೆ – ನಿಖರವಾದ ಪ್ಲಾನ್‌ ಗಳನ್ನು ಮಾಡಿಸಿ ಮುಂದುವರೆಯುವುದೇ ಆಗಿದೆ! 

ಒಂದು ಮನೆ ಕಟ್ಟಲು ಅಬ್ಬಬ್ಟಾ ಎಂದರೆ ಎಷ್ಟು ವಿನ್ಯಾಸಗಳು ಬೇಕಾಗಬಹುದು? ನೆಲಮಹಡಿ, ಮೊದಲ ಮಹಡಿಗಳ ಎರಡು ಪ್ಲಾನ್‌ಗಳು ಇದ್ದರೆ ಸಾಕಾಗುತ್ತದೆಯೇ? ಖಂಡಿತ ಇಲ್ಲ! ಸ್ಟ್ರಕ್ಚರ್ಗೆ ಅಂದರೆ ಸೂರಿನ, ಕಾಲಂ, ಬೀಮ್‌, ಪಾಯ,  ಫ‌ುಟಿಂಗ್‌ ಇತ್ಯಾದಿಗಳ ಡ್ರಾಯಿಂಗ್‌ಗಳೂ ಖಂಡಿತ ಬೇಕಾಗುತ್ತದೆ.  ಹಾಗೆಯೇ, ಎಲಿವೇಷನ್‌ ಹಾಗೂ ಸೆಕ್ಷನ್‌ ಅಂದರೆ ಕಟ್ಟಡ ಕತ್ತರಿಸಿ ನೋಡಿದರೆ- ಎಕ್ಸ್‌ ರೇ ಮಾದರಿಯಲ್ಲಿ ಒಳಗೆ ಹೇಗೆ ಇರುತ್ತದೆ? ಎಂಬ ಡ್ರಾಯಿಂಗ್‌ಗಳೂ ಅತ್ಯಗತ್ಯ. ಇನ್ನು ಟಾಯ್ಲೆಟ್‌, ನೀರಿನ ಕೊಳವೆ, ಪ್ಲಂಬಿಂಗ್‌ – ವಿದ್ಯುತ್‌ ವಿನ್ಯಾಸಗಳೂ ಬೇಕಾಗುತ್ತದೆ. ಕಿಟಕಿ ಬಾಗಿಲಿನಿಂದ ಹಿಡಿದು ವಾರ್ಡ್‌ರೋಬ್‌ ವರೆಗಿನ ಡ್ರಾಯಿಂಗ್‌ ಜೊತೆಗೆ ಕಿಚನ್‌ ವಿನ್ಯಾಸಗಳೂ ಬೇಕಾಗುತ್ತದೆ. ನೀವು ನಿಮ್ಮ ಮನೆಯ ಎಲ್ಲವನ್ನೂ ಪೂರ್ವಭಾವಿಯಾಗಿ ನಿರ್ಧರಿಸಿಯೇ ಕಟ್ಟುತ್ತೇನೆ ಎಂದರೆ ಸರಾಸರಿ ನೂರಕ್ಕೂ ಅಧಿಕ ಪ್ಲಾನ್‌ಗಳ ಅಗತ್ಯ ಇರುತ್ತದೆ.  ಆದರೆ ಈ ಹಿಂದೆ ಹಾಗೂ ಈಗಲೂ ಅನೇಕಬಾರಿ ಮೂಲಭೂತವಾಗಿ ಬೇಕೇ ಬೇಕಾದ ಒಂದೆರಡು ಪ್ಲಾನ್‌ ಗಳನ್ನು ಇಟ್ಟುಕೊಂಡು ಮುಂದುವರೆಯುವುದೂ ಇದ್ದದ್ದೇ,  ಹತ್ತಾರು ಮನೆಗಳನ್ನು ಕಟ್ಟಿ, ಮನೆ ಕಟ್ಟುವ ಕೆಲಸ  ಎನ್ನುವುದು ಕರತಲಾಮಲಕ ಎನ್ನುವಷ್ಟು ನುರಿತವರಿದ್ದರೆ ಬಹುಶಃ  ಹೆಚ್ಚು ಪ್ಲಾನ್‌ಗಳಿಲ್ಲದೆ ಮನೆ ಕಟ್ಟಲು ಆಗುತ್ತದೆ. ಆದರೆ, ಎಲ್ಲವನ್ನೂ ಮೊದಲೇ ನಿರ್ಧರಿಸಲು ಈಗ ಲಭ್ಯವಿರುವ ಅತ್ಯಾಧುನಿಕವಾಗಿ  “ಕ್ಯಾಡ್‌’ ಡ್ರಾಯಿಂಗ್ಸ್‌ ಅಂದರೆ ಕಂಪ್ಯೂಟರ್‌ ಸಹಾಯದಿಂದ ತಯಾರಿಸಲಾದ ನಕಾಶೆಗಳನ್ನು ಬಳಸಿ,  ಎಲ್ಲವನ್ನೂ ಕಟ್ಟುವ ಮೊದಲೇ ವಿನ್ಯಾಸ ನೋಡಬಹುದು.

ಡ್ರಾಯಿಂಗ್‌ ಎಂದರೆ..,
ಮನೆ ಹಾಗೂ ಅದರ ವಿವಿಧ ಭಾಗಗಳನ್ನು ಮೊದಲೇ ಕಲ್ಪಿಸಿಕೊಳ್ಳಲು ಅನುಕೂಲಕರವಾದ ಸಲಕರಣೆಯೇ ನಕಾಶೆ. ಅನೇಕಬಾರಿ ಮನೆ ಕಟ್ಟುವವರೆಗೂ ಅದು ನಮಗೆ ಹೇಗೆ ಬರುತ್ತದೆ, ನಮ್ಮ ಆಸೆ,  ಕಲ್ಪನೆಗೆ ತಕ್ಕಂತೆ ಇರುತ್ತದೆಯೇ ಎನ್ನುವುದು ತಿಳಿದಿರುವುದಿಲ್ಲ. ಕಾಗದದ ಮೇಲೆ, ಅದರಲ್ಲೂ ಥೀÅಡಿ ಅಂದರೆ ನೈಜತೆಗೆ ಅತಿ ಹತ್ತಿರವಾಗಿ ವಿನ್ಯಾಸಗಳನ್ನು ಮೂಡಿಸಿ ನೋಡಿದರೆ ನಮಗೆ ನಮ್ಮ ಕನಸಿನ ಮನೆಯ ಪರಿಕಲ್ಪನೆ ಮೊದಲೇ ಬರುತ್ತದೆ. ಕಾಗದದ ಮೇಲೆ ಡ್ರಾಯಿಂಗ್‌ ಮಾಡಿನೋಡುವುದು ಎಲ್ಲದಕ್ಕಿಂತ ಅಗ್ಗ. ಒಮ್ಮೆ ಕಟ್ಟಿದ ಮೇಲೆ “ಹೀಗಲ್ಲ ಹಾಗಿರಬೇಕಿತ್ತು’ ಎಂದೆನಿಸಿ ಒಡೆಯಲು ಹೋದರೆ, ಮನೆ ಕಟ್ಟುವುದು ಅತಿ ದುಬಾರಿಯಾಗುತ್ತದೆ. ಈ ಹಿಂದೆ ಮನೆ ಎಂದರೆ ನಾಲ್ಕು ಗೋಡೆ,  ಒಂದು ಸೂರು ಎಂದಿದ್ದದ್ದು ಈಗ ಅತಿ ಸಂಕೀರ್ಣವಾಗಿದೆ.  ಹೆಚ್ಚಾ ಕಡಿಮೆ ಎಲ್ಲವನ್ನೂ ಮೊದಲೇ ನಿರ್ಧರಿಸಿ ಕಟ್ಟದಿದ್ದರೆ ಅದರಲ್ಲೂ ಮೊದಲ ಬಾರಿಗೆ ಮನೆ ಕಟ್ಟುವವರಿಗೆ ತೀರ ದುಬಾರಿ ಆಗುವ ಸಾಧ್ಯತೆ ಇರುತ್ತದೆ. 

ಮನೆ ಕಟ್ಟದ ಪ್ಲಾನ್‌ ತಯಾರಿಸುವವರು ಎಲ್ಲವನ್ನೂ ಡ್ರಾಯಿಂಗ್‌ ಮಾಡಲು ಇರುವ ಮತ್ತೂಂದು ಮುಖ್ಯ ಕಾರಣ- ನಮ್ಮ ಕಲ್ಪನೆಯಲ್ಲಿ ಅನೇಕ ವಿನ್ಯಾಸಗಳಿದ್ದು, ಅವುಗಳಲ್ಲಿ ಒಂದನ್ನು, ಅತಿ ಸುಂದರ ಅಥವಾ ಹೆಚ್ಚು ಉಪಯುಕ್ತವಾದದ್ದನ್ನು ಆಯ್ಕೆ ಮಾಡಿಕೊಳ್ಳಲೂ ಕೂಡ ಸ್ಪಷ್ಟ ಚಿತ್ರಣ ಅಗತ್ಯವಾಗುತ್ತದೆ. “ಒಂದು ಸಾವಿರ ಪದಗಳಲ್ಲಿ ಹೇಳಲಾಗದ್ದನ್ನು ಒಂದು ಚಿತ್ರದ ಮೂಲಕ ಹೇಳಬಹುದು’ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇದೇ ರೀತಿಯಲ್ಲಿ ನಾವು ಎಷ್ಟೇ ಪದಗಳಲ್ಲಿ ನಮ್ಮ ಕನಸುಗಳನ್ನು ಹೇಳಲು ಹೋದರೂ ಕೂಡ ಅದು ಒಂದೆರಡು ಚಿತ್ರಗಳನ್ನು ಮೀರಿಸಿ ವಿವರಿಸಲು ಸಾಧ್ಯವಿಲ್ಲ.  ಆ ಒಂದು ಸ್ಪಷ್ಟತೆಗೆ, ನಿಖರವಾಗಿ ನಿರ್ಧರಿಸಿ ದುಬಾರಿ ವಿಷಯಗಳನ್ನು ಮುಂದುವರಿಸುವ ಮೊದಲು ಒಂದು ಬ್ಲೂಪ್ರಿಂಟ್‌ ಎಂದು ಹೇಳಲಾಗುವ ಮೂಲ ನಕ್ಷೆಗಳನ್ನು ಇಟ್ಟುಕೊಂಡು ಮುಂದುವರಿಯುವುದು ಉತ್ತಮ. ಅನೇಕಬಾರಿ ನಕಾಶೆಗಳಿಲ್ಲದೆ ಮುಂದುವರಿದರೆ ಮುಂದಾಗಬಹುದಾದ ತಪ್ಪುಗಳ ಅರಿವು ಆಗುವುದೇ ಇಲ್ಲ! ಅದೇ ಒಂದು ಸಣ್ಣ ಸ್ಕೆಚ್‌ ಮಾಡಿನೋಡಿದರೂ ಏನಾದರೂ ತೊಂದರೆ ಇದ್ದರೆ ಕೂಡಲೇ ನಮ್ಮ ಗಮನಕ್ಕೆ ಬರುತ್ತದೆ.  ಮನಸ್ಸಿನಲ್ಲಿ ನಿಖರವಾಗಿರದ ಸಂಗತಿಗಳೂ ಕೂಡ ಒಮ್ಮೆ ಕಾಗದದ ಮೇಲೆ ಮೂಡಿಬಂದರೆ, ಬೇಕೋ ಬೇಡವೋ ಎಂಬುದು ಸುಲಭದಲ್ಲಿ ತಿಳಿದು ಹೋಗುತ್ತದೆ.

ಡ್ರಾಯಿಂಗ್‌ ಚರಿತ್ರೆ
ಈ ಹಿಂದೆ ಕಟ್ಟಲಾಗಿರುವ ಅತಿ ಸಂಕೀರ್ಣ ಕಲಾಕೃತಿಗಳಾದ ಬೇಲೂರು-ಹಳೇಬೀಡು ಇತ್ಯಾದಿ ದೇವರ “ಮನೆ’ ಗಳಿಗೆ ಯಾರು ಪ್ಲಾನ್‌ ಬರೆದರು? ಅವರೂ ಪಾಯಕ್ಕೆ ಒಂದು  ವಿನ್ಯಾಸ, ಗೋಡೆ, ಕಂಬ, ಸೂರು, ಜಾಲಾಂದ್ರಗಳು ಕಡೆಗೆ ಸೂರಿನಿಂದ ನೀರು ಹರಿದು ದೂರ ಬೀಳುವಂತೆ ಡ್ರಾಯಿಂಗ್‌ ಗಳನ್ನು ಮಾಡಿದರೆ? ಅವರೆಲ್ಲ ಅತ್ಯಾಧುನಿಕ ಕಂಪ್ಯೂಟರ್‌ ಗಳಿಲ್ಲದೆಯೇ ಅಷ್ಟೊಂದು ವಿಶೇಷವಾದ ಕಟ್ಟಡಗಳನ್ನು ಹೇಗೆ ನಿರ್ಮಿಸಿದರು ಎಂಬ ಪ್ರಶ್ನೆ ಸಹಜವಾಗೇ ಏಳುತ್ತದೆ.  ಪ್ಲಾನ್‌ ಗಳನ್ನು ಮಾಡಲು, ಮುಂದೆ ನಮ್ಮ ಮನೆ ಹೇಗೆ ಬರುತ್ತದೆ ಎಂದು ಮೊದಲೇ ನಿರ್ಧರಿಸಲು ಕಾಗದದಮೇಲೆಯೇ ಚಿತ್ರ ಮೂಡಿಬರಬೇಕು ಎಂದೇನೂ ಇಲ್ಲ. ಈ ಹಿಂದೆ, ನಮ್ಮ ಪೂರ್ವಜರು ಕಾಗದದ ಮೇಲಿನ ನಕಾಶೆಗಳಿಗಿಂತ ನಿಖರವಾಗಿ “ಥೀÅಡಿ’ ಮಾದರಿಯಲ್ಲಿ ಮರ ಇಲ್ಲವೇ ಕಲ್ಲಿನಲ್ಲೇ ಸಣ್ಣದಾದ ಕೃತಿಯನ್ನು ರಚಿಸಿ ನಂತರವೇ ಮುಂದುವರೆಯುತ್ತಿದ್ದರು.  ಬೇಲೂರು ದೇವಸ್ಥಾನ ಇದೇ ರೀತಿಯಲ್ಲಿ ಬರಬೇಕು ಎಂಬ ಸ್ಪಷ್ಟ ಕಲ್ಪನೆ ಆಗಿನ ಕಾಲದ ವಾಸ್ತುಶಿಲ್ಪಿಗಳಿಗೂ ಖಂಡಿತ ಇತ್ತು. ಇದಕ್ಕೆ ನೇರ ಸಾಕ್ಷಿಯಾಗಿ ಬೇಲೂರು ಹಾಗೂ ಇತರೆ ಬಹುತೇಕ ದೇವಸ್ಥಾನಗಳಲ್ಲಿ, ಒಂದೆರಡು ಕಡೆಗಳಲ್ಲಿ ಮೂಲ ದೇವಸ್ಥಾನದ ತದ್‌ ರೂಪವನ್ನು ಕೆಳ ಮಟ್ಟದಲ್ಲೇ ಮೂಡಿಸಿದ್ದಾರೆ. ಹೀಗೆ ಸಣ್ಣದಾಗಿ ಮೂಡಿರುವ ಚಿತ್ರ ಹಾಗೂ ಮಾದರಿಗಳಿಂದಾಗಿ ಅಂದಿನ ಜನಕ್ಕೂ ದೇವಸ್ಥಾನದ ಆರಂಭದಲ್ಲೇ – ಅದು ಮುಗಿದ ಮೇಲೇ ಹೇಗೆ ಕಾಣುತ್ತದೆ? ಎಂಬುದು ತಿಳಿಯುತ್ತಿತ್ತು!

ಭವಿಷ್ಯವನ್ನು ತಿಳಿಯಲು ಜನ ಆಕಾಶಕಾಯಗಳ ಮೊರೆಹೋಗುತ್ತಾರೆ. ನಿಮ್ಮ ಮನೆಯ ಭವಿಷ್ಯ ರೂಪ ತಿಳಿಯಲು ನೀವು ಮಾಡಬೇಕಾದ ಒಂದೇ ಒಂದು ಸಂಗತಿ ಎಂದರೆ – ನಿಖರವಾದ ಪ್ಲಾನ್‌ ಗಳನ್ನು ಮಾಡಿಸಿ ಮುಂದುವರೆಯುವುದೇ ಆಗಿದೆ! 

ಥ್ರಿಡಿ ಮಾಡೆಲಿಂಗ್‌
ಈಗಲೂ ಕೂಡ ಕೆಲ ಸಂಕೀರ್ಣ ವಿನ್ಯಾಸದ ಮನೆಗಳಿಗೆ ಮರದಿಂದ ಇಲ್ಲವೇ ಮೌಂಟ್‌ ಬೋರ್ಡ್‌ ಬಳಸಿ ಸಣ್ಣದಾದ ಪ್ರತಿಕೃತಿಗಳನ್ನು ಮಾಡಲಾಗುತ್ತದೆ. ಹಾಗೆಯೇ, ಕಾಗದದ ಮೇಲೂ ಮೂರು ಆಯಾಮಗಳ ಅಂದರೆ ಉದ್ದ ಅಗಲ ಹಾಗೂ ಎತ್ತರದ ಪರಿಕಲ್ಪನೆ ಹೊಂದಿರುವ ಪ್ಲಾನ್‌ಗಳು ಲಭ್ಯವಿದ್ದು, ಇವು ನಮ್ಮ ಮನೆಯ ನಿಖರವಾದ ಮುನ್ನೋಟವನ್ನು ನೀಡಬಲ್ಲವು. ನಮಗೆ ಸಾಮಾನ್ಯವಾಗಿ ಉದ್ದ ಅಗಲಗಳ ಪರಿಕಲ್ಪನೆ ಸುಲಭವಾಗಿ ಲಭ್ಯವಾದರೂ ಎತ್ತರವನ್ನು ಕಲ್ಪಿಸಿಕೊಳ್ಳಲು ಕಷ್ಟ ಆಗುತ್ತದೆ. ಇಂಥ ಸಮಯಗಳಲ್ಲಿ ನಿಮ್ಮ ಮನೆ ಡುಪ್ಲೆ ಮಾದರಿಯಲ್ಲಿದ್ದರೆ, ಒಂದಷ್ಟು ಸಮಯ ಹಾಗೂ ಹಣವನ್ನು ವಿಶೇಷ ವಿನ್ಯಾಸಗಳಿಗೆ ನಿಯೋಗಿಸುವುದು ಉತ್ತಮ. ಲಕ್ಷಾಂತರ ರೂ. ವ್ಯಯಿಸಿ ಕಟ್ಟುವ ಮನೆಗೆ ಒಂದಷ್ಟು ಸಾವಿರ ಖರ್ಚು ಮಾಡಿ ನಮ್ಮ ಮನೆ ಹೀಗೆಯೇ ಬರುತ್ತದೆ ಎಂದು ನಿರ್ಧರಿಸಿ ಮುಂದುವರೆಯುವುದು ಒಳ್ಳೆಯದು.

ಮಾಹಿತಿಗೆ- 98441 32826

– ಆರ್ಕಿಟೆಕ್ಟ್ ಕೆ ಜಯರಾಮ್‌

ಟಾಪ್ ನ್ಯೂಸ್

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

16-uv-fusion

Discipline: ಬದುಕಿನಲ್ಲಿ ಶಿಸ್ತಿರಲಿ

15-

Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

14-uv-fusion

Mother: ಅಮ್ಮನ ಜೀವನವೇ ಆದರ್ಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.