ಕೃಷಿಯ ಖುಷಿಗೆ ಬೆಲೆ ಕಟ್ಟಲಾಗದು


Team Udayavani, Jan 13, 2020, 5:00 AM IST

anchor-addur-(4)

ನಿವೃತ್ತರಾದ ನಂತರ ಸಮಯ ಕಳೆಯುವುದು ಹೇಗೆ? ಎಂಬುದು, ಹಲವರ ಚಿಂತೆ. ಆದರೆ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನಾಲ್ಕು ದಶಕಗಳ ಸೇವೆ ಸಲ್ಲಿಸಿ ನಿವೃತ್ತರಾದ ಪ್ರದೀಪ್‌ ಸೂರಿ ಅವರಿಗೆ ಆ ಚಿಂತೆಯಿಲ್ಲ. ಯಾಕೆಂದರೆ, ಅವರೀಗ ಪೂರ್ಣಾವಧಿ ಕೃಷಿಕರು.

ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶ ದಾಟಿದ ನಂತರ ಹೊಸಬೆಟ್ಟು ಸಿಗುತ್ತದೆ. ಅಲ್ಲಿ ಹೆದ್ದಾರಿಯಿಂದ ಅರೇಬಿಯನ್‌ ಸಮುದ್ರದ ದಿಕ್ಕಿನಲ್ಲಿ 100 ಮೀ. ದೂರದಲ್ಲಿದೆ ಪ್ರದೀಪ್‌ ಸೂರಿಯವರ 17 ಸೆಂಟ್ಸ್‌ ತೋಟ.

ಪುಟ್ಟ ತರಕಾರಿ ತೋಟ
ಬಸಳೆ, ಹರಿವೆ, ಬದನೆ, ಬೆಂಡೆಕಾಯಿ, ಕುಂಬಳಕಾಯಿ, ಬೀನ್ಸ್‌ ಅಲಸಂದೆ, ಸೌತೆ, ಮುಳ್ಳುಸೌತೆ, ನುಗ್ಗೆ ಮುಂತಾದ ತರಕಾರಿಗಳನ್ನೂ ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದವರು ಆಯೋಜಿಸುವ ಭಾನುವಾರದ ಸಂತೆಯಲ್ಲಿ ಕಳೆದ 5 ವರ್ಷಗಳಿಂದ ಮಾರಾಟ ಮಾಡುತ್ತಿದ್ದಾರೆ. ಪ್ರದೀಪ್‌ ಸೂರಿ ತರಕಾರಿಗಳ ಉತ್ತಮ ಗುಣಮಟ್ಟದಿಂದಾಗಿ ಅವರು ತಂದದ್ದೆಲ್ಲವೂ ಕೆಲವೇ ನಿಮಿಷಗಳಲ್ಲಿ ಖಾಲಿಯಾಗುತ್ತಿದೆ. ಹತ್ತು ವರ್ಷಗಳಿಂದ ತರಕಾರಿ ಕೃಷಿಯಲ್ಲಿ ತೊಡಗಿರುವ ಪ್ರದೀಪ್‌ ಸೂರಿ, ಅಪ್ಪಟ ಸಾವಯವ ಕೃಷಿಕ. ಹತ್ತಿರದ ಜಾನುವಾರು ಸಾಕಣೆದಾರರಿಂದ ಸೆಗಣಿ ತಂದು ತಮ್ಮ ತೋಟಕ್ಕಾಗಿ ಕಾಂಪೋÓr… ತಯಾರಿಸುತ್ತಾರೆ. ಅದಲ್ಲದೆ, ತಮ್ಮ ತೋಟದ ಕಸಕಡ್ಡಿಗಳಿಂದ ಮಾಡಿದ ಸುಡುಮಣ್ಣು ಮತ್ತು ಕೊಳೆಸಿದ ನೆಲಗಡಲೆ ಹಿಂಡಿಯನ್ನು ಗಿಡಗಳಿಗೆ ಗೊಬ್ಬರವಾಗಿ ಹಾಕುತ್ತಾರೆ.

ತಾರಸಿ ಚದರ ಅಡಿ 20 ಕೆ.ಜಿ. ತಡೆಯಬಲ್ಲುದು
ತಾರಸಿ ಕೃಷಿಯಲ್ಲಿ ಪ್ರದೀಪ್‌ ಸೂರಿಯವರದು ಪಳಗಿದ ಕೈ. ಆಸಕ್ತಿಯಿದ್ದರೆ ಯಾರೂ ತಾರಸಿ ಕೃಷಿ ಮಾಡಬಹುದು ಎಂಬುದವರ ನಂಬಿಕೆ. ಹಲವರಿಗೆ ತಾರಸಿ ಕೃಷಿ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ಅವರು ಒಂದೇ ಏಟಿಗೆ ನಿವಾರಿಸುತ್ತಾರೆ. ಗಿಡಗಳ ಭಾರವನ್ನು ತಾರಸಿ ತಡೆಯಲಾರದು ಎನ್ನುವವರಿಗೆ ಸೂರಿಯವರ ಉತ್ತರ- “ಮನೆಯ ತಾರಸಿ ಪ್ರತಿ ಚದರ ಅಡಿಗೆ 20 ಕೆ.ಜಿ. ಭಾರ ತಡೆಯಬಲ್ಲದು. ತಾರಸಿಯಲ್ಲಿ ಇಡುವ ಕುಂಡಗಳು ಮತ್ತು ಗ್ರೋಬ್ಯಾಗುಗಳ ಭಾರ ತಲಾ 5-6 ಕೆ.ಜಿ. ಮಾತ್ರ. ಹಾಗಾಗಿ ಇದರಿಂದ ತಾರಸಿಗೆ ತೊಂದರೆಯಾಗದು’. ತಿಂಗಳ ಹಿಂದಷ್ಟೇ ತಮ್ಮ ಮನೆಯ ತಾರಸಿಯಲ್ಲಿ 1,000 ಚದರ ಅಡಿಯ ಪಾಲಿಹೌಸ್‌ ನಿರ್ಮಿಸಿ¨ªಾರೆ ಸೂರಿ. ಇದಕ್ಕೆ 2.20 ಲಕ್ಷ ರೂ. ವೆಚ್ಚವಾಗಿದ್ದರೂ ಹಲವು ಅನುಕೂಲಗಳಿವೆ ಎಂಬುದು ಅವರ ಮಾತು.

ಎರಡು ವರ್ಷಗಳ ಯಶಸ್ವಿ ಪ್ರಯೋಗ
ಪ್ರದೀಪ್‌ ಸೂರಿಯವರ ಕೃಷಿಗೆ ಹೆಗಲು ಕೊಡುತ್ತಿದ್ದಾರೆ ಮಡದಿ ಡಾ. ಇಂದಿರಾ. ಅವರು ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ನಿವೃತ್ತಿಯ ನಂತರ ಆರಾಮವಾಗಿರೋದು ಬಿಟ್ಟು ತರಕಾರಿ ಕೃಷಿಯ ಉಸಾಬರಿ ನಿಮಗ್ಯಾಕೆ ಎಂದು ಕೇಳಿದ್ದಕ್ಕೆ ಪ್ರದೀಪ್‌ ಸೂರಿಯವರ ಉತ್ತರ: “ನಾನಂತೂ ಆರಾಮವಾಗಿದೀನಿ. ಈ ಕೃಷಿಯ ಖುಷಿಗೆ ಬೆಲೆಕಟ್ಟಲಾಗದು. ಅದಕ್ಕೆ ಪುರಾವೆ: ಪ್ರತಿ ಶನಿವಾರ ರಾತ್ರಿ 8 ಗಂಟೆಯ ಮುಂಚೆ ಸಾವಯವ ಕೃಷಿಕ ಗ್ರಾಹಕ ಬಳಗದ ಬೆಲೆ ಪಟ್ಟಿ (ಕೃಷಿಕರ ಹೆಸರು, ಉತ್ಪನ್ನಗಳು ಮತ್ತು ಬೆಲೆಗಳ ಪಟ್ಟಿ) ಪ್ರಕಟಿಸುವ ಜವಾಬ್ದಾರಿ ನಿರ್ವಹಣೆಯನ್ನೂ ಹೊತ್ತುಕೊಂಡಿರುವುದು.
ಇ-ಮೇಲ್‌: pradeepsoorigmail.com

ಸಾವಯವ ಅಸ್ತ್ರಗಳ ಬಳಕೆ
ಗೋಮೂತ್ರ, ಕಹಿಬೇವಿನ ಎಣ್ಣೆ, ಹುಳಿಮಜ್ಜಿಗೆ ಸಿಂಪಡಣೆ. ಬೆಳ್ಳುಳ್ಳಿ, ಹಸಿಮೆಣಸು ಮತ್ತು ಸಾಸಿವೆ ಅರೆದು ಅವರು ಸಿದ್ಧಪಡಿಸುವ ಕಷಾಯ ಕೀಟ ನಿಯಂತ್ರಣದ ಬ್ರಹ್ಮಾಸ್ತ್ರ. ಜೊತೆಗೆ, ತುಳಸಿ- ಟ್ರಾÂಪ್‌ ಮತ್ತು ಫೆರಮೋನ್‌-ಟ್ರಾÂಪ್‌ ಬಳಸುತ್ತಾರೆ. ಅಂಗೈ ಉದ್ದದ ಪ್ಲಾಸ್ಟಿಕ್‌ ಬಾಟಲಿಗಳು ಅವರ ತೋಟದಲ್ಲಿ ಅಲ್ಲಲ್ಲಿ ನೇತಾಡುತ್ತಿವೆ; ಆ ಬಾಟಲಿಗಳ ನಡುಭಾಗದಲ್ಲೊಂದು ಸೀಳು. ಬಾಟಲಿಗಳಿಗೆ ಪ್ರತಿದಿನ ಮುಂಜಾನೆ ತಾಜಾ ತುಳಸಿ ಎಲೆಗಳನ್ನು ಹಾಕುತ್ತಾರೆ. ತುಳಸಿಯ ಪರಿಮಳಕ್ಕೆ ಆಕರ್ಷಿತವಾಗುವ ಹಣ್ಣಿನ- ನೊಣ ಇತ್ಯಾದಿ ಸಣ್ಣ ಕೀಟಗಳು ಬಾಟಲಿಯ ಸೀಳಿನಿಂದ ಒಳಹೊಕ್ಕು, ನಂತರ ಹೊರ ಬರಲಾಗದೆ, ಕೊನೆಗೆ ಬಾಟಲಿಯ ತಳದಲ್ಲಿರುವ ನೀರಿಗೆ ಬಿದ್ದು ಸಾಯುತ್ತವೆ.

ಪಾಲಿ ಹೌಸ್‌ ಉಪಯೋಗಗಳು
ಪ್ರಧಾನವಾಗಿ ಪ್ರತಿ ದಿನ ತಾರಸಿಯ ಗಿಡಗಳಿಗೆ ನೀರು ಹಾಕುವ ಕೆಲಸವಿಲ್ಲ. ಯಾಕೆಂದರೆ, ಪಾಲಿಹೌಸಿಗೆ ಅರೆ-ಪಾರದರ್ಶಕ ಪ್ಲಾಸ್ಟಿಕ್‌ ಹಾಳೆಯ ಚಾವಣಿಯಿದ್ದು ಬಿಸಿಲ ಬೇಗೆಯಿಂದಾಗಿ ನೀರು ಆವಿಯಾಗುವುದು ಕಡಿಮೆ. ಅದಲ್ಲದೆ, ತಾರಸಿಯಿಂದ ಆರಿಂಚು ಎತ್ತರದಲ್ಲಿ ಕಳೆ- ಚಾಪೆ (ವೀಡ್‌-ಮ್ಯಾಟ್‌)ನಿಂದ ಸಸಿಮಡಿಗಳನ್ನು ನಿರ್ಮಿಸಿದ್ದಾರೆ. ಸಸಿಮಡಿಗಳ ತಳದಲ್ಲಿರುವ ಪಿವಿಸಿ ಪೈಪಿನಲ್ಲಿ ಯಾವಾಗಲೂ ನೀರು ಇರುತ್ತದೆ. ಈ ಸಸಿಮಡಿಗಳ ಉದ್ದಕ್ಕೂ ಒಂದೂವರೆ ಅಡಿ ಅಂತರದಲ್ಲಿ ನೀರು ಸೆಳೆಯುವ ಬತ್ತಿಗಳನ್ನು ಹೂತಿದ್ದಾರೆ. ಗ್ಲಾಸ್‌- ವೂಲಿನ ಈ ಬತ್ತಿಗಳು, ಪಿವಿಸಿ ಪೈಪಿನಿಂದ ನಿರಂತರವಾಗಿ ನೀರು ಸೆಳೆಯುವ ಕಾರಣ, ಸಸಿಮಡಿಗಳ ಮಿಶ್ರಣ (ಮಣ್ಣು, ಕೋಕೊಪೀಟ್‌ ಮತ್ತು ಸೆಗಣಿ 1:1:1 ಅನುಪಾತದಲ್ಲಿ) ಯಾವತ್ತೂ ತೇವಭರಿತವಾಗಿ ಇರುತ್ತದೆ. ಪಾಲಿಹೌಸ್‌ ಸದಾಕಾಲ ಮುಚ್ಚಿರುವುದರಿಂದ ಕೀಟಗಳ ಹಾವಳಿ ಇಲ್ಲವೇ ಇಲ್ಲ ಎನ್ನಬಹುದು. ಪಾಲಿಹೌಸಿನೊಳಗೆ ಪರಾಗಸ್ಪರ್ಶಕ್ಕಾಗಿ ಚುಚ್ಚದ- ಜೇನ್ನೊಣ (ಸ್ಟಿಂಗ್‌ಲೆಸ್‌ ಹನಿ ಬೀ) ಸಾಕಿದ್ದಾರೆ.

ಅಡ್ಡೂರು ಕೃಷ್ಣ ರಾವ್‌

ಟಾಪ್ ನ್ಯೂಸ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Chhattisgarh: 20 coaches of goods train derail

Chhattisgarh: ಹಳಿ ತಪ್ಪಿದ  ಗೂಡ್ಸ್‌ ರೈಲಿನ 20 ಬೋಗಿಗಳು

accident

Bantwal: ಕೆಎಸ್‌ಆರ್‌ಟಿಸಿ ಬಸ್‌-ಬೈಕ್‌ ಢಿಕ್ಕಿ; ದಂಪತಿಗೆ ಗಾಯ

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

14-uv-fusion

Bamboo: ಬಿದಿರು ಎಂದು ಮೂಗು ಮುರಿಯದಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.