ಷೇರು ಮಾರುಕಟ್ಟೆಯ ಸಾಧಕ ಬಾಧಕಗಳು
Team Udayavani, Dec 23, 2019, 4:24 AM IST
-ಷೇರುಗಳನ್ನು ಯಾವಾಗ ಬೇಕಾದರೂ ಕೊಳ್ಳಬಹುದು ಹಾಗೂ ಮಾರಾಟ ಮಾಡಬಹುದು. ಹಣ ಹೂಡುವಿಕೆಯಲ್ಲಿ ಮೂರು ಮುಖ್ಯ ಅಂಶಗಳಾದ ಭದ್ರತೆ, ದ್ರವ್ಯತೆ ಹಾಗೂ ಹೆಚ್ಚಿನ ವರಮಾನ, ಇವುಗಳಲ್ಲಿ ಒಂದಾದ ‘ದ್ರವ್ಯತೆ’ ಇಲ್ಲಿ ಸದಾ ಇದೆ.
– ಸಮಯಪ್ರಜ್ಞೆಯನ್ನು ಚೆನ್ನಾಗಿ ತಿಳಿದು, ಸಂವೇದಿ ಸೂಚ್ಯಂಕ ಬಹಳ ಕೆಳಗೆ ಬಂದಾಗ ಕೊಂಡು, ಹೆಚ್ಚಿನ ಆಸೆ ಇಟ್ಟುಕೊಳ್ಳದೆ ಏರುತ್ತಿರುವಾಗ ಮಾರಾಟ ಮಾಡಿದರೆ ಲಾಭ ಗಳಿಸುವುದರಲ್ಲಿ ಯಾವ ಸಂಶಯವೂ ಇಲ್ಲ.
– ಅಗತ್ಯವಿದ್ದಾಗ ಷೇರುಗಳನ್ನು ಮಾರಾಟ ಮಾಡುವ ಬದಲಾಗಿ “ಡಿಮ್ಯಾಟ್’ ಖಾತೆಯಲ್ಲಿರುವ ಷೇರುಗಳ ಮೇಲೆ ಸಾಲ ಪಡೆದು ವ್ಯವಹಾರ ಮಾಡಬಹುದು.
-ಡಿಮ್ಯಾಟಿನಿಂದಾಗಿ ಯಾವುದೇ ಕಂಪನಿಯ ಒಂದೇ ಒಂದು ಷೇರು ಬೇಕಾದರೂ ಕೊಂಡುಕೊಳ್ಳಬಹುದು. ಹಾಗೂ ಮಾರಾಟ ಮಾಡಬಹುದು. ಡಿಮ್ಯಾಟ್ ಪ್ರಾರಂಭಿಸುವ ಮೊದಲು ಮಾರ್ಕೆಟ್ ಲಾಟ್‌ನಲ್ಲಿ ವ್ಯವಹರಿಸಬೇಕಾಗಿತ್ತು.
-ಮುಖಬೆಲೆ ಸೀಳುವಿಕೆ, ಡಿವಿಡೆಂಡ್ ಹಂಚಿಕೆ, ಬೋನಸ್ ಅಥವಾ ಹಕ್ಕಿನ ಷೇರು ಕಂಪನಿಗಳು ನಿರ್ಧರಿಸಿದಾಗ, ನಿಗದಿತ ಸಮಯದೊಳಗೆ (ಆಛಿfಟ್ಟಛಿ Rಛಿcಟ್ಟಛ ಈಚಠಿಛಿ) ಖರೀದಿಸಿದರೆ ಲಾಭ ಗಳಿಸುವ ಸಾಧ್ಯತೆ ಇದೆ.
ಬಾಧಕಗಳು
– ಷೇರುಗಳ ಬೆಲೆ ಏರಿಳಿತವನ್ನು ಸುಲಭವಾಗಿ ಕಂಡುಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. ಇದರಿಂದಾಗಿ ಬಹಳಷ್ಟು ಜನರು ನಷ್ಟ ಅನುಭವಿಸುತ್ತಾರೆ.
– ಷೇರು ವ್ಯವಹಾರದಲ್ಲಿ ಲಾಭ ಬಂದೇ ಬರುತ್ತದೆ ಎನ್ನುವ ವಿಚಾರ ಹೇಳಲು ಸಾಧ್ಯವಿಲ್ಲ. ಈ ವ್ಯವಹಾರದಲ್ಲಿ ಒಂದು ವೇಲೆ ನಷ್ಟ ಸಂಭವಿಸಿದರೆ, ನಷ್ಟವನ್ನು ತಾಳಿಕೊಳ್ಳುವವರು ಮಾತ್ರ ಇಲ್ಲಿ ವ್ಯವಹರಿಸಬೇಕು.
– ಷೇರುಗಳ ಬೆಲೆ ಏರುತ್ತಿರುವಾಗ ಇನ್ನೂ ಬಹಳ ಮೇಲಕ್ಕೆ ಏರುತ್ತಿದೆ ಎಂದು ತಿಳಿದು ಸಾಕಷ್ಟು ಹಣ ಹೂಡಿ, ಹಾಗೆಯೇ ಷೇರುಗಳ ಬೆಲೆ ಇಳಿಯುತ್ತಿರುವಾಗ ಹೆದರಿ ಇನ್ನೂ ಕೆಳಗೆ ಬರುತ್ತಿದೆ ಎಂದು ಆಲೋಚಿಸಿ, ಇರುವ ಹೂಡಿಕೆ ನಷ್ಟದಲ್ಲಿ ಕೊಟ್ಟು, ಕಷ್ಟವನ್ನು ಅನುಭವಿಸುವವರ ಸಂಖ್ಯೆ ಬಹಳ. ಈ ವ್ಯವಹಾರದಲ್ಲಿ ಸಹನೆ ಹಾಗೂ ಜಾಣತನ ಬಹುಮುಖ್ಯ.
– ಇನ್ನು ಕೆಲವರು ಸರಾಸರಿ ಮಾಡುವ ದೃಷ್ಟಿಯಿಂದ, ಹಿಂದೆ ಹೆಚ್ಚಿನ ಬೆಲೆಯಲ್ಲಿ ಕೊಂಡ ಷೇರುಗಳ ದರ ಕುಸಿದಾಗ ಮತ್ತಷ್ಟು ಕೊಂಡು ಅಲ್ಲಿಯೂ ನಷ್ಟ ಅನುಭವಿಸಿದ ದಾಖಲೆಗಳು ಹಲವಿದೆ. ಒಟ್ಟಿನಲ್ಲಿ ರುಚಿಗೆ ತಕ್ಕಷ್ಟು ಉಪ್ಪನ್ನು ಪದಾರ್ಥಗಳಿಗೆ ಸೇರಿಸುವಂತೆ ಷೇರು ಮಾರುಕಟ್ಟೆಯಲ್ಲಿ ಉಳಿತಾಯದ ಒಂದು ಸಣ್ಣ ಮೊತ್ತ ಹೂಡಬೇಕು.ಈ ವ್ಯವಹಾರ ಜೂಜಾಟವಾಗಬಾರದು.
– ಹಣ ಹೂಡುವಿಕೆಯ ಮೂರು ಮುಖ್ಯ ಸೂತ್ರಗಳಲ್ಲಿ ಭದ್ರತೆ ಹಾಗೂ ಹೆಚ್ಚಿನ ವರಮಾನ ಇವೆರಡೂ ಹೂಡಿಕೆದಾರರ ಅದೃಷ್ಟಕ್ಕನುಗುಣವಾಗಿ ಇರುತ್ತದೆ. ದ್ರವ್ಯತೆ(ಲಾಭ- ನಷ್ಟದ ಏರಿಳಿತ) ಮಾತ್ರ ಸದಾ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ
Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.