ಸಿಳ್ಳೆಗಾರರ ರಕ್ಷಣೆಗೂ ಕಾಯ್ದೆ ಇದೆ !


Team Udayavani, Sep 11, 2017, 5:13 PM IST

MAVESA.jpg

‘ಸತ್ಯಮೇವ ಜಯತೇ’ ಎಂಬುದು ಭಾರತದಲ್ಲಿ ಚೆನ್ನಾಗಿ ಕೇಳಿಬರುವ ಘೋಷವಾಕ್ಯಗಳಲ್ಲಿ ಒಂದು. ಆದರೆ ಅದು ಕೇವಲ ಘೋಷಣೆಯಾಗಿ ಮಾತ್ರ ಉಳಿದಿದೆ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಇರುವವರು ಮಾಡಿರುವ ಮತ್ತು ಸರ್ಕಾರವೇ ಭಾಗಿಯಾಗಿರುವ ಅಕ್ರಮಗಳ ಬಗ್ಗೆ ಸತ್ಯ ಸಂಗತಿ ಹೊರಬರುವುದೇ ಅಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಈ ಅಕ್ರಮಗಳನ್ನು ತಿಳಿದೂ ಸುಮ್ಮನಿರಬೇಕಾದ ಸ್ಥಿತಿಯಲ್ಲಿ ಸಾಕ್ಷಿಪ್ರಜ್ಞೆ ಇರುವವರೂ ಇರಬೇಕಾಗಿದೆ. ಇದಕ್ಕೆ ಸರ್ಕಾರದ “ಅಫಿಶಿಯಲ್ಸ್‌ ಸೀಕ್ರೇಟ್ಸ್‌ ಆ್ಯಕ್ಟ್’ ಒಂದು ಕಾರಣ ಎನ್ನಬಹುದು. ಸರ್ಕಾರಿ ನೌಕರಿಯಲ್ಲಿರುವಾತ, ಸರ್ಕಾರ ಅಥವಾ ತನ್ನ ಸಂಸ್ಥೆಯ ಹಿತಕ್ಕೆ ವಿರುದ್ಧವಾದ ಸತ್ಯಗಳನ್ನು ಹೇಳದಂತೆ ನಿರ್ಬಂಧ ಹೇರಲಾಗುತ್ತದೆ. ಈ ಕಾಯ್ದೆಯನ್ನು ಉಲ್ಲಂ ಸಿದರೆ ನೌಕರಿ ನಷ್ಟ ಜೊತೆಗೆ ಕ್ರಿಮಿನಲ್‌, ಸಿವಿಲ್‌ ವ್ಯಾಜ್ಯಗಳನ್ನು ಎದುರಿಸಬೇಕಾಗುತ್ತದೆ.

ಸತ್ಯ ಹೇಳುವ ಉದ್ಯೋಗಸ್ಥನಿಗೆ ಯಾವ ಸರ್ಕಾರವೂ ಕಾನೂನು ರಕ್ಷಣೆ ನೀಡುವುದಿಲ್ಲ. ಹೀಗಾಗಿ ಸಮಾಜದ ಪರವಾದ ಚಟುವಟಿಕೆಯೊಂದಕ್ಕೆ ವ್ಯವಸ್ಥೆಯೇ ತಡೆ ಹಾಕಿದಂತಾಗುತ್ತದೆ. ಅಂತಹವರ ರಕ್ಷಣೆಗೆ ಅಗತ್ಯವಾಗಿ ಬೇಕಾಗಿರುವುದು ಷಲ್‌ ಬ್ಲೋಯರ್ ಪೊ›ಟೆಕ್ಷನ್‌ ಆ್ಯಕ್ಟ್. ಅಚ್ಚ ಕನ್ನಡದಲ್ಲಿ ಹೇಳುವುದಾದರೆ, ಸಿಳ್ಳೇಕ್ಯಾತರ ರಕ್ಷಣಾ ಕಾಯ್ದೆ.

ಅಮೆರಿಕಾದ ಷಲ್‌ ಬ್ಲೋಯರ್ ಪೊ›ಟೆಕ್ಷನ್‌ ಆ್ಯಕ್ಟ್, ಇಂಗ್ಲೆಂಡ್‌ನ‌ ಪಬ್ಲಿಕ್‌ ಇಂಟ್ರೆಸ್ಟ್‌ ಡಿಸ್‌ಕ್ಲೋಸರ್‌ ಆ್ಯಕ್ಟ್, ದಕ್ಷಿಣ ಆಫ್ರಿಕಾದ ಪೊ›ಟೆಕ್ಷನ್‌ ಡಿಸ್‌ಕ್ಲೋಸರ್‌ ಆ್ಯಕ್ಟ್ಗಳೆಲ್ಲ ಇದೇ ದಿಕ್ಕಿನಲ್ಲಿವೆ. ಅಷ್ಟೇಕೆ, ಆಸ್ಟ್ರೇಲಿಯಾ, ಕೆನಡಾ, ದಕ್ಷಿಣ ಕೊರಿಯಾ, ಅರ್ಜೆಂಟೈನಾ, ರಷ್ಯಾ, ಸ್ಲೋವಾಕಿಯಾ, ಮೆಕ್ಸಿಕೋ, ನೈಜೀರಿಯಾ ಮೊದಲಾದ ದೇಶಗಳಲ್ಲಿ ಈ ಕಾಯ್ದೆ ಈಗಾಗಲೇ ಜಾರಿಯಲ್ಲಿದೆ ಅಥವಾ ಕೆಲವೆಡೆ ಜಾರಿಯ ಹಂತದಲ್ಲಿದೆ.

ಮಾಸಿಕ ವೇತನ ಕೈ ತಪ್ಪಿದರೆ?
ಇತಿಹಾಸದಲ್ಲಿ ಸಿಳ್ಳೇಕ್ಯಾತರ ಸಂಖ್ಯೆ ಚಿಕ್ಕದು. ಮುಖ್ಯವಾಗಿ, ಅದು ದುರ್ಬಲ ಹೃದಯಗಳ ಕೆಲಸ ಅಲ್ಲವೇ ಅಲ್ಲ. ತಾವು ಕೆಲಸ ಮಾಡುವ ಸಂಸ್ಥೆ ಅಥವಾ ಇಲಾಖೆಯ ಅವ್ಯವಹಾರ, ಅಸಮರ್ಪಕ ಹೆಜ್ಜೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಯುವಂತೆ ಮಾಡುವುದು ಇವರ ಕೆಲಸ. ಇದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಅಪೇಕ್ಷಣೀಯ. ಆದರೆ ಇಂತಹ ಕೆಲಸಗಾರರಿಗೆ ಉದ್ಯೋಗದಾತರ ಬೆದರಿಕೆ, ಹಿಂಬಡ್ತಿ, ಕಿರುಕುಳ ಅಥವಾ ಇನ್ನಾವುದೇ ತೊಂದರೆಗೆ ಸಿಲುಕಿಸಬಹುದು. ಸಾಮಾನ್ಯವಾಗಿ ಉದ್ಯೋಗದಲ್ಲಿರುವವರು ವ್ಯವಸ್ಥೆಯ ಎದುರಾಡುವುದೇ ವಿರಳ. ಮಾಸಿಕ ವೇತನದ ರûಾಕವಚ ಅವರನ್ನು ಭಯಗ್ರಸ್ಥರನ್ನಾಗಿಸುತ್ತದೆ ಎಂಬುದು ಸತ್ಯ, ಚೋದ್ಯ!

ಅನ್ಯಾಯದ ವಿರುದ್ಧ ಪ್ರಾಮಾಣಿಕತೆಯಿಂದ ಪ್ರತಿಭಟಿಸಿ ಅದ್ಭುತ ಯಶಸ್ಸು ಪಡೆದವರಿದ್ದಾರೆ. ತಮ್ಮ ರಕ್ಷಣೆಗೆ ಯಾವುದೇ ಕಾಯ್ದೆ ಇಲ್ಲದ ಸಂದರ್ಭದಲ್ಲೂ ನ್ಯೂಯಾರ್ಕ್‌ನ ಫ್ರಾಂಕ್‌ ಸೆರ್ಫಿನೋ, ಬ್ರಿಟನ್‌ನ ಪೀಟರ್‌ ರೈಟ್‌, ಜೆಫ್ರಿ ಗಾಂಡ್‌, ಡಾ. ಸ್ಟೀಫ‌ನ್‌ ಬೋಸ್ಲಿನ್‌ ವ್ಯವಸ್ಥೆಯ ಹುಳುಕುಗಳನ್ನು ಹೊರಗೆಡದ ರೀತಿ ಇಂದಿಗೂ ಮಾದರಿಯಾಗಿದೆ.

ನಿಜ, ಇಂದು ಎಲ್ಲವೂ ಸರ್ಕಾರಗಳ ಹಿಡಿತದಲ್ಲಿಲ್ಲ. ಜಾಗತೀಕರಣದ ಪರಿಣಾಮವಾಗಿ ಬಹುರಾಷ್ಟ್ರೀಯ ಕಂಪನಿಗಳು ಬೃಹತ್‌ ವ್ಯವಹಾರ ಮಾಡುವ ಪರ್ಯಾಯ ಸರ್ಕಾರಗಳೇ ಆಗಿವೆ. ಇಲ್ಲಿ ನಡೆಯುವ ಗೋಲ್‌ಮಾಲ್‌, ಸಮಾಜ ವಿರೋಧಿ ವಂಚನೆಗಳು ಕೂಡ ಬೆಳಕಿಗೆ ಬರಬೇಕು. ಆದರೆ ಸಿಳ್ಳೇಗಾರರ ರಕ್ಷಣಾ ಕಾಯ್ದೆ ಸರ್ಕಾರದ ವಿರುದ್ಧದ ಧ್ವನಿಗಳಿಗೆ ಮಾತ್ರ ರಕ್ಷಣೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಕಾಂಗ್ರೆಸ್‌ 2002ರಲ್ಲಿಯೇ ‘ಸಬೇìನ್ಸ್‌ ಓಕ್ಲೇಯ್‌’ ಕಾನೂನನ್ನು ಜಾರಿಗೆ ತಂದಿತು.

ನಮ್ಮಲ್ಲೂ ಇದೆ ರಕ್ಷಣೆಗೆ ಕಾನೂನು!
ಕೊನೆಪಕ್ಷ ಕೇಂದ್ರ ಸರ್ಕಾರ ಈ ದಿಕ್ಕಿನಲ್ಲಿ ಷಲ್‌ ಬ್ಲೋವರ್ ಪೊ›ಟೆಕ್ಷನ್‌ ಕಾಯ್ದೆಯನ್ನು 2011ರಲ್ಲಿ ರೂಪಿಸಿತು. ಆ ವರ್ಷದ ನವೆಂಬರ್‌ನಲ್ಲಿ ಲೋಕಸಭೆಯಲ್ಲಿ ಅನುಮೋದನೆ ಪಡೆದ ಕರಡು 2014ರಲ್ಲಿ ರಾಜ್ಯಸಭೆಯ ಅನುಮತಿ ಪಡೆದು ಅದೇ ವರ್ಷ ರಾಷ್ಟ್ರಪತಿಗಳ ಅಂಕಿತ ಪಡೆದು ಕಾಯ್ದೆಯಾಯಿತು. ಸರ್ಕಾರಿ ಇಲಾಖೆಗಳ ವಂಚನೆ, ಭ್ರಷ್ಟಾಚಾರ ಹಾಗೂ ನಿರ್ವಹಣಾ ವ್ಯತ್ಯಯ ವಿರುದ್ಧ ಸರ್ಕಾರಿ ನೌಕರ ಕೂಡ ಕೇಂದ್ರ ಚಕ್ಷಣಾ ದಳ ಸಿಸಿಗೆ ದೂರು ಸಲ್ಲಿಸಬಹುದು.

ಭಾರತದ ಸರ್ಕಾರಿ ನೌಕರರಲ್ಲಿ ‘ಪ್ರತಿರೋಧ’ ಸ್ವಭಾವ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಕಾನೂನಿನ ರಕ್ಷಣೆ ಇದ್ದೂ ನೌಕರರು ಇಂತಹ ಅಪಾಯದ ಮಾರ್ಗವನ್ನು ಹಿಡಿಯಲಾರರು. ಇದಕ್ಕೆ ಈ ಹಿಂದಿನ ಘಟನೆಗಳು ಕೂಡ ಕಾರಣವಿರಬಹುದು. 2003ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸತ್ಯೇಂದ್ರ ದುಬೆ ಎಂಬ ಅಧಿಕಾರಿಯ ಹೋರಾಟ, 2005ರಲ್ಲಿ ಷಣ್ಮುಗನ್‌ ಮಂಜುನಾಥ್‌ ಎಂಬಾತ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ ಪೆಟ್ರೋಲ್‌ ಕಲಬೆರಕೆ ವಿರುದ್ಧ ಧ್ವನಿ ಎತ್ತುತ್ತಾರೆ. ಅಕ್ರಮ ಭೂ ಮಂಜೂರಾತಿ ಕುರಿತು ಕರ್ನಾಟಕದ ಎಸ್‌.ಪಿ.ಮಹಂತೇಶ್‌ 2012ರಲ್ಲಿ ಬೆಳಕು ಚೆಲ್ಲಿದ್ದನ್ನು ಇಲ್ಲಿ ಉದಾಹರಿಸಬಹುದು. ಸಿನಿಮಾ ಕತೆಯ ಹೊರತಾಗಿ ಈ ಎಲ್ಲ ಅಸಲಿ ಹೀರೋಗಳು ದುಷ್ಟಶಕ್ತಿಗಳಿಂದ ಕೊಲೆಯಾದುದು ಸಿಳ್ಳೇಕ್ಯಾತರ ಕಾನೂನು ರಚನೆಗೆ ಬುನಾದಿಯಾಯಿತು.

2013ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಧೀಶರಾದ ಕೆ.ಎಸ್‌.ರಾಧಾಕೃಷ್ಣನ್‌ ಹಾಗೂ ಅರ್ಜುನ್‌ ಕುಮಾರ್‌ ಸಿಕ್ರೆ ಇದ್ದ ಪೀಠ ಸಿಳ್ಳೆಕ್ಯಾತರ ಹೆಸರನ್ನು ಗುಪ್ತವಾಗಿ ಇರಿಸಬೇಕು ಎಂದು ಆದೇಶ ಮಾಡಿದ್ದಾರೆ. ಕಾನೂನುಬಾಹಿರವಾಗಿ ದೂರುದಾರರ ಹೆಸರು ಬಹಿರಂಗಪಡಿಸಿದರೆ ಮೂರು ವರ್ಷದ ಜೈಲು ಹಾಗೂ 50 ಸಾವಿರ ರೂ.ಗಳ ದಂಡದ ಪ್ರಾಧಾನವೂ ಭಾರತದ ಕಾಯ್ದೆಯಲ್ಲಿದೆ. ಆದರೆ ಅಭಿಮನ್ಯುವಿನಂತೆ ಮುನ್ನುಗ್ಗುವವರು ಬಲಿಯಾಗುವುದನ್ನು ತಡೆಯಲು ಕಾಯ್ದೆಗೆ ಶಕ್ತಿ ಸಾಕಾಗುತ್ತಿಲ್ಲ. ಇಡೀ ಕಾಯ್ದೆಯಲ್ಲಿ ಸಿಳ್ಳೇಕ್ಯಾತ ನೌಕರ ‘ಬಲಿಪಶು’ ಆಗಬಹುದಾದ ಮಾದರಿಗಳನ್ನು ವಿಶ್ಲೇಷಿಸದಿರುವುದರಿಂದ ಆಪಾದಿತ ಅಧಿಕಾರಿಗಳು ಪಾರಾಗಬಹುದಾಗಿದೆ. ಅಮೆರಿಕ, ಇಂಗ್ಲೆಂಡ್‌, ಕೆನಡಾಗಳಲ್ಲಿ ಸಿಳ್ಳೇಕ್ಯಾತರು ಬಲಿಯಾಗುವುದನ್ನು ತಡೆಯಲು ಅತಿ ಹೆಚ್ಚಿನ ಕಾನೂನು ರಕ್ಷಣೆ ಕೊಡಲಾಗಿದೆ. ಭಾರತದಲ್ಲಿ, ಮಾಯಾವತಿ ಸರ್ಕಾರ ಈ ಹಿಂದೆ ಸರ್ಕಾರದ ಹಣ ಕಮಾಯಿ ಕುರಿತು ಮಾಹಿತಿ ಬಹಿರಂಗಪಡಿಸಿದ ಅಧಿಕಾರಿಯನ್ನು ಬೆಂಬಲಿಸಲಿಲ್ಲ. ನಂತರ ಆ ಮನುಷ್ಯನನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಿದ ಪ್ರಕರಣ ನಡೆದಿತ್ತು!

ರಾಜ್ಯಗಳಲ್ಲಿ ಭ್ರಷ್ಟಾಚಾರಕ್ಕೇ ರಕ್ಷಣೆ!
ಕೇಂದ್ರ ಇಂತಹ ಕಾನೂನು ಕೊಟ್ಟಿದ್ದರೂ, ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರಗಳು ತಮ್ಮ ನೌಕರರ ಸಿಳ್ಳೆಯನ್ನು ಬೆಂಬಲಿಸಿ ಕಾನೂನು ರಚಿಸಿಲ್ಲ. ಗೌರವ, ಬಹುಮಾನ ಬಿಡಿ, ಮೊನ್ನೆ ಮೊನ್ನಿನ ಬೆಂಗಳೂರಿನ ಜೈಲು ಪ್ರಕರಣದಲ್ಲಿ ಅನೀತಿಯ ಘಟನೆಗಳನ್ನು ದಾಖಲೆ ಸಹಿತ ಬಹಿರಂಗಪಡಿಸಿದ ಅಧಿಕಾರಿ ವರ್ಗಾವಣೆಯ ಶಿಕ್ಷೆಗೊಳಗಾಗಬೇಕಾಯಿತು. ಅತ್ತ ಸಿಸಿಗೆ ದೂರು ಸಲ್ಲಿಸಿದ್ದು ದುರುದ್ದೇಶಪೂರಿತ ಎಂತಾದರೆ, ಎರಡು ವರ್ಷ ಜೈಲು ಹಾಗೂ 20 ಸಾವಿರ ರೂ. ದಂಡ ವಿಧಿಸಬಹುದು. ಸಿಸಿಗೆ ಸರ್ಕಾರಿ ಷಲ್‌ ಬ್ಲೋವರ್ ಅಲ್ಲದೆ ಸಾರ್ವಜನಿಕರು, ಎನ್‌ಜಿಓಗಳು ದೂರು ಸಲ್ಲಿಸಬಹುದಾದರೂ ಈ ದಂಡ, ಜೈಲು ದೂರು ಸಲ್ಲಿಸಹೊರಟವರನ್ನು ಅಸಹಾಯಕತೆಗೆ ತಳ್ಳುತ್ತದೆ.

1971ರ ಇತಿಹಾಸ ಪುಟದ ಸ್ಮರಣೆ ಕಾಯ್ದೆಯ ಮಹತ್ವವನ್ನು ಸಾರುತ್ತದೆ. ಡೇನಿಯಲ್‌ ಎಲ್ಸ್‌ಬರ್ಗ್‌ ಎಂಬಾತ ವಿಯೆಟ್ನಾಂ ಯುದ್ಧದ ಅನುಭವಿಯಾಗಿದ್ದ. ನಂತರ ಆತ ಯುದ್ಧಕ್ಕೆ ಸಂಬಂಧಿಸಿದಂತೆ ಅತಿ ಗೌಪ್ಯ ರಕ್ಷಣಾ ದಾಖಲೆಗಳು ನ್ಯೂಯಾರ್ಕ್‌ ಟೈಮ್ಸ್‌ ಹಾಗೂ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವಂತೆ ನೋಡಿಕೊಂಡ. ಆ ಮಾಹಿತಿಗಳ ಅನ್ವಯ ಅಮೆರಿಕದ ಅಧ್ಯಕ್ಷರು ಜನರಿಗೆ ಯುದ್ಧದ ಫ‌ಲಿತಾಂಶಗಳ ಬಗ್ಗೆ ಸುಳ್ಳು ಸುಳ್ಳೇ ವರದಿ ನೀಡಿದ್ದರು ಎಂಬುದು ರುಜುವಾತಾಯಿತು. ಸರ್ಕಾರದ ಅನೈತಿಕತೆ ಎಲ್ಸ್‌ಬರ್ಗ್‌ ಪ್ರಕಟಿಸಿದ ಈ ಪೆಂಟಗಾನ್‌ ದಾಖಲೆಗಳಿಂದ ಸ್ಪಷ್ಟವಾಯಿತು.

ಪರಿಣಾಮ ಮಾತ್ರ ಘೋರವಾಗಿತ್ತು. ಎಲ್ಸ್‌ಬರ್ಗ್‌ ಈ ಮಾಹಿತಿ ಒದಗಿಸಿದ್ದು ದೃಢಪಟ್ಟರೆ 115 ವರ್ಷದ ಜೈಲುವಾಸ ಶಿಕ್ಷೆಯಾಗಬಹುದಾದ 12 ಪ್ರಕರಣಗಳು ಆತನ ವಿರುದ್ಧ ದಾಖಲಾದವು. ವಾಟರ್‌ಗೆàಟ್‌ ಹಗರಣದ ಆರೋಪಿಗಳು ಎಲ್ಸ್‌ಬರ್ಗ್‌ನ ಕಚೇರಿಯಲ್ಲಿ ಯಾವುದಾದರೂ ತಪ್ಪು ದಾಖಲೆಗಳು ಸಿಕ್ಕಬಹುದು ಎಂದು ಕಳ್ಳತನ ನಡೆಸಿದರು. ಆತನ ಫೋನ್‌ ಕದ್ದಾಲಿಸಲಾಗುತ್ತಿತ್ತು. ಎಡ್ಸ್‌ಬರ್ಗ್‌ನ ಮೇಲೆ ಹಲ್ಲೆಗಳಾದವು. ನ್ಯಾಯಾಧೀಶರನ್ನು ಎಫ್ಬಿಐ ಡೈರೆಕ್ಟರನ್ನಾಗಿಸುವ ಆಮಿಷ ಒಡ್ಡಲಾಯಿತು. ಆದರೆ ಕೊನೆಗೂ ನ್ಯಾಯಾಧೀಶರು ಆರೋಪಗಳನ್ನು ಕೈಬಿಟ್ಟು ಸಿಳ್ಳೇಕ್ಯಾತನ ರಕ್ಷಣೆಗೆ ನಿಂತರು. 

ಅಂತೂ  ದಿ ಗಾರ್ಡಿಯನ್‌ ಪತ್ರಿಕೆ ಡೇನಿಯಲ್‌ ಎಡ್ಸ್‌ಬಗ್‌ ಅವರನ್ನು “ಕಳೆದ ಅರ್ಧ ಶತಮಾನದ ಅತಿ ಮುಖ್ಯ ಸಿಳ್ಳೆಗಾರ’ ಎಂದು ಗೌರವಿಸಿದೆ. ಅಷ್ಟೇಕೆ, ಅಂತಜಾìಲದಲ್ಲಿ ಹುಡುಕಿದರೆ ಶತಮಾನದ ಟಾಪ್‌ 10 ಷಲ್‌ ಬ್ಲೋವರ್ಗಳ ಪಟ್ಟಿ ಸಿಗುತ್ತದೆ. ನೋಡಿ,http://www.toptenz.net/top-10-whistle-blowers.php, http://www.politico.com/gallery/2013/08/10-famous-infamous-whistleblowers-001083 ಇಂತಹ ಹಲವು ವೆಬ್‌ ಮಾಹಿತಿಗಳಿವೆ. ಅವರಲ್ಲಿ ಮಹಿಳೆಯರೂ ಇದ್ದಾರೆ.

ಭಾರತೀಯರಲ್ಲಿ ಕೂಡ ಅನೈತಿಕ ವ್ಯವಹಾರ, ಭ್ರಷ್ಟಾಚಾರದ ವಿರುದ್ಧ ಹೋರಾಡಿದವರ ದೊಡ್ಡ ಪಟ್ಟಿಯೇ ಇದೆ. ಕನಿಷ್ಠ 20 ಜನ ಇಂತಹ ಹೋರಾಟದಲ್ಲಿ ಜೀವ ತೆತ್ತಿದ್ದಾರೆ. ಕಳೆದ 7 ವರ್ಷಗಳಲ್ಲಿ 150 ಷಲ್‌ ಬ್ಲೋವರ್ ಜೈಲು ಕಾರ್ಪಣ್ಯಗಳನ್ನು ಎದುರಿಸುವಂತಾಗಿದೆ. 

ಇಂಗ್ಲೆಂಡ್‌, ಅಮೆರಿಕಗಳಲ್ಲಿ ಇಂತವರ ಬೆಂಬಲಕ್ಕೆ ನಿಲ್ಲಬಲ್ಲ ಸ್ವಯಂ ಸೇವಾ ಸಂಸ್ಥೆಗಳಿವೆ. ಕಾಯ್ದೆಯ ಅಂಶಗಳನ್ನು ಜಾರಿಗೆ ತರುವ ವಿಚಾರದಲ್ಲಿ ಶ್ರಮಿಸುವ ಗಟ್ಟಿ ಎನ್‌ಜಿಓಗಳ ಕೊರತೆ ಭಾರತದಲ್ಲಿದೆ. ಲೋಕಾಯುಕ್ತವನ್ನೇ ನಿಶ್ಯಸ್ತ್ರ ಮಾಡುವ ಸರ್ಕಾರಗಳು ರಾಜ್ಯದ ಮಟ್ಟದಲ್ಲಿ ಸದ್ಯಕ್ಕಂತೂ ಇಂತಹ ಕಾಯ್ದೆ ತರಲಿಕ್ಕಿಲ್ಲ. ಹಾಗಾಗಿ ಸರ್ಕಾರಿ ನೌಕರರು, ಖಾಸಗಿ ಸಾರ್ವಜನಿಕ ಸಂಸ್ಥೆಗಳ ಉದ್ಯೋಗಿಗಳು, ಗುತ್ತಿಗೆದಾರರು, ಏಜೆಂಟರು, ಉದ್ಯೋಗಕ್ಕೆ ಅರ್ಜಿ ಹಾಕಿದವರು, ಮಾಜಿ ನೌಕರರು, ಹೊರದೇಶದಲ್ಲಿರುವ ಉದ್ಯೋಗಿಗಳು, ಅಟಾರ್ನಿಗಳು ಮತ್ತು ಲೆಕ್ಕ ಪರಿಶೋಧಕರು ಈ ಕಾಯ್ದೆಯ ರಕ್ಷಣೆ ಪಡೆದು ಬಾಯಿ ಬಿಡುವಂತಾಗಿದ್ದರೆ,  ಒಂದು ಮಟ್ಟಿನ ರಾಮರಾಜ್ಯ ತಾನೇತಾನಾಗಿ ಸೃಷ್ಟಿಯಾಗುತ್ತಿತ್ತೇನೋ?

ನೀನೆಲ್ಲಿಂದ ಬಂದೆ ವಿಭೀಷಣ?
ನೆನಪುಗಳು ಹಸಿರು. ನ್ಯಾಷನಲ್‌ ಹೈವೇ ಅಥಾರಿಟಿ ಎನ್‌ಹೆಚ್‌ಎಐನ ಯೋಜನಾಧಿಕಾರಿ ಸತ್ಯೇಂದ್ರ ದುಬೆ ಗುಜರಾತ್‌ನ ಹೆದ್ದಾರಿ ಯೋಜನೆಯಲ್ಲಿನ ಭ್ರಷ್ಟಾಚಾರದ ಕುರಿತು ಅಂದಿನ ಪ್ರಧಾನ ಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಕಚೇರಿಗೆ ಮಾಹಿತಿ ನೀಡುತ್ತಾರೆ. ಇದರ ಜೊತೆಗೆ ತಮ್ಮ ಹೆಸರು ವಿವರವನ್ನು ಗುಪ್ತವಾಗಿಡಲು ವಿನಂತಿಸುತ್ತಾರೆ. ಆದರೆ ಪಿಎಂ ಕಚೇರಿ ರಸ್ತೆ, ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯಕ್ಕೆ ದುಬೆಯವರ ಪೂರ್ಣ ವಿವರಗಳ ಜೊತೆ ಅವರ ದೂರು ದಾಖಲೆಗಳನ್ನು ರವಾನಿಸುತ್ತದೆ. ದುಬೆ ಭ್ರಷ್ಟ ಶಕ್ತಿಗಳಿಗೆ ಬಲಿಯಾಗುತ್ತಾರೆ! ಷಣ್ಮುಗನ್‌ ಮಂಜುನಾಥ್‌ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ ಮಾರ್ಕೆಟಿಂಗ್‌ ಮ್ಯಾನೇಜರ್‌. ಉತ್ತರ ಪ್ರದೇಶದ ತೈಲ ಕಲಬೆರಕೆ ಬಗ್ಗೆ ದೂರು ಸಲ್ಲಿಸಿದರೆ ಅಪಮೃತ್ಯುವಿಗೆ ಒಳಗಾಗಬೇಕಾಗುತ್ತದೆ. ಇತ್ತ ಲಲಿತ್‌ ಮೆಹ್ತಾ ಎಂಬ ಮಾಹಿತಿ ಕಾರ್ಯಕರ್ತ ಎನ್‌ಆರ್‌ಇಜಿಎಸ್‌ ಭ್ರಷ್ಟಾಚಾರದ ಬಗ್ಗೆ ಎತ್ತಿದ ವಿಚಾರ ಸೋಶಿಯಲ್‌ ಆಡಿಟ್‌ವರೆಗೆ ಕಾರಣವಾಗುತ್ತದೆ. ತಾವು 12 ವರ್ಷ ಕೆಲಸ ಮಾಡಿದ ಕಂಪನಿಯಲ್ಲಿನ ಅವ್ಯವಹಾರದ ಬಗ್ಗೆ .ಸಸೀಂದ್ರನ್‌ ಧ್ವನಿ ಎತ್ತಿದರೆ ಒತ್ತಡ ತಂದು ಅವರನ್ನು ಸುಮ್ಮನಾಗಿಸಲಾಗುತ್ತದೆ. ಕೊನೆಗೆ ಕಂಪನಿ ವಿರುದ್ಧದ 12 ಪ್ರಕರಣಗಳಿಗೆ ತನಿಖಾ ತಂಡ ನಾಲ್ಕರಲ್ಲಿ ಇವರನ್ನೇ ಸಾಕ್ಷಿಯನ್ನಾಗಿಸುತ್ತದೆ. ಇಂತಹ ಪ್ರಮುಖ ಸಿಳ್ಳೇಕ್ಯಾತರು ಭಾರತದಲ್ಲೂ ಇದ್ದರು ಎಂಬ ಅಂಶವನ್ನು ಹೇಳುವಾಗ, ಭಾರತದ ಟಾಪ್‌ ಷಲ್‌ ಬ್ಲೋವರ್‌ ಪಟ್ಟವನ್ನು ರಾಮಾಯಣದ ವಿಭೀಷಣನಿಗೆ ಕೊಡಲಾಗುತ್ತದೆ. ಆ ಕಾಲದಲ್ಲಿ ರಾವಣನ ರಾಜ್ಯದಲ್ಲಿದ್ದೂ, ಅಲ್ಲಿನ ಅನಾಹುತಗಳ ಬಗ್ಗೆ ಸಿಡಿದೆದ್ದವನ್ನಲ್ಲವೇ ವಿಭೀಷಣ?
ಸಿಸಿಗೆ ಆನ್‌ಲೈನ್‌ನಲ್ಲೂ ದೂರು ಸಾಧ್ಯ!

ಕೇಂದ್ರ ವಿಚಕ್ಷಣಾ ಆಯೋಗಕ್ಕೆ ಸರ್ಕಾರಿ ನೌಕರರಲ್ಲದೆ ಸಾರ್ವಜನಿಕರೂ ದೂರು ಸಲ್ಲಿಸಬಹುದು. ಈಗ ಸ್ಮಾರ್ಟ್‌ ಮೊಬೈಲ್‌ಗ‌ಳ ಕಾಲದಲ್ಲಿ ಲಂಚಕೋರತನದ ಬಗ್ಗೆ ವಿಡಿಯೋ, ಆಡಿಯೋ ಸಾಕ್ಷ್ಯಗಳನ್ನು ಸಂಗ್ರಹಿಸುವುದು ಜನರಿಗೇನೂ ಕಷ್ಟವಲ್ಲ. ಮಾಹಿತಿ ಹಕ್ಕು ದಾಖಲೆ ಸಂಗ್ರಹಕ್ಕೆ ಪೂರಕ.  ಈಗಲಾದರೂ ಪ್ರಾಮಾಣಿಕ ನಾಗರಿಕರು ಒಂದುಗೂಡಿ ಸ್ವಯಂ ಸೇವಾ ಸಂಸ್ಥೆಗಳನ್ನು ಹುಟ್ಟುಹಾಕಬೇಕು. ದಾಖಲೆ ಸಂಗ್ರಹಿಸಿ ಸಿಸಿಗೆ ದೂರು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಆನ್‌ಲೈನ್‌ನಲ್ಲಿ ಇಣುಕಿ.http://cvc.nic.in/
        
-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.