ಮನೆಯ ಅಂಗಳಕ್ಕೂ ವಿಶೇಷ ಭಾಗ್ಯವಿದೆ, ಗೊತ್ತಿರಲಿ…


Team Udayavani, Oct 2, 2017, 11:26 AM IST

Isi-4.jpg

ಅಂಗಳದ ಸೌಭಾಗ್ಯವು ಎಳೆ ಬಿಸಿಲಿನ ಛಾಯೆಯೊಂದಿಗೆ, ಅಲ್ಲಿನ ಪಕ್ಷಿ, ಚಿಟ್ಟೆ ಪತಂಗಗಳ ಓಡಾಟದೊಂದಿಗೆ, ಹೂ ಹಣ್ಣು ಬೆಳೆಸಿದ, ಗಿಡಬಳ್ಳಿ ಬೆಳೆದು ಪಸರಿಸಿದ ಹಸಿರಿನ ಹಿನ್ನೆಲೆಯಲ್ಲಿ ಮನಸ್ಸಿನ ಜಡತ್ವವನ್ನು ನಿವಾರಿಸುವ, ಜೊತೆಗೆ ಒಂದು ತೆರನಾದ ಮಾನಸಿಕ ಸ್ತಿಮಿತತ್ವಕ್ಕೂ ಉಲ್ಲಾಸ ಮೂಡಿಸುವ ಸಂಜೀವಿನಿಯಂತೆ ಅರಳಿಕೊಳ್ಳುತ್ತದೆ. ಮುದುಡುವ ಜಾಯಮಾನ ಅಲ್ಲಿರಲಾರದು.ಈಗ ನಗರಗಳಲ್ಲಿ ಅಂಗಳದ ಪ್ರದೇಶ ನೋಡಸಿಗುವುದೇ ಕಡಿಮೆ.

ಮನೆಯೇ ಚಿಕ್ಕದು. ಅಂದ ಮೇಲೆ ಅಂಗಳ ಹೇಗೆ ಇರಲು ಸಾಧ್ಯ? ವಾಸ್ತವದಲ್ಲಿ ವಾಸ್ತು ಶಿಸ್ತು ಅಂಗಳವನ್ನು ಬಯಸುತ್ತದೆ. ಅಂಗಳವು ಶನಿರಾಯರನ್ನು ಸಾಂಕೇತಿಸಿ ಶನೈಶ್ಚರ ಸಿದ್ಧಿಗೆ ಕಾರಣವಾದರೆ, ಅಂಗಳದ ಹೂಗಿಡಗಳು, ಲಾನ್‌ಗಳು, ಖಾಲಿ ಪ್ರದೇಶದ ಸೊಗಸುಗಳು ಬುಧ ಹಾಗೂ ಶುಕ್ರಗ್ರಹಗಳ ಮೂಲಕ ವಾದ ಸಂಪನ್ನತೆಯನ್ನು ಸಂಕೇತಿಸುತ್ತವೆ. ಈ ರೀತಿಯ ಅಂಗಳವು ಮನೆಯ ಪೂರ್ವ, ಉತ್ತರ/ ಈಶಾನ್ಯಗಳನ್ನು ಸಮಾವೇಶಗೊಳಿಸಿಕೊಳ್ಳಬೇಕು.

ಈ ರೀತಿಯ ಅಂಗಳವು ಉತ್ತರ, ಪೂರ್ವ, ಈಶಾನ್ಯವನ್ನು ವಿಸ್ತರಿಸುವ ಹಾಗೇ ಆವರಿಸಿಕೊಂಡಾಗ ಮನೆಯ ಯಜಮಾನನ ಕತೃತ್ವ ಶಕ್ತಿಗೆ ವೃದ್ಧಿ ದೊರಕುತ್ತದೆ. ಉನ್ನತವಾದ ದಶಾಕಾಲಕ್ಕೆ ವರ್ತಮಾನ ತೆರೆದುಕೊಳ್ಳಲು ಅನುಕೂಲವಾಗುತ್ತದೆ.ಖ್ಯಾತಿಗಾಗಿನ ಸ್ಪಂದನಗಳು ತಂತಾನೆ ಉತ್ತಮ ಸ್ಥಿತಿಗೆ ರೂಪಾಂತರಿಸುತ್ತವೆ. ಯಜಮಾನನ ದಿನಚರಿಯನ್ನು, ಹಿರಿಮೆಗಳನ್ನು, ಧನ ಸಂಪಾದನೆಗೆ ನ್ಯಾಯ ಮಾರ್ಗಗಳು ಲಭ್ಯವಾಗಲು ಅವಕಾಶ ಕೂಡಿ ಬರುತ್ತದೆ.

ಅದೂ ಅನಾಯಾಸವಾಗಿ. ಈಶಾನ್ಯ ಭಾಗವು ವಿಸ್ತರಿಸಿರುವುದನ್ನು ಖಚಿತ ಮಾಡಿಕೊಳ್ಳಿ. ಉಳಿದ ದಿಕ್ಕುಗಳು ಒಂದೆಡೆ. ಈಶಾನ್ಯದಿಕ್ಕೇ ಒಂದೆಡೆಯಾಗಿ ಅಳೆದಾಗ ಈಶಾನ್ಯ ದೊಡ್ಡದಾಗಿರಬೇಕು. ಅಂಗಳವು ಕೂಡಿಕೊಂಡು ಪರಿಣಾಮದಿಂದ ಆಗಿರಬೇಕು. ಅಂಗಳವು ವಾಯುವ್ಯ, ಪಶ್ಚಿಮ ದಕ್ಷಿಣಗಳನ್ನೆಲ್ಲ ವಿಸ್ತರಿಸಿಕೊಳ್ಳುವಂತೆ ಚಾಚಿರಬಾರದು. ಇದರಿಂದ ದುಷ್ಪರಿಣಾಮ. ಯಾಕೆಂದರೆ ಈಶಾನ್ಯ ಮೂಲೆಯು ಮುಖ್ಯವಾಗಿ ತ್ರಿಮೂರ್ತಿಗಳೆ ಅಂತಃ ಸತ್ವ ಪಡೆದ ಸ್ಪಂದನಗಳಿಂದ ಸಂಪನ್ನತೆ ಪಡೆದಿರುತ್ತದೆ.

ಈ ಜಗದ ಭಾಗಾಂಶವು ನೈಋತ್ಯದತ್ತ ನೀರನ್ನು ತುಂಬಿಸಿದರೆ, ಅಗ್ನಿ ಮೂಲೆ ಸಕಲ ಚರಾಚರಗಳ ಸಂಬಂಧವಾದ ಅತಿ ಯಾದ ವಿಕಿರಣಗಳನ್ನು ಶಾಖದ ರೂಪದಲ್ಲಿ ಅಂತರ್ಗತ ಗೊಳಿಸಿಕೊಂಡಿರುತ್ತದೆ. ವಾಯುವ್ಯವು ಕೇವಲ ವಾತವನ್ನು ಅಂಗೀಕೃತಗೊಳಿಸಿಕೊಂಡಿರುತ್ತವೆ. ಈಶಾನ್ಯ ಹಾಗಲ್ಲ ಜಗದೇಕ ಶಕ್ತಿ ಸ್ವರೂಪಿ ಭಗವಾನ್‌ ಸೂರ್ಯ ದೇವನು ಅರುಣೋದಯ, ಕರಿಣೋದಯ, ಎಳೆ ಬಿಸಿಲ ಆರೋಗ್ಯಯುತ ಅಂಶಗಳನ್ನು ತನ್ನ ಬೆಳಕಿನ ಅಲೆಯಲ್ಲೇ ಮಾನವನಿಗೆ ಒದಗಿಸಿ ಮಾಂಸ ಖಂಡಾದಿಗಳ, ನರ ಮಜ್ಜನಗಳ, ಎಲುಬು, ಕೀಲು, ಸಂದು ಹಾಗೂ ಚರ್ಮ ಇತ್ಯಾದಿ ವಿಕಸಗಳಿಗೆ ಪೂರಕವಾದ ಅಳತೆಯೊಂದಿಗೆ ಒದಗಿಸುತ್ತಲೇ ಇರುತ್ತಾನೆ.

ಆನಂದಮಯನಾದ ಸೂರ್ಯನು ಸೂರ್ಯೋದಯದ ಸಮಯದಲ್ಲಿ ಧನ್ವಂತರಿ ಸ್ವರೂಪಿಯಾಗಿ ಔಷಧಮಯ ಅಂಗ ವಿಶೇಷಗಳನ್ನು ಪಡೆದಂತಿರುತ್ತಾನೆ. ಜೊತೆಗೆ ಅಶ್ವಿ‌ನೀ ದೇವತೆಗಳ ಸ್ವರೂಪವೂ ಲಭಿಸಿ ಅವನಿಂದ ಶುಶ್ರೂಷೆಗೆ ಆಸ್ವದವಿರುತ್ತದೆ. ನರರು, ಉರಗಗಳು, ಪಶು, ಪಕ್ಷಿ, ಅಷ್ಟೇ ಅಲ್ಲ, ಸೂಕ್ಷ್ಮ ಅಣುಗಳೂ ಕೂಡ ತಮ್ಮ ಬಲವನ್ನು ಧಂಡಿಯಾಗಿ ಪಡೆದು ಬೆಳೆದು ಸೊಗಸನ್ನುಕ್ಕಿಸಲು ಅವಕಾಶ ಹೊಂದುತ್ತವೆ. 

ಸಾಯಂಕಾಲದ ಹೊತ್ತೂ ಅಂಗಳವು ಬೆಳಗಿನ, ಮಧ್ಯಾಹ್ನದ, ಸಾಯಂಕಾಲಕ್ಕೆ ಪೂರ್ವದ ಸೂರ್ಯನ ಗತಿಯ ಶಕ್ತಿ ಶಾಖವನ್ನು ಪೂರ್ವದತ್ತ ಕಟುವಾಗಿ ತ್ರಾಸದಾಯಕವಾಗದಂತೆ ಪಸರಿಸುತ್ತ ಇರಲು ಸಫ‌ಲವಾಗುತ್ತದೆ. ಅಂಗಳದಲ್ಲಿ ಹೂಗಿಡ, ಸಣ್ಣ ಪ್ರಮಾಣದ ತರಕಾರಿ, ತುಳಸಿ, ಔಷಧಿಯ ಸಸ್ಯ ಇತ್ಯಾದಿ ತರಹೇವಾರಿ ಫ‌ಸಲುಗಳನ್ನು ಪಡೆಯಲು ತೊಡಗಿಕೊಳ್ಳಬಹುದು. ದೈಹಿಕ ದಾಢತೆಗೆ, ಈ ಪ್ರಕ್ರಿಯೆಯಲ್ಲಿನ ಓಡಾಟಗಳಿಂದ, ನೀರು ಹೊಯ್ಯಲು ಬೇಕಾದ ಸಮಯದ ಓಡಾಟಗಳಿಂದ ಪಡೆಯಬಹುದಾಗಿದೆ.

ವ್ಯಾಯಮಕ್ಕೆ ಸಮವಾದದ್ದು ಇಂಥ, ಈ ಓಡಾಟಗಳು. ಕುಳಿತು ಓದುವ ಪರಿಪಾಠಗಳೂ ಇಲ್ಲಿ ಉತ್ತಮವೇ. ಹಾರುವ, ಓಡುವ, ಎಡತಾಕುವ ಪುಟ್ಟ ಪಕ್ಷಿಗಳ ಕಲರವ ನಿಮ್ಮ ಮನೆಕ್ಕೆ ಒಂದು ವಿಧವಾದ ಶಾಂತಿಯನ್ನು ದಯಪಾಲಿಸುತ್ತದೆ. ಬೆಳಗಿನ ಬಿಸಲನ್ನೂ ಗಮನಿಸಿ. ಇಳಿ ಹೊತ್ತಿನ ಸೂರ್ಯ ಮುಳುಗುವ ಸಂದರ್ಭದ (ನಾಲ್ಕು ಐದು ಘಂಟೆಯ ಹೊತ್ತಿಗಿನ ಬಿಸಿಲು) ಬಿಸಿಲೂ ಗಮನಿಸಿ. ಈ ಬಿಸಿಲುಗಳು ಸೂರ್ಯ ದೇವನ ಕೊಡುಗೆಯಾದರೂ ಬೆಳಗಿನ ಬಿಸಿಲಿನ ಅನುಭವ ದಿವ್ಯ. 

ಅಂತೂ ಅಂಗಳದ ಸೌಭಾಗ್ಯವು ಎಳೆ ಬಿಸಿಲಿನ ಛಾಯೆಯೊಂದಿಗೆ, ಅಲ್ಲಿನ ಪಕ್ಷಿ, ಚಿಟ್ಟೆ ಪತಂಗಗಳ ಓಡಾಟದೊಂದಿಗೆ, ಹೂ ಹಣ್ಣು ಬೆಳೆಸಿದ, ಗಿಡಬಳ್ಳಿ ಬೆಳೆದು ಪಸರಿಸಿದ ಹಸಿರಿನ ಹಿನ್ನೆಲೆಯಲ್ಲಿ ಮನಸ್ಸಿನ ಜಡತ್ವವನ್ನು ನಿವಾರಿಸುವ, ಜೊತೆಗೆ ಒಂದು ತೆರನಾದ ಮಾನಸಿಕ ಸ್ತಿಮಿತತ್ವಕ್ಕೂ ಉಲ್ಲಾಸ ಮೂಡಿಸುವ ಸಂಜೀವಿನಿಯಂತೆ ಅರಳಿಕೊಳ್ಳುತ್ತದೆ. ಮುದುಡುವ ಜಾಯಮಾನ ಅಲ್ಲಿರಲಾರದು. ಅರಳುವುದು ಸಂವರ್ಧನೆಗೆ ಯಾವಾಗಲೂ ಅಪೇಕ್ಷಣೀಯ ಅಂಶವಾಗಿದೆ. ಭಾರತೀಯ ವಾಸ್ತು ಶಾಸ್ತ್ರ ಈ ಹಿನ್ನೆಲೆಯಲ್ಲಿ ಅಂಗಳವನ್ನು ಪ್ರಧಾನವಾಗಿಸಿದೆ.

ಅನಂತಶಾಸ್ತ್ರಿ, ಮೊ: 8147824707

ಟಾಪ್ ನ್ಯೂಸ್

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

1-car

Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.