ಮೋಸ ಹೋಗದಿರಲು ಗ್ರಾಹಕರಿಗೆ ಈ ಶಿಕ್ಷಣ ಬೇಕೇಬೇಕು


Team Udayavani, Jan 23, 2017, 3:50 AM IST

Consumer-Goods-1024×682.jpg

ಮಾರುಕಟ್ಟೆಗೆ ಯಾವುದೊ ಹೊಸ ಪದಾರ್ಥ ಬಂದಿದೆ ಎಂದು ತಿಳಿಸುವುದೇ ಜಾಹೀರಾತು.ಆದ್ದರಿಂದ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯಲ್ಲ. ಆದರೆ ಜಾಹೀರಾತುಗಳು ನಮ್ಮ ಮೇಲೆ ಪರಿಣಾಮ ಉಂಟುಮಾಡಿ, ನಮಗೆ ಬೇಡದ ಅನಗತ್ಯ ವಸ್ತುಗಳನ್ನು ಖರೀದಿಸಲು ಪ್ರಚೋದಿಸುತ್ತದೆ. ನಮ್ಮಲ್ಲಿ ಸಾಕಷ್ಟು ಹಣಲ್ಲದಿದ್ದರೂ, ಸಾಲ ಮಾಡಿಯಾದರೂ ಅದನ್ನು ಖರೀದಿಸಲು ಜಾಹೀರಾತುಗಳ ಬಗ್ಗೆ ಎಚ್ಚರದಿಂದ ಇರಬೇಕು.

ಸರಕನ್ನು ಯಾವ ರೀತಿ ಮಾರಾಟ ಮಾಡಲಾಗುತ್ತಿದೆ?
ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ನೀವು ಗಮನಿಸಬೇಕಾದ ಮುಖ್ಯ ಅಂಶ ಇದು. ತಯಾರಕರು, ಉತ್ಪಾದಕರು ಮತ್ತು ಮಾರಾಟಗಾರರು ಸರಕನ್ನು ಮಾರಾಟ ಮಾಡಲು ಅನುಸರಿಸುತ್ತಿರುವ ಮಾರ್ಗ ಎಷ್ಟು ಸತ್ಯವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಸುಳ್ಳು, ಕಪಟ, ವಂಚನೆ ಇತ್ಯಾದಿ ಮಾರ್ಗ ಅನುಸರಿಸಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಅ ಮಾರ್ಗ ಅನುಸರಿಸುವ ಕಂಪನಿಗಳ ಸರಕನ್ನು ನೀವು ತಿರಸ್ಕರಿಸಬೇಕು.

ಅದರ ಜಾಹೀರಾತು ನನ್ನ ಮೇಲೆ ಪರಿಣಾಮ ಉಂಟುಮಾಡಿದಿಯೇ?
ಗ್ರಾಹಕರೆಲ್ಲರೂ ಜಾಹೀರಾತುಗಳಿಗೆ ಮರುಳಾಗುತ್ತಾರೆ. ಜಾಹೀರಾತುಗಳ ಮೋಡಿ ಆ ರೀತಿ ಇರುತ್ತದೆ. ಎಲ್ಲ ರೀತಿಯ ಜಾಹೀರಾತುಗಳೂ ಹಾದಿ ತಪ್ಪಿಸುತ್ತಿದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅದೆಷ್ಟೊ ಬಾರಿ ಜಾಹೀರಾತುಗಳಿಲ್ಲದಿದ್ದರೆ ನಾವು ಖರೀದಿಸಲು ಆಗುವುದೇ ಇಲ್ಲ. ಮಾರುಕಟ್ಟೆಗೆ ಯಾವುದೊ ಹೊಸ ಪದಾರ್ಥ ಬಂದಿದೆ ಎಂದು ತಿಳಿಸುವುದೇ ಜಾಹೀರಾತು.ಆದ್ದರಿಂದ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯಲ್ಲ. ಆದರೆ ಜಾಹೀರಾತುಗಳು ನಮ್ಮ ಮೇಲೆ ಪರಿಣಾಮ ಉಂಟುಮಾಡಿ, ನಮಗೆ ಬೇಡದ ಅನಗತ್ಯ ವಸ್ತುಗಳನ್ನು ಖರೀದಿಸಲು ಪ್ರಚೋದಿಸುತ್ತದೆ. ನಮ್ಮಲ್ಲಿ ಸಾಕಷ್ಟು ಹಣಲ್ಲದಿದ್ದರೂ, ಸಾಲ ಮಾಡಿಯಾದರೂ ಅದನ್ನು ಖರೀದಿಸಲು ಜಾಹೀರಾತುಗಳ ಬಗ್ಗೆ ಎಚ್ಚರದಿಂದ ಇರಬೇಕು.

ಲೇಬಲ್‌ ಮೇಲೆ ಅಗತ್ಯವಾದ ಮಾಹಿತಿ ಮುದ್ರಿಸಲಾಗಿದಿಯೇ?
ಪ್ಯಾಕೆಟ್‌ ಮೇಲೆ ಕೆಲವೊಂದು ಮಾಹಿತಿ ಮುದ್ರಿಸುವುದು ಕಡ್ಡಾಯಗೊಳಿಸಲಾಗಿದೆ. ತೂಕ ಮತ್ತು ಅಳತೆ ಕಾನೂನು, ಔಷಧ ಮತ್ತು ಸೌಂದರ್ಯ ಸಾಮಗ್ರಿ ಕಾನೂನು, ಆಹಾರ ಸುರಕ್ಷತಾ ಕಾನೂನು ಇತ್ಯಾದಿ ಪದಾರ್ಥದ ಪ್ಯಾಕ್‌ ಮೇಲೆ ಯಾವ ಮಾಹಿತಿ ಮುದ್ರಿಸಬೇಕು ಎಂಬುದನ್ನು ತಿಳಿಸುತ್ತದೆ. ಗ್ರಾಹಕರಿಗೆ ಅಗತ್ಯವಾದ ಕನಿಷ್ಟ ಮಾಹಿತಿಯನ್ನು ಇದು ಒದಗಿಸುತ್ತದೆ.

ನೀವು ಖರೀದಿಸುವಾಗ ಪ್ಯಾಕೆಟ್‌ ಮೇಲೆ ಮುದ್ರಿಸಿರುವ ಮಾಹಿತಿಯನ್ನು ಗಂಭೀರವಾಗಿ ಓದಬೇಕು. ಅನುಮಾನವಿದ್ದಲ್ಲಿ ಮಾರಾಟಗಾರರನ್ನು ಕೇಳಿ ಅದನ್ನು ಪರಿಹರಿಸಿಕೊಳ್ಳಬೇಕು. ಕೇವಲ ಬ್ರಾಂಡ್‌ ಅಥವಾ ಜಾಹೀರಾತು ನೋಡಿ, ವಸ್ತುವನ್ನು ಖರೀದಿಸಬಾರದು.

ಪದಾರ್ಥದಲ್ಲಿ ಹಾನಿಕರ ರಾಸಾಯನಿಕ ಅಂಶಗಳು ಸೇರಿದೆಯೇ?
ರಾಸಾಯನಿಕವಲ್ಲದೆ ಯಾವುದೇ ಪದಾರ್ಥವನ್ನು ತಯಾರಿಸಲು ಸಾಧ್ಯವಿಲ್ಲ. ವಿಶೇಷವಾಗಿ ಆಹಾರ, ಪಾನೀಯ, ಔಷಧ, ಸೌಂದರ್ಯವರ್ಧಕ ಇತ್ಯಾದಿಗೆ ಕೆಲವೊಂದು ರಾಸಾಯನಿಕಗಳನ್ನು ಬಳಸಲೇಬೇಕಾಗುತ್ತದೆ. ಆದರೆ ಯಾವ ರಾಸಾಯನಿಕವನ್ನು ಎಷ್ಟು ಪ್ರಮಾಣದಲ್ಲಿ ಬೆರೆಸಲಾಗಿದೆ ಎಂಬುದು ಮುಖ್ಯ. ನಿಮ್ಮ ಆರೋಗ್ಯದ ದೃಷ್ಟಿಯಿಂದ ಇದರ ಬಗ್ಗೆ ಎಚ್ಚರವಿರಲಿ.

ಖರೀದಿಸುವ ಮುನ್ನ ನೀವು ಕೇಳಿಕೊಳ್ಳಬೇಕಾದ ಇತರೆ 10 ಪ್ರಶ್ನೆಗಳು ಇವು…

– ಏನಾದರು ಸೇವಿಸಿದರೆ ಅದು ನನ್ನಲ್ಲಿ ಒಂದು ಅಭ್ಯಾಸವಾಗುತ್ತದೆಯೇ?
– ಅದರ ಉಪಯೋಗ ನನ್ನ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಉಂಟುಮಾಡುತ್ತದೆ?
– ಅದು ಕೆಟ್ಟುಹೋಗಿದ್ದರೆ ಅದನ್ನು ಮಾರಾಟಗಾರರಿಗೆ ಹಿಂತಿರುಗಿಸಬಹುದೆ?
– ಮುದ್ರಿಸಿರುವ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ನಾನು ಹಣ ಹಿಂಪಡೆಯಬಹುದೆ?
– ಅದನ್ನು ಖರೀದಿಸಿಸಲು ದೇಶಿ ಹಣ ಬೇಕಾಗುತ್ತದೆಯೇ?
– ಅದನ್ನು ಬಳಸುವುದರಿಂದ ಐಷಾರಾಮಿ ಜೀವನವನ್ನು ಉತ್ತೇಜಿಸಿದಂತಾಗುತ್ತದೆಯೇ
– ಅದರ ಪೊಟ್ಟಣಕ್ಕೆ ಯಾವ ರೀತಿಯ ಸಾಮಗ್ರಿ ಬಳಸಲಾಗಿದೆ?
– ಅದರ ಪೊಟ್ಟಣ ಪರಿಸರದ ಮೇಲೆ ಯಾವ ಪರಿಣಾಮ ಉಂಟುಮಾಡಲಿದೆ?
– ದೇಶಗಳಿಂದ ಆಮದು ಮಾಡಿಕೊಂಡ ವಸ್ತುವನ್ನು ಖರೀದಿಸುವುದರಿಂದ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಆಗುವ ಪರಿಣಾಮವೇನು?
– ಅದರ ತಯಾರಕರು, ಉತ್ಪಾದಕರು ಯಾರು?

– ವೈ.ಜಿ.ಮುರಳೀಧರನ್‌,
ಸದಸ್ಯರು: ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತು, ಭಾರತ ಸರ್ಕಾರ

ಟಾಪ್ ನ್ಯೂಸ್

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.