ತೈಲ ಮಜ್ಜನ; ಪೆಟ್ರೋಲ್, ಗ್ಯಾಸ್ ಬೆಲೆ ಇಳಿದದ್ದು ಈ ಕಾರಣಕ್ಕೆ
Team Udayavani, Feb 4, 2019, 12:30 AM IST
ಪೆಟ್ರೋಲ್, ಡಾಲರ್, ಈ ಚಿನ್ನ- ಮೂರಕ್ಕೂ ಒಳಗೊಳಗೆ ಸಂಬಂಧವಿದೆ. ತೈಲ ಬೆಲೆ ಇಳಿದರೆ ಚಿನ್ನದ ಬೆಲೆಯಲ್ಲೂ ಏರುಪೇರಾಗಬಹುದು. ಕಳೆದ ಮೂರು ತಿಂಗಳಿನ ಆರ್ಥಿಕ ಪರಿಸ್ಥಿತಿಯನ್ನು ಒಮ್ಮೆ ಗಮನಿಸಿ. ಈ ಅವಧಿಯಲ್ಲಿ ಚಿನ್ನದ ಬೆಲೆ ಅತಿಯಾಗಿ ಏರಿಲ್ಲ, ಹಾಗೆಯೇ ಪೆಟ್ರೋಲ್ ಬೆಲೆ ಬ್ಯಾರಲ್‌ಗೆ 70ಡಾಲರ್ ಇದ್ದದ್ದು ಈಗ ಅಂದಾಜು 64 ಡಾಲರ್‌ಗೆ ಇಳಿದಿದೆ.
ಬೇರೆ ದೇಶದಿಂದ ಆಮದು ಮಾಡಿಕೊಂಡರೆ ಆ ದೇಶದ ಕರೆನ್ಸಿ ಅಥವಾ ಅಮೆರಿಕನ್ ಡಾಲರ್, ಪೌಂಡ್, ಸ್ಟರ್ಲಿಂಗ್, ಯುರೋ ಮುಂತಾದ ಅಂತರಾಷ್ಟ್ರೀಯ ಕರೆನ್ಸಿಗಳಲ್ಲಿ ವ್ಯವಹಾರ (ಪೇಮೆಂಟ್) ಮಾಡಬೇಕಾಗುತ್ತದೆ. ಇದು ಅಂತಾರಾಷ್ಟ್ರೀಯ ವಾಣಿಜ್ಯ ವ್ಯವಹಾರದಲ್ಲಿ ಲಾಗಾಯ್ತಿನಿಂದ ನಡೆದು ಬಂದ ಪದ್ಧತಿ. ಜಾಗತಿಕ ವ್ಯಾಪಾರದಲ್ಲಿ ಡಾಲರ್, ಪೌಂಡ್ ಸ್ಟರ್ಲಿಂಗ್ಸ್, ಯೆನ್, ಯುರೊ ಮತ್ತು ಸ್ವಿಸ್Ì ಫ್ರಾಂಕ್‌ಗಳ ಬಳಕೆಯೇ ಹೆಚ್ಚು. ಇಡೀ ಜಗತ್ತಿನ ವ್ಯವಹಾರಗಳು ಶೇ. 52ರಷ್ಟು ಅಮೇರಿಕನ್ ಡಾಲರ್‌ನಲ್ಲಿ ಹಾಗೂ ಶೇ. 64ರಷ್ಟು ವಿದೇಶಿ ವಿನಿಮಯ ಸಂಗ್ರಹ ಕೂಡಾ ಡಾಲರ್ ನಲ್ಲಿಯೇ ನಡೆಯುತ್ತದೆ.
ಇಂತಿಪ್ಪ ಪರಿಸ್ಥಿತಿಯಲ್ಲಿ ಭಾರತ ತನ್ನ ತೈಲದ ವಹಿವಾಟನ್ನು ರುಪಾಯಿಯಲ್ಲಿ ಮಾಡುತ್ತಿದೆ. ಭಾರತವು ಇರಾನ್‌ನಿಂದ ಅಮದು ಮಾಡಿಕೊಳ್ಳುವ ಕಚ್ಚಾ ತೈಲಕ್ಕೆ ಅಂತಾರಾಷ್ಟ್ರೀಯ ಕರೆನ್ಸಿಗಳಾದ ಯುರೋ ಮತ್ತು ಡಾಲರ್‌ನಲ್ಲಿ ಪೇಮೆಂಟ್ ಮಾಡುತ್ತಿತ್ತು. ನ್ಯೂಕ್ಲಿಯರ್ ಘಟಕ ಹೊಂದಿದೆ ಎನ್ನುವ ನೆಪದಲ್ಲಿ ಅಮೆರಿಕಾ ಇರಾನ್ ಮೇಲೆ ದಿಗ್ಬಂಧನ ಹಾಕಿದ್ದು ಭಾರತಕ್ಕೆ ಲಾಭವಾಯಿತು. ನಂತರ ನಿಯಮಗಳನ್ನು ಸಡಿಲ ಗೊಳಿಸಿದ್ದರಿಂದ ಈಗ ಇರಾನ್‌ನೊಂದಿಗೆ ರೂಪಾಯಿಯಲ್ಲೇ ವ್ಯವಹಾರ ಮಾಡುವಂತಾಗಿದೆ.
ನಮ್ಮ ದೇಶದ ತೈಲ ವ್ಯವಹಾರ ಕಡಿಮೆ ಏನಿಲ್ಲ. ಇಡೀ ಜಗತ್ತಲ್ಲಿ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಎರಡನೇ ರಾಷ್ಟ್ರ ಭಾರತ. 2018 ರಲ್ಲಿ ದಿನಕ್ಕೆ ಸರಾಸರಿ 4,34, 150 ಬ್ಯಾರೆಲ್ ನಂತೆ, 217.80 ಮಿಲಿಯನ್‌ಮೆಟ್ರಿಕ್ ಟನ್ ಕಚ್ಚಾತೈಲವನ್ನು ಆಮದು ಮಾಡಿಕೊಂಡಿದೆ. ಇದಕ್ಕೆ 125.53 ಬಿಲಿಯನ್ ಡಾಲರ್‌ಅನ್ನು ಪಾವತಿಸಿದೆ. ಈ ವರ್ಷ ಇರಾನ್ ದೇಶ ಒಂದರಿಂದಲೇ 25 ಮಿಲಿಯನ್ ಟನ್ ತೈಲವನ್ನು ಪಡೆದಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು 13.34% ಹೆಚ್ಚಳ. ಈ ಹಿಂದಿನ ಎಲ್ಲ ತೈಲ ವ್ಯವಹಾರಕ್ಕೂ ಅಮೆರಿಕ, ಯೂರೋಪಿಯನ್ ಬ್ಯಾಂಕ್‌ಗಳ ಮಧ್ಯಸ್ಥಿಕೆ ಬೇಕಿತ್ತು. ಈಗ ಹಾಗಿಲ್ಲ. ಭಾರತದ ರೂಪಾಯಿಯಲ್ಲೇ ವ್ಯವಹಾರ ಆಗುತ್ತಿರುವುದರಿಂದ ಕೋಟ್ಯಂತರ ರೂ. ಕಮೀಷನ್ ಉಳಿತಾಯವಾಗಿದೆ. ಲಾಭವಿದೆ ಇದರಿಂದ ಲಾಭ ಏನು? ಹೀಗಂತ ಕೇಳಬಹುದು. ಪೆಟ್ರೋಲ್, ಡಾಲರ್, ಈ ಚಿನ್ನ- ಮೂರಕ್ಕೂ ಒಳಗೊಳಗೆ ಸಂಬಂಧವಿದೆ. ತೈಲ ಬೆಲೆ ಇಳಿದರೆ ಚಿನ್ನದ ಬೆಲೆಯಲ್ಲೂ ಏರುಪೇರಾಗಬಹುದು.
ಕಳೆದ ಮೂರು ತಿಂಗಳಿನ ಆರ್ಥಿಕ ಪರಿಸ್ಥಿತಿಯನ್ನು ಒಮ್ಮೆ ಗಮನಿಸಿ. ಈ ಅವಧಿಯಲ್ಲಿ ಚಿನ್ನದ ಬೆಲೆ ಅತಿಯಾಗಿ ಏರಿಲ್ಲ, ಹಾಗೆಯೇ
ಪೆಟ್ರೋಲ್ ಬೆಲೆ ಬ್ಯಾರಲ್‌ಗೆ 70ಡಾಲರ್ ಇದ್ದದ್ದು ಈಗ ಅಂದಾಜು 64 ಡಾಲರ್‌ಗೆ ಇಳಿದಿದೆ. ಬ್ಯಾರಲ್ ಬೆಲೆ 70ಡಾಲರ್ ಇದ್ದಾಗ ಭವಿಷ್ಯದಲ್ಲಿ 80ಡಾಲರ್‌ಗೂ ತಲುಪಿ, ನಮ್ಮ ಪೆಟ್ರೋಲ್ ಬೆಲೆ ಲೀಟರ್ 100ರೂ. ಆಗುತ್ತದೆ. ಇದರ ಪರಿಣಾಮ, ಅಡುಗೆ ಸಿಲಿಂಡರ್ ಬೆಲೆ ಸಾವಿರ ರೂ. ದಾಟುವ ಎಲ್ಲ ಲಕ್ಷಣಗಳು ಇವೆ ಅಂತ ತಜ್ಞರು ಅಂದಾಜು ಮಾಡಿದ್ದರು. ಆದರೆ ಆ ರೀತಿ ಆಗಲೇ ಇಲ್ಲ. ತೈಲ ಕಂಪೆನಿಗಳೊಂದಿಗೆ ನಡೆಯುತ್ತಿರುವ ರೂಪಾಯಿ ವ್ಯವಹಾರವೇ ಇದಕ್ಕೆ ಕಾರಣ. ಈ ಪೇಮೆಂಟ್‌ಗೆ Financial Benchmarks India ದ ರೆಫರೆನ್ಸ್ ರೇಟ್‌ಅನ್ನು ಬಳಸಲಾಗುವುದು. ಇರಾನ್‌ನಿಂದ ಕಚ್ಚಾತೈಲ ಆಮದು ಮಾಡಿಕೊಂಡರೆ ರೂಪಾಯಿಯಲ್ಲಿ ಪೇಮೆಂಟ್ ಮಾಡುವುದು ಹೊಸ ಬೆಳವಣಿಗೆಯಲ್ಲ. ಈ ಮೊದಲು ಶೇ.45ರಷ್ಟನ್ನು ರೂಪಾಯಿಯಲ್ಲಿ ಮತ್ತು ಶೇ.55ರಷ್ಟನ್ನೂ ಯುರೋ ದಲ್ಲಿ ಮಾಡಬೇಕಾಗಿತ್ತು. ಈಗ ಶೇ. ನೂರಕ್ಕೆ ನೂರರಷ್ಟು ನಮ್ಮ ರೂಪಾಯಿಯಲ್ಲಿ ಪಾವತಿ ಮಾಡಬಹುದು.
ಯುಕೋ ಬ್ಯಾಂಕ್‌ನಲ್ಲಿ ವಿದೇಶಿ ತೈಲ ಕಂಪೆನಿಗಳ ಎಸ್ಮೋ ಅಕೌಂಟ್ ತೆರೆದಿದ್ದಾರೆ. ಇದು ಕೇವಲ ವಿದೇಶಿ ವ್ಯವಹಾ ಮಾಡುವ ಖಾತೆ. ಈ ಮೂಲಕ ಆಮದು, ರಫ್ತಿನ ವ್ಯವಹಾರ ನಡೆಯುತ್ತಿದೆ. ಜೊತೆಗೆ ಇರಾಕ್- ಇರಾನ್‌ನ ವಿದ್ಯಾರ್ಥಿಗಳು ಭಾರತದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಅವರು ಕೂಡ ವಿನಿಮಯವಾದ ರುಪಾಯಿಯನ್ನು ಬಳಸಬಹುದು ಎನ್ನುವ ನಿಯಮವಿದೆ. ಖಾತೆಯಲ್ಲಿ ಜಮೆ ಮಾಡಿದ ಹಣವನ್ನು ಇರಾನ್ ತಾನು ಭಾರತದಿಂದ ಆಮದು ಮಾಡಿದ ಪದಾರ್ಥಗಳಿಗೆ, ಭಾರತ ನೀಡಿದ ಸೇವೆಗಳಿಗೆ ಪೇಮೆಂಟ್ ಮಾಡಲು ಬಳಸುತ್ತಿದೆ. ಇದಕ್ಕೂ ಮಿಗಿಲಾಗಿ ಇರಾನ್‌ನಿಂದ ತೈಲ ಆಮದು ಭಾರತೀಯ ತೈಲ ಕಂಪನಿಗಳಿಗೆ ಸ್ವಲ್ಪ ಮಟ್ಟಿಗೆ ಲಾಭದಾಯಕವೂ ಆಗಿದೆ. ಹೇಗೆಂದರೆ, ಭಾರತೀಯ ತೈಲ ಕಂಪೆನಿಗಳಿಗೆ ಹಣ ಪಾವತಿಸಲು 60 ದಿನಗಳ ಕ್ರೆಡಿಟ್ ಕೂಡಾ ನೀಡುತ್ತವೆ.
ಪ್ರಸ್ತುತ ಭಾರತ 23 ದೇಶಗಳೊಂದಿಗೆ ಈ ರೀತಿ ದ್ವಿಪಕ್ಷೀಯ ವ್ಯವಹಾರ ಮಾಡುತ್ತಿದೆ. ಪರಸ್ಪರ ವ್ಯಾಪಾರ-ವ್ಯವಹಾರಗಳಲ್ಲಿ ಮೂರನೇ ದೇಶದ ಕರೆನ್ಸಿಯ ಬಳಕೆಯನ್ನು ಕಡಿಮೆ ಮಾಡಿದರೆ ಮಧ್ಯಮವರ್ಗದ ಬಳಕೆಯ ವಸ್ತುಗಳ ಬೆಲೆಯನ್ನು ಎಷ್ಟೆಲ್ಲ ಕಡಿಮೆ ಮಾಡಬಹುದು? ಇಂಥ ಚಿಂತನೆ ಈಗ ನಡೆಯುತ್ತಿದೆ.
– ರಮಾನಂದ ಶರ್ಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.