ನಿಮ್ಮ ಡಯಾಬಿಟಿಸ್‌ಗೆ ಇದೂ ಕಾರಣ ನೋಡಿ…


Team Udayavani, Apr 10, 2017, 3:45 AM IST

diabeties.jpg

ಹದಿನೈದು ವರ್ಷದ ಮಧುರೆಯ ಹುಡುಗಿಯೊಬ್ಬಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಇದು ಸಂಭವಿಸಿದ್ದು 2011ರಲ್ಲಿ. ಅವಳಿಗೆ ಡಯಬಿಟಿಸ್‌ ಕಿಟೊ ಅಸಿಡೊಸಿಸ್‌ ಎಂಬ ಮಾರಣಾಂತಿಕ ಅನಾರೋಗ್ಯ. ಅಂದರೆ, ಇನ್ಸುಲಿನಿನ ಕೊರತೆಯಿಂದಾಗಿ ಶರೀರದ ಜೀವಕೋಶಗಳಿಗೆ ಅತ್ಯಗತ್ಯವಾದ ಸಕ್ಕರೆ (ಗುÉಕೋಸ್‌) ಸಿಗದಿರುವುದು.

ಅವಳನ್ನು ಪರೀಕ್ಷಿಸಿದ ಕೃಷ್ಣನ್‌ ಸ್ವಾಮಿನಾಥನ್‌, ಆ ಹುಡುಗಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂಬುದನ್ನು ಗಮನಿಸಿದರು. ಅವರು ಎಂಡೋಕ್ರಿನೊಲೊಜಿಸ್ಟ್‌ ಹಾಗೂ ಕೊಯಂಬತ್ತೂರಿನ ಕೊವೈ ವೈದ್ಯಕೀಯ ಕೇಂದ್ರ ಮತ್ತು ಆಸ್ಪತ್ರೆಯ ಅಧ್ಯಕ್ಷರು. ನಾವು ಹುಡುಗಿಯ ರಕ್ತ ಮತ್ತು ಮೂತ್ರವನ್ನು ಪುನಃ ವೈದ್ಯಕೀಯವಾಗಿ ಪರೀಕ್ಷಿಸಿದೆವು. ಆಗ ಅವೆರಡರಲ್ಲೂ ಒಂದು ಆರ್ಗನೋಫೋಸ್ಪೇಟಿನ (ಓಪಿ) ಅಧಿಕ ಪ್ರಮಾಣದ ಉಳಿಕೆ ಪತ್ತೆಯಾಯಿತು. 

ಅವಳ ಹೆತ್ತವರನ್ನು ಪ್ರಶ್ನಿಸಿದಾಗ, ಅವಳು ಆ ರಾಸಾಯನಿಕ ಕೀಟನಾಶಕವನ್ನು ನುಂಗಿ¨ªಾಳೆಂದು ತಿಳಿಸಿದರು; ಶಾಲೆಯ ಪರೀಕ್ಷೆಯಲ್ಲಿ ಪಡೆದ ಅಂಕಗಳು ಕಡಿಮೆ ಆಯಿತೆಂದು ಬೇಸರ ಮಾಡಿಕೊಂಡಿದ್ದಳಂತೆ ಎಂದು ವಿವರಿಸಿಬಿಟ್ಟರು ಕೃಷ್ಣನ್‌ ಸ್ವಾಮಿನಾಥನ್‌. ಅದೇ ಸಮಯದಲ್ಲಿ ಮೈಸೂರಿನಲ್ಲಿ ಇಂತಹದೇ ವೈದ್ಯಕೀಯ ಸಮಸ್ಯೆಯಿಂದ 12 ವರುಷದ ಹುಡುಗನೊಬ್ಬ ಬಳಲುತ್ತಿದ್ದ. ಅವನ ದೇಹದಲ್ಲಿಯೂ ಅದೇ ಕೀಟನಾಶಕದ ಉಳಿಕೆ ಪತ್ತೆ. (ಆರ್ಗನೋಫೋಸ್ಪೇಟ್‌ ವರ್ಗದ ಕೀಟನಾಶಕಗಳು ಭಾರತದಲ್ಲಿ ಭಾರೀ ಮಾರಾಟವಾಗುತ್ತಿವೆ. ನಮ್ಮ ರೈತರು ಆತ್ಮಹತ್ಯೆ ಮಾಡಿಕೊಳ್ಳಲಿಕ್ಕಾಗಿ ನುಂಗುವ ಕೀಟನಾಶಕಗಳೆಂದು ಇವಕ್ಕೆ ಕುಖ್ಯಾತಿ.) 

ಈ ಎರಡು ಪ್ರಕರಣಗಳು ಮಧುರೈ ಕಾಮರಾಜ್‌ ವಿಶ್ವವಿದ್ಯಾಲಯದ ಪರಿಣತರ ತಂಡ ನಡೆಸಿದ ಅಧ್ಯಯನವೊಂದಕ್ಕೆ ಮೂಲಾಧಾರ; ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚೆಚ್ಚು ಜನರು ಡಯಬಿಟಿಸ್‌ ಕಾಯಿಲೆಗೆ ತುತ್ತಾಗುತ್ತಿರಲು ಕಾರಣ ತನಿಖೆ ಮಾಡುವುದು ಆ ಅಧ್ಯಯನದ ಉದ್ದೇಶ. ಆರ್ಗನೋಫೋಸ್ಪೇಟ್‌ ಶರೀರದಲ್ಲಿ ಸೇರಿಕೊಂಡರೆ ಮನುಷ್ಯರಲ್ಲಿ ಮತ್ತು ಇಲಿಗಳಲ್ಲಿ ಡಯಬಿಟಿಸಿಗೆ ಕಾರಣವಾಗುತ್ತದೆ ಮತ್ತು ಕುಗ್ಗಿದ ಗುÉಕೋಸ್‌-ಸಹನೀಯತೆಗೆ ಕಾರಣವಾಗುತ್ತದೆ ಎನ್ನುತ್ತಾರೆ ಗಣೇಶನ್‌ ವೇಲ… ಮುರುಗನ್‌. ಅವರು ಜೀನೋಮ… ಬಯೋಲಜಿ ಎಂಬ ವೈದ್ಯಕೀಯ ಪತ್ರಿಕೆಯ ಜನವರಿ 2017ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಈ ವಿಷಯದ ಪ್ರಬಂಧದ ಪ್ರಧಾನ ಲೇಖಕರು. ಈ ಮುಂಚೆ ಪ್ರಕಟವಾಗಿರುವ ಅಧ್ಯಯನ ಪ್ರಬಂಧಗಳು ತಮಿಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಡಯಬಿಟಿಸ್‌ ಬಾಧಿತರ ಸಂಖ್ಯೆ ಜಾಸ್ತಿ ಎಂದು ತಿಳಿಸಿದ್ದವು. ಆದರೆ, ಇದು ಕೀಟನಾಶಕ ಮತ್ತು ಡಯಬಿಟಿಸಿಗೆ ಸಂಬಂಧ ಇದೆಯೆಂದು ತಿಳಿಸಿರುವ ಮೊದಲ ಅಧ್ಯಯನ.

ಈ ಅಧ್ಯಯನಕ್ಕಾಗಿ ಮಧುರೈ ಜಿÇÉೆಯ ತಿರುಪ್ಪರನ್‌ ಕುಂದ್ರಮ… ತಾಲೂಕಿನ 3,080 ಜನರನ್ನು ಸಂಶೋಧಕರು ಸರ್ವೆ ಮಾಡಿದ್ದರು. ಆ ಎಲ್ಲ ವ್ಯಕ್ತಿಗಳ ವಯಸ್ಸು 35 ವರ್ಷಗಳಿಗಿಂತ ಜಾಸ್ತಿ. ಅವರಲ್ಲಿ ಶೇ.55ರಷ್ಟು ಜನರು ಕೃಷಿ  ಸಮುದಾಯದವರು; ಹಾಗಾಗಿ ಅವರ ದೇಹದಲ್ಲಿ ಓಪಿ ಸೇರಿಕೊಳ್ಳುವ ಸಂಭವ ಅಧಿಕ. ಅವರ ರಕ್ತದ ಪರೀûಾ ಫ‌ಲಿತಾಂಶಗಳ ಆಧಾರದಿಂದ ತಿಳಿದು ಬಂದ ವಿಷಯ: ಡಯಬಿಟಿಸ್‌ ಬಾಧಿತರ ಪ್ರಮಾಣವು ಕೃಷಿಯೇತರ ಸಮುದಾಯದ ವ್ಯಕ್ತಿಗಳಿಗೆ (ಶೇ.6.2) ಹೋಲಿಸಿದಾಗ ಕೃಷಿ  ಸಮುದಾಯದ ವ್ಯಕ್ತಿಗಳಲ್ಲಿ (ಶೇ.18.3) ಮೂರು ಪಟ್ಟು ಅಧಿಕ. ಕೃಷಿ-ಸಮುದಾಯದ ವ್ಯಕ್ತಿಗಳಲ್ಲಿ ಬೊಜ್ಜು, ಅಧಿಕ ಕೊಲೆಸ್ಟ್ರಾಲ… ಮತ್ತು ದೈಹಿಕ ಚಟುವಟಿಕೆಯ ಕೊರತೆ ಇಂತಹ ಡಯಬಿಟಿಸಿಗೆ ಕಾರಣವಾಗಬಲ್ಲ ಅಂಶಗಳು ಕಡಿಮೆ. ಆದರೂ ಹೀಗಾಗಿದೆ.

ಈ ಅಧ್ಯಯನದ ಫ‌ಲಿತಾಂಶಗಳು ಜಗತ್ತಿನ ಡಯಬಿಟಿಸ್‌ ರಾಜಧಾನಿ ಆಗಿರುವ ಭಾರತಕ್ಕೆ ಮುಖ್ಯವಾಗಿವೆ. 2015ರಲ್ಲಿ ನಮ್ಮ ದೇಶದ ಡಯಬಿಟಿಸ್‌ ಬಾಧಿತರ ಸಂಖ್ಯ 69 ಲಕ್ಷ$. ಈ ವರೆಗೆ ಡಯಬಿಟಿಸ್‌ ಪ್ರಧಾನವಾಗಿ ನಗರವಾಸಿಗಳನ್ನು ಬಾಧಿಸುತ್ತದೆ ಎಂದು ಪರಿಗಣಿಸಲಾಗಿತ್ತು. ಈಗ, ಆರ್ಗನೋಫೋಸ್ಪೇಟ್‌ ಕೀಟನಾಶಕಗಳ ಹೆಚ್ಚುತ್ತಿರುವ ಮತ್ತು ವಿವೇಚನಾರಹಿತ ಬಳಕೆಯಿಂದಾಗಿ, ಗ್ರಾಮೀಣ ಭಾರತದಲ್ಲಿಯೂ ಡಯಬಿಟಿಸ್‌ ಬಾಧಿತರ ಸಂಖ್ಯೆ ಸ್ಫೋಟವಾಗುವ ಸಾಧ್ಯತೆಯಿದೆ. 

ಆರ್ಗನೋಫೋಸ್ಪೇಟ್‌ ಕೀಟನಾಶಕಗಳು ಅಧಿಕ ಪ್ರಮಾಣದಲ್ಲಿ ಶರೀರ ಸೇರಿದರೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಹಲವು ಅಧ್ಯಯನಗಳು ದೃಢೀಕರಿಸಿವೆ. 2015ರಲ್ಲಿ ಕ್ಯಾನ್ಸರ್‌ ಸಂಶೋಧನೆಯ ಅಂತರರಾಷ್ಟ್ರೀಯ ಏಜೆನ್ಸಿ ಹೀಗೆಂದು ಘೋಷಿಸಿದೆ: ಟೆಟ್ರಾಕ್ಲೊರ್ವಿನಾ#ಸ್‌, ಪಾರಾಥಿಯಾನ್‌, ಮಲಾಥಿಯಾನ್‌, ಡೈಯಾಜಿನೊನ್‌ ಮತ್ತು ಗ್ಲೆ„ಫೋಸ್ಪೇಟ…  ಇಂತಹ ಆರ್ಗನೋಫೋಸ್ಪೇಟ… ಕೀಟನಾಶಕಗಳು ಕ್ಯಾನ್ಸರಿಗೆ ಕಾರಣ (ಕಾರ್ಸಿನೋಜೆನ್ಸ…) ಪಾರ್ಕಿನ್ಸನ್‌ ರೋಗ ಮತ್ತು ಅಲ್ಜಿಮೇರ್ಸ್‌ ರೋಗ- ಇಂತಹ ನರದೌರ್ಬಲ್ಯ ರೋಗಗಳಿಗೆ ಆರ್ಗನೋಫೋಸ್ಪೇಟುಗಳೂ ಕಾರಣವೆಂದು ಇಂತಹ ಹಲವಾರು ಅಧ್ಯಯನಗಳು ತೋರಿಸಿಕೊಟ್ಟಿವೆ. ಈ ವಿಷಭರಿತ ಕೀಟನಾಶಕಗಳು ಶಿಶುಗಳಲ್ಲಿ ಮತ್ತು ಎಳೆಯ ಮಕ್ಕಳಲ್ಲಿ ನರದೌರ್ಬಲ್ಯಗಳಿಗೆ ಕಾರಣವೆಂಬುದೂ ಅಧ್ಯಯನಗಳಿಂದ ತಿಳಿದು ಬಂದಿದೆ. 

ಆರ್ಗನೋಫೋಸ್ಪೇಟ… ಕೀಟನಾಶಕಗಳು ಡಯಬಿಟಿಸ್‌, ನರಸಂಬಂಧಿ ರೋಗಗಳು ಮತ್ತು ಕ್ಯಾನ್ಸರಿಗೆ ಕಾರಣವೆಂದು ಅನೇಕ ಅಧ್ಯಯನಗಳು ಸ್ಪಷ್ಟವಾಗಿ ಘೋಷಿಸಿದ್ದರೂ ನಮ್ಮ ದೇಶದಲ್ಲಿ ಏನಾಗುತ್ತಿದೆ? 

ಪೀಡೆನಾಶಕಗಳ ಬಳಕೆಯನ್ನು ನಿಯಂತ್ರಿಸಬೇಕಾದ ಕೇಂದ್ರ ಕೀಟನಾಶಕಗಳ ನಿಗಮ ಮತ್ತು ನೋಂದಾವಣೆ ಸಮಿತಿ, 20 ಅಕ್ಟೋಬರ್‌ 2015ರಲ್ಲಿ ಎರಡು ಓಪಿ ಕೀಟನಾಶಕಗಳನ್ನು ನಿಷೇಧಿಸಿದೆ ಮತ್ತು ಬೇರೆ ನಾಲ್ಕು ಓಪಿ ಕೀಟನಾಶಕಗಳ ಬಳಕೆಗೆ ನಿರ್ಬಂಧ ಹೇರಿದೆ. ಆ ನಾಲ್ಕರಲ್ಲಿ ಮಿಥೈಲ… ಪಾರಾಥಿಯಾನ್‌ ಬಳಕೆಯನ್ನು ಹಣ್ಣು ಮತ್ತು ತರಕಾರಿಗಳಲ್ಲಿ ಹಾಗೂ ಮೊನೊಕ್ರೊಟೊಫೋಸ್‌ ಬಳಕೆಯನ್ನು ತರಕಾರಿಗಳಲ್ಲಿ ನಿಷೇಧಿಸಲಾಗಿದೆ. 

ಆದರೆ, ತಮಿಳುನಾಡು ಹಾಗೂ ಇತರ ರಾಜ್ಯಗಳ ರೈತರು ಇವನ್ನು ಜಬರದಸ್ತಿನಿಂದ ಬಳಸುತ್ತಿ¨ªಾರೆ. ಹಾಗೆ ಬಳಸುವಾಗ, ಅವರು ನಿಗದಿತ ಪ್ರಮಾಣದಲ್ಲಿ ಬೆಳೆಗಳ ಮೇಲೆ ಸಿಂಪಡಿಸುವ ಬಗ್ಗೆ ಮತ್ತು ತಮ್ಮ ಆರೋಗ್ಯರಕ್ಷಣೆಗಾಗಿ ಯಾವುದೇ ಸುರಕ್ಷಿತಾ ಕ್ರಮಗಳನ್ನು ಪಾಲಿಸುವುದಿಲ್ಲ. ನೀರಿನಲ್ಲಿ ಬೆರೆಸಿ ಸಿಂಪಡಿಸುವ ಈ ಮಾರಕ ವಿಷರಾಸಾಯನಿಕಗಳು, ಚರ್ಮ, ಮೂಗಿನ ಒಳಭಾಗ ಮತ್ತು ಉಸಿರಾಟದ ನಾಳಗಳ ಮೂಲಕ ಸುಲಭವಾಗಿ ಮನುಷ್ಯರ ದೇಹದೊಳಗೆ ಸೇರಿಕೊಳ್ಳುತ್ತಿವೆ.

ಸದ್ದಿಲ್ಲದೆ ಕೃಷಿಕರ ಸಹಿತ ಸಾವಿರಾರು ಜನರ ಸಾವಿಗೆ ಕಾರಣವಾಗುತ್ತಿರುವ ಆರ್ಗನೋಫೋಸ್ಪೇಟ… ಕೀಟನಾಶಕಗಳ ಭಯಂಕರ ಪರಿಣಾಮಗಳ ಬಗ್ಗೆ ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಅವುಗಳ ಬಳಕೆಯನ್ನೇ ಕೃಷಿಕರು ಕೈಬಿಡಬೇಕಾಗಿದೆ. ಜೀವಾಮೃತದಂತಹ ನೈಸರ್ಗಿಕ ಆರೋಗ್ಯವರ್ಧಕಗಳ ಮೂಲಕ ಸಸಿಗಳ, ಗಿಡಮರಗಳ ರೋಗ ಹಾಗೂ ಕೀಟ ನಿರೋಧಶಕ್ತಿ ಹೆಚ್ಚಿಸಿ, ಬೆಳೆಸಂರಕ್ಷಣೆ ಮಾಡಿಕೊಳ್ಳಬೇಕಾದ ಕಾಲ ಬಂದಿದೆ.

– ಅಡ್ಕೂರು ಕೃಷ್ಣರಾವ್‌

ಟಾಪ್ ನ್ಯೂಸ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.