ಮನೆ ಕಟ್ಟುವ ಮೊದಲು ಹೋಮ್‌ ವರ್ಕ್‌ ಮಾಡಿ


Team Udayavani, Apr 22, 2019, 6:00 AM IST

Isiri-Mane

ಮನೆ ಕಟ್ಟಬೇಕು ಅಂತ ಕನಸು ಕಾಣುವುದು ಸುಲಭ. ಸ್ವಲ್ಪ ಕಷ್ಟವಾದರೂ, ಇದಕ್ಕೆ ಬೇಕಾದ ಹಣವನ್ನು ಹೊಂದಿಸುವುದೂ ಸರಾಗ ಎನ್ನಿ. ಆದರೆ, ಮನೆ ಕಟ್ಟುವಾಗ ಕುಶಲ ಕೆಲಸಗಾರರನ್ನು ಆಯ್ಕೆ ಮಾಡುವುದಾಗಲೀ, ಮನೆ ಹೀಗೇ ಬರಬೇಕು ಅಂತ ನಿರ್ಧರಿಸುವುದಾಗಲಿ ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿ, ಮನೆ ಕಟ್ಟಿಸುವ ಉತ್ಸಾಹವನ್ನು, ಅದಕ್ಕೂ ಮೊದಲು ಮಾಡಬೇಕಾದ ಕೆಲ ಹೋಮ್‌ವರ್ಕ್‌ಗೂ ತೋರಿಸಬೇಕಾಗುತ್ತದೆ.

ಜೀವನದಲ್ಲಿ ಅತಿ ಕಷ್ಟದ ಕೆಲಸ ಎಂದರೆ ಮನೆ ಕಟ್ಟುವುದು, ಮದುವೆ ಮಾಡುವುದು. ಆದರೆ ಯಾರೂ ಕೂಡ ಕಷ್ಟ ಎಂದು ಮದುವೆ ಮಾಡುವುದನ್ನಾಗಲಿ, ಮನೆ ಕಟ್ಟುವುದನ್ನಾಗಲಿ ಬಿಡುವುದಿಲ್ಲ. ಹೀಗಾಗಿ, ಮನೆ ಕಟ್ಟುವಾಗ ಏನೆಲ್ಲ ಮುಂಜಾಗರೂಕತೆ ವಹಿಸಬೇಕು. ಹೀಗೆ ಮಾಡಿದರೆ ಎದುರಾಗುವ ತಲೆನೋವುಗಳನ್ನು, ಅನಗತ್ಯ ಕಿರಿಕಿರಿ ಹಾಗೂ ಹೆಚ್ಚು ಕಷ್ಟಪಡದೆ ನಿಭಾಯಿಸಬಹುದು.

ಖಚಿತತೆ ಇರಲಿ
ಎಷ್ಟೋ ಸಲ “ನಮ್ಮ ಮನೆ ಹೀಗಿರಲಿ’ ಎಂದು ನಿರ್ಧರಿಸದೆ, ಆಮೇಲೆ ಯೋಚಿಸಿದ್ರಾಯ್ತು, ಈಗ ಕೆಲ್ಸ ಶುರು ಮಾಡೋಣ ಎಂದು ಕೊಂಡು ಕಟ್ಟುವ ಕೆಲಸ ಶುರುಮಾಡಿಬಿಡುತ್ತೇವೆ. ಗೋಡೆ ಕಟ್ಟುವ ವೇಳೆ, ಹೀಗಿದ್ದರೆ ಚೆನ್ನಾಗಿತ್ತು, ಆ ಗೋಡೆ ಸ್ವಲ್ಪ ಮುಂದೆ ಇದ್ದರೆ ದೊಡ್ಡ ಕೋಣೆ ಸಿಗುತ್ತಿತ್ತು ಎಂದೆಲ್ಲ ಬದಲಾವಣೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಹೀಗೆ ಬದಲಾವಣೆ ಮಾಡುವುದರಿಂದಲೇ ಮನೆ ಕಟ್ಟುವಾಗಿನ ಬಹುತೇಕ ತಲೆನೋವುಗಳು ಉಂಟಾಗುವುದು ಎಂಬುದು ಅನೇಕರ ಅನುಭವ. ಹಾಗಾಗಿ, ಮನೆ ಕಟ್ಟುವ ಮೊದಲು ಎಲ್ಲಿ ಏನು ಬೇಕು, ಎಷ್ಟು ಅಳತೆಯ ಕೊಠಡಿ ಇರಬೇಕು ಎಂಬುದರ ಬಗ್ಗೆ ಖಚಿತತೆ ಬಹುಮುಖ್ಯ.

ಮನೆಯ ಪ್ಲಾನ್‌ ಬರೆಸುವಾಗ ನುರಿತ ಆರ್ಕಿಟೆಕ್ಟ್ಇಂ ಜಿನಿಯರ್‌ಗಳ, ಸಹಾಯ ಪಡೆದರೆ ಒಳ್ಳೆಯದು. ಅವರು ಒಂದು ನಿವೇಶನದ ನಾಲ್ಕಾರು ಬಗೆಯ ವಿನ್ಯಾಸಗಳನ್ನು ತಯಾರು ಮಾಡಿ ಕೊಡುವುದರಿಂದ, ನಾವು ಮುಂದೆ ಮಾಡಬಹುದಾದ ಬದಲಾವಣೆಗಳು ಹಾಗೂ ಅದರಿಂದ ಆಗುವ ಲಾಭ-ನಷ್ಟಗಳು ಮೊದಲೇ ಗೊತ್ತಾಗುತ್ತದೆ.

ಖುಷಿಯ ಕೆಲಸ!
ಪ್ರಾಣಿ ಪಕ್ಷಿಗಳು ಗೂಡುಕಟ್ಟಿಕೊಳ್ಳುವಷ್ಟೇ, ಮನೆ ಕಟ್ಟುವುದು ಮನುಷ್ಯರಾದ ನಮಗೂ ಅನಿವಾರ್ಯ. ಕೆಲ ಇಂಚುಗಳಷ್ಟೇ ದಪ್ಪವಿರುವ ಗೀಜಗನ ಹಕ್ಕಿ ಹರಸಾಹಸ ಪಟ್ಟು ಸುಂದರ ಮನೆ ನಿರ್ಮಿಸಿಕೊಳ್ಳುವಾಗಲೂ, ಈ ಮೊದಲು ಕಟ್ಟಿರುವ ಗೂಡುಗಳ ನೋಡಿ ಪಾಠ ಕಲಿತೇ ಮುಂದುವರೆಯುವುದು. ನಾವೂ ಕೂಡ ಮನೆ ಕಟ್ಟಿದವರನ್ನು ನೋಡಿ, ಅದರಿಂದ ಒಂದಷ್ಟು ವಿಚಾರ ಕಲಿತರೆ ಹೆಚ್ಚು ತಲೆನೋವು ಇರುವುದಿಲ್ಲ.

ಒಂದು ಮನೆ ಕಟ್ಟಿ “ಸಾಕಪ್ಪ ಸಾಕು’ ಎಂದು ಸುಸ್ತಾದವರು ಸಾಮಾನ್ಯವಾಗಿ ಎಲ್ಲೆಡೆ ಸಿಗುತ್ತಾರೆ. ಅಪರೂಪಕ್ಕೆ ಕೆಲ ಕಾಯಕ ಜೀವಿಗಳು “ಜೀವನದ ಅತಿ ಮುಖ್ಯ ಕಾರ್ಯಗಳಲ್ಲಿ’ ಒಂದಾದ ಸಂಗತಿಯ ಬಗ್ಗೆ ಅತಿ ಉತ್ಸುಕರಾಗಿ, ತಮ್ಮ ಮನೆ ಕಟ್ಟಿಕೊಳ್ಳುತ್ತಾರೆ. ಜೊತೆಗೆ, ಬಂಧುಮಿತ್ರರಿಗೆ ಮನೆ ಕಟ್ಟುವಾಗ ಪಾಯದಿಂದ ಹಿಡಿದು ಮನೆಗೆ ಬಣ್ಣ ಬಳಿಯುವವರೆಗೆ ಜೊತೆಗೇ ಇದ್ದು, ಇದರಲ್ಲೇ ಸಂತೋಷ ಪಡುವವರೂ ಇರುತ್ತಾರೆ. ಮನೆ ಕಟ್ಟಲು ಎಲ್ಲಕ್ಕಿಂತ ಮುಖ್ಯ ಒಳ್ಳೆಯ ಗಾರೆಯವರು. ಹಾಗಾಗಿ ಯಾರ ಬಳಿ ಒಳ್ಳೆಯ ಕೆಲಸಗಾರರಿದ್ದಾರೋ ಅವರನ್ನೇ ನೇಮಿಸಿಕೊಳ್ಳಿ.

ಒಳ್ಳೆಯ ಕೆಲಸಗಾರರಿದ್ದರೆ, ಒಳ್ಳೆ ಮನೆ ಕಟ್ಟುವುದು ಹೆಚ್ಚು ಕಷ್ಟವಾಗಲಾರದು. ಮನೆ ಕಟ್ಟಿದವರಿಗೆ ದುಃಸ್ವಪ್ನವಾಗಿ ಕಾಡುವುದು ಕಳಪೆ ಕಾಮಗಾರಿ, ನುರಿತ ಕಾರ್ಮಿಕರಿದ್ದರೆ ಅರ್ಧ ತಲೆನೋವು ಕಡಿಮೆಯಾಗುತ್ತದೆ. ನಾಲ್ಕಾರು ವರ್ಷದ ಅನುಭವವಿರುವ ಕಾರ್ಮಿಕರಿಗೂ ಹತ್ತಾರು ವರ್ಷ ಪಳಗಿದ ಕೈಗಳಿಗೂ, ಕೂಲಿಯಲ್ಲಿ ಅಂಥ ವ್ಯತ್ಯಾಸ ಇರುವುದಿಲ್ಲವಾದರೂ ಕಾಮಗಾರಿಯಲ್ಲಿ ವಿಪರೀತ ವ್ಯತ್ಯಾಸಗಳು ಇರುತ್ತವೆ. ಕುಶಲಕರ್ಮಿಗಳಿಗೆ ಸ್ವಲ್ಪ ಹೆಚ್ಚು ಕೂಲಿ ಕೊಟ್ಟರೂ ಪರವಾಗಿಲ್ಲ. ಜೀವನ ಪೂರ್ತಿ ಕೊರಗುವುದು ತಪ್ಪುತ್ತದೆ.

ಸಲಹೆ ತಗೊಳ್ಳಿ
ಮನೆ ಕಟ್ಟುವುದಕ್ಕೆ ಮೊದಲು, ಮನೆ ಕಟ್ಟಬೇಕು ಅಂತ ಕನಸು ಕಾಣುವ ಮೊದಲು- ನಮ್ಮ ಆದಾಯದ ಒಟ್ಟು ಮೊತ್ತ ಎಷ್ಟು ಎನ್ನುವುದನ್ನು ಲೆಕ್ಕ ಹಾಕಿ ಇದರಲ್ಲಿ ಸುಮಾರು ಕಾಲುಭಾಗದಷ್ಟು ಹಣವನ್ನು ಮನೆಗೆ ಬಾಡಿಗೆ ರೂಪದಲ್ಲೋ ಇಲ್ಲವೇ ಮನೆ ಕಟ್ಟಲು- ಸೈಟು ಕೊಳ್ಳಲು ವ್ಯಯಿಸಿರುತ್ತೇವೆ. ಈ ಸತ್ಯ, ಲೆಕ್ಕ ಹಾಕಿದಾಗಲೇ ತಿಳಿಯವುದು. ಒಂದು ಪಕ್ಷ ತಿಂಗಳಿಗೆ 10-15 ಸಾವಿರ ಬಾಡಿಗೆ ಕಟ್ಟುತ್ತಿದ್ದರೆ, ಆ ಮೊತ್ತಕ್ಕೆ 10ರಿಂದ 12 ಲಕ್ಷ ಸಾಲ ಸಿಗುತ್ತದೆ.

ಅಂದರೆ, ಸಾಲ ಮಾಡಿ ಸ್ವಂತ ಮನೆ ಕಟ್ಟಿದರೂ ಇಷ್ಟೇ ಹಣವನ್ನು ಇಎಂಐ ಕಟ್ಟಬಹುದು. ಮನೆ ಕಟ್ಟುವ ಮೊದಲು ಬೇರೆಯವರು ಮನೆ ಹೇಗೆ ಕಟ್ಟಿದ್ದಾರೆ, ಅವರ ಪಟ್ಟ ಕಷ್ಟದ ಬಗ್ಗೆ ತಿಳಿದುಕೊಳ್ಳಿ. ಮನೆ ಕಟ್ಟಿನೋಡಿದವರಿಂದ ಸ್ವಲ್ಪ ತಾಂತ್ರಿಕ ಹಾಗೂ ಸಾಮಾನ್ಯ ಜ್ಞಾನದಿಂದ ಕಲಿಯಬಹುದಾದ ಸಾಕಷ್ಟು ಮಾಹಿತಿ ಇರುತ್ತವೆ. ಇದರ ಲಾಭ ಪಡೆದರೆ ಮನೆ ಕಟ್ಟುವುದು ಹೆಚ್ಚು ಕಷ್ಟ ಎಂದು ಖಂಡಿತ ಅನಿಸುವುದಿಲ್ಲ.

ಮನೆ ಕಟ್ಟುವ ಮನೆ ಹೇಗೆ ರೂಪುಗೊಳ್ಳುತ್ತದೆ ಎಂದು ಮುಕ್ಕಾಲು ಪಾಲು ಮನೆ ಕಟ್ಟುವವರೆಗೆ ತಿಳಿಯುವುದಿಲ್ಲ. ಈಗ ಆಧುನಿಕ ತಂತ್ರಜ್ಞಾನದ ಸಹಾಯದಿಂದ ತಯಾರಿಸಿದ ನಕ್ಷೆಗಳು ಸಾಕಷ್ಟು ಸಹಾಯಕಾರಿಯಾದರೂ ಮನೆ ಕಟ್ಟುವವರೆಗೆ ಅದು ಖಚಿತವಾಗಿ ಹೀಗೆಯೇ ಕಾಣುತ್ತದೆಂದು ಮುಗಿಯುವವರೆಗೂ ಗೊತ್ತಾಗುವುದಿಲ್ಲ. ಮನೆ ಕಟ್ಟುವವರು ಈ ಕಾರಣದಿಂದ ತಾವು ವಾಸವಿರುವ ಮನೆಯನ್ನು ಅಳೆದು ನೋಡಿ ಬೆಡ್‌ ರೂಮ್‌ ಸ್ವಲ್ಪ ದೊಡ್ಡದು ಬೇಕೆ ಇಲ್ಲಾ ಇರುವುದೇ ಸಾಕಾ, ಹತ್ತು ಅಡಿಗೆ ಹನ್ನೆರಡು ಅಡಿ ಅಳತೆ ಎಂದರೆ ಎಷ್ಟು ದೊಡ್ಡದಿರುತ್ತದೆ? ಎಂದೆಲ್ಲ ಚಿಂತಿಸಿ ನಿರ್ಧರಿಸಿದರೆ, ಅವರ ಅನುಕೂಲಕ್ಕೆ ತಕ್ಕಂತೆ ಮನೆ ಮೂಡಿಬರುತ್ತದೆ. ಹಳೆ ಮನೆಯನ್ನು ಕೊಳ್ಳುವವರಿಗೆ ಈ ರಿಸ್ಕ್ ಇಲ್ಲ. ಕಣ್ಣ ಮುಂದೆ ಇರುವುದರಿಂದ ಅಳತೆ ಪ್ರಾಕ್ಟಿಕಲ್ಲಾಗಿ ತಿಳಿಯುತ್ತದೆ.
ಹೆಚ್ಚಿನ ಮಾಹಿತಿಗೆ – 98441 32826.

ಆಯ್ಕೆಯಲ್ಲಿ ಎಚ್ಚರವಿರಲಿ
ಮನೆ ಕಟ್ಟುವವರು ಕಲಿಯಬೇಕಾದ ಪಾಠಗಳಲ್ಲಿ ಮೊದಲನೆಯದು, ತಮ್ಮ ನಿವೇಶನಕ್ಕೆ ನುರಿತ ಕಾರ್ಮಿಕರನ್ನು ಹಿಡಿದುಕೊಂಡು ಬರುವುದು. ಈ ದಿನಗಳಲ್ಲಿ ಕಟ್ಟಡದ ಕೆಲಸ ಎಲ್ಲೆಡೆ ವ್ಯಾಪಕವಾಗಿ ನಡೆಯುತ್ತಿರುವುದರಿಂದ ಕುಶಲಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಇಂದು ಹೊಸದಾಗಿ ಬಂದು ಕೂಲಿ ಕೆಲಸದಲ್ಲಿ ತೊಡಗಿಕೊಂಡವರೂ ಕೂಡ ನಾಲ್ಕಾರು ತಿಂಗಳಲ್ಲೇ ಒಂದು ಕರಣೆ ಖರೀದಿಸಿ, ಹೆಚ್ಚು ಹಣ ಪಡೆಯಲು ಗಾರೆಯವನು ಎಂದು ಹೇಳಿಕೊಂಡು ಅಮಾಯಕರನ್ನು ವಂಚಿಸುವುದೂ ಉಂಟು. ಕೆಲವೊಂದು ಸಂಗತಿಗಳು ಸಾಮಾನ್ಯ ಜ್ಞಾನದಿಂದಲೇ ಅರಿವಿಗೆ ಬರುತ್ತದೆ. ಕೆಲಸ ಬಾರದ ಕಾರ್ಮಿಕರು ಗೋಡೆ ಕಟ್ಟಿದರೆ ಅದು ಸ್ವಲ್ಪ ವಾಲಿದಂತೆಯೋ ಇಲ್ಲವೇ ಸೊಟ್ಟಗೋ ಕಂಡುಬರುವ ಸಾಧ್ಯತೆ ಹೆಚ್ಚು. ಹಾಗಾಗಿ, ಮನೆ ಕಟ್ಟುವವರು ಮೈಯೆಲ್ಲ ಕಣ್ಣಾಗಿ ದಿನದಿಂದ ದಿನಕ್ಕೆ ಎಲ್ಲ ಕೆಲಸಗಳನ್ನೂ ನೋಡಿದರೆ ಕಳಪೆ ಕಾಮಗಾರಿ ಸುಲಭದಲ್ಲಿ ಕಣ್ಣಿಗೆ ಬೀಳುತ್ತದೆ.

— ಆರ್ಕಿಟೆಕ್ಟ್ ಕೆ. ಜಯರಾಮ್‌

ಟಾಪ್ ನ್ಯೂಸ್

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.