ಗೃಹಸಾಲ ಪಡೆಯುವವರಿಗೆ ಸಲಹೆಗಳು
Team Udayavani, Nov 11, 2019, 5:00 AM IST
ಗೃಹಸಾಲ ಪಡೆದು ಸ್ಥಿರ ಆಸ್ತಿಯನ್ನು ಹೊಂದುವಾಗ ಅತೀ ವೇಗದಿಂದ ಬೆಳೆಯುತ್ತಿರುವ ಪಟ್ಟಣಗಳನ್ನು ಮಾತ್ರ ಆರಿಸಿಕೊಳ್ಳಿ.ನೀವು ತೊಡಗಿಸಿದ ಬಂಡವಾಳ ಕೂಡ ಅದೇ ವೇಗದಿಂದ ಬೆಳೆಯುತ್ತಿರುತ್ತದೆ.
-ನೀವು ಉದ್ಯೋಗ ಮಾಡುತ್ತಿರುವ ಸಂಸ್ಥೆ, ತಮ್ಮ ನೌಕರರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುತ್ತಿದ್ದರೆ, ತಕ್ಷಣ ಅದರ ಸದುಪಯೋಗ ಪಡೆದುಕೊಳ್ಳಿ.
-ಸಾಲದ ಮೇಲಿನ ಬಡ್ಡಿದರ ಆರಿಸಿಕೊಳ್ಳುವಾಗ ಬದಲಾಗುವ ಬಡ್ಡಿ ದರ (Floating interest rate) ಆರಿಸಿಕೊಳ್ಳಿ.
-ಹಣದುಬ್ಬರಕ್ಕೆ ಸರಿಯಾಗಿ ಹಣದ ಬೆಲೆ ಪ್ರತಿ ವರ್ಷ ಕಡಿಮೆಯಾಗುತ್ತದೆ. ಆದರೆ, ಸ್ಥಿರ ಆಸ್ತಿಯ ಬೆಲೆ ದಿನೇ ದಿನೆ ಹೆಚ್ಚಾಗುತ್ತಿರುತ್ತದೆ. ಉಳಿತಾಯ ಅಥವಾ ಹಣ ಹೂಡುವಿಕೆಯ ದೃಷ್ಟಿಯಲ್ಲಿ ಗೃಹಸಾಲ ಮಾಡಲು ಇದು ಪರ್ವ ಕಾಲ.
-ಗೃಹಸಾಲಕ್ಕೆ ಪ್ರಥಮ ಆದ್ಯತೆ ಕೊಟ್ಟು ನಂತರ ನಿಮ್ಮ ಬಜೆಟ್ಟಿಗನುಗುಣವಾಗಿ, ವಾಹನ ಸಾಲ ಪಡೆಯಿರಿ. ಗೃಹಸಾಲದಿಂದ ಸ್ಥಿರ ಆಸ್ತಿ ಮಾಡಿದಂತಾಗುತ್ತದೆ. ವಾಹನ ಸಾಲದಿಂದ ಬಂಡವಾಳ ಬೆಳೆಯುವುದಿಲ್ಲ. ಸುಖ ಮಾತ್ರ ಸಿಗುತ್ತದೆ. ಆದರೆ ಗೃಹಸಾಲದಿಂದ ಸುಖ ಹಾಗೂ ಬಂಡವಾಳ ವೃದ್ಧಿ ಎರಡನ್ನೂ ಪಡೆಯಬಹುದು.
-ಗೃಹಸಾಲ ಪಡೆಯುವಾಗ ಬಹಳಷ್ಟು ಹಣಕಾಸು ಸಂಸ್ಥೆಗಳು ನಿರ್ವಹಣಾ ವೆಚ್ಚ(ಪ್ರೊಸೆಸಿಂಗ್ ಚಾರ್ಜಸ್) ಹಾಗೂ ನಿಗೂಢ (ಹಿಡನ್ ಚಾರ್ಜಸ್) ಖರ್ಚುಗಳನ್ನು ವಿಧಿಸುತ್ತವೆ. ಇಂಥ ಖರ್ಚು ಹಾಗೂ ಬಡ್ಡಿ ದರ ಅತೀ ಕಡಿಮೆ ಇರುವಲ್ಲಿ ಗೃಹಸಾಲ ಪಡೆಯಿರಿ.
-ಗೃಹಸಾಲ ತೀರಿಸಲು ಬೇರೆ ಸಂಸ್ಥೆಯಿಂದ ಸಾಲ ಪಡೆಯುವಾಗ ದಂಡದ ಬಡ್ಡಿ(ಪೆನಾಲ್ಟಿ) ವಿಧಿಸುವ ಕ್ರಮ ಇದೆ. ಈ ವಿಚಾರವನ್ನು ಮೊದಲೇ ತಿಳಿದುಕೊಳ್ಳಿ.
– ಈಗ ಪ್ರಸ್ತುತ ಇರುವ ಆದಾಯ ತೆರಿಗೆ ಕಾನೂನಿನ ಅನ್ವಯ ಬಹಳಷ್ಟು ಆದಾಯ ತೆರಿಗೆ ಲಾಭವನ್ನು, ಗೃಹಸಾಲ ಪಡೆಯುವುದರಿಂದ ಪಡೆಯಬಹುದು. ಈಗಿನ ಆದಾಯ ತೆರಿಗೆ ಕಾನೂನಿನಂತೆ-
ಎ. ಸೆಕ್ಷನ್ 24.ಬಿ ಪ್ರಕಾರ ಗೃಹಸಾಲ ಬಡ್ಡಿಯಲ್ಲಿ 2 ಲಕ್ಷ ರೂ.ಗಳ ತನಕ ಆದಾಯದಿಂದ ಕಡಿತ ಮಾಡಿ ಆದಾಯ ತೆರಿಗೆಯನ್ನು ಸಲ್ಲಿಸಬಹುದು.
ಬಿ. ಸೆಕ್ಷನ್ 80ಸಿ ಪ್ರಕಾರ ಗೃಹಸಾಲಕ್ಕೆ ಮರುಪಾವತಿ ಮಾಡಿದರೂ 1.5 ಲಕ್ಷದ ತನಕ ಆದಾಯದಿಂದ ಕಡಿತ ಆದಾಯ ತೆರಿಗೆಯನ್ನು ಸಲ್ಲಿಸಬಹುದು.
-ಯು.ಪಿ.ಪುರಾಣಿಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.