ಅನ್ನದಾತರ ಬದುಕಿನಲ್ಲಿ ಬೆಳಕಾಗಬೇಕಾದರೆ


Team Udayavani, Mar 12, 2018, 12:55 PM IST

annadata.jpg

ಕಳೆದ 21 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 3,20,000 ದಾಟಿದೆ. ಅಂದರೆ, ಪ್ರತಿ 41 ನಿಮಿಷಕ್ಕೆ ಒಬ್ಬರಂತೆ ದೇಶದ ಯಾವುದೋ ಮೂಲೆಯಲ್ಲಿ ಕೃಷಿಕರೊಬ್ಬರ ಪ್ರಾಣತ್ಯಾಗ. ಹಾಗೆ ಮಾಡದವರು ಹೇಗೋ ಜೀವ ಹಿಡಿದಿದ್ದಾರೆ;
                              
ಕೃಷಿ ಸಾಲ ಮರುಪಾವತಿಸಲಾಗದೆ, ಅವತಾರ ಸಿಂಗ್‌ ಆತ್ಮಹತ್ಯೆ ಮಾಡಿಕೊಂಡದ್ದು ಎಂಟು ವರ್ಷಗಳ ಮುಂಚೆ. ನಲುಗಿದ ಆ ಕುಟುಂಬ ಮತ್ತೆ ತತ್ತರಿಸಿದ್ದು, ಅವರ ಇಬ್ಬರು ಪುತ್ರರೂ  ರೂಪ್‌ಸಿಂಗ್‌ (40) ಮತ್ತು ಬಸಂತ್‌ಸಿಂಗ್‌(32)  ಭಾಕ್ರಾ ಕಾಲುವೆಗೆ ಹಾರಿ ಪ್ರಾಣತ್ಯಾಗ ಮಾಡಿದಾಗ.

ಇವರೆಲ್ಲರೂ ಪಂಜಾಬಿನ ಪಾಟಿಯಾಲ ಜಿÇÉೆಯ ನಿವಾಸಿಗಳು. ಅಣ್ಣತಮ್ಮಂದಿರು. ತಮ್ಮ ಒಂದು ಹೆಕ್ಟೇರ್‌ ಕೃಷಿ ಜಮೀನಿನ ಜೊತೆಗೆ ಇನ್ನೂ 12 ಹೆಕ್ಟೇರ್‌ ಜಮೀನನ್ನು ಕೃಷಿಗಾಗಿ ಲೀಸ್‌ಗೆ ಪಡೆದಿದ್ದರು. ಆದರೂ ಅವರಿಗೆ ಲಾಭ ಗಳಿಸಲು ಸಾಧ್ಯವಾಗುತ್ತಿರಲಿಲ್ಲ; ಹಾಗಾಗಿ ಅವರು ಬಾಕಿ ಮಾಡಿಕೊಂಡ ಸಾಲ ಹೆಚ್ಚುತ್ತಲೇ ಇತ್ತು. ಅವರಾದರೂ ಬೇರೆಬೇರೆ ಮೂಲಗಳಿಂದ ಎಷ್ಟು ಸಾಲ ಪಡೆಯಲು ಸಾಧ್ಯ? ಕೊನೆಗೆ, ಸಾಲದ ಹೊರೆಯ ವಿಷಚಕ್ರದ ಹೊಡೆತಕ್ಕೆ, ಒಂದೇ ಕುಟುಂಬದ ಎರಡು ತಲೆಮಾರುಗಳು ಬಲಿಯಾದವು.

ಪಂಜಾಬಿನ ಈ ಕುಟುಂಬದ ದುರಂತ. ನಮ್ಮ ದೇಶದ ಕೃಷಿಕರ ಸಮುದಾಯ ಎದುರಿಸುತ್ತಿರುವ ಸಂಕಟದ ಸಂಕೇತ. ದಿನಪತ್ರಿಕೆಗಳಲ್ಲಿ ರೈತರ ಆತ್ಮಹತ್ಯೆಯ ಸುದ್ದಿಯಿಲ್ಲದ ದಿನವೇ ಇಲ್ಲವೆನ್ನಬಹುದು. ಕಳೆದ 21 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 3,20,000 ದಾಟಿದೆ. ಅಂದರೆ, ಪ್ರತಿ 41 ನಿಮಿಷಕ್ಕೆ ಒಬ್ಬರಂತೆ ದೇಶದ ಯಾವುದೋ ಮೂಲೆಯಲ್ಲಿ ಕೃಷಿಕರೊಬ್ಬರ ಪ್ರಾಣತ್ಯಾಗ. ಹಾಗೆ ಮಾಡದವರು ಹೇಗೋ ಜೀವ ಹಿಡಿದಿದ್ದಾರೆ; ಹತಾಶೆ ಮತ್ತು ನಿರಾಶೆಯ ಕತ್ತಲಿನಲ್ಲಿ ಮುಂದಿನ ದಾರಿಗಾಣದೆ ಕಂಗೆಟ್ಟಿದ್ದಾರೆ.

ಕೃಷಿಕರು ಸರಕಾರದ ತಪ್ಪು-ಧೋರಣೆಗಳ ಬಲಿಪಶುಗಳಾಗಿದ್ದಾರೆ. 1970ರಲ್ಲಿ ಶಾಲಾ ಶಿಕ್ಷಕರ ಮಾಸಿಕ ವೇತನ ರೂ.90 ಆಗಿತ್ತು. 2015ರ ಹೊತ್ತಿಗೆ ಈ ವೇತನದ ಹೆಚ್ಚಳ 280ರಿಂದ 320 ಪಟ್ಟು! ಇದೇ 45 ವರ್ಷಗಳ ಅವಧಿಯಲ್ಲಿ ಸರಕಾರಿ ಉದ್ಯೋಗಿಗಳ ವೇತನದಲ್ಲಿ ಹೆಚ್ಚಳ 120ರಿಂದ 150 ಪಟ್ಟು! ಹಾಗೂ ಕಾಲೇಜು ಪೊ›ಫೆಸರುಗಳ ವೇತನದಲ್ಲಿ ಹೆಚ್ಚಳ 150ರಿಂದ 170 ಪಟ್ಟು. ಇದಕ್ಕೆ ಹೋಲಿಸಿದಾಗ, ಇದೇ ಅವಧಿಯಲ್ಲಿ ಕೃಷಿಕರು ಬೆಳೆಸಿದ ಗೋಧಿಯ ಬೆಲೆಯಲ್ಲಿ ಹೆಚ್ಚಳ ಕೇವಲ ಶೇ.19 ಪಟ್ಟು!

ಮಹಾರಾಷ್ಟ್ರದ ಉದಾಹರಣೆ ಪರಿಶೀಲಿಸೋಣ. ತಮ್ಮ ಫ‌ಸಲಿಗೆ ಸೂಕ್ತ ಬೆಲೆ ಮತ್ತು ಸಾಲ ಮನ್ನಾಕ್ಕೆ ಆಗ್ರಹಿಸಿ ಅಲ್ಲಿ ರೈತ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ)ದ ಪ್ರಕಾರ, ಅಲ್ಲಿ ಒಂದು ಹೆಕ್ಟೇರ್‌ ಭತ್ತ ಬೆಳೆದರೆ ರೈತನಿಗೆ ಸಿಗುವ ಲಾಭ ಕೇವಲ ರೂ.966. ಭತ್ತ ಸುಮಾರು ಮೂರು ತಿಂಗಳ ಬೆಳೆಯಾದ್ದರಿಂದ, ಭತ್ತದ ಬೆಳೆಗಾರರ ಆದಾಯ ತಿಂಗಳಿಗೆ ಹೆಕ್ಟೇರಿಗೆ ರೂ.300ಕ್ಕಿಂತ ಕಡಿಮೆ. ಹತ್ತಿ ಬೆಳೆಯಿಂದ ಸಿಗುವ ಲಾಭ ಹೆಕ್ಟೇರಿಗೆ ರೂ.2,949 ಎಂದು ಅಂದಾಜಿಸಲಾಗಿದೆ. ಹತ್ತಿ ಎಂಟು ತಿಂಗಳ ಬೆಳೆಯಾದ್ದರಿಂದ, ಹತ್ತಿ ಬೆಳೆಗಾರರಿಗೆ ಸಿಗುವ ಆದಾಯ ತಿಂಗಳಿಗೆ ಹೆಕ್ಟೇರಿಗೆ ಕೇವಲ ರೂ.700. ರಾಗಿ, ಹೆಸರುಕಾಳು ಮತ್ತು ಉದ್ದಿನಬೇಳೆ ಬೆಳೆಗಾರರಂತೂ ಅಲ್ಲಿ ನಷ್ಟದಲ್ಲಿ ಮುಳುಗಿದ್ದಾರೆ. ಕೃಷಿಕರ ಸಂಕಟಗಳಿಗೆ ಇದುವೇ ಮೂಲ ಕಾರಣ.

ಕೇಂದ್ರ ಸರಕಾರವು ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗಕ್ಕೆ ನೀಡಿರುವ ಆದೇಶ: ಕೃಷಿಕರ ಫ‌ಸಲಿಗೆ ನಿಶ್ಚಿತ ಬೆಲೆ ಒದಗಿಸುವುದು ಮತ್ತು ಇದರಿಂದಾಗಿ ಹಣದುಬ್ಬರದ ಒತ್ತಡ ಹೆಚ್ಚಾಗದಂತೆ ಮಾಡುವುದು. ಆದ್ದರಿಂದ, ಕೃಷಿಕರ ಫ‌ಸಲಿನ ಬೆಲೆಗಳನ್ನು ಉದ್ದೇಶಪೂರ್ವಕವಾಗಿಯೇ ಕಡಿಮೆ ಮಾಡಲಾಗುತ್ತಿದೆ; ಹಲವು ಕೃಷಿ ಉತ್ಪನ್ನಗಳ ಬೆಲೆಗಳು ಅವುಗಳ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆಯಾಗಿವೆ. ಈ ಆರ್ಥಿಕ ಧೋರಣೆ ಭಾರತಕ್ಕೆ ಮಾತ್ರ ಸೀಮಿತವಲ್ಲ; ಇದು ಇಡೀ ಜಗತ್ತಿನಲ್ಲಿ ಜಾರಿಯಲ್ಲಿರುವ ಧೋರಣೆ.

ನಿಜ ಹೇಳಬೇಕೆಂದರೆ, ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿರುವ ಎಲ್ಲ ಸರಕಾರಗಳೂ, ಆಹಾರದ ಬೆಲೆಗಳನ್ನು ಕಡಿಮೆ ಹಂತದಲ್ಲಿಡುವ ಜವಾಬ್ದಾರಿಯನ್ನು ನಾಜೂಕಿನಿಂದ ಕೃಷಿಕರಿಗೆ ದಾಟಿಸಿವೆ. ಅಂದರೆ, ಗ್ರಾಹಕರಿಗೆ ರಿಯಾಯ್ತಿ ಬೆಲೆಯಲ್ಲಿ ಆಹಾರ ಒದಗಿಸುವ ವೆಚ್ಚವನ್ನೆಲ್ಲ ಭರಿಸುತ್ತಿರುವವರು ಕೃಷಿಕರು. ಅವರ ಕೃಷಿ ಉತ್ಪನ್ನಗಳಿಗೆ ತಿಳಿದುತಿಳಿದೇ ಕಡಿಮೆ ಬೆಲೆ ಪಾವತಿಸಿ, ಅವರನ್ನು ಕಡುಬಡತನಕ್ಕೆ ತಳ್ಳಲಾಗಿದೆ. ಆದರೂ, ಕೃಷಿಯಲ್ಲಿ ತೊಡಗಿದಾಗೆಲ್ಲ ತಾವು ನಷ್ಟದ ಬೆಳೆ ಬೆಳೆಯುತ್ತಿದ್ದೇವೆ ಎಂಬುದು ಕೃಷಿಕರಿಗೆ ಅರ್ಥವಾಗುತ್ತಿಲ್ಲ. ಈಗ ರೈತರ ಕೃಷಿಯ ಆದಾಯ ಕುಸಿಯುತ್ತಿದೆ ಅಥವಾ ಕೃಷಿಯ ವೆಚ್ಚ ಸರಿದೂಗಿಸಲು ಸಾಕಾಗುವಷ್ಟಿದೆ; ಅಂದರೆ, ಕೃಷಿಯಲ್ಲಿ ಲಾಭವೇ ಇಲ್ಲ ಎಂಬಂತಾಗಿದೆ.

ಈ ಧೋರಣೆಯ ಮೂಲದಲ್ಲಿ, ಕೃಷಿಯಲ್ಲಿ ತೊಡಗಿರುವ ಜನರ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸುವ ಹುನ್ನಾರವಿದೆ. ವಿಶ್ವಬ್ಯಾಂಕ್‌ 1996ರಲ್ಲಿ ನಮ್ಮ ದೇಶಕ್ಕೆ ನೀಡಿದ್ದ ಸೂಚನೆ ಹೀಗಿದೆ: 2015ರ ಹೊತ್ತಿಗೆ ಭಾರತದ ಗ್ರಾಮೀಣ ಪ್ರದೇಶಗಳಿಂದ 40 ಕೋಟಿ ಜನರನ್ನು ನಗರಗಳಿಗೆ ಸ್ಥಳಾಂತರಿಸಬೇಕು. ವಿಶ್ವಬ್ಯಾಂಕ್‌ ನೀಡುವ ಪ್ರತಿಯೊಂದು ಸಾಲಕ್ಕೆ ವಿಧಿಸುವ ಷರತ್ತುಗಳ ಸಂಖ್ಯೆ 140  150. ಪ್ರತಿಯೊಂದು ಸಾಲ ಕೊಡುವಾಗಲೂ ಈ ಸ್ಥಳಾಂತರಿಸುವ ಷರತ್ತಿಗೆ ಒತ್ತು ನೀಡಲಾಗಿದೆ. ಮಾಜಿ ಪ್ರಧಾನಮಂತ್ರಿಯೊಬ್ಬರು ಇದೇ ಷರತ್ತನ್ನು ಮತ್ತೆಮತ್ತೆ ಹೇಳುತ್ತಿದ್ದುದನ್ನು ನೆನಪು ಮಾಡಿಕೊಳ್ಳಿ. ಈಗ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಲಿ ಕೂಡ, ಕೃಷಿಯಲ್ಲಿ ತೊಡಗಿರುವ ಶೇ.52 ಜನಸಂಖ್ಯೆಯನ್ನು 2022ರ ಹೊತ್ತಿಗೆ ಶೇ.38ಕ್ಕೆ ಇಳಿಸುವ ಬಗ್ಗೆ ಯೋಜನೆಗಳನ್ನು ರೂಪಿಸಿದೆ.

ನಮ್ಮ ದೇಶ ಸ್ವಾತಂತ್ರ್ಯ ಗಳಿಸಿ 70 ವರ್ಷಗಳ ನಂತರವೂ ಆರ್ಥಿಕ ಸ್ವಾತಂತ್ರ್ಯ ಎಂಬುದು ಕೃಷಿಕರಿಗೆ ಕನಸಾಗಿ ಉಳಿದಿದೆ. 2016ರ ಆರ್ಥಿಕ ಸಮೀಕ್ಷೆ ಇದನ್ನು ಸ್ಪಷ್ಟವಾಗಿ ಪ್ರಕಟಿಸಿದೆ: ಅದರ ಅನುಸಾರ, 17 ರಾಜ್ಯಗಳಲ್ಲಿ ಕೃಷಿಕುಟುಂಬಗಳ ವಾರ್ಷಿಕ ಆದಾಯ ರೂ.20,000ಕ್ಕಿಂತ ಕಡಿಮೆ. ಅಂದರೆ, ನಮ್ಮ ದೇಶದ ಅರ್ಧ
ಭಾಗದಲ್ಲಿ ಕೃಷಿಕುಟುಂಬಗಳು ತಿಂಗಳಿಗೆ ರೂ.1,700ಕ್ಕಿಂತ ಕಡಿಮೆ ಆದಾಯದಲ್ಲಿ ಹೇಗೋ ಬದುಕುತ್ತಿವೆ.

ಕೃಷಿಕರನ್ನು ಉಳಿಸಲು ಉಳಿದಿರುವುದು ಕೆಲವೇ ದಾರಿಗಳು. ಮೊದಲನೆಯದು, ಸಿಎಸಿಪಿಗೆ ಸ್ಪಷ್ಟ ಆದೇಶ ನೀಡುವುದು: ಅದೇನೆಂದರೆ, ಕೃಷಿಕರ ಕೃಷಿ ಉತ್ಪನ್ನಗಳ ಬೆಲೆ ನಿಗದಿ ಪಡಿಸುವಾಗ, ಕುಟುಂಬದ ಮನೆವೆಚ್ಚ, ವೈದ್ಯಕೀಯ ವೆಚ್ಚ, ಶಿಕ್ಷಣ ವೆಚ್ಚ ಮತ್ತು ಪ್ರಯಾಣ ವೆಚ್ಚ  ಇವು ನಾಲ್ಕನ್ನೂ ಸೇರಿಸಿ, ಬೆಲೆ ನಿಗದಿ ಪಡಿಸಬೇಕು (ಸರಕಾರಿ ಉದ್ಯೋಗಿಗಳಿಗೆ 108 ವಿವಿಧ ಭತ್ಯೆಗಳನ್ನು ಸರಕಾರ ಪಾವತಿಸುತ್ತಿದ್ದು, ಕೃಷಿಕರಿಗೆ ಕನಿಷ್ಠ ಇವು 4 ವೆಚ್ಚಗಳ ಭಾಗಶಃ ಪಾವತಿ ಅಗತ್ಯ.)

ಕನಿಷ್ಠ ಬೆಂಬಲ ಬೆಲೆಯಿಂದ ಅನುಕೂಲವಾಗುವುದು (2018-19ರ ಕೇಂದ್ರ ಬಜೆಟಿನಲ್ಲಿ ಘೋಷಿಸಿದಂತೆ, ಕೃಷಿ ಬೆಳೆಗಳ ಉತ್ಪಾದನಾ ವೆಚ್ಚದ ಶೇ.50ರಷ್ಟು ಅಧಿಕ ಬೆಲೆ ಪಾವತಿಸಿದಾಗ) ಕೇವಲ ಶೇ.6 ರೈತರಿಗೆ. ಇನ್ನುಳಿದ ಶೇ.94 ರೈತರು ಸ್ಥಳೀಯ ಮಾರುಕಟ್ಟೆಗಳಲ್ಲಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಬೇಕಾಗಿದೆ; ಅಲ್ಲಿ ಶೋಷಣೆಯೇ ವ್ಯವಹಾರ ಸೂತ್ರ.

ಹಾಗಾಗಿ, ಎರಡನೆಯ ಕ್ರಮ: ಐದು ಕಿಲೋಮೀಟರಿಗೆ ಒಂದರಂತೆ ಖರೀದಿ ಮತ್ತು ಮಾರಾಟ ಕೇಂದ್ರಗಳನ್ನು ಬೇಗನೇ ಆರಂಭಿಸಬೇಕಾಗಿದೆ; ಜೊತೆಗೆ, ಕೃಷಿಕರು ಯಾವುದೇ ಉತ್ಪನ್ನ ತಂದರೂ ಅದನ್ನು ಲಾಭದಾಯಕ ಬೆಲೆಗೆ ಖರೀದಿಸಲು ಈ ಕೇಂದ್ರಗಳಿಗೆ ಆದೇಶ ನೀಡಬೇಕಾಗಿದೆ. ಈ ಎರಡು ಕ್ರಮಗಳ ತುರ್ತು ಜಾರಿಯಿಂದ ಅನ್ನದಾತರ ಬದುಕಿನಲ್ಲಿ ಬೆಳಕಾಗಲು ಸಾಧ್ಯ.

– ಅಡ್ಕೂರು ಕೃಷ್ಣ ರಾವ್‌

ಟಾಪ್ ನ್ಯೂಸ್

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

1

Sullia: ಬಿಎಸ್ಸೆನ್ನೆಲ್‌ ಟವರ್‌ಗೆ ಸೋಲಾರ್‌ ಪವರ್‌!

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.