ಕನಸಿನ ಮನೆಯ ಆಸೆ ನನಸಾಗಬೇಕೆಂದರೆ…


Team Udayavani, Aug 14, 2017, 6:15 AM IST

shutterstock_227613526-4fea.jpg

ಅನೇಕಬಾರಿ ಮನೆ ಕಟ್ಟಿ, ಬಣ್ಣ ಬಳಿಯುವವರೆಗೂ ಯಾವ ಕೋಣೆ ಊಹಿಸಿಕೊಂಡದ್ದಕ್ಕಿಂತ ದೊಡ್ಡದಾಯಿತು ಇಲ್ಲ ಸಣ್ಣದಾಯಿತು ಎಂಬುದು ತಿಳಿಯುವುದಿಲ್ಲ.  ಮನೆಯ ವಿನ್ಯಾಸದಲ್ಲಿ ಗಮನಿಸ ಬೇಕಾದ ಮುಖ್ಯ ಅಂಶ – ಗೋಡೆಗಳ ದಪ್ಪ. ಇದನ್ನು ಪರಿಗಣಿಸದೆ ಹಾಗೆಯೇ ಅಂದಾಜಾಗಿ ಲೆಕ್ಕಾಚಾರ ಮಾಡಿ, ಮನೆ ಕಟ್ಟಲು ತೊಡಗಿದರೆ, ನಂತರ ನಮ್ಮ ಕನಸಿನ ಮನೆಯ ಸಾಕಾರ ಕಷ್ಟವಾಗಬಹುದು. 

ಮನೆ ಕಟ್ಟಲು ನಿರ್ಧರಿಸಿದಾಗ “ನಮ್ಮ ಮನೆ ಹಾಗಿರಬೇಕು, ಹೀಗಿರಬೇಕು’ ಎಂದೆಲ್ಲ ಏನೇನೋ ಕನಸು ಕಂಡಿರುತ್ತೇವೆ. ಆದರೆ ಶುರುಮಾಡುವ ವೇಳೆಗೆ ನಮ್ಮ ಹಾಗೂ ನಿವೇಶನದ ಮಿತಿಗಳು ಅರಿವಾಗಿ, ಹೆಚ್ಚು ವ್ಯಾವಹಾರಿಕವಾಗಿ ಮುಂದುವರಿಯುವ ಅನಿವಾರ್ಯತೆ ಎದುರಾಗುತ್ತದೆ. ಆಮೇಲೆ ಎಲ್ಲವನ್ನೂ ಒಪ್ಪಿಕೊಳ್ಳಲು ಶುರುಮಾಡಿರುತ್ತೇವೆ. ಸ್ಥಳದ ಮಿತಿಗಳು ಮುಖ್ಯವಾದರೆ, ಅಷ್ಟೇ ಮಿತಿ ಹಣದ್ದೂ ಆಗಿರುತ್ತದೆ. ಜೊತೆಗೆ ಕುಶಲ ಕರ್ಮಿಗಳ ಮಿತಿ, ವೇಳೆ ವ್ಯಯವಾಗುವುದನ್ನು ತಡೆಯಲು, ಉತ್ತಮ ಗುಣಮಟ್ಟ ಪಡೆಯಲು ಕನಸುಗಳನ್ನು ಸಾಕಾರಗೊಳಿಸುವ ಪ್ರಯತ್ನವನ್ನು ಬಿಡಬೇಕಾಗುತ್ತದೆ. ಹಾಗಾದರೆ, ನಮ್ಮ ಕನಸಿನ ಮನೆಯಲ್ಲಿ ಯಾವುದು ಹೆಚ್ಚು ಶ್ರಮಪಡದೆ ಸಾಕಾರವಾಗುತ್ತದೆ ಎಂಬುದನ್ನು ನಿರ್ಧರಿಸುವುದು ಬಹು ಮುಖ್ಯ.

ವಿನ್ಯಾಸ ಹಾಗೂ ನಿವೇಶನ
ದೊಡ್ಡದಾದ ಹಾಲ್‌ ಹಾಗೂ ಕೋಣೆಗಳ ಅಳತೆಯನ್ನು ನಮಗಿಷ್ಟಬಂದಷ್ಟು ಇಟ್ಟುಕೊಂಡು ಮನೆಯ ಪ್ಲಾನ್‌ ಮಾಡಲು ತೊಡಗಿದಾಗ ಎದುರಾಗುವ ಮೊದಲ  ತೊಡಕು- ಒಟ್ಟಾರೆ ವಿಸ್ತಾರ ಸೈಟಿನ ಒಳಗೆ ಇರುವಂತೆ ಮಾಡಲು ಸಾಧ್ಯವಾಗದೇ ಇರುವುದು. ನಿವೇಶನದ ಉದ್ದ ಹಾಗೂ ಅಗಲ ಪರಿಗಣಿಸಿ, ಬಿಡಲೇ ಬೇಕಾದ ತೆರೆದ ಸ್ಥಳ – ಓಪನ್‌ ಸ್ಪೇಸ್‌ ಬಿಟ್ಟು,  ಮಿಕ್ಕ ಜಾಗದಲ್ಲಿ ವಿವಿಧ ಕೊಠಡಿಗಳನ್ನು ಹೊಂದಿಸಬೇಕಾಗುತ್ತದೆ. ಆಗ ಅನಿವಾರ್ಯವಾಗಿ, ಹಾಲ್‌ ಸ್ವಲ್ಪ ದೊಡ್ಡದು ಬೇಕೆನಿಸಿದರೆ, ಕೋಣೆಯನ್ನು ಸ್ವಲ್ಪ ಚಿಕ್ಕದು ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಟಾಯ್ಲೆಟ್‌ ಅಟ್ಯಾಚ್‌ ಬೇಕೆಬೇಕೆನಿಸಿದರೆ, ಬೆಡ್‌ ರೂಮ್‌ ಸ್ವಲ್ಪ ಸಣ್ಣದಾಗುತ್ತದೆ. ಕನಸಿನ ಮನೆಗೆ ನಗರ ಪ್ರದೇಶಗಳಲ್ಲಿ ಮುಖ್ಯವಾಗಿ ತೊಡಕಾಗುವುದು, ನಿವೇಶನದ ಮಿತಿಯೇ ಆಗಿರುತ್ತದೆ. ನಿವೇಶನ ದೊಡ್ಡದಿದ್ದರೂ, ಅದಕ್ಕೆ ತಕ್ಕಂಥ ವಿಸ್ತಾರವಾದ ವಿನ್ಯಾಸ ಮಾಡಲು ತೊಡಗುವುದರಿಂದ, ಅಲ್ಲಿಯೂ ಕೂಡ ಸರಿದೂಗಿಸಿಕೊಂಡು ಹೋಗುವುದು ತಪ್ಪುವುದಿಲ್ಲ. ನಮ್ಮ ಕನಸಿಗೆ ಹತ್ತಿರವಾಗಿ, ಯಾವುದೂ ತೀರ ಚಿಕ್ಕದಾಗದಂತೆ, ಹಾಗೆಯೇ ಸಾಕಷ್ಟು ತೆರೆದ ಸ್ಥಳಗಳನ್ನೂ ಬಿಟ್ಟು ಮನೆಯನ್ನು ಸಾಕಾರಗೊಳಿಸಬೇಕಾಗುತ್ತದೆ. 

ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡಿ
ಸಾಮಾನ್ಯವಾಗಿ ಹತ್ತು ಅಡಿಗೆ ಹನ್ನೆರಡು ಅಡಿ ಬೆಡ್‌ ರೂಮ್‌, ಎಂಟು ಅಡಿಗೆ ಹತ್ತು ಅಡಿ ಕಿಚನ್‌ ಇತ್ಯಾದಿಯಾಗಿ ಪ್ಲಾನ್‌ನಲ್ಲಿ ಇರುವ ಅಳತೆಗಳು ಬರಿ ಸಂಖ್ಯೆಗಳಾಗಿ ಮಾತ್ರ ಉಳಿಯದಂತೆ ನಾವು ಅವು ಎಷ್ಟು ದೊಡ್ಡದಾಗಿ ಇಲ್ಲ ಚಿಕ್ಕದಾಗಿರುತ್ತದೆ ಎಂಬುದನ್ನು ನೋಡಿಕೊಳ್ಳುವುದು ಅತ್ಯಗತ್ಯ. ಅನೇಕಬಾರಿ ಮನೆ ಕಟ್ಟಿ, ಬಣ್ಣ ಬಳಿಯುವವರೆಗೂ ಯಾವ ಕೋಣೆ ಊಹಿಸಿಕೊಂಡದ್ದಕ್ಕಿಂತ ದೊಡ್ಡದಾಯಿತು ಇಲ್ಲ ಸಣ್ಣದಾಯಿತು ಎಂಬುದು ತಿಳಿಯುವುದಿಲ್ಲ.  ಮನೆಯ ವಿನ್ಯಾಸದಲ್ಲಿ ಗಮನಿಸ ಬೇಕಾದ ಮುಖ್ಯ ಅಂಶ – ಗೋಡೆಗಳ ದಪ್ಪ. ಇದನ್ನು ಪರಿಗಣಿಸದೆ ಹಾಗೆಯೇ ಅಂದಾಜಾಗಿ ಲೆಕ್ಕಾಚಾರ ಮಾಡಿ, ಮನೆ ಕಟ್ಟಲು ತೊಡಗಿದರೆ, ನಂತರ ನಮ್ಮ ಕನಸಿನ ಮನೆಯ ಸಾಕಾರ ಕಷ್ಟವಾಗಬಹುದು. 

ಈಗ ನೀವಿರುವ ಮನೆ, ಇಲ್ಲ ನಿಮಗಿಷ್ಟವಾದ ಮನೆಯ ಅಳತೆಯನ್ನು ಒಮ್ಮೆ ಮಾಡಿ, ಹತ್ತು ಅಡಿ ಎಂದರೆ ಎಷ್ಟು ಅಗಲ ಹಾಗೂ ಅಷ್ಟು ಅಗಲದ ರೂಮ್‌ ನಿಮಗೆ ಸಾಕೇ? ಎಂಬುದನ್ನು ನಿಖರವಾಗಿ ಅರಿಯಲು ಪ್ರಯತ್ನಿಸಿ. ಕೋಣೆ ಸಣ್ಣದಾಯಿತೋ ಇಲ್ಲ ವಿಶಾಲವಾಗಿದೆಯೋ ಎಂಬುದನ್ನು ನಿರ್ಧರಿಸುವಲ್ಲಿ ನಾವು ಬಳಸುವ ಪೀಠೊಪಕರಣಗಳ ಮೇಲೂ ನಿರ್ಧಾರವಾಗಿರುತ್ತದೆ. ಹೆಚ್ಚು ಫ‌ನೀìಚರ್‌ ತುಂಬಿಕೊಂಡಷ್ಟೂ ದೊಡ್ಡ ಕೋಣೆಯೂ ಸಣ್ಣದೆನಿಸಲು ತೊಡಗುತ್ತದೆ. 

ಮನೆಯ ಒಟ್ಟಾರೆ ರೂಪರೇಶೆಯನ್ನು ಪರಿಶೀಲಿಸಲು ನಮಗೆ ಇರುವ ಸುಲಭೋಪಾಯ- ಪಾಯ ಅಗೆಯುವ ಮೊದಲೇ ಎಲ್ಲ ಕೋಣೆಗಳನ್ನೂ, ಗೋಡೆ ದಪ್ಪಗಳನ್ನು ಒಳಗೊಂಡಂತೆ ಖಾಲಿ ನಿವೇಶನದಲ್ಲಿ ರಂಗೋಲಿ ಹಾಕಿ ಮಾರ್ಕ್‌ ಮಾಡಬೇಕು. ಪ್ಲಾನ್‌ ನಂತೆ ಮಾಡುತ್ತೇವೆ ಬಿಡಿ, ಇದೆಲ್ಲ ಅಗತ್ಯ ಇಲ್ಲ ಎಂದೆಲ್ಲ ಹೇಳಿ ಮೇಸಿŒಗಳು ಸಾಗಹಾಕಲು ನೋಡಬಹುದು. ಆದರೆ ಒಮ್ಮೆ ಪಾಯ ಅಗೆದ ಮೇಲೆ, ನಮಗೆ ಮನೆಯ ಇಡೀ ಐಡಿಯಾ ಸಿಗುವುದಿಲ್ಲ. ಎಲ್ಲವೂ ಚಿಕ್ಕದಾಗಿ ಕಾಣಲು ತೊಡಗುತ್ತದೆ. ಜೊತೆಗೆ, ಹಳ್ಳ ದಿಣ್ಣೆಗಳಿದ್ದರೆ, ನಮಗೆ ಒಳ ಹೊಕ್ಕು ಎಲ್ಲವನ್ನೂ ನೋಡಲೂ ಕೂಡ ಆಗುವುದಿಲ್ಲ. ಆದುದರಿಂದ, ಪಾಯ ಅಗೆಯುವ ಮೊದಲು, ಮನೆಯನ್ನು ಇಡಿಯಾಗಿ ನೋಡಿ, ನಿವೇಶನದಲ್ಲಿ ಮಾರ್ಕ್‌ ಮಾಡಿ, ಯಾವುದಾದರೂ ಬದಲಾವಣೆ ಮಾಡಲು ಇಚ್ಛಿಸಿದರೆ, ಕೋಣೆಗಳನ್ನು ಸಣ್ಣದು ಇಲ್ಲವೇ ದೊಡ್ಡದು ಮಾಡಿಕೊಂಡು ಮುಂದುವರೆಯುವುದು ಅತ್ಯಗತ್ಯ. ಜೊತೆಗೆ ಕಿಟಕಿ ಬಾಗಿಲುಗಳನ್ನೂ ಮಾರ್ಕ್‌ ಮಾಡುವುದು ಒಳ್ಳೆಯದು.

ಬಜೆಟ್‌ ನಿರ್ವಹಣೆ
ಸಣ್ಣಪುಟ್ಟ ಮನೆ ಕಟ್ಟಿಕೊಳ್ಳುವವರಿಗೆ ಅವರದೇ ಆದ ಮಿತಿಗಳಿದ್ದರೆ, ದೊಡ್ಡ ಮನೆ ಕಟ್ಟುವವರೂ ಕೂಡ  ಹಣಕಾಸಿನ ಬಗ್ಗೆ ಯೋಚಿಸಬೇಕಾಗುತ್ತದೆ. ಹಣ ಎಲ್ಲೆಲ್ಲಿ ಉಳಿಸಬೇಕೋ ಅಲ್ಲೆಲ್ಲ ಉಳಿಸಿ, ಖರ್ಚು ಮಾಡಲೇ ಬೇಕಾದಾಗ, ಒಳ್ಳೆಯ ಹಾಗೂ ನಾಲ್ಕು ಕಾಲ ಬಾಳುವ ವಸ್ತುಗಳನ್ನು ಆಯ್ಕೆ ಮಾಡುವುದು ಜಾಣತನ.  ಉಳಿತಾಯ ಲಕ್ಷದಲ್ಲಿರಲಿ, ಇಲ್ಲ ಸಾವಿರ ರೂ.ಗಳಲ್ಲೇ ಇರಲಿ, ಮನೆ ಕಟ್ಟುವಾಗ ಎಲ್ಲವನ್ನೂ ಲೆಕ್ಕಾಚಾರ ಮಾಡಿ ಖರ್ಚು ಮಾಡಬೇಕು. ಒಮ್ಮೆ ಬಿಗಿ ಸಡಲಿಸಿದರೆ, ನಾವು ಹಾಕಿದ ಬಜೆಟ್‌ ಹಿಂದೆಯೇ ನಿಂತು, ಖರ್ಚು ದುಬಾರಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ವಿವಿಧ ವಿನ್ಯಾಸಗಳ ಸಾಕಾರ
ಎಲ್ಲೋ ನೋಡಿದ ಡಿಸೈನ್‌, ವಿಶೇಷ ವಸ್ತುಗಳನ್ನು ಬಳಸುವ ತವಕ, ನಾವು ಅಂದು ಕೊಂಡಂತೆಯೇ ಇರಬೇಕು ವಿನ್ಯಾಸ ಎಂದೆಲ್ಲ ಕನಸುಗಳಿರುತ್ತದೆ. ಆದರೆ ಅದೇ ರೀತಿಯಲ್ಲಿ ಮಾಡಲು ನಮಗೆ ಕುಶಲ ಕರ್ಮಿಗಳ ಅಗತ್ಯವೂ ಇರುತ್ತದೆ ಎಂಬುದನ್ನು ಮರೆಯಬಾರದು. ಇತ್ತೀಚಿನ ದಿನಗಳಲ್ಲಿ ಕೈಕೆಲಸ ಹೆಚ್ಚಾ ಕಡಿಮೆ ಮಾಯವಾಗಿದ್ದು, ಎಲ್ಲವನ್ನೂ ಮಶಿನ್‌ ಬಳಸಿಯೇ ಮಾಡಲಾಗುತ್ತದೆ. ಆದುದರಿಂದ ಆದಷ್ಟೂ ಮೆಶಿನ್‌ ಬಳಸಿ ಮಾಡಬಹುದಾದ ವಿನ್ಯಾಸಗಳನ್ನು ಆಯ್ದುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಸುಲಭದಲ್ಲಿ ಸಿಗದ ಇಲ್ಲವೇ ದುಬಾರಿ ರೇಟ್‌ ಹೇಳುವ ಬಡಗಿ ಕಬ್ಬಿಣದ ಕೆಲಸದವರ ಹಿಂದೆ ತಿರುಗಬೇಕಾಗುತ್ತದೆ. 
ಹೆಚ್ಚಿನ ಮಾತಿಗೆ ಫೋನ್‌ 98441 32826

– ಆರ್ಕಿಟೆಕ್ಟ್ ಕೆ ಜಯರಾಮ್‌

ಟಾಪ್ ನ್ಯೂಸ್

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

Shiradi

Road Project: ಶಿರಾಡಿ ಘಾಟ್‌ ಸುರಂಗ ಯೋಜನೆಗೆ ಡಿಪಿಆರ್‌ ರಚಿಸಿ: ಕೇಂದ್ರ ಸೂಚನೆ

Kusuma-RR-Nagar

Egg Thrown: “ಮೊಟ್ಟೆ ಅಟ್ಯಾಕ್‌’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ

santhosh

Sushasana Day: ಕಾಂಗ್ರೆಸ್‌ ಆಡಳಿತದಲ್ಲಿ ಜಂಗಲ್‌ ರಾಜ್‌ ಸೃಷ್ಟಿ: ಬಿ.ಎಲ್‌.ಸಂತೋಷ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.