ವಿಲ್‌ ಹಣ ಯಾರಿಗೆ ಸಲ್ಲಬೇಕು?


Team Udayavani, Oct 14, 2019, 5:15 AM IST

law-point23

ನಾಮ ನಿರ್ದೇಶನ ಮಾಡಿದ ವ್ಯಕ್ತಿಗೆ ಹಣವೇನೋ ಕೊಡಲ್ಪಡುತ್ತದೆ. ಆದರೆ, ಆ ಹಣಕ್ಕೆಲ್ಲಾ ಅವನೊಬ್ಬನೇ ಹಕ್ಕುದಾರನೇ? ಮೃತ ವ್ಯಕ್ತಿಗೆ ನಾಮನಿರ್ದೇಶನ ಮಾಡಲ್ಪಟ್ಟ ವ್ಯಕ್ತಿಯಲ್ಲದೆ ಬೇರೆ ವಾರಸುದಾರರಿದ್ದ ಪಕ್ಷದಲ್ಲಿ, ಅವರುಗಳಿಗೂ ಹಣ ಸೇರಬೇಕಾಗಿಲ್ಲವೇ?

ಇದನ್ನು ತಿಳಿದುಕೊಳ್ಳಬೇಕಾದರೆ, ನಾಮಿನೇಷನ್‌ನ ಇತಿಮಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನಾಮಿನೇಷನ್‌ ಎಂಬುದು ಸುಲಭವಾಗಿ, ಶೀಘ್ರವಾಗಿ ಹಣಸಂದಾಯ ಮಾಡಿ, ತಮ್ಮ ಜವಾಬ್ದಾರಿಯನ್ನು ತೊಡೆದುಕೊಳ್ಳಲು ಇರುವ ಒಂದು ಉಪಾಯ ಅಥವಾ ಸಾಧನ. ಅದು ಇತರೆ ವಾರಸುದಾರರ ಹಕ್ಕನ್ನು ಮೊಟಕು ಮಾಡುವುದಿಲ್ಲ ಅಥವಾ ಅಳಿಸುವುದಿಲ್ಲ. ಎಲ್ಲಾ ವಾರಸುದಾರರ ಪರವಾಗಿ ಒಬ್ಬ ವಾರಸುದಾರ ಹಣ ಪಡೆದುಕೊಂಡು, ಹಣ ಸಂದ ರಶೀದಿ ಕೊಡಲು ಇರುವ ಸೌಲಭ್ಯ ಮಾತ್ರ. ಹಣ ಪಡೆದುಕೊಂಡ ವ್ಯಕ್ತಿಯಿಂದ ಮಿಕ್ಕ ವಾರಸುದಾರರು ತಮ್ಮ ತಮ್ಮ ಪಾಲನ್ನು ಪಡೆದುಕೊಳ್ಳಬಹುದು. ನಾಮ ನಿರ್ದೇಶನವು ಯಾವತ್ತೂ ಉಯಿಲಿನ ಅರ್ಹತೆಯನ್ನು ಪಡೆಯುವುದಿಲ್ಲ. ಮೃತವ್ಯಕ್ತಿ ಉಯಿಲನ್ನು ಬರೆದಿದ್ದು, ಅದರಲ್ಲಿ ನಾಮನಿರ್ದೇಶನ ಮಾಡಲ್ಪಟ್ಟ ವ್ಯಕ್ತಿಗೆ ಎಲ್ಲಾ ಹಣ ಹೋಗಬೇಕೆಂದು ಸೂಚಿಸಿದ್ದರೆ ಮಾತ್ರ, ಇತರೆ ವಾರಸುದಾರರಿಗೆ ಪಾಲು ಸಿಕ್ಕುವುದಿಲ್ಲ. ಅಂದರೆ, ಉಯಿಲಿನಲ್ಲಿ ಯಾವ ವ್ಯಕ್ತಿಗೆ ಆಸ್ತಿ ಬರೆದು ಕೊಡಲ್ಪಟ್ಟಿದೆಯೋ ಆ ವ್ಯಕ್ತಿ ಮಾತ್ರ ಆ ಆಸ್ತಿಗೆ ಸಂಪೂರ್ಣ ಹಕ್ಕುದಾರನಾಗುತ್ತಾನೆ.

ನಾಮನಿರ್ದೇಶನ ಮಾಡಲ್ಪಟ್ಟ ವ್ಯಕ್ತಿ, ತನ್ನ ಮತ್ತು ಮಿಕ್ಕೆಲ್ಲ ವಾರಸುದಾರರ ಪರವಾಗಿ ಹಣ ಪಡೆಯುವ ಅಧಿಕಾರ ಹೊಂದಿರುತ್ತಾನೆ ಮತ್ತು ಹಾಗೆ ಪಡೆದ ಹಣವನ್ನು ಇತರೆ ವಾರಸುದಾರರಿಗೆ ಹಂಚಲು ಬದ್ಧನಾಗಿರುತ್ತಾನೆ. ಉದಾಹರಣೆಗೆ, ಒಬ್ಬ ವ್ಯಕ್ತಿ ತನ್ನ ಜೀವವಿಮಾ ಪಾಲಿಸಿಯ ಹಣವನ್ನು ತನ್ನ ದೊಡ್ಡ ಮಗನಿಗೆ ಕೊಡಬೇಕೆಂದು ನಾಮನಿರ್ದೇಶನ ಮಾಡಿದ್ದಾನೆ ಎಂದಿಟ್ಟುಕೊಳ್ಳಿ. ಅದೇ ವ್ಯಕ್ತಿ ತನ್ನ ಉಯಿಲನ್ನು ಬರೆದು, ಅದರಲ್ಲಿ ತನ್ನ ಜೀವವಿಮಾ ಪಾಲಿಸಿಯ ಹಣವೆಲ್ಲಾ ತನ್ನ ಹೆಂಡತಿಗೆ ಹೋಗಬೇಕೆಂದು ಬರೆದಿದ್ದರೆ, ದೊಡ್ಡ ಮಗನಿಗೆ ಕೇವಲ ಹಣ ಪಡೆಯಲು ಮಾತ್ರ ಅಧಿಕಾರವಿರುತ್ತದೆ. ಹಾಗೆ ಪಡೆದ ಹಣವನ್ನು ತನ್ನ ತಾಯಿಗೆ ಕೊಡಲು ಬದ್ಧನಾಗಿರುತ್ತಾನೆ.

ಈಗ ಒಂದು ಪ್ರಶ್ನೆ: ಮೇಲಿನ ಉದಾಹರಣೆಯಲ್ಲಿ ಉಯಿಲನ್ನು ಮೊದಲು ಬರೆದಿದ್ದು, ನಾಮನಿರ್ದೇಶನ ನಂತರ ಮಾಡಿದ್ದರೆ, ಆಗಲೂ ಮಗನಿಗೆ ಪಾಲು ಸಿಗುವುದಿಲ್ಲವೇ?

ಉತ್ತರ: ಇಲ್ಲ, ಸಿಗುವುದಿಲ್ಲ. ಉಯಿಲಿನಲ್ಲಿ ಯಾವ ವ್ಯಕ್ತಿಗೆ ಆಸ್ತಿ ಕೊಡಲ್ಪಟ್ಟಿದೆಯೋ ಆ ವ್ಯಕ್ತಿ ಮಾತ್ರ ಆ ಆಸ್ತಿಗೆ ಸಂಪೂರ್ಣ ಹಕ್ಕುದಾರನಾಗಿರುತ್ತಾನೆ. ನಾಮನಿರ್ದೇಶನ ಮಾಡಲ್ಪಟ್ಟ ವ್ಯಕ್ತಿ ತಾನು ವಾರಸುದಾರನಾಗಿದ್ದರೆ, ತನ್ನ ಮತ್ತು ಮಿಕ್ಕೆಲ್ಲ ವಾರಸುದಾರರ ಪರವಾಗಿ ಹಣವನ್ನು ಪಡೆಯಲು ಸಂಪೂರ್ಣ ಅರ್ಹತೆ ಹೊಂದಿರುತ್ತಾನೆ. ಆ ಹಣವನ್ನು ಇತರ ವಾರಸುದಾರರಿಗೆ ಹಂಚುವುದೂ ಅವನ ಕರ್ತವ್ಯ ಆಗಿರುತ್ತದೆ. ಒಂದು ವೇಳೆ, ನಾಮನಿರ್ದೇಶನ ಮಾಡಲ್ಪಟ್ಟ ವ್ಯಕ್ತಿ ತಮ್ಮ ಪಾಲಿನ ಹಣವನ್ನು ಎತ್ತಿಹಾಕುವ ಸಂಭವ ಇದೆಯೆಂದು ಮನಗಂಡರೆ, ಇತರ ವಾರಸುದಾರರು ನ್ಯಾಯಾಲಯದ ಮೊರೆಹೊಕ್ಕು, ನಿರ್ಬಂಧಾಜ್ಞೆಯನ್ನು ಪಡೆಯಬಹುದು.

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.