ಲಾಟರಿ ಹೊಡೆಯಬೇಕೆಂದರೆ‌..


Team Udayavani, Apr 20, 2020, 2:54 PM IST

ಲಾಟರಿ ಹೊಡೆಯಬೇಕೆಂದರೆ‌..

ಸಾಂದರ್ಭಿಕ ಚಿತ್ರ

ಹಿಂದೊಮ್ಮೆಯೂ ಕೆಲಸವಿಲ್ಲದ ಸಂದರ್ಭ ಸೃಷ್ಟಿಯಾಗಿತ್ತು. ಮನೆಯಲ್ಲೇ ಇದ್ದ ವ್ಯಕ್ತಿಯೊಬ್ಬ, ಒಂದಷ್ಟು ಹಣ ಮಾಡಲು ಯೋಚಿಸಿದ. ತಿಂಗಳ ಕೊನೆಯಲ್ಲಿ ಕೋಟಿ ರೂಪಾಯಿ ಮೊತ್ತದ ಲಾಟರಿ ಡ್ರಾ ಇದೆ ಎಂಬ ಸಂಗತಿಯೂ ಅವನಿಗೆ ಗೊತ್ತಾಯಿತು. ಆತ ತಡ ಮಾಡಲಿಲ್ಲ. ದೇವರ ಎದುರು ನಿಂತು – ದೇವರೇ, ನನಗೆ ಕೋಟಿ ರೂಪಾಯಿ ಲಾಟರಿ ಹೊಡೆಯುವಂತೆ ಮಾಡಿದರೆ, ನಿನಗೆ 10 ಲಕ್ಷವನ್ನು ಕಾಣಿಕೆಯಾಗಿ ಅರ್ಪಿಸುವೆ ಎಂದು ಹರಕೆ ಕಟ್ಟಿಕೊಂಡ. ಈ ವಿಷಯ ತಿಳಿದ ಅವನ ಹೆಂಡತಿ- ‘ಒಂದು ಕೋಟಿ ರೂಪಾಯಿ ಲಾಟರಿಯ ಮೊತ್ತದಲ್ಲಿ, ದೇವರಿಗೆ ಕೇವಲ 10 ಲಕ್ಷ ಕೊಡುವುದು ಸರಿಯಲ್ಲ, ಹೀಗೆ ಮಾಡಿದರೆ, ದೇವರ ಕೃಪೆಯೇ ಸಿಗದೇ ಹೋಗಬಹುದು. ಹಾಗಾಗಿ, ದೇವರಿಗೆ ಅರ್ಧ ಭಾಗ ಕಾಣಿಕೆಯಾಗಿ ಕೊಡೋಣ’ ಅಂದಳು. ಆನಂತರದಲ್ಲಿ, ಇಬ್ಬರೂ ಲೆಕ್ಕಾಚಾರ ಮಾಡಿ, ಈ ಕಷ್ಟದ ಸಮಯದಲ್ಲಿ,ಲಾಟರಿ 10 ಲಕ್ಷ ಸಿಕ್ಕರೆ ಸಾಕು, ಉಳಿದ ಹಣವನ್ನೆಲ್ಲ ದೇವರಿಗೇ ಕಾಣಿಕೆಯಾಗಿ ನೀಡೋಣವೆಂದು ನಿರ್ಧರಿಸಿದರು.

ಲಾಟರಿ ಹೊಡೆಯಲು ಇನ್ನೊಂದು ದಿನ ಬಾಕಿಯಿದೆ ಅನ್ನುವಾಗಲೇ ಪ್ರತ್ಯಕ್ಷವಾದ ದೇವರು- ಲಾಟರಿ ಟಿಕೆಟ್‌ ತಗೊಂಡು ಆಗಿದೆಯಾ? ಎಂದು ಕೇಳಿದ. ಈ ಭಕ್ತ, ಇನ್ನೂ ಇಲ್ಲ, ತಗೋಬೇಕು ಅನ್ನುತ್ತಾನೆ. ಆಗ ದೇವರು- ‘ಮೂರ್ಖ, ಲಾಟರಿ ಹೊಡೆಯಬೇಕು ಅಂದ್ರೆ ಮೊದಲೇ ಟಿಕೆಟ್‌ ತಗೋಬೇಕು ‘ ಎಂದು ಹೇಳಿ ಮಾಯವಾದನಂತೆ.

ಈ ಕಥೆಯನ್ನು ಈಗಿನ ಸಂದರ್ಭಕ್ಕೆ ಹೋಲಿಸಿಕೊಂಡು ನೋಡಿ: ಲಾಕ್‌ ಡೌನ್‌ನ ಅವಧಿ ಮುಗಿಯುವ ಮುನ್ನ ಒಂದಷ್ಟು ಕಾಸು ಮಾಡಬೇಕು ಅಂತ ಹಲವರು ಯೋಚಿಸುತ್ತಾ ಇದ್ದಾರೆ. ಆದರೆ, ಯಾರೊಬ್ಬರೂ ಹೊಸ ಕೆಲಸ ಮಾಡುವ, ಮನೆಯಲ್ಲಿದ್ದೇ ಸಂಪಾದಿಸುವ ಸಾಧ್ಯತೆಯ ಬಗ್ಗೆ ಯೋಚಿಸುತ್ತಲೇ ಇಲ್ಲ. ಇನ್ನು ಲಾಟರಿ ಹೊಡೆಯುವ ಸಾಧ್ಯತೆ ಎಲ್ಲಿದೆ?

ಟಾಪ್ ನ್ಯೂಸ್

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

2

Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.