ತಂಬಾಕು ಲಾಭ ತಂದಾಕು
Team Udayavani, Jun 5, 2017, 3:50 AM IST
ಶಿವಮೊಗ್ಗ ಜಿಲ್ಲೆ ಹೊನ್ನಾಳಿ ತಾಲ್ಲೂಕು ಹಾಗೂ ಗಡಿ ಪ್ರದೇಶದ ಕೆಲವು ಗ್ರಾಮಗಳಲ್ಲಿ ರೈತರು ಪರವಾನಿಗೆ ಪಡೆದು ತಂಬಾಕು ಕೃಷಿ ನಡೆಸುತ್ತಿದ್ದಾರೆ. ಸಂವಳಂಗ ಸಮೀಪದ ಭೈರನಕೊಪ್ಪದ ರೈತ ಕುಪ್ಪಣ್ಣ ಕೂಡ ಸುಮಾರು ವರ್ಷಗಳಿಂದ ತಂಬಾಕು ಬೆಳೆಯಿಂದ ಲಾಭ ಮಾಡುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ. ಕುಪ್ಪಣ್ಣ ಅವರದು ಭೈರನಕೊಪ್ಪ ಗ್ರಾಮದಲ್ಲಿ ಸುಮಾರು 3 ಎಕರೆಯಷ್ಟು ಖುಷ್ಕಿ ಭೂಮಿ ಇದೆ. ಪ್ರತಿ ವರ್ಷ ಮಳೆಗಾಲದಲ್ಲಿ ತಂಬಾಕು ಬೇಸಾಯ ನಡೆಸುತ್ತಾರೆ. ವಿಶೇಷ ಎಂದರೆ ಮಳೆ ನೀರಿನಲ್ಲಿ ಮಾತ್ರ ಉತ್ತಮ ಬೆಳೆ ಬರುತ್ತದೆ. ನೀರಾವರಿ ವ್ಯವಸ್ಥೆ
ರೂಪಿಸಿಕೊಂಡು ಬೇಸಿಗೆಯಲ್ಲೂ ಬೆಳೆದರೆ ತಂಬಾಕು ಹುಳಿ ಅಂಶ ಹೊಂದಿ ಮಾರುಕಟ್ಟೆಯ ಮೌಲ್ಯ ಕಳೆದುಕೊಳ್ಳುತ್ತದೆ ಎನ್ನುವುದು ಎಲ್ಲರಿಗೂ ಎಚ್ಚರಿಕೆ.
ಕೃಷಿ ಹೇಗೆ?
ಇವರು ಮಳೆಗಾಲದ ಆರಂಭದಲ್ಲಿ ಅಂದರೆ ಮೇ ಅಂತ್ಯದ ಸುಮಾರಿಗೆ ಹೊಲವನ್ನು ಟ್ರಾÂಕ್ಟರ್‌ನಿಂದ ಉಳುಮೆ ಮಾಡಿ
ಹದಗೊಳಿಸುತ್ತಾರೆ. ನಂತರ ಸಾಲಿನಿಂದ ಸಾಲಿಗೆ ಎರಡು ಅಡಿ ಅಂತರ ಬರುವಂತೆ ಪಟ್ಟೆ ಸಾಲು ನಿರ್ಮಿಸಿಕೊಳ್ಳುತ್ತಾರೆ. ತಂಬಾಕು ಮಂಡಳಿಯಿಂದ ಖರೀದಿಸಿದ್ದ ಬೀಜವನ್ನು ಅಗೆ ಸಸಿಯನ್ನಾಗಿ ತಯಾರಿಸಿಕೊಳ್ಳುತ್ತಾರೆ. ಪಟ್ಟೆ ಸಾಲಿನಲ್ಲಿ ಗಿಡದಿಂದ ಗಿಡಕ್ಕೆ 2 ಅಡಿ ಅಂತರ ಬರುವಂತೆ ತಂಬಾಕು ಸಸಿಗಳನ್ನು ನಾಟಿ ಮಾಡುತ್ತಾರೆ.
ಗಿಡ ಚಿಗುರಿ ಮೂರು ಎಲೆ ಕಾಣಿಸಿಕೊಳ್ಳುತ್ತಿದ್ದಂತೆ ಕಾಂಪ್ಲೆಕ್ಸ್ ಗೊಬ್ಬರ ಸರಾಸರಿ 10 ಗ್ರಾಂ. ನಷ್ಟು ನೀಡುತ್ತಾರೆ. ನಂತರ 25 ದಿನ ಕಳೆಯುತ್ತಿದ್ದಂತೆ ಕಾಂಡ ಬಲಿಷ್ಠಗೊಳ್ಳಲು ಯೂರಿಯಾ ಮತ್ತು ಪೊಟ್ಯಾಷ್ ಮಿಶ್ರಣ ಗೊಬ್ಬರ
ನೀಡುತ್ತಾರೆ. ಪ್ರತಿ 15 ದಿನಕ್ಕೆ ಒಮ್ಮೆಯಂತೆ ತಂಬಾಕು ಸಸ್ಯದ ಎಲೆಗಳಿಗೆ ಕೀಟ ಬಾಧೆ ಬರದಂತೆ ಔಷಧ ಸಿಂಪಡಣೆ ನಡೆಸುತ್ತಾರೆ. ಒಟ್ಟು ಮೂರು ಸಲ ಗೊಬ್ಬರ, ಮೂರು ಸಲ ಔಷಧ ಸಿಂಪಡಣೆ ನಡೆಸುತ್ತಾರೆ. ಗಿಡ ನಾಟಿ ಮಾಡಿದ 50
ದಿನದಿಂದ ಗಿಡದ ಎಲೆಗಳು ಬಲಿತು ಕಟಾವಿಗೆ ಸಿಗುತ್ತವೆ. ಗಿಡದ ಮುಂಭಾಗದಿಂದ 12 ಎಲೆಗಳವರೆಗೆ ಎಲೆ ಕೊಯ್ಲು ಮಾಡುತ್ತಾರೆ. ಈ ಫಸಲು ಪಡೆಯಲು 5 ತಿಂಗಳು ಅಂದರೆ ನವೆಂಬರ್ ಮೊದಲ ವಾರದ ವರೆಗೆ ಫಸಲು ಸಿಗುತ್ತದೆ. ಕಿತ್ತ
ಎಲೆಗಳನ್ನು ಬೆಂಕಿಯ ಗೂಡಿನ ಕಟ್ಟಡದಲ್ಲಿ ಇಟ್ಟು ಬೇಯಿಸಿ ಒಣಗಿಸುತ್ತಾರೆ.
ಲಾಭ ಹೇಗೆ ?
3 ಎಕರೆ ವಿಸ್ತೀರ್ಣದಲ್ಲಿ ಒಟ್ಟು 24 ಸಾವಿರ ಸಸಿಗಳನ್ನು ಬೆಳೆಸಿದ್ದರು. ನವೆಂಬರ್ ನಲ್ಲಿ ಕಟಾವು ಪೂರ್ಣಗೊಂಡಿದೆ. ಈ ವರ್ಷ ಮಳೆ ಪ್ರಮಾಣ ಕಡಿಮೆಯಾದ ಕಾರಣ ಕಳೆದ ವರ್ಷಗಳಿಗಿಂತ ಇಳುವರಿ ಕಡಿಮೆ ದೊರೆತಿದೆ. ಉತ್ತಮ
ಮಳೆಯಾದ ವರ್ಷ ಈ ಹೊಲದಲ್ಲಿ ಸುಮಾರು 10 ಕ್ವಿಂಟಾಲ್ ತಂಬಾಕು ಫಸಲು ದೊರೆಯುತ್ತಿತ್ತು. ಈ ವರ್ಷ ಕೇವಲ 6 ಕ್ವಿಂಟಾಲ್ ಇಳುವರಿ ದೊರೆತಿದೆ. ಕ್ವಿಂಟಾಲ್ ಗೆ ರೂ.11 ಸಾವಿರ ದರದಂತೆ 66 ಸಾವಿರ ಆದಾಯ ದೊರೆತಿದೆ. ಕೃಷಿ ವೆಚ್ಚ, ಬೀಜ ಖರೀದಿ, ಗೊಬ್ಬರ, ಔಷಧ, ತಂಬಾಕು ಸಂಸ್ಕರಣೆ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ಇವರಿಗೆ ರೂ.30
ಸಾವಿರ ಖರ್ಚಾದರೂ 36 ಸಾವಿರ ಲಾಭ.
– ಎನ್.ಡಿ.ಹೆಗಡೆ ಆನಂದಪುರಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.