ಟಾಪ್ ಗೇರ್ : ಕಮಾನ್ ನಾರ್ಟಾನ್
Team Udayavani, Dec 11, 2017, 12:01 PM IST
ವಿಶೇಷ ವಿನ್ಯಾಸದಿಂದಲೇ ಹುಡುಗರ ಮಂಡೆಬಿಸಿ ಮಾಡುವ ನಾರ್ಟಾನ್ ಬೈಕ್‌ಗಳ ಭಾರತ ಪ್ರವೇಶ ಈಗಾಗಲೇ ಬೇರೂರಿರುವ ಪ್ರತಿಷ್ಠಿತ ಕಂಪನಿಗಳಿಗೆ ಸಣ್ಣದೊಂದು ಆತಂಕ ಸೃಷ್ಟಿಸಿದ್ದರೆ ಅಚ್ಚರಿಯಲ್ಲ. 2018ರಿಂದಲೇ ಕಿನೆಟಿಕ್ ನಾರ್ಟಾನ್ ಭಾರತದಲ್ಲಿ ರಸ್ತೆಗಳಿಗೆ ಇಳಿಯಲಿದೆ.
ಮೂರು ದಶಕಗಳ ಹಿಂದೆ ಭಾರತದಲ್ಲಿ ಬೆಸ್ಟ್ ಸೆಲ್ಲಿಂಗ್ ಸ್ಕೂಟರ್‌ಯಾವುದು ಎಂದು ಕೇಳಿದ್ದರೆ, ಅದಕ್ಕೆ ಉತ್ತರವಾಗಿ ಅಗ್ರ ಪಂಕ್ತಿಯಲ್ಲಿ “ಕಿನೆಟಿಕ್ ಹೋಂಡಾ’ ಇದ್ದೇ ಇರುತ್ತಿತ್ತು. ಅಷ್ಟು ಜನಪ್ರಿಯತೆಯನ್ನೂ ಕಂಡುಕೊಂಡಿದ್ದ ಸ್ಕೂಟರ್ ಅದಾಗಿತ್ತು. ಆದರೆ ಬದಲಾದ ಜಮಾನದಲ್ಲಿ ಬಹುತೇಕ ದ್ವಿಚಕ್ರ ವಾಹನಗಳ ವಿನ್ಯಾಸಗಳೇ ಬೇರೆಯಾದ ಕಾರಣ ಸಹಜವಾಗಿ “ಕಿನೆಟಿಕ್ ಹೋಂಡಾ’ ಗುಜರಿ ಸೇರುತ್ತಿದೆ. ಕಿನೆಟಿಕ್ ಎಂಜಿನಿಯರಿಂಗ್ ಲಿಮಿಟೆಡ್ ಹಾಗೂ ಹೋಂಡಾ ಮೊಟಾರ್ ಜಂಟಿಯಾಗಿ ಪರಿಚಯಿಸಿದ್ದ ಲಘು ಭಾರದ “ಕಿನೆಟಿಕ್ ಹೋಂಡಾ’ಗಳು, ಇಂದೂ ಅಲ್ಲಿಲ್ಲೊಂದು ಕಾಣಸಿಗುವುದುಂಟು.
ಆಟೋಮೊಬೈಲ್ ಕ್ಷೇತ್ರದ ಪ್ರಮುಖ ಕಂಪನಿಗಳಲ್ಲಿ ಒಂದು ಎನಿಸಿಕೊಂಡಿರುವ ಕಿನೆಟೆಕ್‌ನ ಲಕ್ಸುರಿ ಬೈಕ್‌ಗಳ ತಯಾರಕ ಕಂಪೆನಿಯಿಂದ ಮೋಟೊರಾಯಲ್ ಇದೀಗ ಬ್ರಿಟಿಷ್ ಆಟೋ ತಯಾರಕ ನಾರ್ಟಾನ್ ಜತೆ ಕೈಜೋಡಿಸಿದ್ದು, ಶೀಘ್ರದಲ್ಲಿಯೇ ಭಾರತದ ಮಾರುಕಟ್ಟೆಗೆ ಲಕ್ಸುರಿ ಬೈಕ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ ಜಾಯಿಂಟ್ ವೆಂಚರ್‌ಗೂ ಚಾಲನೆ ನೀಡಲಾಗಿದ್ದು, ನಾರ್ಟಾನ್ ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಈಗಾಗಲೇ ಬ್ರಿಟಿಷ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿರುವ ನಾರ್ಟಾನ್ ಬೈಕ್‌ಗಳು ಇನ್ನು ಮುಂದೆ ಭಾರತದ ನೆಲದಲ್ಲಿಯೇ ತಯಾರಾಗಿ ರಸ್ತೆಗಿಳಿಯಲಿವೆ. ವಿ4 ಆರ್‌ಆರ್, ಡಾಮಿನೇಟರ್ ಹಾಗೂ ಕಮಾಂಡೋ ಸರಣಿಯ ಬೈಕ್‌ಗಳು ಬ್ರಿಟಿಷ್ ರಸ್ತೆಗಳಲ್ಲಿ ಪಾಪ್ಯುಲಾರಿಟಿ ಪಡೆದುಕೊಂಡಿರುವಂತೆ ಭಾರತದಲ್ಲಿಯೂ ತನ್ನದೇ ಬ್ರಾಂಡ್ ಕ್ರಿಯೇಟ್ ಮಾಡಿಕೊಳ್ಳುವ ಬಹು ನಿರೀಕ್ಷೆಯಲ್ಲಿದೆ. ತನ್ನ ಬ್ರಾಂಡ್‌ಗಳ ಪೈಕಿ ವಿಶ್ವಮನ್ನಣೆಗಳಿಸಿರುವ ಬೈಕ್‌ಗಳನ್ನೇ ಭಾರತದಲ್ಲಿ ಪರಿಚಯಿಸುವ ಉದ್ದೇಶ ನಾರ್ಟಾನ್ ಕಂಪನಿಯದ್ದಾಗಿದೆ.
ಕಿನೆಟಿಕ್ ನಾರ್ಟಾನ್ ಒಪ್ಪಂದ
ಮೊನ್ನೆ ಮೊನ್ನೆಯಷ್ಟೇ “ಕಿನೆಟಿಕ್ ನಾರ್ಟಾನ್’ ಬ್ರಾಂಡ್ ನಿರ್ಮಾಣಕ್ಕೆ ಕಿನೆಟಿಕ್ ಎಂಜಿನಿಯರಿಂಗ್ ವ್ಯವಸ್ಥಾಪಕ ನಿರ್ದೇಶಕ ಅಜಿಂಕ್ಯಾ ಫಿರೋಡಿಯಾ ಹಾಗೂ ನಾರ್ಟಾನ್ ಮೋಟಾರ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟುವರ್ಟ್ ಗಾರ್ನೇರ್ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಒಪ್ಪಂದದ ಪ್ರಕಾರ 51% ಕಿನೆಟಿಕ್, 49% ನಾರ್ಟಾನ್ ಪಾಲುದಾರಿಕೆಯನ್ನು ಹೊಂದಿದೆ.
ಲಾಗಿನ್ ಟು ಇಂಡಿಯಾ
ಭಾರತದಲ್ಲಿಯೇ ಉತ್ಪಾದನೆಗೆ ವೇದಿಕೆ ಸೃಷ್ಟಿಸಿಕೊಂಡು ಆಗಮಿಸುತ್ತಿರುವ ಕಿನೆಟಿಕ್ ನಾರ್ಟಾನ್ ಆರಂಭದಲ್ಲಿ ತನ್ನ ಟಾಪ್ ಬ್ರಾಂಡ್ ಬೈಕ್‌ಗಳಾದ ಕಮಾಂಡೋ ಸರಣಿಯ ಬೈಕ್‌ಗಳನ್ನು ಹಾಗೂ ವಿನೂತನ ವಿನ್ಯಾಸದ ಡಾಮಿನೇಟರ್ ಅನ್ನು ಪರಿಚಯಿಸಲಿದೆ. ವಿಶೇಷ ವಿನ್ಯಾಸದಿಂದಲೇ ಹುಡುಗರ ಮಂಡೆಬಿಸಿ ಮಾಡುವ ನಾರ್ಟಾನ್ ಬೈಕ್‌ಗಳ ಭಾರತ ಪ್ರವೇಶ ಈಗಾಗಲೇ ಬೇರೂರಿರುವ ಪ್ರತಿಷ್ಠಿತ ಕಂಪನಿಗಳಿಗೆ ಸಣ್ಣದೊಂದು ಆತಂಕ ಸೃಷ್ಟಿಸಿದ್ದರೆ ಅಚ್ಚರಿಯಲ್ಲ. 2018ರಿಂದಲೇ ಕಿನೆಟಿಕ್ ನಾರ್ಟಾನ್ ಭಾರತದಲ್ಲಿ ರಸ್ತೆಗಳಿಗೆ ಇಳಿಯಲಿದೆ.
ಸೂಪರ್ ಡೂಪರ್ ಬೈಕ್‌ಗಳಿವು
ಹೌದು, ನಾರ್ಟಾನ್ ಕಮಾಂಡೋ ಹಾಗೂ ಡಾಮಿನೇಟರ್, ಈ ಎರಡೂ ಬೈಕ್‌ಗಳು ಕ್ರೇಜಿಗಳ ಮನಗೆಲ್ಲುವ ಸ್ಟಾರ್ ಬೈಕ್‌ಗಳು. ಆ ಕಾಲದಲ್ಲೇ 850ಸಿಸಿಯೊಂದಿಗೆ ರಸ್ತೆಗಿಳಿದಿದ್ದ ಕಮಾಂಡೋ ಉತ್ಪಾದನೆ, ಆರಂಭವಾಗಿ 10 ವರ್ಷದಲ್ಲೇ ವಿಶ್ವ ಖ್ಯಾತಿ ಪಡೆದುಕೊಂಡಿತ್ತು. ಈಗ ಹೊಸ ವಿನ್ಯಾಸ, 961ಸಿಸಿ ಟ್ವಿನ್ ಎಂಜಿನ್ 79ಬಿಎಚ್‌ಪಿ ಹಾಗೂ 90ಎನ್‌ಎಂ ಟಾರ್ಕ್ ಸಾಮರ್ಥ್ಯದೊಂದಿಗೆ ಕಮಾಂಡೋ ನ್ಪೋರ್ಟ್ಸ್ ಹಾಗೂ ಕೆಫೆ ರೇಸರ್ ಬರಲಿದೆ. ಡಾಮಿನೇಟರ್ ಕೂಡ ಇದೇ ಸಾಮರ್ಥ್ಯದೊಂದಿಗೆ ವಿಭಿನ್ನ ವಿನ್ಯಾಸದಲ್ಲಿ ಸ್ಪರ್ಧೆಗಿಳಿಯಲಿದೆ.
1,200 2,000
ಬೈಕ್‌ಗಳನ್ನು ಒಂದು ವರ್ಷ ಅವಧಿಯಲ್ಲಿ ಉತ್ಪಾದಿಸುವುದೇ ಮೊದಲ ಟಾರ್ಗೆಟ್
4,000 5,000
ಬೈಕ್‌ಗಳನ್ನು ಮುಂದಿನ ಮೂರು ವರ್ಷದ ಬಳಿಕ ಪ್ರತಿವರ್ಷ ಉತ್ಪಾದಿಸುವ ಗುರಿ
18 19 ಲಕ್ಷ ರೂ.
ಲಕ್ಸುರಿ ವಿನ್ಯಾಸದಲ್ಲಿ ಭಾರತಕ್ಕೆ ಬರಲಿರುವ ನಾರ್ಟಾನ್ ಬೈಕ್‌ಗಳ ಅಂದಾಜು ಬೆಲೆ
ಅಗ್ನಿಹೋತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.