![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 13, 2018, 6:00 AM IST
ಎರಡು ಸಂಸ್ಥೆಗಳ ಬ್ರಾಂಡ್ ನೇಮ್‌ನಲ್ಲಿ ಬೈಕ್, ಕಾರುಗಳನ್ನು ಪರಿಚಯಿಸಿದ ಉದಾಹರಣೆಗಳು ಒಂದಲ್ಲ, ಎರಡಲ್ಲ, ನೂರಾರು ಸಿಗುತ್ತವೆ. ಹಾಗೇ, ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೂ ಇಂಥ ಒಪ್ಪಂದ ಹೊಸದೇನಲ್ಲ.
ಆದರೆ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದು ಟೊಯೋಟ ಮತ್ತು ಸುಜುಕಿ (ಮಾರುತಿ ಪಾಲುದಾರಿಕೆ ಸಂಸ್ಥೆ) ಸಂಸ್ಥೆಗಳ ನಡುವೆ ನಡೆದ ಒಪ್ಪಂದ.
ಭಾರತದ ಆಟೋಮೊಬೈಲ್ ಮಾರುಕಟ್ಟೆಯ ಬಹುಪಾಲನ್ನು ಆವರಿಸಿಕೊಂಡಿರುವ ಈ ಎರಡು ಸಂಸ್ಥೆಗಳು ಈಗ ಕೈಜೋಡಿಸಿ, ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿರುವುದು ಸಂಚಲನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಈ ಎರಡೂ ಸಂಸ್ಥೆಗಳ ಗ್ರಾಹಕರು ಹಾಗೂ ಹೊಸದಾಗಿ ಕಾರು ಕೊಳ್ಳಬೇಕೆಂದಿರುವವರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿವೆ.
ಯಾಕಾಗಿ ನಡೆದಿದೆ ಒಪ್ಪಂದ?
ಟೊಯೋಟ ಅಥವಾ ಸುಜುಕಿ ಕಂಪನಿಗೆ ಈ ಒಪ್ಪಂದದಿಂದ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಸಾಧ್ಯವಾಗಿಬಿಡುತ್ತದೆ ಎಂದೇನೂ ಇಲ್ಲ. ಕಾರಣ, ಎರಡೂ ಕಂಪನಿಗಳೂ ತನ್ನದೇ ಬ್ರಾಂಡ್ ಮೌಲ್ಯ ಹೊಂದಿವೆ. ಈ ನಡುವೆಯೂ ಉದ್ಯಮದಲ್ಲಿ ಸ್ಥಿರ ಏಳ್ಗೆ ಕಾಯ್ದುಕೊಳ್ಳುವ ಕಾರಣಕ್ಕಾಗಿ ಈ ಒಪ್ಪಂದ ಮಾಡಿಕೊಂಡಿವೆ ಎನ್ನಲೇನಡ್ಡಿಯಿಲ್ಲ.
ಒಪ್ಪಂದದ ಪ್ರಕಾರ, ಸುಜುಕಿ ಸಂಸ್ಥೆ ಜನಪ್ರಿಯ ಮಾಡೆಲ್ ಆಗಿರುವ ಬಲೆನೋ ಮತ್ತು ವಿತಾರಾ ಬ್ರಿàಝಾವನ್ನು ಮಾರಾಟ ಮಾಡುವ ಮತ್ತು ಅದರದೇ ಪ್ಲಾಂಟ್‌ನಲ್ಲಿ ತಯಾರಿಸುವ ಹಕ್ಕು ಹಂಚಿಕೊಂಡಿದ್ದರೆ, ಟೊಯೋಟ ತನ್ನ ಹೈಬ್ರಿàಡ್ ಸೆಡಾನ್ ಕೊರೊಲಾವನ್ನು ತಯಾರಿಸುವ ಹಾಗೂ ಮಾರಾಟ ಮಾಡುವ ಹಕ್ಕು ಹಂಚಿಕೊಂಡಿದೆ. ಅದರರ್ಥ, ಈ ಕಾರುಗಳು ಇನ್ನು ಮುಂದೆ ಎರಡೂ ಸಂಸ್ಥೆಗಳ ಶೋ ರೂಂನಲ್ಲಿ ಲಭ್ಯವಾಗಲಿವೆ. ಒಂದು ಹಂತದಲ್ಲಿ ಈ ಮೂರು ಕಾರುಗಳ ಬೆಲೆಯಲ್ಲೂ ಸಣ್ಣ ಪ್ರಮಾಣದ ವ್ಯತ್ಯಾಸವಾಗುವ ಎಲ್ಲಾ ಸಾಧ್ಯತೆಗಳಿವೆ.
ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿರುವ ಸೆಗೆ¾ಂಟ್ ಕಾರುಗಳನ್ನೇ ಗುರಿಯಾಗಿಸಿಕೊಂಡು, ಕಾರುಗಳ ತಯಾರಿಕೆ ಹಾಗೂ ಮಾರುಕಟ್ಟೆಗೆ ಅನುಕೂಲವಾಗುವಂತೆ ಈ ಒಪ್ಪಂದ ಏರ್ಪಟ್ಟಿದೆ.
ಕ್ರಾಸ್ ಬ್ಯಾಡ್ಜ್ ನ್ಯೂ ಬ್ರಾಂಡ್
ಇನ್ನು, ಮುಂದೆ ಈ ಮೂರು ಕಾರುಗಳ ಮೇಲೆ ಎರಡೂ ಸಂಸ್ಥೆಗಳ ಹೆಸರುಗಳು ಇರಲಿವೆ. ಸುಜುಕಿ ಮತ್ತು ಟೊಯೋಟ ಲೋಗೋ ಒಟ್ಟೊಟ್ಟಿಗೇ ಇರಲಿವೆ. ಈ ಒಪ್ಪಂದದಿಂದ ಟೊಯೋಟ ಸಂಸ್ಥೆಗೆ ಬಲೆನೋ ಮತ್ತು ಬ್ರಿàಝಾ ಕಾರುಗಳ ಬ್ರಾಂಡ್ ಜನಪ್ರಿಯತೆ ಹೆಚ್ಚುವ ಹಾಗೂ ಅದೇ ಕಾರಣದಿಂದ ಆ ಕಾರುಗಳ ಮಾರಾಟ ಕೂಡ ಏರುಗತಿಯಲ್ಲಿ ಸಾಗುವ ಸಾಧ್ಯತೆಗಳಿವೆ. ಹಾಗೇ ಸುಜುಕಿ ಕೂಡ ಒಂದು ಉತ್ತಮ ಸೆಡಾನ್ ಕಾರಿನ ಮೂಲಕ ಮಾರುಕಟ್ಟೆಯಲ್ಲಿ ಇನ್ನಷ್ಟು ಗಟ್ಟಿಯಾಗಿ ನಿಲ್ಲುವ ನಿರೀಕ್ಷೆಯಲ್ಲಿದೆ. ಒಂದಂತೂ ಖರೆ, ಈ ಒಪ್ಪಂದದಿಂದ ಈ ಮೂರು ಕಾರುಗಳಲ್ಲಿ ಒಂದಿಷ್ಟು ಬದಲಾವಣೆ ನಿರೀಕ್ಷಿಸಬಹುದಾಗಿದೆ.
ಕರ್ನಾಟಕದ ಪಾಲಿಗೆ ಬಲೆನೋ ಗರಿ
ಮಾರುತಿ ಸುಜುಕಿ ಅವರ ಜನಪ್ರಿಯ ಕಾರು ಬಲೆನೋ ತಯಾರಿಕೆಗೆ ಕರ್ನಾಟಕ ವೇದಿಕೆಯಾಗಲಿದೆ. ಹೌದು, ಟೊಯೋಟ ಕಂಪನಿಯು ಬಲೆನೋ ತಯಾರಿಕೆಗೆ ಬಿಡದಿಯಲ್ಲಿರುವ ಪ್ಲಾಂಟ್‌ನಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಒಪ್ಪಂದ ಮೊದಲೇನಲ್ಲ
ಎರಡು ಪ್ರತಿಷ್ಠಿತ ಸಂಸ್ಥೆಗಳ ನಡುವಿನ ಒಪ್ಪಂದ ಇದೇ ಮೊದಲೇನಲ್ಲ. ಕೆಲವೇ ತಿಂಗಳುಗಳ ಹಿಂದಷ್ಟೇ, ಎಲೆಕ್ಟ್ರಿಕ್ ಕಾರುಗಳ ತಯಾರಿಕೆಗಾಗಿ ಟೊಯೋಟ ಮತ್ತು ಸುಜುಕಿ ಒಪ್ಪಂದ ಮಾಡಿಕೊಂಡಿದ್ದವು. ಅದಾದ ಬಳಿಕ ಮಹತ್ವದ ಮತ್ತೂಂದು ಒಪ್ಪಂದಕ್ಕೆ ಎರಡೂ ಸಂಸ್ಥೆಗಳ ನಡುವೆ ಒಪ್ಪಂದ ನೆರವೇರಿದೆ. ಒಂದು ಮೂಲದ ಪ್ರಕಾರ, ಟೊಯೋಟ ಸಹಕಾರದೊಂದಿಗೆ ಮಾರುತಿ ಸುಜುಕಿ ಅವರ ಎಲೆಕ್ಟ್ರಿಕ್ ಕಾರು 2021ರ ಒಳಗಾಗಿ ಮಾರುಕಟ್ಟೆ ಪ್ರವೇಶಿಸಲಿವೆ.
30,000: ಪ್ರತಿ ತಿಂಗಳಲ್ಲಿ ಬಲೆನೋ ಮತ್ತು ಬ್ರಿàಝಾ ಕಾರುಗಳ ಸರಾಸರಿ ಮಾರಾಟ
2,80,000: 11 ತಿಂಗಳಲ್ಲಿ ಮಾರಾಟವಾದ ಬಲೆನೋ ಮತ್ತು ಬ್ರಿಝಾ
– ಗಣಪತಿ ಅಗ್ನಿಹೋತ್ರಿ
You seem to have an Ad Blocker on.
To continue reading, please turn it off or whitelist Udayavani.