ಟ್ರ್ಯಾಕ್ಟರ್ ಸರ್ಜನ್ “ಧರ್ಮರೆಡ್ಡಿ
Team Udayavani, Dec 31, 2018, 12:30 AM IST
ಉಳುಮೆ, ಸರಕು ಸಾಗಾಟಕ್ಕೆ ಬಳಸುವ ಟ್ರ್ಯಾಕ್ಟರ್‌ನ ಬಹು ಬಳಕೆಯ ಸಾಧ್ಯತೆ ಹುಡುಕಿದಾಗ ಕೃಷಿಕರ ಹಣ ಉಳಿತಾಯ ಸಾಧ್ಯವಿದೆ. ಉಳುಮೆ, ಬಿತ್ತನೆ, ಕಳೆ ತೆಗೆಯುವುದು, ಮಣ್ಣೇರಿಸುವುದು ಮುಂತಾದ ಕೆಲಸಕ್ಕೆ ನೆರವಾಗುವ ಟ್ರ್ಯಾಕ್ಟರ್‌ಅನ್ನು ಸಿಂಪರಣೆಯ ಕೆಲಸಕ್ಕೂ ಒಗ್ಗಿಸಿಕೊಂಡರೂ ಒಗಸಿದವರು ಧರ್ಮರೆಡ್ಡಿ ಕೃಷ್ಣ ರೆಡ್ಡಿ ಲಕ್ಕಣ್ಣನವರ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತ ಯಂತ್ರ ಸುಧಾರಣೆಯ ಮೂಲಕ ಪರಿಹಾರ ಹುಡುಕಿದ ಸಾಧಕರಿವರು. ಧಾರವಾಡ ಜಿಲ್ಲೆಯ ನವಲಗುಂದದ ಅರೆಕುರುಹಟ್ಟಿಯ ಈ ಜವಾರಿ ತಂತ್ರಜ್ಞರು “ಮೇಕ್ ಇನ್ ಇಂಡಿಯಾ’ಕ್ಕೊಂದು ಉತ್ತಮ ಮಾದರಿ.
ಕೃಷಿ ಮಾಡುವುದು ಸುಲಭವಲ್ಲ. ಉಳುಮೆಯಿಂದ ಹಿಡಿದು ಬೆಳೆಕೊಯ್ಲಿನವರೆಗೂ ಕಾಯಕದಲ್ಲಿ ಹಲವರ ಪರಿಶ್ರಮದ ಅವಶ್ಯಕತೆ ಇದೆ. ಸಮಯಕ್ಕೆ ಸರಿಯಾಗಿ ಕೆಲಸಗಾರರು ಬೇಕು, ಒಂದು ಸಮಾಧಾನವೆಂದರೆ, ಈಗ ಕೆಲವೆಡೆ, ಟ್ರ್ಯಾಕ್ಟರ್‌ಗಳು ರೈತನ ಮಿತ್ರನಾಗಿ ಹೊಲದಲ್ಲಿವೆ. ಬೀಜ ಬಿತ್ತುವುದು, ಸಿಂಪರಣೆ, ಕಳೆ ನಿಯಂತ್ರಣಕ್ಕೆ ಕಾರ್ಮಿಕರೇ ಬೇಕು. ಸರಿಯಾದ ಸಮಯಕ್ಕೆ ಕೆಲಸ ನಡೆಯದಿದ್ದರೆ ಖಂಡಿತ ನಷ್ಟವಾಗುತ್ತದೆ. ಹಿಂಗಾರಿ/ ಮುಂಗಾರಿಯಲ್ಲಿ ಒಮ್ಮೆಗೇ ಎಲ್ಲರ ಕೆಲಸ ಶುರುವಾಗಿ ಎಷ್ಟೋ ರೈತರು ಕೂಲಿ ಸಮಸ್ಯೆಯಿಂದ ಸೂಕ್ತ ಸಮಯಕ್ಕೆ ಬಿತ್ತನೆ ಮಾಡಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ಇದೆ. ಇದಕ್ಕೊಂದು ಪರಿಹಾರ ಹುಡುಕಿದವರು ಧಾರವಾಡ ಜಿಲ್ಲೆಯ ನವಲಗುಂದದ ಅರೆಕುರುಹಟ್ಟಿಯ ಜವಾರಿ ತಂತ್ರಜ್ಞ ಧರ್ಮರೆಡ್ಡಿ ಕೃಷ್ಣರೆಡ್ಡಿ ಲಕ್ಕಣ್ಣನವರ್.
ಕ್ರಿ.ಶ. 1979 ರಲ್ಲಿ ಹುಬ್ಬಳ್ಳಿಯ ಐಟಿಐನಲ್ಲಿ ಮೋಟಾರ್ ಮೆಕ್ಯಾನಿಕ್ ತರಬೇತಿ ಪಡೆದ ಧರ್ಮರೆಡ್ಡಿಯವರು, ಕೆಲ ಸಮಯ ಆರ್.ಎನ್. ಶೆಟ್ಟಿಯವರ ಗ್ಯಾರೇಜ್‌ನಲ್ಲಿ ಹಾಗೂ ಬೈಲಹೊಂಗಲದ ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ನೌಕರಿ ಮಾಡಿದವರು. ಸದಾ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಅಭಿಲಾಷೆಯುಳ್ಳ ಧರ್ಮರೆಡ್ಡಿಯವರಿಗೆ ಯಾವ ಕೆಲಸವೂ ಸಮಾಧಾನ ತರಲಿಲ್ಲ. ಊರಿಗೆ ಮರಳಿದ ನಂತರ 1988ರಲ್ಲಿ “ಶ್ರೀನಿವಾಸ ಜನರಲ್ ಎಂಜನಿಯರಿಂಗ್ ವರ್ಕ್ಸ್’ಅನ್ನು ಆರಂಭಿಸಿದರು. ಇವರ ಗರಡಿಯಲ್ಲಿ ಪಳಗಿದ ಯುವಕರೂ ಹಲವರು. ಟ್ರಾಕ್ಟರ್‌ಗಳಿಗೆ ಜೋಡಿಸುವ ಕೂರಿಗೆಗೆ ಬೇರೆ ಬೇರೆಗಾತ್ರದ ಬೇರೆ ಬೇರೆ ಬೆಳೆಗಳಿಗೆ ತಕ್ಕಂತೆ ಕಬ್ಬಿಣದ ಪ್ಲೇಟ್‌ಗಳನ್ನು ಜೋಡಿಸುವುದರಲ್ಲಿ ಧರ್ಮರೆಡಿª ನಿಸ್ಸೀಮರು. ಇದರಿಂದಾಗಿ ಪರಿಣಾಮಕಾರಿ ಬಿತ್ತನೆ ಸಾಧ್ಯವಾಗಿದೆ. ಇವರು ವಿನ್ಯಾಸಗೊಳಿಸಿ ಸ್ವತಃ ತಯಾರಿಸುವ ಈ ಪ್ಲೇಟ್‌ಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ.
2014ರ ಒಂದು ಮುಂಗಾರು. ಬೆಳೆದು ನಿಂತ ಬೆಳೆಗಳಿಗೆ ಔಷಧ ಸಿಂಪಡಣೆ ಮಾಡುವವರಿಲ್ಲದೆ ತಿರ್ಲಾಪುರದ ವಿನಾಯಕ ಶಲವಡಿ ಒಂದು ಯಂತ್ರ ಮಾಡಿಕೊಡುವಂತೆ ಬೆನ್ನು ಹಿಡಿದಿದ್ದರು. ಯಾವ ರೀತಿಯಲ್ಲಿ ಸ್ಪ್ರೆಯರ್‌ಅನ್ನು ಅಳವಡಿಸಿದರೂ ಅದು ಸರಿಹೋಗುತ್ತಿರಲಿಲ್ಲ. ಅಷ್ಟೇ ಅಲ್ಲ, ಎರಡು ಸಾಲಿನ ಸಸಿಗಳ ಮಧ್ಯೆ ಟ್ರಾಕ್ಟರ್ ಹೋಗಬೇಕಿತ್ತು. ಅದರ ದೊಡ್ಡ ಗಾಲಿಗಳು ತುಂಬಾ ಅಗಲ. ಅದನ್ನು ಮೊದಲು ಎಂಟು ಇಂಚಿಗೆ ಇಳಿಸಿದರು. ಎಡೆಕುಂಟೆಯನ್ನೇ ಸ್ಪ್ರೆàಯರ್ ಥರ ಬಳಸುವಂತೆ ಮಾರ್ಪಡಿಸಲು ಯೋಜನೆ ರೂಪಿಸಿದರು. ಅದಕ್ಕಾಗಿ ನಾಲ್ಕು ದಿನಗಳ ಕಾಲ ಬದಲಿ ಪ್ರಯೋಗ ಮಾಡುತ್ತಲೇ ಇದ್ದರು. ಅದು ಸಿದ್ಧವಾಗುವವರೆಗೂ ಅವರಿಗೆ ನಿದ್ದೆಯೇ ಬರಲಿಲ್ಲವಂತೆ. ನಾಲ್ಕನೆ ದಿನ ನಾಯಕ ನೆನಪು ಮಾಡಲು ಮತ್ತೆ ಬಂದರೆ ಯಂತ್ರವು ರೆಡಿಯಾಗಿ ಸ್ವಾಗತ ಮಾಡುತ್ತಿತ್ತು! ಹೀಗೆ, ಯಂತ್ರ ತಯಾರಿಯ ಪರಿಶ್ರಮದಲ್ಲಿ ಸತತ 96 ತಾಸುಗಳ ಕಾಲ ಧರ್ಮರೆಡ್ಡಿ ನಿದ್ದೆಯನ್ನೇ ಮಾಡಿರಲಿಲ್ಲ.
ಈಗ ಸಿಂಪರಣೆ ಯಂತ್ರಕ್ಕೆ ಕಳೆ ತೆಗೆಯುವ ಯಂತ್ರವನ್ನೂ ಸಹಾ ಜೋಡಿಸಿದ್ದಾರೆ. “ಅದೀಗ ಒಂದು ದಿವಸಕ್ಕೆ 25 ಜನರ ಕೆಲಸವನ್ನು ಮಾಡುತ್ತದೆ. ಅತ್ಯಂತ ಸುಲಭವಾಗಿ ಕಳೆನಾಶಕದಿಂದ ದೂರ ಕುಳಿತು ದಿನವೊಂದಕ್ಕೆ ಒಬ್ಬ ವ್ಯಕ್ತಿ ನಾಲ್ಕು ಎಕರೆ ಸ್ಪ್ರೆà ಮಾಡಬಹುದು. ಜೊತೆಗೆ ಕಳೆಯನ್ನೂ ಒಟ್ಟೊಟ್ಟಿಗೆ ತೆಗೆಯಬಹುದು’ ಎನ್ನುತ್ತಾರೆ. ಮೊದಲು ಸಿಂಪರಣಾ ಯಂತ್ರ ಕೇವಲ 18 ಇಂಚು ಎತ್ತರಕ್ಕೆ ಸೀಮಿತವಿತ್ತು. ಅದು ಹತ್ತಿಗೆ ಮತ್ತು ಮೆಕ್ಕೆಜೋಳಕ್ಕೆ ಉಪಯುಕ್ತವಾಗುತ್ತಿರಲಿಲ್ಲ. ಈಗ ನಾಲ್ಕು ಅಡಿಗಳಿಗೆ ಏರಿಸಿದ್ದಾರೆ. ಬೇಕಾದಂತೆ ಮಡಿಚಲು ಬರುವ ಕಾರಣ ಸುಮಾರು 22 ಅಡಿಗಳಷ್ಟು ಎತ್ತರದವರೆಗೆ ಸಿಂಪಡಿಸಲು ಸಾಧ್ಯ. ಇದರಿಂದ ಮಾವಿನ ಗಿಡಗಳಿಗೂ ಸಿಂಪಡಿಸಬಹುದು ವಿವಿಧ ಬೆಳೆಗಳಿಗೆ ತಕ್ಕಂತೆ ಸಿಂಪರಣೆಗೆ ಸಜಾjಗುವ ಯಂತ್ರ ಕಳೆಯನ್ನೂ ತೆಗೆಯಬಲ್ಲದು.
40 ಎಕರೆ ಬೇಸಾಯವನ್ನು ಒಬ್ಬನೇ ಮಾಡಬಲ್ಲ ಅನುಕೂಲ ಕೃಷಿಕರಿಗೆ ಇದರಿಂದ ಸಾಧ್ಯವಾಗಿದೆ. ಹಲವು ಜಿಲ್ಲೆಗಳಿಗೆ ಇವರ ಯಂತ್ರಗಳು ಪೂರೈಕೆಯಾಗಿವೆ. ಇಂಥ ಯಂತ್ರ ಮಾದರಿಗಳು ವಿದೇಶಿ ಕಂಪನಿಗಳು ಈಗಾಗಲೇ ಮಾರುಕಟ್ಟೆಗೆ ತಂದಿದ್ದು ಅವುಗಳ ಬೆಲೆ ನಮ್ಮ ರಾಜ್ಯದ ರೈತರ ಕೈಗೆಟುಕುವ ದರದಲ್ಲಿಲ್ಲ. ಹುಟ್ಟಿದ ಹಳ್ಳಿಯ ರಸ್ತೆಯಂಚಿನಲ್ಲಿ ತಮ್ಮದೇ ಇಂಜಿನಿಯರಿಂಗ್ ಘಟಕ ಸ್ಥಾಪಿಸಿಕೊಂಡು ಕೈಗೆಟಕುವ ಬೆಲೆಯಲ್ಲಿ ಅತ್ಯುತ್ತಮ ಯಂತ್ರ ರೂಪಿಸುವ ಧರ್ಮರೆಡ್ಡಿ ಸದಾ ಕೃಷಿಕರ ಸಮಸ್ಯೆ ಅರ್ಥಮಾಡಿಕೊಳ್ಳುತ್ತ “ಮೇಕ್ ಇನ್ ಇಂಡಿಯಾ’ ಮೂಲಕ ಪರಿಹಾರ ಹುಡುಕಿದರು. ಧರ್ಮರೆಡ್ಡಿಯವರ ವಿಶೇಷ ಸಾಧನೆ ಗುರುತಿಸಿದ ಸುಕೋ ಬ್ಯಾಂಕ್‌ನ ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿ ಜನವರಿ ಐದರಂದು ಬಳ್ಳಾರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯ ಮಟ್ಟದ ಸುಕೃತ ತಂತ್ರಜ್ಞಾನ ಪ್ರದಾನ ಮಾಡಲಿದೆ.
ಪೂರ್ಣಪ್ರಜ್ಞ ಬೇಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.