ಭಾಷೆ ಬಲ್ಲವನೇ ಬಾಸ್!
ಉದ್ಯಮದ ಸ್ವರೂಪ ಪಡೆದ ಅನುವಾದ ಕ್ಷೇತ್ರ
Team Udayavani, Sep 14, 2020, 7:44 PM IST
ಸಾಂದರ್ಭಿಕ ಚಿತ್ರ
ವಾಣಿಜ್ಯೀಕರಣ, ಜಗತ್ತಿನ ಬೆಳವಣಿಗೆಗೆ ಬೇಕಾದ ಅಗತ್ಯವಾದ ಮೆಟ್ಟಿಲು. ಸಂವಹನ. ಮಾತುಕತೆ, ಪ್ರಚಾರ ಮತ್ತು ಚರ್ಚೆಯ ಮೂಲಕ ಇದು ಸಾಮಾನ್ಯ ಮನುಷ್ಯನನ್ನು ತಲುಪಲು ಸಾಧ್ಯ. ಹೀಗೆ ಆಗಬೇಕೆಂದರೆ, ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಅದನ್ನು ಹೇಳಬೇಕಾಗುತ್ತದೆ. ನಗರ ಪ್ರದೇಶದ ಜನರಿಗೆ ಎಲ್ಲ ಅನುಕೂಲಗಳೂ ಕೈಗೆಟುಕುವ ರೀತಿಯಲ್ಲಿವೆ. ಈಗೀಗ, ಗ್ರಾಮೀಣ ಪ್ರದೇಶಗಳ ಜನರೂ ಜಾಗತೀಕರಣದ ವೇಗಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಎಲ್ಲದ್ದಕ್ಕೂ ಸೇತುವೆಯಾಗಿರುವುದು ಎಲೆಕ್ಟ್ರಾನಿಕ್
ಮಾಧ್ಯಮಗಳು, ವೆಬ್‌ಸೈಟ್‌ಗಳು , ತುದಿ ಬೆರಳಲ್ಲೇ ಎಲ್ಲವನ್ನೂ ಪಡೆಯಲು ಅವಕಾಶ ನೀಡುತ್ತಿರುವ ಆ್ಯಪ್‌ಗ್ಳು. ಎಲ್ಲಾ ಸ್ತರದ ಜನರನ್ನು ತಲುಪುವ ಉದ್ದೇಶದಿಂದ ಆಯಾ ಭಾಷೆಗಳಲ್ಲಿಯೇ ಮಾಹಿತಿ ನೀಡುವ ಕೆಲಸ ಇದೀಗ ಆರಂಭವಾಗಿದೆ. ಪರಿಣಾಮ, ಇಂಗ್ಲಿಷ್‌ನಿಂದ ಇತರೆ ಭಾಷೆಗಳಿಗೆ ಅನುವಾದ ಮಾಡುವವರಿಗೆ ಬೇಡಿಕೆ ಹೆಚ್ಚುತ್ತಿದೆ..
ಉದ್ಯಮದ ಸ್ವರೂಪ : ಸ್ಥಳೀಯ ಭಾಷೆಯಲ್ಲಿ ಮಾಹಿತಿ ನೀಡಿದರೆ ಹೆಚ್ಚು ಜನರನ್ನು ಸೆಳೆಯಬಹುದು ಎಂದು ಗೊತ್ತಾಗುತ್ತಿದ್ದಂತೆ, ಪ್ರಾದೇಶಿಕ ಭಾಷೆಯಲ್ಲಿಯೇ ಎಲ್ಲಾ ಮಾಹಿತಿ ಒದಗಿಸಲು ಕಂಪನಿಗಳು ಮುಂದಾಗಿವೆ. ತತ#ಲವಾಗಿ, ಈಗ ಸ್ಥಳೀಯ ಭಾಷೆಗಳಲ್ಲಿ ಅನುವಾದದ ಸೇವೆ ಒದಗಿಸುವ ಕಂಪನಿಗಳು ಸದ್ದಿಲ್ಲದೆ ಬೆಳೆಯುತ್ತಿವೆ. ವಿವಿಧ ಭಾಷೆಗಳಲ್ಲಿನ ವೆಬ್ ಸೈಟ್‌ಗಳ ಬೇಡಿಕೆಗೆ ತಕ್ಕಂತೆ ಮಾಹಿತಿಗಳನ್ನು ಅನುವಾದಿಸಿ ಕೊಡುವ ಕೆಲಸ ಈಗ ದೊಡ್ಡ ಉದ್ಯಮವಾಗಿಬಿಟ್ಟಿದೆ.
ಮೊಬೈಲ್ ಪಾವತಿಗಳು, ಆನ್‌ಲೈ ನ್ ಮಾರುಕಟ್ಟೆ, ವಿವಿಧ ಬ್ಯಾಂಕ್‌ಗಳ ಆ್ಯಪ್ ಗಳು, ಟ್ರಾವೆಲ್ ಆ್ಯಪ್‌ಗಳು ಹೀಗೆ ಹಲವಾರು ಕ್ಷೇತ್ರದ ಉದ್ಯಮಗಳು, ಸ್ಥಳೀಯ ಭಾಷೆಯಲ್ಲಿ ಮಾಹಿತಿಗಳನ್ನು ನೀಡುವ ಮೂಲಕ ಎಲ್ಲರನ್ನೂ ತಲುಪುತ್ತಿವೆ. ಸ್ನ್ಯಾಪ್‌ಡೀಲ್, ಅಮೇಜಾನ್‌ನಂತಹ ಆನ್‌ಲೈ ನ್ ಮಾರುಕಟ್ಟೆ ದಿಗ್ಗಜ ಕಂಪನಿಗಳು ಸ್ಥಳೀಯ ಭಾಷೆಯಲ್ಲಿಯೂ ಮಾಹಿತಿಗಳನ್ನು ನೀಡುತ್ತಿವೆ. ಫ್ಲಿಪ್ ಕಾರ್ಟ್ ಕೂಡ ಇತ್ತೀಚಿಗೆ ಸ್ಥಳೀಯ ಅನೇಕ ಭಾಷೆಗಳಲ್ಲಿ ಸೇವೆಗಳನ್ನು ನೀಡಲು ಆರಂಭಿಸಿದೆ. ಪೇಟಿಎಂನಂತಹ ಮೊಬೈಲ್ ಪಾವತಿ ವೇದಿಕೆ ಕೂಡ ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ನೀಡುತ್ತಿದೆ.
ಡಿಜಿಟಲ್ ಮಾರ್ಕೆಟಿಂಗ್ : ಡಿಜಿಟಲ್ ಯುಗದಲ್ಲಿ ಯಾವುದೂ ಸ್ಥಳೀಯವಾಗಿ ಉಳಿದಿಲ್ಲ. ವ್ಯಾಪಕವಾದ ಇಂಟರ್ನೆಟ್ ಜಾಲದಿಂದಾಗಿ, ಎಲ್ಲಾ ಕೆಲಸಗಳನ್ನು ಆನ್‌ಲೈ ನ್ ನಲ್ಲಿ ಯೇ ಮಾಡಿ ಮುಗಿಸಬಹುದಾದ ಕಾಲ ಇದು. ಇಂಟರ್ನೆಟ್ ಮೂಲಕ ಜನರನ್ನು ಪರಿಣಾಮಕಾರಿಯಾಗಿ ತಲುಪಲು ಸ್ಥಳೀಯ ಭಾಷೆಗಳಲ್ಲಿನ ಮಾಹಿತಿಗಳು ವರದಾನವಾಗಿವೆ.
ಲಾಕ್‌ಡೌನ್ ವರದಾನ : ಅನೇಕ ಉದ್ದಿಮೆ ಕ್ಷೇತ್ರಗಳು ಕೋವಿಡ್ ಹರಡುವಿಕೆ, ಲಾಕ್‌ಡೌ ನ್ ನಿಂದಾ ಗಿ ಮಕಾಡೆ ಮಲಗಿದ್ದರೆ, ಆನ್‌ಲೈ ನ್ ಉದ್ದಿಮೆಗಳು ಇನ್ನಷ್ಟು ಬೇಡಿಕೆ ಪಡೆದುಕೊಂಡಿವೆ. ಜನ ಹೊರಗೆ ಕಾಲಿಡಲು ಭಯಪಡುವ ಈ ಸಂದರ್ಭದಲ್ಲಿ, ಆನ್‌ಲೈ ನ್ ಮಾರುಕಟ್ಟೆಗಳಲ್ಲಿ ವಸ್ತುಗಳ ಬೇಡಿಕೆ ಹೆಚ್ಚುತ್ತಿದೆ. ಆನ್ ಲೈ ನ್ ಮೂಲಕವೇ ವ್ಯವಹಾರ ಮಾಡಲು ಜನ ಮುಂದಾಗಿದ್ದಾರೆ. ಇವೆಲ್ಲವನ್ನು ಗಮನಿಸಿರುವ ಆನ್‌ಲೈ ನ್ ಕಂಪನಿಗಳು ಜನರನ್ನ ಸೆಳೆಯಲು ಪ್ರಯತ್ನಿಸುತ್ತಿವೆ. ಸಮಯಕ್ಕೆ ಸರಿಯಾಗಿ, ಸರಳವಾಗಿ ಮಾಹಿತಿಗಳನ್ನು ಅನುವಾದ ಮಾಡಿ ನೀಡುವ ಅನೇಕ ಕಂಪನಿಗಳು ಈಗ ಬೆಳೆಯುತ್ತಿವೆ. ಅನೇಕರ ಪಾಲಿಗೆ ಉದ್ಯೋಗದ ಬಾಗಿಲನ್ನು ತೆರೆಯುತ್ತಲಿವೆ.
– ಅನುರಾಧಾ ತೆಳ್ಳಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.