ಟಿವಿಎಸ್ ರೇಡಿಯೋನ್ ; ಕಡಿಮೆ ಬೆಲೆಗೆ ಬೆಸ್ಟ್ ಬೈಕ್
Team Udayavani, Mar 4, 2019, 12:30 AM IST
ಹೆಚ್ಚು ಕಡಿಮೆ ಸ್ಪ್ಲೆಂಡರ್ ಬೈಕನ್ನೆ ಹೋಲುವ ಹೊಸದೊಂದು ಬೈಕನ್ನು ಟಿವಿಎಸ್ ಕಂಪನಿ ಮಾರುಕಟ್ಟೆಗೆ ತಂದಿದೆ. ಇದರ ಹೆಸರು ರೇಡಿಯೋನ್. ಪದೇ ಪದೇ ಸರ್ವಿಸ್ ಮಾಡಿಸುವ ಕಿರಿಕಿರಿ ಇಲ್ಲ ಇರಬಾರದು, ಜೇಬಿಗೂ ಹೊರೆಯಾಗಬಾರದು ಎನ್ನುವವರಿಗೆ ಇದು ಬೆಸ್ಟ್ ಬೈಕ್.
ದಿನವೂ ಹತ್ತಾರು ಕಿ.ಮೀ. ಸಂಚಾರ, ಉತ್ತಮ ಮೈಲೇಜ್ ಬರಬೇಕು, ಪದೆ ಪದೇ ಸರ್ವೀಸ್ ಕಿರಿಕಿರಿ ಇರಬಾರದು, ಜೇಬಿಗೂ ಬೆಸ್ಟ್ ಎಂಬಂತಿರಬೇಕು ಎಂದು ಆಶಿಸುವವರಿಗಾಗಿಯೇ ಟಿವಿಎಸ್ ಕಂಪನಿ, ಹೊಸ ಮಾದರಿಯ ಟಿವಿಎಸ್ ರೇಡಿಯೋನ್ ಬೈಕ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ.
110 ಸಿಸಿ ಮಾದರಿಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ವ್ಯಾಪಕ ಸ್ಪರ್ಧೆಯಿದ್ದು, ಇದರನ್ವಯ ಹೊಸ ವಿನ್ಯಾಸದ ಟಿವಿಎಸ್ ರೇಡಿಯೋನ್ ರಸ್ತೆಗಿಳಿದಿದೆ. ನೋಡಲು ಸ್ಪ್ಲೆಂಡರ್ ನಂತೆಯೇ ಇರುವ ಈ ಬೈಕ್, ಅದಕ್ಕೆ ಸಡ್ಡು ಹೊಡೆಯುವಂತೆಯೂ ಇದೆ.
ಟಿವಿಎಸ್‌ನ ಕಡಿಮೆ ಬೆಲೆಯ 110 ಸಿಸಿ ಬೈಕ್‌ಗಳಾದ ಸ್ಟಾರ್ ಸಿಟಿ, ಸ್ಟಾರ್ ನ್ಪೋರ್ಟ್ಸ್, ಸ್ಟಾರ್ ಸಿಟಿ ಪ್ಲಸ್ ಎಂಜಿನ್ ಮಾದರಿಯಲ್ಲೇ ರೇಡಿಯೋನ್ ಇದ್ದು, ಕೆಲವೊಂದು ವೈಶಿಷ್ಟéಗಳ ಕಾರಣ ಭಿನ್ನವಾಗಿ ಇದೆ. ಬೆಳೆಯುತ್ತಿರುವ 110 ಸಿಸಿ ಮಾರುಕಟ್ಟೆಯನ್ನು ಗಮನದಲ್ಲಿಟ್ಟು ಕೊಂಡೇ ಟಿವಿಎಸ್ ಕಂಪನಿಯು ಈ ಬೈಕನ್ನು ಮಾರುಕಟ್ಟೆಗೆ ಬಿಟ್ಟಿದೆ.
ವಿನ್ಯಾಸ
ಥಟ್ಟನೆ ನೋಡಿದರೆ ಹೀರೋ ಸ್ಪ್ಲೆಂಡರ್ ಅಲ್ಲವೇ? ಎಂದೆನಿಸದೇ ಇರದು. ಆದರೆ, ಇದು ಸ್ಪ್ಲೆಂಡರ್ ಅಲ್ಲ. ದೊಡ್ಡದಾದ ಹೆಡ್‌ಲೈಟ್, ದೊಡ್ಡ ಇಂಧನ ಟ್ಯಾಂಕ್ ಮತ್ತು ರಬ್ಬರ್ ಪ್ಲೇಟ್‌ಗಳು ಹಿಂಭಾಗದಲ್ಲಿ ಸ್ಪ್ಲೆಂಡರ್ ರನ್ನು ತುಸು ಹೆಚ್ಚೇ ಹೋಲುವಂತೆ ಇದೆ. ಮುಂಭಾಗದಲ್ಲಿ ಡೇ ಟೈಂ ರನ್ನಿಂಗ್ ಎಲ್‌ಇಡಿ ಲೈಟ್ ಇದೆ. ಕ್ರೋಮ್ ಫಿನಿಶ್ ಇರುವ ಸೈಲೆನ್ಸರ್ ಇದೆ.ಸ್ಪ್ಲೆಂಡರ್ ಗಿಂತ ತುಸು ಅಗಲವಾದ ಸೀಟ್ ಇದೆ. ಆಕರ್ಷಕ ಇಂಡಿಕೇಟರ್‌ಗಳು, ಕಾರಿನ ವಿನ್ಯಾಸವನ್ನು ಸ್ವಲ್ಪ ಮಟ್ಟಿಗೆ ಹೋಲುವ ವಿಶಾಲ ಅನಲಾಗ್ ಸ್ಪೀಡೋಮೀಟರ್ ಇದೆ. ಹಿಂಭಾಗದಲ್ಲಿ ಹಿಡಿಕೆ ಮತ್ತು ಪುಟ್ಟ ಸರಕಿನ ಕಟ್ಟು ಇಡುವಂತೆ ವ್ಯವಸ್ಥೆ ಇದೆ. ಅರ್ಥಾತ್ ಇದು ಹಳ್ಳಿ ಮತ್ತು ಪಟ್ಟಣಗಳ ಜನರನ್ನು ಗಮನದಲ್ಲಿಟ್ಟೇ ಮಾಡಿದ ವಿನ್ಯಾಸವಾಗಿದೆ.
ವೈಶಿಷ್ಟéವೇನು?
ತುಸು ಎತ್ತರವಾದ ಸೀಟು ಆರಾಮದಾಯಕ ಸವಾರಿಯ ಅನುಭವ ನೀಡುತ್ತದೆ. ಜತೆಗೆ ಹಿಂಭಾಗದಲ್ಲಿ ಮಹಿಳೆಯರು ಕೂರುವುದಾದರೆ ಅವರಿಗೆ ಹಿಡಿದುಕೊಳ್ಳಲು ಅನುಕೂಲವಾಗುವಂತೆ ಹಿಡಿಕೆ, ಬೈಕ್ ಜತೆಗೆ ಬರುತ್ತದೆ. ಬೈಕ್‌ನಲ್ಲಿ ಮೊಬೈಲ್ ಚಾರ್ಜರ್ ವ್ಯವಸ್ಥೆ ಇದೆ. ಸೆಲ್ಫ್ ಸ್ಟಾರ್ಟ್ ವ್ಯವಸ್ಥೆ, ಟಿವಿಎಸ್‌ನ ಹೊಸ ಮಾದರಿ ಸಿಂಕ್ರೊನೈಸ್ಡ್ ಬ್ರೇಕಿಂಗ್ ತಂತ್ರಜ್ಞಾನ (ಇದರಿಂದ ಮುಂಭಾಗದ ಬ್ರೇಕ್ ಹಿಡಿದರೆ ಹಿಂದಿನ ಬ್ರೇಕ್ ಕೂಡ ಅಪ್ಲೆ„ ಆಗುತ್ತದೆ. ಹಾಗೆಯೇ ಹಿಂಭಾಗದ ಬ್ರೇಕ್ ಹಿಡಿದರೆ ಮುಂಭಾಗದ ಬ್ರೇಕ್ ಕೂಡ ಅಪ್ಲೆ„ ಆಗುತ್ತದೆ.) ಇದರೊಂದಿಗೆ ಸೈಡ್ ಸ್ಟಾಂಡ್ ಇಂಡಿಕೇಟರ್, ಮೈಲೇಜ್ ಇಂಡಿಕೇಟರ್, ಸಣ್ಣ ಪುಟ್ಟ ಸಾðಚ್‌ಗಳು ಆಗದಂತೆ ಇರುವ ರೆಸಿಸ್ಟೆಂಟ್ ಪೈಂಟ್ ವ್ಯವಸ್ಥೆ, ಸದೃಢವಾದ ಚಾಸಿ ಫ್ರೆàಂ ನೀಡಲಾಗಿದೆ.
ಎಂಜಿನ್ ವಿಶೇಷತೆ
109.7 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಈ ಬೈಕ್, ಟಿವಿಎಸ್‌ನ ಇತರ ಬೈಕ್‌ಗಳಲ್ಲೂ ಇದೆ. ಆದರೆ ಇದರಲ್ಲಿ ಟಬುìಲರ್ ಮಾದರಿಯ ಫ್ರೆàಂ ಮಾತ್ರ ಹೊಸದು. 7000 ಆರ್‌ಪಿಎಂನಲ್ಲಿ 8.3 ಬಿಎಚ್‌ಪಿ ಮತ್ತು 5 ಸಾವಿರ ಆರ್‌ಪಿಎಂನಲ್ಲಿ 8.7 ಎನ್‌ಎಂ ಟಾರ್ಕ್ ಇದರ ವಿಶೇಷತೆ. ಇದರಿಂದ ಹಳ್ಳಿಗಾಡು ಮತ್ತು ಪೇಟೆಯ ರಸ್ತೆಯಲ್ಲಿ ಆಗಾಗ್ಗೆ ಗಿಯರ್ ಬದಲಿಸದೆ ನಿರಾಯಾಸವಾಗಿ ಸವಾರಿ ಮಾಡುತ್ತಿರಬಹುದು. 40-60ರಲ್ಲಿ ಈ ಬೈಕ್ ಚಾಲನೆ ಖುಷಿ ನೀಡಲಿದ್ದು 65 ಕಿ.ಮೀ.ಯಷ್ಟು ಮೈಲೇಜ್ ಇರಲಿದೆ. ಕಂಪೆನಿ ಪ್ರಕಾರ 69.3 ಕಿ.ಮೀ. ಮೈಲೇಜ್ ನೀಡುತ್ತದೆ. 10 ಲೀಟರ್ ಟ್ಯಾಂಕ್ ಹೊಂದಿದ್ದು 600 ಕಿ.ಮೀ. ನಿರಾಯಾಸವಾಗಿ ಚಲಿಸುತ್ತದೆ. ಒಟ್ಟು 112 ಕೆ.ಜಿ. ಭಾರ ಹೊಂದಿದ್ದು, ಹಿಂಭಾಗ ಅಡ್ಜಸ್ಟೇಬಲ್ ಶಾಕ್ಸ್, ಮುಂಭಾಗ ಟೆಲಿಸ್ಕೋಪಿಕ್ ಶಾಕ್ಸ್ ಇದೆ. ಈ ದರ್ಜೆಯಲ್ಲೇ ಅತ್ಯುತ್ತಮ 180 ಎಂ.ಎಂ. ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
ಯಾರಿಗೆ ಬೆಸ್ಟ್?
ನಿತ್ಯ ಒಂದಲ್ಲ ಒಂದು ಕಡೆಗೆ ಹೋಗಲೇಬೇಕು ಎನ್ನುವವರಿಗೆ, ಹೆಚ್ಚು ಮೈಂಟೆನೆನ್ಸ್ ಕಿರಿಕ್ ಬೇಡ ಎನ್ನುವವರಿಗೆ ಇದು ಬೆಸ್ಟ್ ಬೈಕ್- 49590 ಎಕ್ಸ್ ಶೋರೂಂ ಬೆಲೆ ಹೊಂದಿರುವ ಈ ಬೈಕ್, ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಸಾಮಾನ್ಯ 110 ಸಿಸಿ ಬೈಕ್ ಸಾಕು, ಉತ್ತಮ ಫೀಚರ್ ಇರಬೇಕು ಎನ್ನುವವರಿದ್ದರೆ ರೇಡಿಯಾನ್ ನಿಜಕ್ಕೂ ಉತ್ತಮ ಆಯ್ಕೆ.
ತಾಂತ್ರಿಕತೆ
4 ಸ್ಟ್ರೋಕ್ ಎಂಜಿನ್
1265 ವೀಲ್‌ಬೇಸ್
4 ಸ್ಪೀಡ್ ಗಿಯರ್
8.3 ಬಿಎಚ್‌ಪಿ
180ಎಂ.ಎಂ. ಗ್ರೌಂಡ್ ಕ್ಲಿಯರೆನ್ಸ್
ಟ್ಯೂಬ್‌ಲೆಸ್ ಟಯರ್‌ಗಳು
112 ಕೆ.ಜಿ. ಭಾರ
49, 590 ರೂ. ( ಎಕ್ಸ್ ಶೋ ರೂಂ. ಬೆಲೆ)
– ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.