ಅನಿಯಂತ್ರಿತ ಠೇವಣಿ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?


Team Udayavani, Apr 15, 2019, 10:31 AM IST

leed-2-(1)

ಸುರಕ್ಷಿತ ಹೂಡಿಕೆಯ ಪ್ರಶ್ನೆ ಬಂದಾಗ ಎಲ್ಲಕ್ಕಿಂತ ಮೊದಲು ಕಾಣಿಸುವುದು ನಿರಖು ಠೇವಣಿಗಳು. ಅಂದರೆ ಫಿಕ್ಸೆಡ್‌ ಡಿಪಾಸಿಟ್‌ಗಳು. ವಿವಿಧ ಅವಧಿಗಳ ಈ ನಿರಖು ಠೇವಣಿ ಯೋಜನೆಗಳಲ್ಲಿ ಹಣ ತೊಡಗಿಸುವುದು ಸುಭದ್ರ, ಸುರಕ್ಷಿತ ಮತ್ತು ಆಕರ್ಷಕ ಎಂಬ ನಂಬಿಕೆ ಸಹಜವಾಗಿಯೇ ಜನ ಸಾಮಾನ್ಯರಲ್ಲಿದೆ. ಹಾಗಾಗಿ, ಜನರು ಬ್ಯಾಂಕ್‌, ಸಹಕಾರಿ ಬ್ಯಾಂಕ್‌, ಬ್ಯಾಂಕೇತರ ಹಣಕಾಸು ಕಂಪೆನಿಗಳು ಮತ್ತು ಪೋಸ್ಟ್‌ ಆಫೀಸ್‌ ಟರ್ಮ್ ಡಿಪಾಸಿಟ್‌ ಯೋಜನೆಗಳತ್ತ ಮುಖ ಮಾಡುತ್ತಾರೆ. ನಿರಖು ಠೇವಣಿಗಳು ಸುಭದ್ರ, ಸುರಕ್ಷಿತ, ಆಕರ್ಷಕ ಎಂಬ ಮಾತಿನಲ್ಲಿ ಅತಿಶಯವೇನೂ ಇಲ್ಲ. ಆದರೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಜನರನ್ನು ತಮ್ಮತ್ತ ಸೆಳೆಯಲು ಹೆಚ್ಚಿನ ಬಡ್ಡಿಯ ಆಮಿಷ ಒಡ್ಡುತ್ತವೆ. ಹಾಗೆಯೇ, ಖಾಸಗಿ ಹಣಕಾಸು ಸಂಸ್ಥೆಗಳು, ಕಾಂಜಿಪೀಂಜಿ ಕಂಪೆನಿಗಳು, ಬ್ಲೇಡ್‌ ಸಂಸ್ಥೆಗಳು ಜನರಿಂದ ಠೇವಣಿಗಳನ್ನು ಸಂಗ್ರಹಿಸುತ್ತವೆ. ಹೆಚ್ಚಿನ ಬಡ್ಡಿಯ ಆಸೆಯಲ್ಲಿ ಜನರು ಈ ಬಗೆಯ ಸಂಸ್ಥೆಗಳ ಆಮಿಷಕ್ಕೆ ಒಳಗಾಗಿ ತಮ್ಮ ಕಷ್ಟದ ಸಂಪಾದನೆಯ ಉಳಿತಾಯವನ್ನು ಅವುಗಳಲ್ಲಿ ಠೇವಣಿ ಇಡುತ್ತಾರೆ.

ಸುಗ್ರೀವಾಜ್ಞೆ ಜಾರಿಯಾಗಿದೆ
ಹೀಗೆ ಠೇವಣಿ ಇಡುವ ಅನೇಕ ಖಾಸಗಿ ಹಣಕಾಸು ಸಂಸ್ಥೆಗಳು ಜನರಿಗೆ ಮೋಸ ಮಾಡಿದ ಹಲವಾರು ಉದಾಹರಣೆಗಳಿವೆ. ಇವುಗಳನ್ನು ನಿಯಂತ್ರಿಸಲೆಂದೇ ಕೇಂದ್ರ ಸರಕಾರ ಈಚೆಗೆ 2019ರ ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದೆ. ಈ ನಿಷೇಧಾಜ್ಞೆಯಿಂದಾಗಿ ಅನಿಯಂತ್ರಿತ ಠೇವಣಿ ಸಂಗ್ರಹಿಸುವ ಎಲ್ಲ ಹಣಕಾಸು, ಬ್ಯಾಂಕೇತರ ಹಣಕಾಸು, ಖಾಸಗಿ ಹಣಕಾಸು ಮತ್ತು ಸಹಕಾರಿ ಬ್ಯಾಂಕುಗಳಿಗೆ ಕೂಡ ಈಗ ಬಿಸಿ ಮುಟ್ಟಿದೆ. ಕೇಂದ್ರ ಸರಕಾರದ ಈ ಕ್ರಮದಿಂದಾಗಿ ಅನಿಯಂತ್ರಿತ ಠೇವಣಿ ಸಂಚಯನಕಾರರು ಈಗ ಬಿಗಿಯಾದ ಆರ್‌ಬಿ ಐ ನೀತಿ ನಿಯಮಗಳಿಗೆ ಒಳಪಡುವಂತಾಗಿದೆ.

ಶಿಕ್ಷಾರ್ಹ ಅಪರಾಧ
ಈ ಸುಗ್ರೀವಾಜ್ಞೆಯಡಿ ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸುವ ಠೇವಣಿಗಳನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ. 1. ನಿಯಂತ್ರಿತ ಠೇವಣಿ, 2. ಅನಿಯಂತ್ರಿತ ಠೇವಣಿ. ಇದರಲ್ಲಿ ಎರಡನೇ ಬಗೆಯ ಅನಿಯಂತ್ರಿತ ಠೇವಣಿಗಳ ಸಂಚಯನವನ್ನು ಸಂಪೂರ್ಣ ನಿಷೇಧಿಸಲಾಗಿದೆ ಮಾತ್ರವಲ್ಲದೆ ಅದು ಶಿಕ್ಷಾರ್ಹ ಅಪರಾಧವೆಂದೂ ಪರಿಗಣಿಸಲಾಗಿದೆ. ಸೆಬಿಯಿಂದ ಆರ್‌ಬಿಐನಿಂದ ಅನುಮತಿ ಪಡೆದ ಬ್ಯಾಂಕ್‌ ಠೇವಣಿಗಳು, ಐಈಅ ಅನುಮತಿ ಪಡೆದ ವಿಮಾ ಸಂಸ್ಥೆಗಳ ಯೋಜನೆಗಳು, ರಾಜ್ಯಗಳ ಕಾಯಿದೆಯಡಿ ನೋಂದಾಯಿತವಾಗಿರುವ ಸಹಕಾರಿ, ಚಿಟ್‌ಫ‌ಂಡ್‌ ಸಂಸ್ಥೆಗಳು ಮುಂತಾಗಿ ಒಟ್ಟು 9 ರೀತಿಯ ನಿಯಂತ್ರಣ ಪ್ರಾಧಿಕಾರದಡಿ ಬರುವ ಠೇವಣಿ ಯೋಜನೆಗಳು ಮಾತ್ರವೇ ನಿಯಂತ್ರಿತ ಠೇವಣಿ ಯೋಜನೆಗಳೆಂದು ಪರಿಗಣಿತವಾಗಿವೆ.

ಈ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿರಿಸಿಕೊಂಡರೆ ಜನ ಸಾಮಾನ್ಯರ ನಿರಖು ಠೇವಣಿ ಹಣ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮತ್ತು ಅಂಚೆ ಇಲಾಖೆಯ ಠೇವಣಿ ಯೋಜನೆಗಳಲ್ಲಿ ಹೆಚ್ಚು ಸುಭದ್ರ ಎನ್ನಬಹುದು. ಹೆಚ್ಚಿನ ಬಡ್ಡಿಯ ಆಮಿಷಕ್ಕೆ ಒಳಗಾಗಿ ಅಸಲನ್ನೂ ಕಳೆದುಕೊಳ್ಳುವ ರಿಸ್ಕ್ ಖಂಡಿತ ಬೇಡ ಎನ್ನುವವರು ಸದಾ ಕಾಲ ಮುಂಚೂಣಿಯ ಸರಕಾರಿ ಬ್ಯಾಂಕುಗಳು ಮತ್ತು ಅಂಚೆ ಇಲಾಖೆಯ ಟರ್ಮ್ ಡೆಪಾಸಿಟ್‌ ಯೋಜನೆಗಳನ್ನು ನೆನಪಿನಲ್ಲಿ ಇರಿಸಿ ಕೊಳ್ಳುವುದು ಕ್ಷೇಮ. ಹೂಡಿಕೆಯಲ್ಲಿ ಯಾವತ್ತೂ ನಾವು ರಿಸ್ಕ್ ಫ್ಯಾಕ್ಟರ್‌ ಮರೆಯಬಾರದು. ಹೂಡಿಕೆದಾರರು ಮತ್ತು ವಹಿವಾಟುದಾರರ ನಡುವೆ ಇರುವ ಅಂತರವೇ ರಿಸ್ಕ್ ತೆಗೆದುಕೊಳ್ಳುವಲ್ಲಿನ ಛಾತಿ. ಸಾಮಾನ್ಯವಾಗಿ ವಹಿವಾಟುದಾರರನ್ನು ಹೂಡಿಕೆದಾರರೆಂದು ಪರಿಣತರು ಪರಿಗಣಿಸುವುದಿಲ್ಲ. ವಹಿವಾಟುದಾರರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಗರಿಷ್ಠ ಲಾಭ ಗಳಿಸುವುದೇ ಹೂಡಿಕೆಯ ಮೂಲ ಉದ್ದೇಶವಾಗಿರುತ್ತದೆ.

ಹೂಡಿಕೆದಾರರಿಗೆ ಆರರಿಂದ ಹನ್ನೆರಡು ತಿಂಗಳ ಅವಧಿಯೆಂದರೆ ಒಂದು ಯುಗ. ಈ ಅವಧಿಯೊಳಗೆ ತಮ್ಮ ಹೂಡಿಕೆ ಮೊತ್ತವು ನಷ್ಟದ ಹಾದಿ ಹಿಡಿದರೆ ಅದನ್ನು ನಿರ್ದಯೆಯಿಂದ ಅವರು ಕೊನೆಗೊಳಿಸಿ ಕೈಗೆ ಬಂದಷ್ಟು ದುಡ್ಡನ್ನು ಬೇರೆ ಆಕರ್ಷಕ ಮಾಧ್ಯಮಗಳಲ್ಲಿ ತೊಡಗಿಸುತ್ತಾರೆ. ಈ ಯತ್ನದಲ್ಲಿ ತಾವು ಅಸಲಿನ ಭಾಗವನ್ನೇ ಕಳೆದುಕೊಂಡರೂ ಅವರು ಚಿಂತಿಸುವುದಿಲ್ಲ. ಗಾಯಗೊಂಡ ಹುಲಿ ತನ್ನ ದೇಹದ ಒಂದು ಕಡೆಯ ಮಾಂಸವನ್ನು ಕಿತ್ತು ಗಾಯದ ಭಾಗಕ್ಕೆ ಅಂಟಿಸುವ ಯತ್ನ ಮಾಡುವಂತೆ ವಹಿವಾಟುದಾರರು ನಿಷ್ಕರುಣೆಯಿಂದ ವ್ಯವಹಾರ ನಿರತವಾಗಿರುತ್ತಾರೆ. ಆದರೆ ಹೂಡಿಕೆದಾರರು ಹಾಗಲ್ಲ. ಅವರು ತಮ್ಮ ಹೂಡಿಕೆಯನ್ನು ಸಟ್ಟಾ ವ್ಯವಹಾರ ಎಂದು ತಿಳಿಯುವುದಿಲ್ಲ. ಈಸ ಬೇಕು ಇದ್ದು ಜಯಿಸಬೇಕು ಎಂಬ ದಾಸವಾಣಿಯನ್ನು ಹೂಡಿಕೆದಾರರು ಯಥಾವತ್‌ ಪಾಲಿಸುತ್ತಾರೆ. ಹೂಡಿಕೆದಾರರು ಒಂದೆಡೆ ಹಣ ಹೂಡಿದರೆ ಅದು ಲಾಭ ದೊರಕಿಸಿಕೊಡುವ ತನಕ ನಿರ್ಗಮಿಸುವುದಿಲ್ಲ. ಅದು ಬೇಕಿದ್ದರೆ ಶೇರು, ಬಾಂಡ್‌, ಮ್ಯೂಚುವಲ… ಫ‌ಂಡ್‌, ಇಟಿಎಫ್ ಯಾವುದೇ ಇರಲಿ; ಹೂಡಿದ ಮೊತ್ತ ಮಾಗುವ ತನಕವೂ ಕಾಯುತ್ತಾರೆ.


ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಖಾಸಗಿ ಹಣಕಾಸು ಸಂಸ್ಥೆಗಳು ನಾನಾ ಅವಧಿಯ, ಆಕರ್ಷಕ ಬಡ್ಡಿಯ ನಿರಖು ಠೇವಣಿ ಯೋಜನೆಗಳನ್ನು ಪ್ರಚುರ ಪಡಿಸುತ್ತಲೇ ಇರುತ್ತವೆ. ಹಾಗಿದ್ದರೂ ಜನರು ಸುಭದ್ರ ಮತ್ತು ಸುರಕ್ಷಿತ ಎಂಬ ಕಾರಣಕ್ಕೆ ಅಂಚೆ ಕಚೇರಿಯ ಅವಧಿ ಠೇವಣಿಗಳ ಕಡೆಗೆ ಮುಖ ಮಾಡುವ ಜರೂರಿ ಇದೆ. ಅಂಚೆ ಇಲಾಖೆಯ ನಿರಖು ಠೇವಣಿಗಳ ಮೇಲಿನ ಬಡ್ಡಿ 1. ಒಂದು ವರ್ಷದಿಂದ ಮೂರು ವರ್ಷದ ತನಕ ಡಿಪಾಸಿಟ್‌ಗೆ ಶೇ. 7ರಷ್ಟು ಬಡ್ಡಿ. ನಾಲ್ಕು, ಐದು ವರ್ಷಕ್ಕೆ 7.8ರಷ್ಟು ಬಡ್ಡಿ.

ನಿರಖು ಠೇವಣಿ ಅಂದರೆ…
ಹೂಡಿಕೆಯಲ್ಲಿ ಸಹನೆ, ತಾಳ್ಮೆ, ಸಂಯಮ ತೋರುವ ಹೂಡಿಕೆದಾರರು ನಿಶ್ಚಿಂತೆ, ಸುಭದ್ರತೆಯನ್ನು ಬಯಸುವವರಾಗಿರುತ್ತಾರೆ. ಅವರು ನಿರ್ದಿಷ್ಟ ವರ್ಷಗಳ ಕಾಲಕ್ಕೆ ಹಣವನ್ನು ಹೂಡಿ, ಅದು ಮಾಗುವವರೆಗೆ ಕಾಯುತ್ತಾರೆ. ಈ ಬಗೆಯ ಪ್ರವೃತ್ತಿದಾರರಿಗೆ ಅತ್ಯಂತ ಪ್ರಶಸ್ತವಾಗಿರುವ ಹೂಡಿಕೆ ಮಾಧ್ಯಮ ಎಂದರೆ ನಿರಖು ಠೇವಣಿ. ಇದನ್ನೇ ನಾವು ಫಿಕ್ಸ್‌$xಡಿಪಾಸಿಟ್‌ ಎಂದು ಕರೆಯುವುದು. ಒಂದು, ಎರಡು, ಮೂರು, ಐದು ವರ್ಷಗಳ ಅವಧಿಯ ಟರ್ಮ್… ಡಿಪಾಸಿಟ್‌ ಗಳು ಅಥವಾ ಅವಧಿ ನಿರಖು ಠೇವಣಿಗಳು ಸುಭದ್ರತೆ, ಸುರಕ್ಷೆಯ ದೃಷ್ಟಿಯಿಂದ ಒಳ್ಳೆಯದು. ಹಾಗಿದ್ದರೂ ಲಾಭದಾಯಕತೆ ನಿಶ್ಚಿತವಾಗಿರುವುದರಿಂದ ಮಧ್ಯಮ ವರ್ಗದ ಮಂದಿಯ ಮೊದಲ ಹೂಡಿಕೆಯ ಆಯ್ಕೆಯೇ ನಿರಖು ಠೇವಣಿ.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.