ಬರುತ್ತಿದೆ ರನೌಲ್ಟ್ ಕಿಗರ್‌


Team Udayavani, Nov 23, 2020, 9:45 PM IST

ಬರುತ್ತಿದೆ ರನೌಲ್ಟ್ ಕಿಗರ್‌

ಭಾರತೀಯ ಮಾರುಕಟ್ಟೆಯಲ್ಲಿ ರನೌಲ್ಟ್ ಡಸ್ಟರ್‌, ರನೌಲ್ಟ್  ಕ್ವಿಡ್‌ ಮತ್ತು ರನೌಲ್ಟ್ ಟ್ರೈಬರ್‌ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ರನೌಲ್ಟ್ ಕಂಪನಿ, ಹೊಸ ಕಾರೊಂದನ್ನು ಮಾರುಕಟ್ಟೆಗೆಬಿಡುಗಡೆ ಮಾಡಲು ತಯಾರಿ ನಡೆಸಿದೆ.

ಹ್ಯಾಚ್‌ ಬ್ಯಾಕ್‌  ಸೆಗ್ಮೆಂಟ್‌ ನಲ್ಲಿ ಕ್ವಿಡ್‌, ಸೆವೆನ್‌ ಸೀಟರ್‌ ನಲ್ಲಿ ಟ್ರೈಬರ್‌ ಮತ್ತು ಎಸುವಿಯಲ್ಲಿ ಡಸ್ಟರ್‌ ಕಾರುಗಳನ್ನು ಹೊಂದಿರುವ ರನೌಲ್ಟ್, ಈಗ ಮತ್ತೂಂದು ಎಸ್‌ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಸಂಬಂಧ ನ.18ರಂದು ತನ್ನ ಹೊಸ ಕಾರಿನ ಹೆಸರು ಮತ್ತು ಕಾರಿನ ಕಾನ್ಸೆಪ್ಟ್ ಅನ್ನು ಬಿಡುಗಡೆ ಮಾಡಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ, 2021ರ ಆರಂಭದಲ್ಲೇ ಈ ಕಾರು ಮಾರುಕಟ್ಟೆಗೆ ಬರಲಿದೆ. ಈ ಕಾರನ್ನು ಭಾರತೀಯ ಗ್ರಾಹಕರ ಪ್ರತಿಕ್ರಿಯೆಯನ್ನು ಆಧರಿಸಿ ಫ್ರಾನ್ಸ್ ಮತ್ತು ಭಾರತದ ಡಿಸೈನರ್‌ಗಳ ತಂಡ ರೂಪಿಸಿದೆ.

ಭಾರತದಲ್ಲಿ ಮೊದಲು… :  ಕಾರಿನ ಕಾನ್ಸೆಪ್ಟ್ ಬಿಡುಗಡೆ ಮಾಡಿದ ರನೌಲ್ಟ್ ಇಂಡಿಯಾದ ಸಿಇಒ ಮತ್ತು ಎಂಡಿ ವೆಂಕಟ್ರಾಮ್‌ ಮಾಮಿಲ್ಲಪಿಳ್ಳೆ, ಮುಂದಿನ ವರ್ಷ ಭಾರತದಲ್ಲೇ ಗ್ಲೋಬಲ್‌ ಲಾಂಚ್‌ ಮಾಡಲಿದ್ದೇವೆ. ಬಳಿಕ ಬೇರೆ ಬೇರೆ ದೇಶಗಳ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ. ವಿಶೇಷವೆಂದರೆ, ಕ್ವಿಡ್‌ ಮತ್ತು ಟ್ರೈಬರ್‌ ಕಾರುಗಳನ್ನೂ ಭಾರತದಲ್ಲೇ ಮೊದಲಿಗೆ ಬಿಡುಗಡೆ ಮಾಡಿ, ಬಳಿಕ ಬೇರೆ ದೇಶಗಳಲ್ಲಿ ಲಾಂಚ್‌ ಮಾಡಲಾಗಿತ್ತು. ಈ ಕಾರು ಮಾರುತಿ ವಿಟಾರಾ ಬ್ರೀಜಾ, ಹುಂಡೈ ವೆನ್ಯೂ, ಮಹೀಂದ್ರಾ ಎಕ್ಸ್ ಯು ವಿ 300 ಹಾಗೂ ಹೊಸದಾಗಿ ಲಾಂಚ್‌ ಮಾಡಲಾಗಿರುವ ಕಿಯಾದ ಸೋನೆಟ್‌ ಮತ್ತು ಟೊಯೋಟಾದ ಅರ್ಬನ್‌ಕ ಯ್ಯೂಸರ್‌, ಇನ್ನೇನು ಬಿಡುಗಡೆಯಾಗಬೇಕಿರುವ ನಿಸಾನ್‌ ಕಂಪನಿಯ ಮ್ಯಾಗ್ನೆಟ್‌ಗೆ ಸ್ಪರ್ಧೆ ನೀಡಲಿದೆ. ಈ ಕಾರಿನಲ್ಲಿ ಎರಡು ಹಂತದ ಫುಲ್‌ ಎಲ್‌ಇಡಿ ಹೆಡ್‌ ಲ್ಯಾಂಪ್ಸ್ , ನಿಯೋನ್‌ ಇಂಡಿಕೇಟರ್‌ ಲೈಟ್ಸ್‌, ಸಿ ಶೇಪ್‌ ವುಳ್ಳ ಟೈ ಲೈಟ್ಸ್‌ ಗಳನ್ನು ಶೋಕಾರ್‌ ನಲ್ಲಿ ನೋಡಬಹುದಾಗಿದೆ.

ಆ್ಯಪಲ್‌ಕಾರ್‌ ಪ್ಲೇ… :

ಕಂಪನಿ ಹೇಳಿಕೆಯ ಪ್ರಕಾರ, ಗ್ರೌಂಡ್‌ ಕ್ಲಿಯೆರೆನ್ಸ್  210 ಎಂಎಂ ಇರಲಿದೆ.19 ಇಂಚ್‌ ವೀಲ್‌, ರೂಫ್‌ ರೈಲ್ಸ್ ಮತ್ತು ಫ್ರಂಟ್‌ ಆ್ಯಂಡ್‌ ರಿಯರ್‌ ನಲ್ಲಿ ಸ್ಕಿಡ್‌ ಪ್ಲೇಟ್‌ಗಳನ್ನು ಒಳಗೊಂಡಿದೆ. ಅಲ್ಲದೆ, ಇದು ಸಿಎಂಎಫ್‌ಎ+ ಫ್ಲಾಟ್‌ ಫಾರ್ಮ್ ನಲ್ಲಿ ಸಿದ್ಧಪಡಿಸಲಾಗುತ್ತಿದೆ. ಇದರ ಜತೆಗೆ, ದೊಡ್ಡ ಸೈಜಿನ ಇನ್ಫೋಟೈನ್‌ ಮೆಂಟ್‌, ಆ್ಯಪಲ್‌ ಕಾರ್‌ ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೋ ಸಪೋರ್ಟ್‌ ಆಗಲಿದೆ. ವೈರ್‌ಲೆಸ್‌ ಚಾರ್ಜಿಂಗ್‌, ಸ್ಟೀರಿಂಗ್‌ ಮೌಂಟೆಡ್‌ ಕಂಟ್ರೋಲ್‌ ವ್ಯವಸ್ಥೆಯೂ ಇರಲಿದೆ.

 

-ಸೋಮಶೇಖರ ಸಿ.ಜೆ.

ಟಾಪ್ ನ್ಯೂಸ್

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

POlice

Kasaragod: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.