ಮೂತ್ರವೇ ಬೆಳೆಗೆ ಆಧಾರ

Team Udayavani, Apr 2, 2018, 5:41 PM IST

mooterave.jpg

ಶಾರದಮ್ಮನವರ ಮನೆಯ ಅಂಗಳದಲ್ಲಿ ಹಚ್ಚ ಹಸಿರಿನ ಕೈ ತೋಟವಿದೆ. ಗಿಡಗಳಿಗೆ ರಸಗೊಬ್ಬರ ಹಾಕುವುದಿಲ್ಲ. ಮನೆಯಲ್ಲಿ ಜಾನುವಾರುಗಳು ಇಲ್ಲದ್ದರಿಂದ ಕೊಟ್ಟಿಗೆ ಗೊಬ್ಬರವೂ ಇಲ್ಲ. ಹಾಗಿದ್ದರೂ ಕೈ ತೋಟ ಸದಾ ಬೆಳೆಗಳಿಂದ ತುಂಬಿರಲು ಕಾರಣ ಮಾನವ ಮೂತ್ರದ ಬಳಕೆ !

ಇವರ ಮನೆಯಂಗಳದಲ್ಲಿ ಗೋಣಿಚೀಲಗಳಲ್ಲಿ ಮಣ್ಣು ತುಂಬಿಸಿ ನೆಟ್ಟಿರುವ ಗುಲಾಬಿ, ಡೇಲಿಯಾ, ಸೇವಂತಿಗೆ ಸೇರಿದಂತೆ ಸಾಕಷ್ಟು ಗಿಡಗಳು ಹೂವರಳಿಸಿಕೊಂಡು ಕುಲು ನಗುತ್ತಿವೆ. ದಾಸವಾಳದ ಗಿಡವನ್ನೇ ಗೂಟವಾಗಿ ಬಳಸಿಕೊಂಡು ಬುಡದಲ್ಲಿ ನೆಟ್ಟಿರುವ ಬಸಳೆಯ ಬಳ್ಳಿಯಲ್ಲಿ ಹಚ್ಚ ಹಸಿರಾದ ಅಂಗೈಯಗಲದ ಎಲೆಗಳು ಮನ ಸೆಳೆಯುತ್ತವೆ. ಬದನೆಯ ಗಿಡ ಕಾಯಿ ಕೊಡುತ್ತಿದೆ.

ಚಪ್ಪರದವರೆಯ ಬಳ್ಳಿಯಲ್ಲಿ ಜೊಂಪೆಗಳು ಕಾಯಿಗಳಿಂದ ತುಂಬಿ ತೂಗಾಡುತ್ತಿವೆ. ಇಷ್ಟೆಲ್ಲ ಕೃಷಿ ನಳನಳಿಸುತ್ತಿದ್ದರೂ ಅವರು ಹಿಡಿ ರಸಗೊಬ್ಬರವನ್ನೂ ಹಣ ಕೊಟ್ಟು ತರುವುದಿಲ್ಲ. ಹೈನುಗಾರಿಕೆ ಇಲ್ಲದ ಕಾರಣ ಅವರಲ್ಲಿ ಕೊಟ್ಟಿಗೆ ಗೊಬ್ಬರವೂ ಇಲ್ಲ.  ಹಾಗಿದ್ದರೂ ಅಂಗಳವಿದೇ ನಂದನವನದಂತೆ ನಳನಳಿಸಲು ಕಾರಣವಾಗಿರುವುದು ಕೇವಲ ಮಾನವ ಮೂತ್ರದ ಬಳಕೆ ಎಂದರೆ ಅಚ್ಚರಿಯಾಗದೇ ಇರದು.

ಇವರ ಹೆಸರು ಶಾರದಮ್ಮ. ವಯಸ್ಸು 63 ದಾಟಿದೆ. ಈ ರೈತ ಮಹಿಳೆ ಬೆಳ್ತಂಗಡಿ ತಾಲೂಕಿನ ಬದ್ಯಾರಿನಲ್ಲಿದ್ದಾರೆ. ಒಂದು ಕಾಲದಲ್ಲಿ ಅವರ ಸಂಸಾರಕ್ಕೆ ಹತ್ತು ಎಕರೆ  ಭೂಮಿ ಇತ್ತು, ದನಕರುಗಳಿದ್ದವು. ಕೃಷಿ ಮಾಡಿದ ಅನುಭವವೂ ಇದೆ. ಆದರೆ ಈಗ ಕೇವಲ ಮನೆಯಂಗಳದಲ್ಲಿ ಮಾತ್ರ ಕೃಷಿ ಮಾಡಬೇಕು. ರಿಚ್‌ ಅರ್ಥ್ ಇನ್‌ಸ್ಟಿಟ್ಯೂಟಿನ ವರದಿಯೊಂದನ್ನು ಅವರು ಓದಿದರಂತೆ.

ಕೃಷಿ ವಿಜಾnನಿ ಎಸ್‌. ಕೆ. ಪ್ರಧಾನ್‌ ಅವರ ತಂಡ ನೀಡಿದ್ದ ಈ ವರದಿಯಲ್ಲಿ ಮಾನವ ಮೂತ್ರವೂ ಸಸ್ಯಗಳಿಗೆ ಬೇಕಾದ ಪೋಷಕಾಂಶಗಳನ್ನು ಹೊಂದಿದೆಯೆಂದು ವಿವರಿಸಲಾಗಿತ್ತು . ಇದರಲ್ಲಿ ಶೇ. 80ರಷ್ಟು ಸಾರಜನಕ ಮತ್ತು ಶೇ. 55ರಷ್ಟು ಫಾಸ್ಫರಸ್‌ ಅಲ್ಲದೆ ಕ್ಯಾಲ್ಸಿಯಮ್‌, ಪೊಟಾಷಿಯಂಗಳು ಇದೆ. ಒಂದು ದಶಲಕ್ಷ ಜನರ ಮೂತ್ರದಿಂದ ಸಾವಿರ ಟನ್‌ ರಸಗೊಬ್ಬರ ಉತ್ಪಾದಿಸಬಹುದೆಂದು ಈ ವರದಿಯಲ್ಲಿ ವಿವರಣೆ ಇತ್ತು.

ಶಾರದಮ್ಮ ಮೂರು ವರ್ಷಗಳಿಂದ ಕೇವಲ ಮೂತ್ರವನ್ನು ಕೃಷಿಗೆ ಬಳಸಿ ದೈನಂದಿನ ಬಳಕೆಗೆ ಬೇಕಾಗುವಷ್ಟು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಬೇರೆ ಯಾವುದೇ ಸಾವಯವ ಗೊಬ್ಬರವಾಗಲಿ, ರಸಗೊಬ್ಬರವಾಗಲಿ ಬಳಸದಿದ್ದರೂ ಇವರ ಅಂಗಳದಲ್ಲಿ ಗಿಡಗಳು ಹಸಿರು ತುಂಬಿ ನಳನಳಿಸುತ್ತಿವೆ. ಟೊಮೆಟೊ, ಬದನೆ, ಸೋರೆ, ಬೆಂಡೆಯಂಥ ತರಕಾರಿಗಳೂ ಬೇರೆ ಪೋಷಕಾಂಶದ ಬೆಂಬಲವಿಲ್ಲದೆಯೇ ಅವರ ಕೃಷಿ ಉಪಚಾರದಿಂದ ಬೆಳೆದು ಫ‌ಲ ಕೊಡುತ್ತಿವೆ. ಹೆಚ್ಚು ಕಾಯಿಗಳು ಹಿಡಿಯುತ್ತವೆ. ಗಾತ್ರದಲ್ಲಿ ದೊಡ್ಡದೂ ಆಗಿವೆ.

ತಮ್ಮ ಯಶಸ್ವೀ ಕೃಷಿ ವಿಧಾನದ ಬಗೆಗೆ ವಿವರಿಸುವ ಶಾರದಮ್ಮ, “ಮೂತ್ರದಲ್ಲಿ ತೀರ ûಾರ ಗುಣರುವುದರಿಂದ ನೇರವಾಗಿ ಬಳಸಬಾರದು. ಒಂದು ವೇಳೆ ಮೂತ್ರವನ್ನು ನೇರವಾಗಿ ಬಳಸಿದರೆ ಅದರಿಂದ ಬೇರುಗಳು ಸುಟ್ಟು ಹೋಗಿ ಗಿಡ ಸಾಯುತ್ತದೆ. ಒಂದು ಲೀಟರ್‌ ಮೂತ್ರವನ್ನು ಹತ್ತು ಲೀಟರ್‌ ನೀರಿನೊಂದಿಗೆ ಬೆರೆಸಿ ದಿನವೂ ಪ್ರತಿಯೊಂದು ಗಿಡಕ್ಕೆ ಕಾಲು ಲೀಟರ್‌ ಅಳತೆಯಲ್ಲಿ ಬುಡಕ್ಕೆ ಹನಿಸಿದರೆ ಸಾಕಾಗುತ್ತದೆ.

ದ್ರವರೂಪೀ ಸತ್ವವಾಗಿರುವುದರಿಂದ ಗಿಡದ ಬೇರುಗಳು ತಕ್ಷಣವೇ ಹೀರಿಕೊಳ್ಳುತ್ತವೆ. ಗೋಣಿಚೀಲದಲ್ಲಿ ಬೆಳೆಯುತ್ತಿರುವುದರಿಂದ ಪೋಷಕಾಂಶ ವ್ಯರ್ಥವಾಗುವುದಿಲ್ಲ. ಬುಡ ತಂಪಾಗಿ ಉಳಿಯಲು ತರಗೆಲೆಗಳಿಂದ ಮುಚ್ಚಿದರೆ ಸಾಕು. ಇದರಿಂದಾಗಿ ಮೂತ್ರದಲ್ಲಿರುವ ಸತ್ತಾ$Ìಂಶಗಳು ರಸಗೊಬ್ಬರದ ಹಾಗೆ ಬಿಸಿಲಿಗೆ ಆವಿಯಾಗುವ ಭಯವಿಲ್ಲ’ ಎನ್ನುತ್ತಾರೆ.  

ಈ ಪೋಷಣೆಯಲ್ಲಿ ತರಕಾರಿ ಮತ್ತು ಯಾವುದೇ ಹೂವಿನ ಗಿಡಗಳು ಪೌಷ್ಟಿಕವಾಗಿ ಬೆಳೆಯುತ್ತವೆ.  ಬೇಗ ಹೂ ಬಿಡುತ್ತವೆ.  ರುಚಿಯಲ್ಲಿ ಸಾವಯವ ಗೊಬ್ಬರದಿಂದ ಬೆಳೆದ ತರಕಾರಿಗಳಷ್ಟೇ ಸ್ವಾದಿಷ್ಟವಾಗಿವೆ. ಇನ್ನು ಯಾವ ವಿಧದ ಕೀಟಗಳೂ ಬಾಧಿಸದ ಕಾರಣ ಕೀಟನಾಶಕದ ಅಗತ್ಯ ಬೀಳುವುದಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂಬುದೂ ಅವರ ವಿವರಣೆ. ಇದರಿಂದಾಗಿ ಸೊಳ್ಳೆಗಳ ಕಾಟ ಕೂಡ ಬರುವುದಿಲ್ಲವಂತೆ.

ಬಕೆಟ್‌ನಲ್ಲಿ ಮೂತ್ರವನ್ನು ಸಂಗ್ರಸಿಕೊಂಡರೆ ಬಳಕೆಗೂ ಕಷ್ಟವಿಲ್ಲ. ನೀರು ಮತ್ತು ರಂಜಕದ ಕೊರತೆ ನೀಗುವಲ್ಲಿ ಇದರ ಸಹಕಾರ ದೊಡ್ಡದು. ವ್ಯರ್ಥವಾಗುವ ಈ ಸಂಪನ್ಮೂಲದಿಂದ ಕೈತೋಟದಲ್ಲಿ ದಿನದ ಕಾಯಿಪಲ್ಲೆ ಬೆಳೆಯುವುದು ಸುಲಭ ಎನ್ನುತ್ತಾರೆ ಶಾರದಮ್ಮ. 

* ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Lakshmi Hebbalkar

Udupi: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಹಗುರವಾಗಿ ಪರಿಗಣಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

5-renukaswamy

Renukaswamy Case: ಶೆಡ್‌ನ‌ಲ್ಲಿ ಕೊಲೆ ನಡೆದಿರುವುದಕ್ಕೆ ಸಾಕ್ಷಿ ಇಲ್ಲ: ವಕೀಲ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

Lakshmi Hebbalkar

Udupi: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಹಗುರವಾಗಿ ಪರಿಗಣಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

6-bng

Bengaluru: ಪತ್ನಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ!

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.