ಜನತಾ ಗ್ಯಾರೇಜ್ : ಗ್ಯಾಸ್ ಸ್ಟವ್
Team Udayavani, May 4, 2020, 2:44 PM IST
1. ಒಲೆ ಆಫ್ ಆಗಿದೆ ಎನ್ನುವುದನ್ನು ಖಾತರಿಪಡಿಸಿಕೊಂಡು, ಬರ್ನರ್ ಬಿಸಿಯಾಗಿಲ್ಲ ಎನ್ನುವುದನ್ನೂ ಖಾತರಿ ಪಡಿಸಿಕೊಳ್ಳಬೇಕು. ಬಿಸಿ ಇದ್ದರೆ, ಆರುವ ತನಕ ಕಾಯಬೇಕು.
2. ಬರ್ನರ್ ಮೇಲಿನ ಕ್ಯಾಪ್ ಮತ್ತು ಮೆಶ್ ಅನ್ನು ತೆಗೆದಿರಿಸಿ. ಒಂದು ಬಕೆಟ್ಟಿನಲ್ಲಿ ನೀರು ಹಾಕಿ, ಸೋಪನ್ನು ಮಿಶ್ರಣ ಮಾಡಿ. ಅದರಲ್ಲಿ ಬರ್ನರ್, ಕ್ಯಾಪ್ ಮತ್ತು ಮೆಶ್ ಅನ್ನು ಮುಳುಗಿಸಿ.
3. ಬಳಸಿ ಬಿಟ್ಟ ಹಳೆಯ ಟೂತ್ ಬ್ರಶ್ ಇದ್ದರೆ, ಅದರಿಂದ ಬರ್ನರ್ ಕೂರಿಸುವ ಜಾಗದ ಒಳಗೆ ಸ್ವತ್ಛಗೊಳಿಸಿ. ಬ್ರಶ್ ಇಲ್ಲದಿದ್ದರೆ ಈ ಕೆಲಸಕ್ಕೆ ಬಟ್ಟೆಯನ್ನೂ ಬಳಸಬಹುದು.
4. ಸ್ಟವ್‌ನ ಮೇಲ್ಭಾಗದಲ್ಲಿ ಸ್ವಚ್ಛಗೊಳಿಸಲು ಸೋಪ್ ನೀರಿಂದ ತೇವಗೊಳಿಸಿದ ಸ್ಪಾಂಜ್ ಅಥವಾ ಬಟ್ಟೆಯನ್ನು ಬಳಸಿ. ಬಟ್ಟೆ ನಿಲುಕುವುದು ಕಷ್ಟವೆನಿಸಿದ ಭಾಗಗಳಲ್ಲಿ ಮಾತ್ರ, ಬ್ರಶ್ ಬಳಸಿ.
5. ಸ್ಟವ್ ಮೇಲೆ ಏನಾದರೂ ಗಟ್ಟಿ ಕಲೆ ಉಳಿದಿದ್ದರೆ, ಅದನ್ನು ತೆಗೆಯಲು ಮೊದಲು ನೀರಿನಿಂದ ಸೋಕಿಸಿ, ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸ್ವತ್ಛಗೊಳಿಸಿ.
6. ಸ್ಟವ್ ಅನ್ನು ಒರೆಸಿದ ನಂತರ, ಒಣಗಿದ ಬಟ್ಟೆಯಿಂದ ಮತ್ತೂಮ್ಮೆ ಒರೆಸಿ, ಅದರ ಮೇಲೆ ನೀರು ಉಳಿಯದಂತೆ ಮಾಡುವುದರಿಂದ ಗೆರೆಗಳು ಮೂಡುವುದಿಲ್ಲ. ಸ್ಟವ್ ಹೊಸತರಂತೆ ಕಾಣುತ್ತದೆ.
7. ಬಕೆಟ್ ಒಳಗೆ ಮುಳುಗಿಸಿಟ್ಟ ಸ್ಟವ್‌ನ ಬಿಡಿಭಾಗಗಳನ್ನು, ಟೂತ್ ಬ್ರಶ್‌ನಿಂದ ಉಜ್ಜಿ. ಸೋಪ್ ನೀರಿನಲ್ಲಿ ಮುಳುಗಿಸಿಟ್ಟಿದ್ದರಿಂದ ಕೊಳೆ ಸಲೀಸಾಗಿ ಬಂದುಬಿಡುತ್ತದೆ. ನಂತರ ಜಿಡ್ಡು ಉಳಿಯದಂತೆ ತೊಳೆಯಿರಿ.
8. ನೀರಿನಲ್ಲಿ ತೊಳೆದ ಬಿಡಿಭಾಗಗಳನ್ನು, ಬಿಸಿಲಿನಲ್ಲಿ ಒಣಗಿಸಿ ನಂತರವೇ ಸ್ಟವ್ ಮೇಲೆ ಇಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್