ವಿಮಾನಂದ: ಟೇಕಿಟ್‌ ಈಜಿ ಪಾಲಿಸಿ


Team Udayavani, Mar 6, 2017, 2:01 PM IST

06-ISIRI-8.jpg

ಅಪಘಾತದ ಸಂದರ್ಭದಲ್ಲಿ ಮೃತ್ಯು ಸಂಭವಿಸಿದರೆ ಅಥವಾ ಅಂಗ ಊನವಾದರೆ ಅವರ ಕುಟುಂಬದವರಿಗೆ ಜೀವನಕ್ಕೆ ಅಗತ್ಯವಾದ ಆರ್ಥಿಕ ನೆರವು ಒದಗಿಸಲು ಅಪಘಾತ ವಿಮೆ ಒಂದು ಸಶಕ್ತ ದಾರಿಯಾಗುತ್ತದೆ. ಆ ರೀತಿ ಅಪಘಾತಕ್ಕೆ ಗುರಿಯಾದವರ ಕುಟುಂಬದ ಸಹಾಯಕ್ಕಾಗಿ ಹಲವಾರು ವಿಮಾ ಪಾಲಿಸಿಗಳು ಅಸ್ತಿತ್ವದಲ್ಲಿವೆ. ಈಗ ಅಂತಹ ಕೆಲವು ಪಾಲಿಸಿಗಳ ಬಗ್ಗೆ ತುಸು ವಿವರವಾಗಿ ತಿಳಿದುಕೊಳ್ಳೋಣ:

1. ಬ್ಯಾಂಕ್‌ಖಾತೆ ಆಧಾರಿತ ಗುಂಪು ಅಪಘಾತ ವಿಮೆ
ಭಾರತೀಯ ಸ್ಟೇಟ್‌ ಬ್ಯಾಂಕ್‌ ಹಾಗೂ ಸಹವರ್ತಿ ಬ್ಯಾಂಕುಗಳ ವತಿಯಿಂದ ತನ್ನ ಎಸ್‌ಬಿ ಹಾಗೂ ವೈಯಕ್ತಿಕ ಕರೆಂಟ್‌ ಖಾತೆ ಯುುಳ್ಳ ಖಾತೆದಾರರ ಕ್ಷೇಮಾಭಿವೃದ್ಧಿಗಾಗಿ ಗುಂಪುವಿಮೆಯೊಂದು ಅನನ್ಯ ಕೊಡುಗೆ. ರೂ 20 ಲಕ್ಷ ಮೊತ್ತದ ಅಪಘಾತ ವಿಮೆಯ ಈ ಪಾಲಿಸಿಯನ್ನು ಎಸ್‌ಬಿಐಜನರಲ್‌ಇನ್ಶೂರನ್ಸ್‌ ಕಂಪೆನಿಯು ಎಸ್‌ಬಿಐ ಖಾತೆದಾರರಿಗೆ ನೀಡುತ್ತದೆ. ಇದರ ವಾರ್ಷಿಕ ಪ್ರೀಮಿಯಂ ವರ್ಸಸ್‌ ಟಾಕ್ಸ್‌ ಸಹಿತ ಕೇವಲ ರೂ.1000 ಮಾತ್ರ!  4 ಲಕ್ಷದ ಪಾಲಿಸಿಗೆ ಪ್ರೀಮಿಯಂ ಮೊತ್ತರೂ 200 ಮಾತ್ರ ಹಾಗೂ 2 ಲಕ್ಷದ ಪಾಲಿಸಿಗೆ ಪ್ರೀಮಿಯಂರೂ 100 ಮಾತ್ರ! ಇತ್ತೀಚೆಗಿನ ದಿನಗಳಲ್ಲಿ ಈ ಬಗ್ಗೆ ಭಾರಿ ಪ್ರಚಾರ ನಡೆಯುತ್ತಿದೆ. ಈ ಪ್ರೀಮಿಯಂ ಮೊತ್ತ 1 ವರ್ಷದ ಅವಧಿ ಆಗಿದ್ದು ಪ್ರತಿ ವರ್ಷವೂ ಪ್ರೀಮಿಯಂ ತೆತ್ತು ಪಾಲಿಸಿಯನ್ನು ನವೀಕರಿಸಬೇಕಾಗುತ್ತದೆ. 

ಈ ಅಪಘಾತ ವಿಮೆಯನ್ನು ಪಡಕೊಳ್ಳಲು ಇಚ್ಛೆಯುಳ್ಳ 18-65 ವಯಸ್ಸಿನ ಖಾತಾದಾರರು ತಮ್ಮಎಸ್‌ಬಿ ಖಾತೆ ಇರುವ ಸ್ಟೇಟ್‌ ಬ್ಯಾಂಕಿನ ಶಾಖೆಯನ್ನು ಸಂಪರ್ಕಿಸಿ ಇದಕ್ಕಾಗಿ ಇರುವ ಸರಳವಾದ ಒಂದು ಅರ್ಜಿಫಾರ್ಮ ಅನ್ನು ತುಂಬಬೇಕು. ಇದಕ್ಕಿರುವ ಪ್ರೀಮಿಯಂ ಮೊತ್ತವನ್ನು ನಿಮ್ಮ ಖಾತೆಯಿಂದ ಡೆಬಿಟ್‌ ಮಾಡಲಾಗುತ್ತದೆ. ಕೆಲವೇ ದಿನಗಳಲ್ಲಿ ಪಾಲಿಸಿ ಕೈಗೆ ಪೋಸ್ಟ್‌ ಮುಖಾಂತರ ಬಂದು ತಲುಪುತ್ತದೆ. 

ಈ ವಿಮೆ ಅಪಘಾತದಿಂದ ಉಂಟಾದ ಸಾವನ್ನು ಮಾತ್ರಕವರ್‌ ಮಾಡುತ್ತದೆ. ಅನಾರೋಗ್ಯದಿಂದ ಅಥವಾ ಸಹಜ ರೀತಿಯಿಂದ ಮೃತ್ಯು ಉಂಟಾದಲ್ಲಿ ಈ ಅಪಘಾತ ಮುಂದೆ  ಯಾವುದೇ ಪ್ರಯೋಜನವಾಗಲಾರದು.  ಅಪಘಾತವೆಂದರೆ ರಸ್ತೆ/ವಾಹನ ಅಪಘಾತ ಮಾತ್ರವಲ್ಲ. ಯಾವುದೇ ಅನೂಹ್ಯವಾಗಿ ಅಕಸ್ಮಾತ್ತಾಗಿ ನಡೆಯುವ ಹಿಂಸಾತ್ಮಕವಾದ ಬಾಹ್ಯ ಕಾರಣಗಳಿಂದ ಉಂಟಾಗುವ ಸಾವನ್ನೂ ಇದು ಕವರ್‌ ಮಾಡುತ್ತದೆ. ರಸ್ತೆ
ಅಪಘಾತ ಅಲ್ಲದೆ ಮರದಿಂದ ಬೀಳುವುದು, ನೆಲದಲ್ಲಿ ಜಾರಿ ಬೀಳುವುದು, ಹಾವು ಕಚ್ಚುವುದು, ನಾಯಿ ಕಚ್ಚುವುದು ಇತ್ಯಾದಿಗಳೂ ಕವರ್‌ಆಗುತ್ತವೆ. ಆದರೆ, ಆತ್ಮಹತ್ಯೆ ಹಾಗೂ ಸ್ವಯಂ ಮಾಡಿಕೊಂಡ ಗಾಯಗಳು, ಮದ್ಯದ ಅಮಲಿನಲ್ಲಿರುವಾಗ ನಡೆದ ಅಪಘಾತ, ಗಲಬೆ ದೊಂಬಿಗಳಲ್ಲಿ ಭಾಗವಹಿಸುವಿಕೆಯಿಂದ ನಡೆದ ಅಪಘಾತ ಇತ್ಯಾದಿಗಳನ್ನು ಹೊರತು ಪಡಿಸಲಾಗಿದೆ.  ಇಲ್ಲಿ ಅಪಘಾತ ಆದರೆ ಮಾತ್ರಪರಿಹಾರ ಸಿಗುತ್ತದೆ. ಇಲ್ಲವಾದರೆ ಕಟ್ಟಿದ ಪ್ರೀಮಿಯಂ ವಾಪಸ್‌ಕೊಡುವ ಪ್ರಮೇಯ ಈ ಪಾಲಿಸಿಗಳಲ್ಲಿ ಇರುವುದಿಲ್ಲ. 

ಪ್ರಸ್ತುತ ಸ್ಕೀಂ ಸ್ಟೇಟ್‌ ಬ್ಯಾಂಕ್‌ ಆಫ್ಇಂಡಿಯಾ ಹಾಗೂ ಸಹವರ್ತಿ ಬ್ಯಾಂಕುಗಳ ಖಾತೆದಾರರಿಗೆ ಈ ಪಾಲಿಸಿಯು ಅದರ ಸಹ ಸಂಸ್ಥೆ ಎಸ್‌ಬಿಐಜನರಲ್‌ಇನ್ಶೂರನ್ಸ್‌ ವತಿಯಿಂದ ಲಭ್ಯವಿದೆ. ಎಲ್ಲಾ ಸ್ಟೇಟ್‌ ಬ್ಯಾಂಕ್‌ಖಾತೆದಾರರೂ ಈ ಸೌಲಭ್ಯವನ್ನು ಅಗತ್ಯವಾಗಿ ಪಡೆದು ಕೊಳ್ಳಬಹುದು. ಅಲ್ಲಿ ಖಾತೆ ಇಲ್ಲದವರು ಈ ಸೌಲಭ್ಯಕ್ಕಾಗಿಯಾದರೂ ಧಾರಾಳವಾಗಿ ಖಾತೆ ತೆರೆದುಕೊಳ್ಳಬಹುದು. 

2. ಇತರ ಗುಂಪು ವಿಮೆಗಳು
ಒಂದು ಕಂಪೆನಿ/ ಸ್ವಸಹಾಯ ಗುಂಪು, ಸಂಸ್ಥೆ ಇತ್ಯಾದಿಗಳ ಸದಸ್ಯರು ಒಂದೇ ಗುಂಪಾಗಿ ಈ ರೀತಿಯ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯನ್ನು ಸಾಮಾನ್ಯ ವಿಮಾ ಕಂಪೆನಿಗಳಿಂದ ಪಡೆಯಬಹುದಾಗಿದೆ. ಪಾಲಿಸಿಯಿಂದ ಪಾಲಿಸಿಗೆ ಪ್ರೀಮಿಯಂ ಮತ್ತು ಕವರ್‌ ಸಂಬಂಧಿ ವ್ಯತ್ಯಾಸಗಳು ಇರಬಹುದು.

3. ರೈಡರುಗಳು
ಬೇರೆ ವಿಮಾ ಪಾಲಿಸಿಗಳಲ್ಲಿ ಸೇರಿಸಲ್ಪಟ್ಟ ಒಂದು ನಿಯಮವನ್ನು ರೈಡರ್‌ ಅನ್ನುತ್ತಾರೆ. ಪರ್ಸನಲ್‌ಆಕ್ಸಿಡೆಂಟ್‌ ವಿಮೆಯು ಮೋಟಾರು ಇನ್ಶೂರನ್ಸ್‌ ಹಾಗೂ ದೇಶಿ ಟ್ರಾವೆಲ್‌  ಅಥವಾ ಮೆಡಿಕ್ಲೈಮ್‌ ಪಾಲಿಸಿಗಳಲ್ಲೂ ಒಂದು ಸಣ್ಣ ಪ್ರಮಾಣದಲ್ಲಿ ರೈಡರ್‌ರೂಪದಲ್ಲಿ ಭಾಗಶಃ ಲಭ್ಯ. ಸಾದಾ ಜೀವವಿಮೆಯಲ್ಲಿಯೂ ಸಾವಿರಕ್ಕೆ 1 ರೂ. ಕಟ್ಟಿದರೆ ಡಬಲ್‌ ಆಕ್ಸಿಡೆಂಟ್‌ ಬೆನಿಫಿಟ್‌ ಎಂಬ ರೈಡರ್‌ಇದೆ. ಅದರ ಪ್ರಕಾರ ಅಪಘಾತದಿಂದಾಗಿ ಮೃತ್ಯು 
ಸಂಭವಿಸಿದರೆ ಸಿಗುವ ವಿಮಾ ಮೊತ್ತಡಬಲ್‌. ಆದರೆ ಇವೆಲ್ಲ ರೈಡರುಗಳು ಒಂದು ಸೀಮಿತ ಮೊತ್ತಕ್ಕೆ ಮಾತ್ರ ನಡೆಯುತ್ತದೆ. ಪರ್ಸನಲ್‌ಆಕ್ಸಿಡೆಂಟ್‌ ಪಾಲಿಸಿಯಂತಹ ದೊಡ್ಡ ಮೊತ್ತದ ಆಕ್ಸಿಡೆಂಟ್‌ ಪಾಲಿಸಿ ಬೇರೊಂದಿಲ್ಲ.    

ಈ ಪಾಲಿಸಿಗಳಲ್ಲಿ ಅಕಸ್ಮಾತ್‌ ಅವಗಡ ಸಂಭವಿಸಿದರೆ ಕೂಡಲೇ ವಿಮಾ ಕಂಪೆನಿಗೆ ಸುದ್ದಿ ತಿಳಿಸತಕ್ಕದ್ದು. ಅಪಘಾತದಲ್ಲಿ ಮೃತ್ಯು ಉಂಟಾದರೆ ಅದರ ಮರಣೋತ್ತರ ವರದಿ. ಎಫ್.ಐ.ಆರ್‌ ವರದಿ, ಪಂಚನಾಮ, ವೈದ್ಯರ ವರದಿ, ಮೃತ್ಯು ಪ್ರಮಾಣ ಪತ್ರ ಇತ್ಯಾದಿಗಳ ಅಗತ್ಯ ಬೀಳುತ್ತದೆ ಹಾಗೂ ಅಶ್ಯಕತೆಯ ಕೇಸ್‌ ಆದಲ್ಲಿ ವೈದ್ಯಕೀಯ ವರದಿಗಳು, ಚಿಕಿತ್ಸೆಯ ವರದಿಗಳು, ಅಂತಿಮವಾಗಿ ಫಿಟೆ°ಸ್‌ ಸರ್ಟಿಫಿಕೇಟ್‌ ಇತ್ಯಾದಿಗಳ ಅಗತ್ಯ ಬೀಳುತ್ತದೆ.  

4. ಪರ್ಸನಲ್‌ಆಕ್ಸಿಡೆಂಟ್‌ ಪಾಲಿಸಿಗಳು
ದೇಶದಲ್ಲಿ ಹಲವಾರು ವಿಮಾ ಕಂಪೆನಿಗಳ ಮೂಲಕ ಈ ವಿಮೆ ಬಿಕರಿಯಾಗುತ್ತಿದೆ. ಇದು ಅಪಘಾತ ವಿಮೆ. ಹೌದು ಆದರೆ ಗುಂಪು ವಿಮೆ ಅಲ್ಲ! ಇದೊಂದು ವೈಯಕ್ತಿಕಅಪಘಾತ ಪಾಲಿಸಿ. ಇಲ್ಲಿ ಅಪಘಾತ ಎಂದರೆ ಬಾಹ್ಯ ಕಾರಣಗಳಿಂದ ಹಿಂಸಾಪೂರ್ವಕವಾಗಿ ಸ್ಪಷ್ಟವಾಗಿ ಗೋಚರಿಸುವಂತೆ ಆಗಿರುವಂತದ್ದು. ಇವು ರೈಲು/ರೋಡ್‌/ವಿಮಾನ ಅಪಘಾತ, ಡಿಕ್ಕಿ, ಕೆಳಬೀಳುವುದು, ಗ್ಯಾಸ್‌ ನ್ಪೋಟ, ಸರ್ಪ ಕಚ್ಚುವುದು, ನಾಯಿ ಕಚ್ಚುವುದು, ಬೆಂಕಿ, ಮುಳುಗಿಹೋಗುವುದು, ವಿಷಪ್ರಾಷನ ಮತ್ತು ಇತರಇತ್ಯಾದಿ ಅಪಘಾತಗಳನ್ನು ಕವರ್‌ ಮಾಡುತ್ತವೆ. ಆತ್ಮಹತ್ಯೆ, ಸರ್ಕಸ್‌ ಇತ್ಯಾದಿ ಸ್ವಯಂಕೃತಾಪರಾಧಗಳು ಇಲ್ಲಿಕವರ್‌ ಆಗುವುದಿಲ್ಲ. ಅಪಘಾತವು ಕೇವಲ ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಯಾವೆಡೆಯಲ್ಲಿಆದರೂ ವಿಮಾ ಸೌಲಭ್ಯ ಲಭ್ಯ. 

ಅಪಘಾತದ ಕಾರಣಗಳಿಂದ ಮೃತ್ಯು ಮಾತ್ರವಲ್ಲದೆ, ಶಾಶ್ವತವಾದ ಸಂಪೂರ್ಣ ಅವಶಕ್ಯತೆ, ಶಾಶ್ವತವಾದ ಭಾಗಶಃ ಅವಶಕ್ಯತೆಗಳನ್ನು ಮತ್ತು ತಾತ್ಕಾಲಿಕ ಸಂಪೂರ್ಣ ಅವಶಕ್ಯತೆಯನ್ನೂಕೂಡಾಕವರ್‌ ಮಾಡುತ್ತವೆ. (Permanent Total/Partial disability and Temporaray Total disability)

ವಿಮಾ ಪರಿಹಾರ
ಬಹುತೇಕ ಒಂದು ಪಾಲಿಸಿ ಪತ್ರದಲ್ಲಿ ಈ ರೀತಿ ಪರಿಹಾರಗಳನ್ನು ನಮೂದಿಸಿರುತ್ತಾರೆ: ಮೃತ್ಯುವಿನ ಸಂದರ್ಭದಲ್ಲಿ ಶೇ.100ರಷ್ಟು ವಿಮಾ ಮೊತ್ತವನ್ನು ಪರಿಹಾರವಾಗಿ ನೀಡಲಾಗುತ್ತದೆ.  ಶಾಶ್ವತವಾದ ಸಂಪೂರ್ಣ ಅವಶಕ್ಯತೆ ಅಂದರೆ ಎರಡೂ ಕೈಗಳು, ಕಾಲುಗಳು, ಕಣ್ಣುಗಳು ಇತ್ಯಾದಿಗಳನ್ನು ಕಳೆದುಕೊಂಡಲ್ಲಿ ಶೇ.100ರಷ್ಟು ವಿಮಾ ಮೊತ್ತವನ್ನು ಪರಿಹಾರವಾಗಿ ನೀಡಲಾಗುತ್ತದೆ. ಶಾಶ್ವತ ಭಾಗಶಃ ಅವಶಕ್ಯತೆ ಅಂದರೆ ದೇಹದ ಬೇರೆ ಬೇರೆ ಅಂಗಗಳು ಊನವಾದರೆ ಶೇ.2 ನಿಂದ ಡಿದು 50% ದವರೆಗೆಒಂದು ಸಿದ್ಧ ಕೋಷ್ಟಕದ ಪ್ರಕಾರ ಪರಿಹಾರ ನೀಡಲಾಗುತ್ತದೆ. ತಾತ್ಕಾಲಿಕ ಸಂಪೂರ್ಣಅವಶಕ್ಯತೆಗೆ ಗರಿಷ್ಟ 104 ವಾರಗಳ ಅವಧಿಗೆ ವಿಮಾ ಮೊತ್ತದ 1% ಪ್ರತಿ ವಾರಕ್ಕೆ (ವಾರಕ್ಕೆರೂ 5000 ುàರದಂತೆ) ದೊರೆಯುತ್ತದೆ.  

ವಯೋಮಾನ
ಪರ್ಸನಲ್‌ ಆಕ್ಸಿಡೆಂಟ್‌ ವಿಮೆಯು 5 ರಿಂದ 70 ವರ್ಷದ ಒಳಗಿನ ವ್ಯಕ್ತಿಗಳಿಗೆ ಸಿಗುತ್ತದೆ. ಮಕ್ಕಳನ್ನು ಫ್ಯಾಮಿಲಿ ಪಾಲಿಸಿಯೊಳಗೆ ಕವರ್‌ ಮಾಡುವುದಿದ್ದರೆ ಅವರ ವಯಸ್ಸು 5 ರಿಂದ 19ರ ಒಳಗಿರಬೇಕು. 19ರ ನಂತರ ಸ್ವಂತ ನೆಲೆಯಲ್ಲಿ ವಿಮೆಯನ್ನು ಮಾಡಿಸಿಕೊಳ್ಳಬೇಕು.   

ವಿಮಾ ಮೊತ್ತ
ಈ ಪಾಲಿಸಿಯಡಿಯಲ್ಲಿ ಇಳಿಸುವ ಮಾ ಮೊತ್ತಕ್ಕೆ ಕೆಲವು ುತಿಗಳಿವೆ. ಮಾಕಂಪೆನಿಯು ನಿಮ್ಮ ಪ್ರಸ್ತುತಆದಾಯ, ವಯಸ್ಸು, ಉದ್ಯೋಗ ಇತ್ಯಾದಿ ವಿವರಗಳನ್ನು ನೋಡಿಕೊಂಡು ಗರಿಷ್ಟ ವಿಮಾ ಮೊತ್ತ ನಿಗದಿ ಪಡಿಸುತ್ತದೆ. ಆದಾಯದ ಸೌ³ಸ್‌ಗೆ ಅದರ 50% ಮಾತ್ರ ಹಾಗೂ ಅವಲಂಬಿತ ಮಕ್ಕಳಿಗೆ ರೂ 50,000 ಮಾತ್ರ. 

ವಿಮಾ ಕಂಪೆನಿಗಳು
ನಾಲ್ಕು ರಾಷ್ಟ್ರೀಯ ಕೃತಜನರಲ್‌ ಇನ್ಸೂರೆನ್ಸ್‌ ಕಂಪೆನಿಗಳು (ಓರಿಯೆಂಟಲ್‌, ನ್ಯಾಶನಲ್‌, ನ್ಯೂಇಂಡಿಯ, ಯುನೈಟೆಡ್‌) ಮತ್ತು ಖಾಸಗಿ ಕಂಪೆನಿಗಳಾದ ಟಾಟಾಎಐಜಿ, ಚೋಳಮಂಡಲಂ, ಅಪೊಲೋ ಡಿಕೆ, ರೋಯಲ್‌ ಸುಂದರಂ, ಎಚ್‌ಡಿಎಫ್ಸಿ ಎರ್ಗೋ, ರಿಲಾಯನ್ಸ್‌, ಸ್ಟಾರ್‌, ಐಸಿಐಸಿಐ ಲೊಂಬಾರ್ಡ್‌, ಬಜಾಜ್‌ಅಲಿಯಾನ್ಸ್‌, ಇಫೊRಟೋಕಿಯೋ ಇತ್ಯಾದಿ ಕಂಪೆನಿಗಳು ಪರ್ಸನಲ್‌ಆಕ್ಸಿಡೆಂಟ್‌ ವಿಮೆಯನು °ಒದಗಿಸುತ್ತವೆ. 

ಇವುಗಳ ಪ್ರೀಮಿಯಂ ವಿಮಾ ಮೊತ್ತದ ಸಾವಿರಕ್ಕೆ ಸುಮಾರು ಒಂದು ರುಪಾಯಿಯ ಆಸುಪಾಸಿನಲ್ಲಿ ಇದ್ದು ಕಂಪೆನಿಯಿಂದ ಕಂಪೆನಿಗೆ ತುಸು ವ್ಯತ್ಯಾಸ ಬರುತ್ತದೆ. ಅನ್‌-ಲೈನ್‌ನಲ್ಲಿ ಪಾಲಿಸಿ ಕೊಂಡಲ್ಲಿ ತುಂಬಾ ಅಗ್ಗವಾಗಿ ಸಿಗುವ ಸಾಧ್ಯತೆಗಳಿವೆ. 

ಬೋನಸ್‌
ಈ ಪಾಲಿಸಿಯ ಪ್ರೀಮಿಯಂ ವಾರ್ಷಿಕ ಮತ್ತು ಅವಧಿ ಮುಗಿದ 90 ದಿನಗಳೊಳಗೆ ನವೀಕರಿಸತಕ್ಕದ್ದು. ಪ್ರತಿ ಬಾರಿ ನವೀಕರಿಸುವಾಗಲೂ ವಾರ್ಷಿಕ 5% ಬೋನಸ್‌ ಲೆಕ್ಕದಲ್ಲಿ ವಿಮಾ ಮೊತ್ತ ಜಾಸ್ತಿಯಾಗುತ್ತಾ ಹೋಗುತ್ತದೆ (ಗರಿಷ್ಟ 50%).  

ರೈಡರ್‌ಗಳು
ಅದಲ್ಲದೆ ಹೆಚ್ಚುವರಿ ಪ್ರೀುಮಿಯಂ ಕಟ್ಟಿದರೆ ಹೆಚ್ಚುವರಿ ರೈಡರ್‌ಅಥವಾ ಸೌಲಭ್ಯಗಳು ದೊರಕುತ್ತವೆ. ಈ ಕ್ಲೈಮ್‌ಜೊತೆಗೆ ವೈದ್ಯಕೀಯ ವೆಚ್ಚವನ್ನೂ ಕವರ್‌ ಮಾಡುವ ರೈಡರ್‌ಗಳು ಇವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪುಟ್ಟ ನೆರವು ನೀಡುವ ರೈಡರ್‌ಗಳಿವೆ. ಕೆಲವರು ಇವನ್ನುಒಟ್ಟಿಗೇ ಕವರ್‌ ಮಾಡುತ್ತಾರೆ. ಇವುಗಳ ವಿವರಗಳನ್ನೂ ವಿಮಾ ಕಂಪೆನಿಗಳಿಂದ ತಿಳಿದುಕೊಳ್ಳ ಬೇಕು.

5. ಇತರ ಅಪಘಾತ ವಿಮೆಗಳು
ಆದಾಯವಿಲ್ಲದ ವ್ಯಕ್ತಿಗಳಿಗಾಗಿ ಜನರಲ್‌ ಇನ್ಶೂರನ್ಸ್‌ ಕಂಪೆನಿಯು ಜನತಾ ಪರ್ಸನಲ್‌ಆಕ್ಸಿಡೆಂಟ್‌ ಪಾಲಿಸಿ ಮತ್ತು ಗ್ರಾಮೀಣ ಪರ್ಸನಲ್‌ಆಕ್ಸಿಡೆಂಟ್‌ ಪಾಲಿಸಿ ಎಂಬ ಪ್ರತ್ಯೇಕ ಪಾಲಿಸಿಗಳಿವೆ. ಆಕ್ಸಿಡೆಂಟ್‌ ವಿಮೆಯು ಮೋಟಾರು ಇನ್ಶೂರನ್ಸ್‌ ಹಾಗೂ ದೇಶಿ ಟ್ರಾವೆಲ್‌ ಅಥವಾ ಮೆಡಿಕ್ಲೈಮ್‌ ಪಾಲಿಸಿಗಳಲ್ಲೂ ಒಂದು ಸಣ್ಣ ಪ್ರಮಾಣದಲ್ಲಿ ಭಾಗಶಃ ಲಭ್ಯ. ಸಾದಾಜೀವ ವಿಮೆಯಲ್ಲಿಯೂ ಸಾವಿರಕ್ಕೆ 1 ರೂ. ಕಟ್ಟಿದರೆ ಡಬಲ್‌ ಆಕ್ಸಿಡೆಂಟ್‌ ಬೆನಿಫಿಟ್‌ ಎಂಬ ರೈಡರ್‌ಇದೆ. ಅದರ ಪ್ರಕಾರ ಅಪಘಾತದಿಂದಾಗಿ ಮೃತ್ಯು ಸಂಭವಿಸಿದರೆ ಮಾತ್ರ ವಿಮಾ ಮೊತ್ತಡಬಲ್‌. ಆದರೆಇವೆಲ್ಲ ಒಂದು ಸೀಮಿತ ಮೊತ್ತಕ್ಕೆ ಮಾತ್ರ ನಡೆಯುತ್ತದೆ. ಪರ್ಸನಲ್‌ಆಕ್ಸಿಡೆಂಟ್‌ ಪಾಲಿಸಿಯಂತೆ ದೊಡ್ಡ ಮೊತ್ತದ ಆಕ್ಸಿಡೆಂಟ್‌ ಪಾಲಿಸಿ ಬೇರೊಂದಿಲ್ಲ.    
ಇದೊಂದು ಜನರಲ್‌ಇನ್ಶೂರನ್ಸ್‌ ವಿಮೆಯಾದ ಕಾರಣ ಇದರಲ್ಲಿ ಕಟ್ಟಿದ ಪ್ರೀಮಿಯಂ ಅನ್ನು ಹಿಂಪಡೆಯುವಂತಹ ಮತ್ತು ಅದರ ಮೇಲೆ ಒಂದುರಿಟರ್ನ್ ಆಶಿಸುವ ಪ್ರಮೇಯವೇ ಇಲ್ಲ. ಕಟ್ಟಿದ ವಾರ್ಷಿಕ ಪ್ರೀಮಿಯಂ ಒಂದು ಹೂಡಿಕಾರತ ಶುದ್ಧ ವಿಮೆಯಂತೆ ಕೆಲಸ ಮಾಡುತ್ತದೆ. ಈ ಪ್ರೀಮಿಯಂ ಮೊತ್ತಕ್ಕೆ ಯಾವುದೇ ರೀತಿಯ ಆದಾಯಕರ ಲಾಭವೂ ಸಿಗುವುದಿಲ್ಲ.    

ಕ್ಲೈಮು:
ಅಕಸ್ಮಾತ್‌ ಅವಗಡ ಸಂಭವಿಸಿದರೆ ಕೂಡಲೇ ವಿಮಾ ಕಂಪೆನಿಗೆ ಸುದ್ದಿ ತಿಳಿಸತಕ್ಕದ್ದು. ಅಪಘಾತದಲ್ಲಿ ಮೃತ್ಯು ಉಂಟಾದರೆ ಅದರ ಮರಣೋತ್ತರ ವರದಿ. ಎಫ್.ಐ.ಆರ್‌ ವರದಿ, ಪಂಚನಾಮ, ವೈದ್ಯರ ವರದಿ, ಮೃತ್ಯು ಪ್ರಮಾಣ ಪತ್ರ ಇತ್ಯಾದಿಗಳ ಅಗತ್ಯ ಬೀಳುತ್ತದೆ ಹಾಗೂ ಅಶಕ್ಯತೆಯ ಕೇಸ್‌ ಆದಲ್ಲಿ ವೈದ್ಯಕೀಯ ವರದಿಗಳು, ಚಿಕಿತ್ಸೆಯ ವರದಿಗಳು, ಅಂತಿಮವಾಗಿ ಫಿಟೆ°ಸ್‌ ಸರ್ಟಿಫಿಕೇಟ್‌ ಇತ್ಯಾದಿಗಳ ಅಗತ್ಯ ಬೀಳುತ್ತದೆ.  
ಅತಿ ಕಡಿಮೆ ಪ್ರೀಮಿಯಂ ದರಕ್ಕೆ ಸುಲಭವಾಗಿ ದೊರಕುವ ಈ ಪಾಲಿಸಿ ಮೃತ್ಯು ಮಾತ್ರವಲ್ಲದೆ ಅಂಗ ಊನ ಮತ್ತು ಕೆಲಸಕ್ಕೆ ಹೋಗಲು ಅವಶಕ್ಯತೆಯ ಸಂದರ್ಭಗಳಲ್ಲಿ ಬಹಳ ಸಹಕಾರಿಯಾಗಿ ನಿಲ್ಲಬಹುದು. ಒಂದೆರಡು ಸಾವಿರ ವಾರ್ಷಿಕ ಪ್ರೀಮಿಯಂಗೆ ಒಂದಿಪ್ಪತ್ತು ಲಕ್ಷದ ವಿಮೆ ಇಳಿಸಬಹುದಾಗಿದೆ. ಅತಿ ಪ್ರಚಾರಲ್ಲದ ಈ ಪಾಲಿಸಿಯನ್ನು ಪ್ರತಿಯೊಬ್ಬರೂ ಪರಿಶೀಲಿಸಿ ಮಾಡಿಸಿಕೊಳ್ಳುವುದು ಒಳ್ಳೆಯದು. 

ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.