Vlog ಸ್ಪಾಟ್‌: ವಿಡಿಯೊ ದಿನಚರಿಯ ಟ್ರೆಂಡು


Team Udayavani, Mar 9, 2020, 5:54 AM IST

Vlog ಸ್ಪಾಟ್‌: ವಿಡಿಯೊ ದಿನಚರಿಯ ಟ್ರೆಂಡು

ಬರಹಗಾರರೆಲ್ಲಾ ಆನ್‌ಲೈನ್‌ ಬ್ಲಾಗ್‌ಗಳಲ್ಲಿ ತಮ್ಮ ದಿನಚರಿಯನ್ನು ಬರೆಯುವ ಕಾಲವೊಂದಿತ್ತು. ಹದಿಹರೆಯದ ಹುಡುಗ ಹುಡುಗಿಯರು ತಮ್ಮ ಮನಸ್ಸಿನ ಭಾವನೆಗಳನ್ನು ಅದರಲ್ಲಿ ಹಂಚಿಕೊಳ್ಳುತ್ತಿದ್ದರು. ಗೃಹಿಣಿಯರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಅದರಲ್ಲಿ ದಾಖಲಿಸುತ್ತಿದ್ದರು. ಮಧ್ಯವಯಸ್ಸಿನ ಪುರುಷರು ತಮ್ಮ ಗತಕಾಲದ ನೆನಪುಗಳನ್ನು ಅಲ್ಲಿ ಉಳಿಸುತ್ತಿದ್ದರು. ಅವುಗಳನ್ನು ದಿನನಿತ್ಯ ಓದಿ ಕಮೆಂಟಿಸುವ ವರ್ಗವೇ ಇತ್ತು. ಇಂದು ಬ್ಲಾಗ್‌ನ ವಿಡಿಯೋ ರೂಪ ನಮ್ಮ ನಡುವೆ ಅನಾವರಣಗೊಂಡು ಸದ್ದಿಲ್ಲದೆ ಬೇರೂರುತ್ತಿದೆ. ಅಕ್ಷರ ರೂಪಗಳಲ್ಲಿ ಇರುತ್ತಿದ್ದ ದಿನಚರಿಯ ಅನುಭವಗಳು ಇಂದು ವಿಡಿಯೋ ರೂಪ ತಾಳಿವೆ. ಅದನ್ನೇ “ವ್ಲಾಗ್‌'(Vlog) ಎನ್ನುತ್ತಾರೆ. ತಮ್ಮ ದಿನಿನಿತ್ಯದ ಕೆಲಸ ಕಾರ್ಯಗಳು, ಶಾಪಿಂಗ್‌, ಮೇಕಪ್‌, ಅಡುಗೆ, ಟೆಕ್ನಾಲಜಿ, ವಾರಾಂತ್ಯದ ಬೈಕ್‌ ರೈಡಿಂಗ್‌ ಹೀಗೆ ಎಲ್ಲಾ ವಿಷಯಗಳನ್ನೂ ವಿಡಿಯೋ ರೂಪದಲ್ಲಿ ಯೂಟ್ಯೂಬ್‌ನಲ್ಲಿ ದಾಖಲಿಸುತ್ತಿದ್ದಾರೆ. ಅಚ್ಚರಿ ಎಂದರೆ ಅದರಿಂದ ವ್ಲಾಗರ್‌ಗಳು ಸಂಪಾದನೆಯನ್ನೂ ಮಾಡುತ್ತಿದ್ದಾರೆ. ಇನ್ನೂ ಹವ್ಯಾಸವಾಗಿ ನಡೆದುಕೊಂಡುಹೋಗುತ್ತಿರುವ ಈ ಟ್ರೆಂಡ್‌ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡರೆ ಇದನ್ನೇ ಫ‌ುಲ್‌ಟೈಮ್‌ ಉದ್ಯೋಗವಾಗಿಯೂ ಆರಿಸಿಕೊಳ್ಳುವ ದಿನಗಳು ದೂರವಿಲ್ಲ. ದಿನಬೆಳಗಾದರೆ ಕನ್ನಡಿಗರ ಮೊಬೈಲ್‌, ಕಂಪ್ಯೂಟರ್‌ ಸ್ಕ್ರೀನುಗಳನ್ನು ತಟ್ಟುತ್ತಿರುವ ಕನ್ನಡ ವಾಗ್‌ಗಳಲ್ಲಿ ಆಯ್ದ ಐದರ ಪರಿಚಯ ಇಲ್ಲಿದೆ…

ಲೈಫ್ ಬಿಯಾಂಡ್‌ ಬ್ಯೂಟಿ
ಯೂಟ್ಯೂಬ್‌ ಲಿಂಕ್‌- bit.ly/2Iny85z
Since  2018
ಚಂದಾದಾರರು- 1,30,000
ಕೆಟಗರಿ- ಲೈಫ್ಸ್ಟೈಲ್‌, ಮನೆ ನಿರ್ವಹಣೆ, ಆಹಾರ, ಪ್ರವಾಸ, ಮೇಕಪ್‌
ಪ್ರಾಯೋಜಕ ಸಂಸ್ಥೆಗಳು- ವಂಡರ್‌ಶೆಫ್, ಮೇಯರ್, ಲೋರಿಯಲ್‌

ಐಟಿ ಉದ್ಯೋಗಿಯಾಗಿದ್ದ ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೆ. ಮದುವೆಯ ನಂತರ ಈರೋಡಿಗೆ ವಾಸಸ್ಥಾನ ಬದಲಾಯಿಸಬೇಕಾಗಿ ಬಂದಿತು. ಭಾಷೆ ಗೊತ್ತಿಲ್ಲದ್ದರಿಂದ ಅಲ್ಲಿ ನನಗೆ ಒಂಟಿತನ ಕಾಡತೊಡಗಿತು. ಆಗ ಬೇಜಾರು ಕಳೆಯಲೆಂದು ವ್ಲಾಗ್‌ ಮೊರೆ ಹೊಕ್ಕೆ. ಮನೇಲಿ ಕಸ ಗುಡಿಸುವಂಥ ಚಿಕ್ಕಪುಟ್ಟ ಸಂಗತಿಗಳಿಂದ ಹಿಡಿದು, ಶಾಪಿಂಗ್‌, ಬಟ್ಟೆ, ಅಡುಗೆ, ಹೋಟೆಲ್‌, ಪ್ರವಾಸ… ಹೀಗೆ ನನ್ನ ದೈನಂದಿನ ಜೀವನದ ಆಗುಹೋಗುಗಳನ್ನೇ ದಾಖಲಿಸಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡತೊಡಗಿದೆ. ಈ ಹವ್ಯಾಸದಿಂದ ಆದಾಯದ ನಿರೀಕ್ಷೆಯೇನೂ ಇರಲಿಲ್ಲ. ಸುಮಾರು ಒಂದು ವರ್ಷದ ತನಕ ದುಡ್ಡು ಬರಲಿಲ್ಲ. ಈಗ ತಿಂಗಳಿಗೆ ಏನಿಲ್ಲವೆಂದರೂ 7,000- 10,000 ರೂ. ತನಕ ಆದಾಯ ಬರುತ್ತಿದೆ. ನಮ್ಮ ವಿಡಿಯೋಗೆ ಗೂಗಲ್‌ನವರೇ ನೀಡುವ ಜಾಹೀರಾತನ್ನು ಎಷ್ಟು ಮಂದಿ ವೀಕ್ಷಿಸುತ್ತಾರೋ, ಅದರ ಮೇಲೆ ಆದಾಯ ನಿರ್ಧಾರವಾಗುತ್ತದೆ. ಚಂದಾದಾರರು ಎಷ್ಟೇ ಮಂದಿ ಇದ್ದರೂ ಅವರೆಲ್ಲರೂ ನಮ್ಮ ಪ್ರತಿ ವಿಡಿಯೋವನ್ನು ನೋಡುತ್ತಾರೆ ಎನ್ನಲಾಗುವುದಿಲ್ಲ. ಹೀಗಾಗಿ ಆದಾಯದಲ್ಲಿ ವ್ಯತ್ಯಯವಾಗುತ್ತಿರುತ್ತದೆ. ಅದನ್ನು ಹೊರತುಪಡಿಸಿ, ನಮ್ಮ ಕಂಟೆಂಟ್‌ಅನ್ನು ಆಧರಿಸಿ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಕಳಿಸಿಕೊಡುವುದೂ ಉಂಟು. ಅದನ್ನು ಬಳಸಿ ಚೆನ್ನಾಗಿದೆ ಎಂದೆನ್ನಿಸಿದರೆ ಅದರ ಬಗ್ಗೆ ವಿಡಿಯೋ ಮಾಡುತ್ತೇನೆ. ಕೆಲ ಸಂಸ್ಥೆಗಳು ಅದಕ್ಕಾಗಿ ಪೇ ಮಾಡುತ್ತಾರೆ. ಒಟ್ಟಿನಲ್ಲಿ ನನ್ನದು ಹವ್ಯಾಸ ಆಗಿರುವುದರಿಂದ, ಇದರಿಂದ ಬರುವ ಆದಾಯವೆಲ್ಲಾ ನನಗೆ ಬೋನಸ್‌!
– ಅರ್ಪಿತಾ, ಈರೋಡ್‌

ಸಕ್ಕತ್‌ ಸ್ಟುಡಿಯೊ
ಯೂಟ್ಯೂಬ್‌ ಲಿಂಕ್‌- bit.ly/3arq5R8
Since:  2014
ಕೆಟಗರಿ- ಮನರಂಜನೆ, ಕಿರುಚಿತ್ರ, ಆಲ್ಬಂ ಹಾಡು

ಕನ್ನಡದಲ್ಲಿ ಯಾವುದೇ ರೀತಿಯ ವಿಡಿಯೋ ಕಂಟೆಂಟ್‌ ಮಾಡುವವರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಕ್ಕತ್‌ ಸ್ಟುಡಿಯೋಅನ್ನು ಪ್ರಾರಂಭಿಸಿದೆವು. ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಚಂದಾದಾರರಿದ್ದಾರೆ. ಹೊಸಬರು ಏನೇ ವಿಡಿಯೋ ಮಾಡಿದರೂ ಅದನ್ನು ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ತಲುಪಿಸಲು ಸಾಧ್ಯವಾಗುವುದಿಲ್ಲ. ನಮ್ಮ ಚಾನೆಲ್‌ ಮೂಲಕ ಅವರಿಗೆ ಹೆಚ್ಚಿನ ವೀಕ್ಷಕರು ದೊರಕುತ್ತಿದ್ದರು. ನಿಜ ಹೇಳಬೇಕೆಂದರೆ. ನಮ್ಮ ಯೋಜನೆ ಬೇರೆಯೇ ಇತ್ತು. ಯೂಟ್ಯೂಬ್‌ನ ಮೊರೆ ಹೋಗಿದ್ದು ಕನ್ನಡದಲ್ಲಿ ವಿಡಿಯೋ ಕಂಟೆಂಟ್‌ ಟ್ರೆಂಡ್‌ ಯಾವ ರೀತಿ ಇದೆ. ಜನರ ಪ್ರತಿಕ್ರಿಯೆ ಯಾವರೀತಿ ಇದೆ ಮತ್ತು ಆದಾಯ ಮತ್ತಿತರ ವಿಷಯಗಳನ್ನು ತಿಳಿದುಕೊಳ್ಳಬೇಕಿತ್ತು. ಇಷ್ಟು ವರ್ಷದಿಂದ ನಾವು ಕಂಡುಕೊಂಡಿದ್ದು ಇಷ್ಟು. ಕನ್ನಡಕ್ಕೆ ಇತರೆ ದಕ್ಷಿಣ ಭಾರತೀಯ ಭಾಷೆಗಳಿಗೆ ಸಿಗುತ್ತಿರುವಷ್ಟು ಪ್ರೋತ್ಸಾಹ ಸಿಗುತ್ತಿಲ್ಲ. ಉದಾಹರಣೆಗೆ, ಯೂಟ್ಯೂಬ್‌ನ ಟ್ರೆಂಡಿಂಗ್‌ ಪಟ್ಟಿಯಲ್ಲಿ ತಮಿಳು, ತೆಲುಗು ವ್ಲಾಗರ್‌ಗಳ ವಿಡಿಯೋಗಳೇ ತುಂಬಿರುತ್ತವೆ. ನಮ್ಮವರ ವಿಡಿಯೋಗಳು ಭೂತಕನ್ನಡಿ ಹಿಡಿದು ಹುಡುಕಿದರೂ ಸಿಗದು. ಆ ಭಾಷೆಗಳ ವ್ಲಾಗರ್‌ಗಳಿಗೆ ಹೋಲಿಸಿದರೆ ಕನ್ನಡಿಗ ವ್ಲಾಗರ್‌ಗಳ ಸಂಪಾದನೆ ಕಡಿಮೆ ಎಂದೇ ಹೇಳಬಹುದು. ಅಂದರೆ ಒಂದು ಲಕ್ಷ ವೆಚ್ಚ ಮಾಡಿ ವಿಡಿಯೋ ಮಾಡುವವರಿಗೆ ಇಲ್ಲಿ ರಿಟರ್ನ್ಸ್ ಬರೋದಿಲ್ಲ. ಹೆಚ್ಚಿನ ಖರ್ಚು ಮಾಡದೆ ಮೊಬೈಲ್‌ ಕ್ಯಾಮರಾದಲ್ಲೇ, ಇರುವ ಸೌಲಭ್ಯಗಳನ್ನೇ ಬಳಸುವ ವ್ಲಾಗರ್‌ಗಳಿಗೆ ಈ ವೇದಿಕೆ ಸೂಕ್ತ. ದಿನವೂ ಡೆಡಿಕೇಟೆಡ್‌ ಆಗಿ ಮಾಡಿದರೆ ತಿಂಗಳಿಗೆ 35,000- 40,000 ರನದ ಸಂಪಾದನೆ ಮಾಡಬಹುದು.
– ಆರ್‌.ಜೆ. ಪ್ರದೀಪ, ಬೆಂಗಳೂರು

 

ಸೋಮಶೇಖರ್‌ ಪಾಟೀಲ್‌- ಟೆಕ್ಕಿ ಸೋಮು
ಯೂಟ್ಯೂಬ್‌ ಲಿಂಕ್‌- bit.ly/32WI7s3
Since: 2016
ಚಂದಾದಾರರು-2,22,000
ಕೆಟಗರಿ- ಮೊಬೈಲ್‌, ತಂತ್ರಜ್ಞಾನ
ಪ್ರಾಯೋಜಕ ಸಂಸ್ಥೆಗಳು- ನೋಕಿಯಾ, ರಿಯಲ್‌ ಮಿ, ಟೆಕ್ನೋ

ಬೆಳಗಾವಿಯ ಶಿರಗುಪ್ಪಿ ಎಂಬ ಹಳ್ಳಿಯಲ್ಲಿ ನನ್ನ ವಾಸ. ನಮ್ಮದು ಕೃಷಿಕ ಕುಟುಂಬ. ಬಿಸಿಎ ಓದಿ, ಮನೆಯವರಿಗೆ ನೆರವಾಗುತ್ತಿದ್ದೇನೆ. ಅದರ ಜೊತೆಗೆ ಪಾರ್ಟ್‌ಟೈಮ್‌ ವ್ಲಾಗರ್‌. ಕನ್ನಡದಲ್ಲಿ ಹೊಸ ಫೋನ್‌ಗಳ ಕುರಿತಾದ ತಾಂತ್ರಿಕ ಮಾಹಿತಿಯನ್ನು ಒದಗಿಸುವ ವಿಡಿಯೋಗಳು ಕಡಿಮೆ. ವ್ಲಾಗಿಂಗ್‌ ಮಾಡಲು ಅದೇ ನನಗೆ ಪ್ರೇರಣೆ. ಕೆಲ ಕಂಪನಿಗಳು ಅವರ ಹೊಸ ಫೋನುಗಳನ್ನು ನನಗೆ ವಿಮರ್ಶೆ ಮಾಡಲು ಕಳಿಸಿಕೊಡುತ್ತಾರೆ. ಕಳಿಸಿಕೊಡದೆ ಇದ್ದ ಸಮಯದಲ್ಲಿ ಆ ಮೊಬೈಲ್‌ ಚೆನ್ನಾಗಿದ್ದರೆ ನಾನೇ ಕೈಯಿಂದ ಕೊಂಡುತಂದು ವ್ಲಾಗ್‌ ಮಾಡುತ್ತೇನೆ. ವ್ಲಾಗಿಂಗ್‌ನಿಂದ ಬರುವ ಆದಾಯದಿಂದಲೇ ಹೊಸ ಫೋನುಗಳನ್ನು ಖರೀದಿಸುತ್ತೇನೆ. ಹೀಗೆ ನನ್ನ ಬಳಿ 10ಕ್ಕು ಹೆಚ್ಚು ಫೋನುಗಳಿವೆ. ಅವುಗಳಲ್ಲಿ ಚೆನ್ನಾಗಿರುವ ಮೊಬೈಲುಗಳನ್ನು ರಿವ್ಯೂ ಮಾಡಿದ ಬಳಿಕ ಸ್ನೇಹಿತರಿಗೆ ಮಾರಿಬಿಡುತ್ತೇನೆ. ಸದ್ಯ ಯೂಟ್ಯೂಬ್‌ನಿಂದ, ತಿಂಗಳಿಗೆ ಸುಮಾರು 20,000 ರೂ. ಆದಾಯ ಬರುತ್ತಿದೆ. ಹಳ್ಳಿಯಲ್ಲಿ ವಾಸ ಮಾಡುತ್ತಿರುವ ನನಗೆ ಇಂದು ಪಾರ್ಟ್‌ಟೈಮ್‌ನಲ್ಲಿ ಇಷ್ಟು ದುಡಿಮೆ ಮಾಡಲು ಸಾಧ್ಯವಾಗಿದೆ ಎನ್ನುವ ಸಂಗತಿಯಿಂದ ಯಾರು ಬೇಕಾದರೂ ಪ್ರೇರಣೆ ಪಡೆದುಕೊಳ್ಳಬಹುದು. ಪೂರ್ಣ ಪ್ರಮಾಣದಲ್ಲಿ, ರೆಗ್ಯುಲರ್‌ ಆಗಿ ವ್ಲಾಗಿಂಗ್‌ ಮಾಡುವುದರಿಂದ ಇನ್ನೂ ಹೆಚ್ಚಿನ ಆದಾಯ ಪಡೆಯಬಹುದು.
– ಸೋಮಶೇಖರ್‌ ಪಾಟೀಲ್‌, ಬೆಳಗಾವಿ

 

Calm ರೈಡರ್‌
ಯೂಟ್ಯೂಬ್‌ ಲಿಂಕ್‌- bit.ly/39FxtIw
Since  2015
ಚಂದಾದಾರರು- 18,700
ಕೆಟಗರಿ- ಬೈಕ್‌, ಪ್ರವಾಸ
ಪ್ರಾಯೋಜಕ ಸಂಸ್ಥೆಗಳು- ಕೆಟಿಎಂ

ನನಗೆ ಚಿಕ್ಕಂದಿನಿಂದಲೂ ಬೈಕ್‌ ಎಂದರೆ ವಿಶೇಷ ಆಕರ್ಷಣೆ. ಕಾರು, ಬಸ್ಸುಗಳಲ್ಲಿ ಪ್ರಯಾಣ ಮಾಡುವುದಕ್ಕಿಂತ ಬೈಕ್‌ನಲ್ಲಿ ಹೋಗುವುದು ತುಂಬಾ ಖುಷಿ ಕೊಡುತ್ತಿತ್ತು. ಐ.ಟಿ. ಉದ್ಯೋಗ ಸೇರಿ ಸ್ವಂತದ್ದೊಂದು ಬೈಕ್‌ ಕೊಂಡ ಮೇಲಂತೂ ವಾರಾಂತ್ಯಗಳಲ್ಲಿ ಬೈಕ್‌ ಸವಾರಿ ಹೊರಡುವುದು ದಿನಚರಿಯಾಯಿತು. ನಾನು ಹಲವು ಮೋಟೋ ವ್ಲಾಗರ್‌ಗಳನ್ನು ಯೂಟ್ಯೂಬ್‌ನಲ್ಲಿ, ಫೇಸ್‌ಬುಕ್‌ನಲ್ಲಿ ಫಾಲೋ ಮಾಡುತ್ತಿದ್ದೆ. ಹೆಲ್ಮೆಟ್‌ಗೆ ಗೋ ಪ್ರೊ ಕ್ಯಾಮೆರಾ ಫಿಟ್‌ ಮಾಡಿಕೊಂಡು ನೂರಾರು ಕಿ.ಮೀ ತನಕ ರೈಡಿಂಗ್‌, ಬೈಕ್‌ ಮತ್ತಿತರ ವಿಚಾರಗಳ ಬಗ್ಗೆ ಮಾತಾಡಿಕೊಂಡು ಹೋಗುವ ಮೋಟೋ ವ್ಲಾಗರ್‌ಗಳ ದೊಡ್ಡ ದಂಡೇ ಯೂಟ್ಯೂಬ್‌ನಲ್ಲಿದೆ. ಲಕ್ಷಾಂತರ ಮಂದಿ ಅವರನ್ನು ಪಾಲೋ ಮಾಡುತ್ತಾರೆ. ಅವರಲ್ಲಿ ನಾನೂ ಒಬ್ಬನಾಗಿದ್ದೆ. ಕನ್ನಡದಲ್ಲಿ ಮಾತ್ರ ಮೋಟೋ ವ್ಲಾಗಿಂಗ್‌ ಇನ್ನೂ ಜನಪ್ರಿಯವಾಗಿಲ್ಲ. ಹೀಗಾಗಿ ನಾನೇ ಮೋಟೋ ವ್ಲಾಗಿಂಗ್‌ ಶುರುಮಾಡಿದೆ. ಬಹುತೇಕ ಮೋಟೋ ವ್ಲಾಗರ್‌ಗಳು ಗೋ ಪ್ರೋ ಎಂಬ ಪಾಕೆಟ್‌ ಕ್ಯಾಮೆರಾವನ್ನು ಬಳಸುತ್ತಾರೆ ಅದು ತುಸು ದುಬಾರಿ. ಹೀಗಾಗಿ ಶುರುವಿನಲ್ಲಿ ಎಸ್‌.ಜೆ ಕ್ಯಾಮ್‌ ಎಂಬ ಕಡಿಮೆ ಬೆಲೆಯ ಕ್ಯಾಮೆರಾವನ್ನು ಬಳಸುತ್ತಿದ್ದೆ. ನಂತರ ಗೋ ಪ್ರೊ ಕ್ಯಾಮೆರಾ ಕೊಂಡುಕೊಂಡೆ. ಸೋಲೋ ರೈಡ್‌ ಹೋಗುವುದರ ಜೊತೆಗೆ ನಮ್ಮದೇ ತಂಡವೂ ಇದೆ. ನನ್ನ ವ್ಲಾಗ್‌ಗಳನ್ನು ನೋಡಿ ಕೆಟಿಎಂ ಸಂಸ್ಥೆ ಅವರ ಬೈಕ್‌ ಲಾಂಚ್‌ ಕಾರ್ಯಕ್ರಮಗಳಿಗೆ ಆಹ್ವಾನಿಸಿತ್ತು. ಅದು ಬಿಟ್ಟರೆ ಯೂಟ್ಯೂಬ್‌ನ ಆಟೊಮೊಬೈಲ್‌ ಸಂಬಂಧಿ ಜಾಹೀರಾತುಗಳಿಂದ 8,000- 10,000 ರೂ. ದುಡ್ಡು ಬರುತ್ತಿದೆ. ಆದರೆ ನಾನು ಸಂಪಾದನೆಯ ಉದ್ದೇಶ ಇಟ್ಟುಕೊಂಡು ಮಾಡಿದ್ದಲ್ಲ. ನನ್ನಿಂದ ಒಂದಷ್ಟು ಮಂದಿಗೆ ಬೈಕ್‌ ರೈಡಿಂಗ್‌ನಲ್ಲಿ ಆಸಕ್ತಿ ಮೂಡಿದರೆ, ಸುರಕ್ಷಿತ ರೈಡಿಂಗ್‌ ಕುರಿತು ತಿಳಿದುಕೊಂಡರೆ ಅಷ್ಟೇ ಸಾಕು.
– ಕಿರಣ್‌, ಚಿಕ್ಕಮಗಳೂರು

 

ದಿ ಶಾರ್ಟಿ ಡೂವೊಪ್‌
ಯೂಟ್ಯೂಬ್‌ ಲಿಂಕ್‌- bit.ly/2TJmo2E
Since: 2018
ಚಂದಾದಾರರು-10,800
ಕೆಟಗರಿ-ಲೈಫ್ಸ್ಟೈಲ್‌, ಫ್ಯಾಷನ್‌, ಆಹಾರ, ಪ್ರವಾಸ, ಮೇಕಪ್‌
ಪ್ರಾಯೋಜಕ ಸಂಸ್ಥೆಗಳು- ಪಾಂಡ್ಸ್‌, ಲೋರಿಯಲ್‌, ಓಷನ್‌ ಪರ್ಲ್ ರೆಸಾರ್ಟ್‌

ಶಾರ್ಟಿ ಡೂವೊಪ್‌ ಎಂದರೆ ಎತ್ತರ ಕಡಿಮೆ ಇರುವ ಹುಡುಗಿ ಎಂದರ್ಥ. ಅದು ನಾನಾಗಿರುವುದರಿಂದ ಅದನ್ನೇ ವ್ಲಾಗ್‌ಗೆ ನಾಮಕರಣ ಮಾಡಿದೆ. ಮುಂಚಿನಿಂದಲೂ ಕಂಟೆಂಟ್‌ ಸೃಷ್ಟಿಸುವುದೆಂದರೆ ನನಗೆ ಎಲ್ಲಿಲ್ಲದ ಆಸಕ್ತಿ. ವ್ಲಾಗಿಂಗ್‌ ಮಾಡುವುದಕ್ಕೆ ಮೊದಲು ಬ್ಲಾಗ್‌ ಬರೆಯುತ್ತಿದ್ದೆ. ವ್ಲಾಗ್‌ಗಳ ಟ್ರೆಂಡ್‌ ಶುರುವಾದ ಮೇಲೆ ಅದಕ್ಕೆ ಶಿಫ್ಟ್ ಆದೆ. ನಾನು ವ್ಲಾಗಿಂಗ್‌ಗಾಗಿ ವಿಶೇಷ ತಯಾರಿಯನ್ನೇನೂ ಮಾಡಿಕೊಂಡಿಲ್ಲ. ಅಥವಾ ವಿಶೇಷ ಉಪಕರಣಗಳನ್ನು ಖರೀದಿಸಿಲ್ಲ. ಮೆನ್‌ಸ್ಟ್ರೆವಲ್‌ ಕಪ್ಸ್‌, ಪಿಂಪಲ್‌, ಬಟ್ಟೆ ಶಾಪಿಂಗ್‌ ಹೀಗೆ ಹದಿಹರೆಯದ ಹುಡುಗಿಯ ಬದುಕಿಗೊಂದು ಇಣುಕುನೋಟವನ್ನು ನನ್ನ ವ್ಲಾಗ್‌ಗಳು ಕೊಡುತ್ತವೆ. ಡಿಎಸ್‌ಎಲ್‌ಆರ್‌ ಕ್ಯಾಮೆರಾದಲ್ಲಿ ಶೂಟ್‌ ಮಾಡುತ್ತೇನೆ. ಮೇಕಪ್‌ ಇರಲಿ, ಹೊಸ ದಿರಿಸೇ ಇರಲಿ ರೆಕಾರ್ಡ್‌ ಮಾಡಲೆಂದು ಕೊಂಡುಕೊಳ್ಳುವುದಿಲ್ಲ. ಕೊಂಡುಕೊಂಡಾಗ ವ್ಲಾಗ್‌ ಮಾಡುತ್ತೇನೆ, ಅಷ್ಟೆ. ಶೂಟಿಂಗ್‌ ಆದ ನಂತರ ವಿಡಿಯೋವನ್ನು ನಾನೇ ಲ್ಯಾಪ್‌ಟಾಪ್‌ನಲ್ಲಿ ಎಡಿಟ್‌ ಮಾಡಿ ಯೂಟ್ಯೂಬ್‌ಗ ಅಪ್‌ಲೋಡ್‌ ಮಾಡ್ತೀನಿ. ಮೊದಲ ವರ್ಷ ಆದಾಯವೇನೂ ಬರುತ್ತಿರಲಿಲ್ಲ. ನಾನು ಹವ್ಯಾಸಿಯಾಗಿದ್ದರಿಂದ, ನನ್ನ ಖುಷಿಗಷ್ಟೇ ವ್ಲಾಗಿಂಗ್‌ ಮಾಡುತ್ತಿದ್ದೆ. ಹೀಗಾಗಿ 5,000 ರೂ.ಮೊತ್ತವನ್ನು ಗೂಗಲ್‌ ನನ್ನ ಖಾತೆಗೆ ಜಮೆ ಮಾಡುತ್ತಿದ್ದರು. ನಿರಂತರವಾಗಿ ಕನಿಷ್ಟ ವಾರಕ್ಕೊಂದು ವಿಡಿಯೊ ಅಪ್‌ಲೋಡ್‌ ಮಾಡುತ್ತಾ ಬಂದರೆ ಖಂಡಿತ ಇದರಿಂದ ಸಂಪಾದನೆಯನ್ನು ಹೆಚ್ಚಿಸಿಕೊಳ್ಳಬಹುದು. ಆಗ ಗೂಗಲ್‌ನ ಜಾಹೀರಾತು ಮೂಲವಲ್ಲದೆ, ಇತರೆ ದಾರಿಗಳೂ ತೆರೆದುಕೊಳ್ಳುತ್ತವೆ. ಪಾಂಡ್ಸ್‌, ಲೋರಿಯಲ್‌ ಮುಂತಾದ ಸಂಸ್ಥೆಗಳು ನಮ್ಮನ್ನು ಗುರುತಿಸುತ್ತಾರೆ. ನನ್ನ ರೆಸ್ಟಾರೆಂಟ್‌ ರಿವ್ಯೂ ನೋಡಿ ಓಷನ್‌ ಪರ್ಲ್ ಎಂಬ ರೆಸಾರ್ಟಿನವರು ನನ್ನನ್ನು ಕರೆಸಿ ವ್ಲಾಗ್‌ ಮಾಡಿಸಿದ್ದರು. ಇದರಿಂದೆಲ್ಲಾ ಆದಾಯ ಹೆಚ್ಚಿಸಿಕೊಳ್ಳಬಹುದು. ಎಂಜಿನಿಯರಿಂಗ್‌ ಮುಗಿಸಿ ಈಗ ಮಾಸ್ಟರ್ ಓದಲು ಜರ್ಮನಿಗೆ ತೆರಳುತ್ತಿದ್ದೇನೆ. ನನಗೆ ಒಂದು ಐಡೆಂಟಿಟಿ ನೀಡಿರುವ ವ್ಲಾಗಿಂಗ್‌ಅನ್ನು ವಿದೇಶದಲ್ಲೂ ಮುಂದುವರಿಸುತ್ತೇನೆ.

– ಸೌಮ್ಯ ಎಂ.ಬಿ., ಧಾರವಾಡ

ಟಾಪ್ ನ್ಯೂಸ್

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

1-adads

Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ

1-viju

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

1-adads

Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ

1-viju

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.