ನಮಗೆ ತಿಳಿದಿಲ್ಲ ಎಂಬ ಸತ್ಯವೂ ನಮಗೆ ತಿಳಿದಿಲ್ಲ!
Team Udayavani, Nov 6, 2017, 6:50 PM IST
ಭಾರತದ ಗ್ರಾಹಕ ಪ್ರಪಂಚದಲ್ಲಿ ತಪ್ಪು ಗ್ರಹಿಕೆಗಳದ್ದೇ ಆಳ್ವಿಕೆ. ಕೊಂಡ ವಸ್ತುವಿನ ಎಕ್ಸ್‌ಪೈರಿ ಹಾಗೂ ಬೆಸ್ಟ್ ಬಿಫೋರ್ ನಮೂದಿನ ವಿಸ್ತಾರ ನಮಗಿನ್ನೂ ಅರ್ಥವೇ ಆಗಿಲ್ಲ. ಮತ್ತೆ ನಮ್ಮ ಮನೆಯೊಳಗೆ ಹೋಗೋಣ. ಖಾದ್ಯ ತೈಲದ ಪ್ಯಾಕೆಟ್‌ಗಳನ್ನು ಒಡೆದು ಸ್ವಲ್ಪ ಬಳಸಿ ಉಳಿದುದನ್ನು ಎಣ್ಣೆ ಚೆಲ್ಲಿಹೋಗದಂತೆ ಪ್ಲಾಸ್ಟಿಕ್/ ಅಲ್ಯುಮಿನಿಯಂ ಡಬ್ಬದಲ್ಲಿ ಹಾಕುವುದು ನಮ್ಮ ಪದ್ಧತಿ. ಅಲ್ಲಿ ಗಾಳಿಯಾಡಲು ಅವಕಾಶವಿದೆಯೇ? ಇದೆ ಎಂತಾದರೆ, ಎಣ್ಣೆಯಲ್ಲಿ ಆಕ್ಸಿಡೇಜ್ ಕ್ರಿಯೆ ನಡೆದು ಅದರ ಗುಣಮಟ್ಟ ಕುಸಿಯುತ್ತದೆ. ಕೊಲೆಸ್ಟ್ರಾಲ್ ಫ್ರೀ ಎಂಬ ವ್ಯಾಖ್ಯೆಯೇ ಹುಸಿಯಾಗುತ್ತದೆ.
ಸಂಧಾನದ ಮೊದಲ ಅಂಶವನ್ನು ಅರ್ಥ ಮಾಡಿಕೊಳ್ಳುವುದಾದರೆ, ನಾವು ಆಯ್ಕೆ ಮಾಡಿದ ವಿಧಾನಸಭೆ, ಲೋಕಸಭೆ ಹಾಗೂ ಪರೋಕ್ಷವಾಗಿ ಆಯ್ಕೆಯಾದ ವಿಧಾನ ಪರಿಷತ್ ಹಾಗೂ ರಾಜ್ಯ ಸಭಾ ಸದಸ್ಯರ ಅತಿ ಮುಖ್ಯ ಕೆಲಸ ದೇಶದ ಜನರಿಗೆ, ಆಡಳಿತಕ್ಕೆ ಬೇಕಾದ ಕಾಯ್ದೆಗಳನ್ನು ರೂಪಿಸುವುದು. ಬೀದಿ ದೀಪ ಸರಿಪಡಿಸಿ, ನಮ್ಮೂರ ರಸ್ತೆಗೆ ಡಾಂಬರೀಕರಣ ಆಗಲಿ, ನಮ್ಮ ವಾರ್ಡ್‌ಗೆ ನೀರಿನ ಸರಬರಾಜು ಇಲ್ಲ ತರಹದ ಸಮಸ್ಯೆಗಳನ್ನು ಅವರು
ನಿಭಾಯಿಸಬೇಕಿರಲಿಲ್ಲ, ನಿರ್ವಹಣೆ ಬೇಕಾಗೂ ಇರಲಿಲ್ಲ. ಅವರ ಕೆಲಸ ಕಾನೂನು ಮಾಡುವುದು. ಆಡಳಿತದ ನೀತಿ ನಿರೂಪಿಸುವುದು.ಅದನ್ನವರು ಮಾಡಿದ್ದಾರೆ. ನಮ್ಮ ದೇಶದಲ್ಲಿ ದಂಡಿಯಾಗಿ ಕಾನೂನುಗಳಿವೆ. ಅವುಗಳನ್ನು ದೇಶದ ಪ್ರಜೆಗಳು ಬಳಸುತ್ತಿಲ್ಲ, ಪಾಲಿಸುತ್ತಿಲ್ಲ. ಬಹುಸಂಖ್ಯಾತ ಕಾನೂನುಗಳು, ಅವು ನಮ್ಮ ಹಿತಾಸಕ್ತಿಯನ್ನು ಕಾಪಾಡುತ್ತವೆ ಎಂಬುದು ಗೊತ್ತಿಲ್ಲದೆ ಉಪಯೋಗಿಸಲ್ಪಡುತ್ತಿಲ್ಲ. ಆಧಾರ್ ಕಾರ್ಡ್‌ಅನ್ನು ನಿಮ್ಮ ಡೆಬಿಟ್ ಕಾರ್ಡ್‌ಗೆ ಲಿಂಕ್ ಮಾಡುತ್ತೇನೆ ಎಂಬ ಖದೀಮರಿಗೆ ಮೊಬೈಲ್ ಒಟಿಪಿಯನ್ನು ಹತ್ತಾರು ಬಾರಿ ನೀಡಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವುದು ಕೂಡ ಅರಿವಿನ ಕೊರತೆಯ ಕಾರಣ. ಕೊನೇ ಪಕ್ಷಬ್ಯಾಂಕ್ ಮ್ಯಾನೇಜರ್ ಫೋನ್ ಮಾಡುತ್ತಾರೆಯೇ ಎಂದು ಯೋಚಿಸಬಹುದು. ನಾನೇ ಬ್ರಾಂಚ್‌ಗೆ ಬರುತ್ತೇನೆ ಎನ್ನಬಹುದು. ನಮ್ಮಲ್ಲಿ ಅರಿಯಲಿರುವ ಅಸಡ್ಡೆ ಈ ನಷ್ಟವನ್ನು ತರುತ್ತಿದೆ. ಕೋಟಿ ರೂ. ಬಂಪರ್ ಬಂದಿದೆ. ಸರ್ಕಾರದ ತೆರಿಗೆಯಾಗಿ ಎಂಟೂವರೆ ಸಾವಿರ ರೂ. ಕಟ್ಟಿ ಎನ್ನುವವರಿಗೆ ಮರುಳಾಗುವವರ ಬಗ್ಗೆ ಬೇಸರ ಬೇಡ. ಆಸೆಗೆ ಬಿದ್ದರೆ ಅಂತಿಮ ಫಲಿತಾಂಶ ಇದೇ. ಲಕ್ಷ, ಕೋಟಿ ಕೊಡಲು ಹೊರಡುವವನಿಗೆ ಏನಾದರೂ ಫಾಯಿದೆ ಇದೆಯೇ ಎಂದು ಯೋಚಿಸಲು ಎಸ್‌ಎಸ್‌ಎಲ್‌ಸಿ, ಡಿಗ್ರಿ, ಎಂಬಿಬಿಎಸ್ ಬೇಕೆ?
ಇವೆಲ್ಲಕ್ಕಿಂತ ಹೊರತಾದ ಅಸಲಿ ನಿತ್ಯ ಜೀವನದ ಅರಿವು ಕೂಡ ಪ್ರಸ್ತಾಪಯೋಗ್ಯ. ಈ ಗ್ರಾಹಕ ಪ್ರಜ್ಞೆಯೂ ಕಾನೂನು ದಾಟಿ ಇರಬೇಕಾಗುತ್ತದೆ ಎಂಬ ಪ್ರತಿಪಾದನೆಯ ಜೊತೆ ಹೇಳಬೇಕಾಗಿದೆ.
ತಪ್ಪನ್ನು ಸರಿಪಡಿಸಲು ಹೊರಡಿ….
ಮೂಢ ನಂಬಿಕೆ ಹಾಗೂ ತಪ್ಪು ಗ್ರಹಿಕೆ, ಈ ಎರಡು ಪದಗಳ ಅರ್ಥ ಒಂದೇ ಎನ್ನಬಹುದು. ಅದನ್ನು ಸ್ವಲ್ಪ ವಿಸ್ತರಿಸಿ, ವಿಭಜಿಸಿ ನೋಡಬೇಕಾದ ಅಗತ್ಯವಿದೆ. ಮೂಢನಂಬಿಕೆ ಇದ್ದರೂ ಪರವಾಗಿಲ್ಲ. ಆದರೆ ತಪ್ಪು ಗ್ರಹಿಕೆಗೆ ಅವಕಾಶ ಬೇಡವೇ ಬೇಡ ಎನ್ನೋಣ. ಆಗ ಕಾಡುವ ಪ್ರಶ್ನೆಗೆ ಉದಾಹರಣೆಯಲ್ಲಿಯೇ ಸಮಜಾಯಿಷಿ ಕೊಡುವುದಾದರೆ, ಬೆಳಗ್ಗೆ ಎದ್ದ ಕೂಡಲೇ ಪೊರಕೆ ಕಾಣುವುದು ಅಪಶಕುನ ಎಂಬುದು ಮೂಢ ನಂಬಿಕೆ. ಮನೆಯ ರೆಫ್ರಿಜರೇಟರ್‌ನಲ್ಲಿ ತೆಗೆದಿಟ್ಟರೆ ಆಹಾರ ವಸ್ತು ತಾಜಾವಾಗಿಯೇ ಇರುತ್ತದೆ ಎಂಬುದು ತಪ್ಪು ಗ್ರಹಿಕೆ!
ಭಾರತದ ಗ್ರಾಹಕ ಪ್ರಪಂಚದಲ್ಲಿ ತಪ್ಪು ಗ್ರಹಿಕೆಗಳದ್ದೇ ಆಳ್ವಿಕೆ. ಕೊಂಡ ವಸ್ತುವಿನ ಎಕ್ಸ್‌ಪೈರಿ ಹಾಗೂ ಬೆಸ್ಟ್ ಬಿಫೋರ್ ನಮೂದಿನ ವಿಸ್ತಾರ ನಮಗಿನ್ನೂ ಅರ್ಥವೇ ಆಗಿಲ್ಲ. ಮತ್ತೆ ನಮ್ಮ ಮನೆಯೊಳಗೆ ಹೋಗೋಣ. ಖಾದ್ಯ ತೈಲದ ಪ್ಯಾಕೆಟ್‌ಗಳನ್ನು ಒಡೆದು ಸ್ವಲ್ಪ ಬಳಸಿ ಉಳಿದುದನ್ನು ಎಣ್ಣೆ ಚೆಲ್ಲಿಹೋಗದಂತೆ ಪ್ಲಾಸ್ಟಿಕ್/ ಅಲ್ಯುಮಿನಿಯಂ ಡಬ್ಬದಲ್ಲಿ ಹಾಕುವುದು ನಮ್ಮ ಪದ್ಧತಿ. ಅಲ್ಲಿ ಗಾಳಿಯಾಡಲು ಅವಕಾಶವಿದೆಯೇ? ಇದೆ ಎಂತಾದರೆ, ಎಣ್ಣೆಯಲ್ಲಿ ಆಕ್ಸಿಡೇಜ್ ಕ್ರಿಯೆ ನಡೆದು ಅದರ ಗುಣಮಟ್ಟ ಕುಸಿಯುತ್ತದೆ. ಕೊಲೆಸ್ಟ್ರಾಲ್ ಫ್ರೀ ಎಂಬ ವ್ಯಾಖ್ಯೆಯೇ ಹುಸಿಯಾಗುತ್ತದೆ. ಒಂದೊಮ್ಮೆ ಪ್ಯಾಕ್ ಹರಿದ ಎಣ್ಣೆಯನ್ನು ಮುಂದಿನ 15 ದಿನಗಳಲ್ಲಿ ಮಾತ್ರ ಬಳಸುವುದು ಕ್ಷೇಮ ಎನ್ನುವುದು ಎಷ್ಟು ಜನರಿಗೆ ಗೊತ್ತು?
ನಿಜ, ಸೋಪ್, ಡಿಟರ್ಜೆಂಟ್ ಪೌಡರ್‌ಗಳಲ್ಲಿ ಬೆಸ್ಟ್ ಬಿಫೋರ್ ದಿನಾಂಕದ ನಂತರ ಉಪಯೋಗಿಸಿದರೆ ಅಡ್ಡ ಪರಿಣಾಮ ಇಲ್ಲ. ಅದರ ನೇರ ಪ್ರಭಾವವೂ ನಾಸ್ತಿ! ಆದರೆ ಒಮ್ಮೆ ಗಾಳಿಗೆ ಮುಕ್ತವಾದ ಸೋಪು, ಡಿಟರ್ಜೆಂಟ್ ಒಳಗಿನ ಮಾರ್ಜಕ ರಾಸಾಯನಿಕಗಳು ದುರ್ಬಲವಾಗುತ್ತವೆ. ಅವು ಹೇಳಿದ ಕೆಲಸವನ್ನು-ಸ್ವತ್ಛಗೊಳಿಸುವುದು-ಮಾಡುವುದಿಲ್ಲ.
ಹಣ್ಣಿನ ರಸವನ್ನು ಫ್ರಿಜ್‌ನಲ್ಲಿಟ್ಟರೂ ಮೂರ್‍ನಾಲ್ಕು ದಿನಗಳಲ್ಲಿ ಬಳಸಬೇಕು. ಹೊರಗೇ ಇಟ್ಟಿದ್ದರಂತೂ ಅದಕ್ಕೆ ಮೂರ್‍ನಾಲ್ಕು ಗಂಟೆಗಳಷ್ಟೇ ಆಯುಸ್ಸು. ಈಗಂತೂ ಫ್ರಿಜ್ ತೀರಾ ದುರ್ಬಳಕೆಯಾಗುತ್ತಿದೆ. ಕೆಲವರಂತೂ ವಾರದ ಅಡುಗೆಯನ್ನು ಮಾಡಿಟ್ಟು ಮನೆಯವರನ್ನು ಬಿಟ್ಟು ಪ್ರವಾಸ ತೆರಳುತ್ತಾರೆ. ಬಿಸಿ ಮಾಡಲು ಹೇಗಿದ್ದರೂ ಓವೆನ್ ಇದೆಯಲ್ಲ? ಆರೋಗ್ಯ ವಿಜಾnನದ ಪ್ರಕಾರವೇ ಹೇಳುವುದಾದರೆ, 24 ಘಂಟೆ ಚಾಲನೆಯಲ್ಲಿರುವ ಅತ್ಯುತ್ತಮ ರೆಫ್ರಿಜರೇಟರ್ ಆಗಿದ್ದರೂ ಅದರೊಳಗಿಟ್ಟ ಆಹಾರ ವಸ್ತು ಸಂಪೂರ್ಣ ಏರ್‌ಟೈಟ್ ಕಂಟೈನರ್‌ನಲ್ಲಿಲ್ಲದಿದ್ದರೆ ಅದು “ಕಲುಷಿತ’ಗೊಳ್ಳುತ್ತದೆ. ಕೇವಲ ಹಳಸಿ ಹೋಗುವುದನ್ನು ಮಾತ್ರ ಹಾಳಾಗಿದೆ ಎಂಬ ವರ್ಗಕ್ಕೆ ಸೇರಿಸುರಾದರೆ ನಿಮ್ಮ ಆರೋಗ್ಯಕ್ಕೆ ನೀವೇ ಜವಾಬ್ದಾರರು!
ಮನೆಯೆಂಬ ಡಂಪಿಂಗ್ ಯಾರ್ಡ್?
ಎರಡು ಸಂಗತಿಗಳು ತೀರಾ ಮುಖ್ಯ ಎನ್ನಿಸುತ್ತವೆ. ಎಕ್ಸ್‌ಪೈರಿ, ಬೆಸ್ಟ್ ಬಿಫೋರ್‌ಗಳ ಕುರಿತು ಮಾಹಿತಿ ಹಾಗೂ ಎಕ್ಸ್‌ಪೈರಿ ಮ್ಯಾನೇಜ್‌ಮೆಂಟ್. ಸೋಪು, ಶಾಂಪೂ… ಹೀಗೆ ಮನೆಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುವಾಗ ಮನೆಯನ್ನು ಡಂಪಿಂಗ್ ಯಾರ್ಡ್ ಮಾಡಿಕೊಳ್ಳಬೇಕಾಗಿಲ್ಲ. ಹೆಚ್ಚೆಂದರೆ ಹೆಚ್ಚುವರಿಯಾಗಿ ಇನ್ನೊಂದು ಮನೆಯಲ್ಲಿದ್ದರೆ ಸಾಕಾಗುತ್ತದೆ. ಖರೀದಿಯನ್ನು ನಾನು ತಿಂಗಳಿಗೊಮ್ಮೆ ಮಾಡುತ್ತೇನೆ ಎಂಬುದು ಹೆಗ್ಗಳಿಕೆಯಲ್ಲ. ಅದಕ್ಕಿಂತ ವಾರಕ್ಕೊಮ್ಮೆ ಮಾಡಿ. ಒಮ್ಮೆ ಓಪನ್ ಮಾಡಿದ ಪ್ಯಾಕ್‌ಅನ್ನು ಸಂಗ್ರಹಿಸುವಾಗ ಅದನ್ನು ಗಾಳಿಯಾಡದಂತೆ ನೋಡಿಕೊಳ್ಳುವುದರತ್ತ ಗಮನ ಹರಿಸಲೇಬೇಕು. ಎಕ್ಸ್‌ಪೈರಿ 2015ರಲ್ಲಿದೆ ಎಂದು ಪ್ಯಾಕ್ ಒಡೆದು ಗಾಳಿಗೆ ಬಿಟ್ಟರೆ ಅದರ ಬೆಸ್ಟ್ ಬಿಫೋರ್ ಗುಣವೂ ಗಾಳಿಯಲ್ಲಿ ಕರಗಿಹೋಗಿರುತ್ತದೆ.
ಕಂಪ್ಯೂಟರ್, ಮೊಬೈಲ್ ಬಳಕೆಯಿಂದ ಅಧಿಕ ಪ್ರಮಾಣದ ಕೆಟ್ಟ ಬ್ಯಾಕ್ಟೀರಿಯಾ, ವೈರಸ್ ನಮ್ಮ ಮೇಲೆ ಧಾಳಿ ಮಾಡುತ್ತವೆ ಎಂಬುದು ಇತ್ತೀಚಿನ ಸಂಶೋಧನೆ. ಅದೇ ರೀತಿ ಬಟ್ಟೆ ಸ್ವತ್ಛ ಮಾಡುವ ವಾಶಿಂಗ್ ಮಿಶನ್ ತೀರಾ ಕಿಟ್ಟ ಕಟ್ಟಿದ್ದರೆ, ಕೊಳಕುಗಳು ಸಂಗ್ರಹವಾಗಿದ್ದರೆ ತೊಳೆದುಹಾಕಿದ ಬಟ್ಟೆಯೂ ರೋಗ ಪ್ರಚಾರಕ. ಮನೆಯ ರುಬ್ಬುವ ಮಿಕ್ಸಿ, ಗ್ರೆ„ಂಡರ್‌ಗಳಿಗೂ ಈ ಮಾತನ್ನು ಹೇಳಲೇಬೇಕು. ವಾಸ್ತವದಲ್ಲಿ ಇವು ರೋಗ ಹರಡಬಹುದಾದ ಸುಲಭ ಮಾರ್ಗಗಳು.
ಸೌಂದರ್ಯ ಅರಳದು, ಸುವಾಸನೆ ಹರಡದು !
ನಮ್ಮಲ್ಲಿ ಅತಿ ಕೆಟ್ಟದಾಗಿ ನಿರ್ವಹಣೆಯಾಗುತ್ತಿರುವುದು ರೆಫ್ರಿಜರೇಟರ್. ಅದಕ್ಕೆ ನಾವು ತೀರಾ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ಇದರಲ್ಲೂ ಹೇಗೇಗೋ ಇಟ್ಟರೆ ತಾಜಾತನ ಇರದು. ಫ್ರಿಜ್‌ನ ಫ್ರೀಝರ್‌ನಲ್ಲಿ ಏರ್‌ಟೈಟ್ ಕಂಟೈನರ್‌ನಲ್ಲಿಟ್ಟರೆ ಕಾಳುಕಡಿಯನ್ನೂ ಕಾಪಿಡಬಹುದು. ಆದರೆ….
ಕೊನೆಗೆ, ಒಂದು ಗುಟ್ಟನ್ನು ಹೇಳಲೇಬೇಕು. ಸೌಂದರ್ಯವರ್ಧಕಗಳ ವಿಚಾರದಲ್ಲೂ ಇವು ನಿಜ. ಅವುಗಳ ಮೇಲೆ ಬೆಸ್ಟ್ ಬಿಫೋರ್ ಎಂದಿದ್ದರೂ ತೆರೆದಿಟ್ಟಿದ್ದರೆ ಅವುಗಳ ಸಾವು ಸನಿಹದಲ್ಲಿಯೇ ಇದೆ ಎಂದು ಅರ್ಥ. ಆ ನಂತರದಲ್ಲಿ ನಾವು ಲೇಪಿಸಿಕೊಂಡರೂ ಸೌಂದರ್ಯ ಅರಳದು, ಸುವಾಸನೆ ಹರಡದು.
-ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.