ಕ್ರೆಡಿಟ್ ರೇಟಿಂಗ್ ಅಂದರೆ ಏನು ಗೊತ್ತಾ?
Team Udayavani, Dec 4, 2017, 2:46 PM IST
ಒಬ್ಟಾತ ಸಾಲಗಾರನಿಗೆ ಸಾಲ ನೀಡಬೇಕೇ ಬೇಡವೇ ಎನ್ನುವುದನ್ನು ಆತನ ಆರ್ಥಿಕ ಸ್ಥಿತಿಗತಿ ಮತ್ತು ಆತನ ಒಟ್ಟಾರೆ ವಿತ್ತೀಯ ಶಿಸ್ತನ್ನು ನೋಡಿ ನಿರ್ಣಯ ಮಾಡುತ್ತೇವೆ ಅಲ್ಲವೇ? ಹಾಗೆಯೇ ಒಂದು ದೇಶದ ಸಾವರಿನ್ ಕ್ರೆಡಿಟ್ ರೇಟಿಂಗ್ ಮಾಡುವಾಗಲೂ ಆ ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಶಿಸ್ತನ್ನು ನೋಡಿಕೊಂಡು ಮಾಡಲಾಗುತ್ತದೆ.
ಇತ್ತೀಚೆಗಿನ ದಿನಗಳಲ್ಲಿ ಮೂಡೀಸ್, ಸ್ಟಾಂಡರ್ಡ್ ಐನ್ ಪುವರ್ (ಖಕ) ಇತ್ಯಾದಿ ಹೆಸರುಗಳನ್ನು ಹೊತ್ತ ಕಂಪೆನಿಗಳು ನಮ್ಮ ದೇಶದ ಬಗ್ಗೆ ರೇಟಿಂಗ್ ಹಾಕುವುದು ದೊಡ್ಡ ಸುದ್ದಿಯಾಗಿಬಿಟ್ಟಿದೆ. ನವೆಂಬರ್16 ರಂದು ಮೂಡೀಸ್ ಸಂಸ್ಥೆ ಭಾರತದ ಸೊವೆರಿನ್ ರೇಟಿಂಗ್ ಅನ್ನು BAA3 ನಿಂದ BAA2 ಗೆ ಏರಿಸಿದ್ದು ಭಾರತೀಯರಿಗೆಲ್ಲಾ ಸಂತಸ ನೀಡಿದೆ. ಹೂಡಿಕಾ ವಲಯ, ಶೇರು ಮಾರುಗಟ್ಟೆಗಳೂ ಖುಷಿಯಿಂದ ಜಿಗಿದಾಡಿವೆ. ಅಂತೆಯೇ ಕಳೆದ ವಾರ ನವಂಬರ್ 27 ರಂದು ಸ್ಟಾಂಡರ್ಡ್ ಐನ್ಡ್ ಪುವರ್ ಸಂಸ್ಥೆ ತನ್ನ ಭಾರತದ ಮೇಲಿನ ತನ್ನ ರೇಟಿಂಗ್ ಅನ್ನು ಏರಿಸದೆ ಹಿಂದಿನಂತೆಯೇ BBB- ಮಟ್ಟದಲ್ಲಿಯೇ ಕಾಯ್ದಿಟ್ಟದ್ದು ತುಸು ನಿರಾಸೆಯನ್ನೂ ಉಂಟುಮಾಡಿದೆ. ಮೂಡೀಸ್ ಸಂಸ್ಥೆಯು ಸುಮಾರು 17 ವರ್ಷಗಳ ಬಳಿಕ ತನ್ನ ರೇಟಿಂಗ್ ಅನ್ನು ಏರಿಸಿದ್ದು ರಾಜಕೀಯವಾಗಿಯೂ ಮೋದಿ ಸರಕಾರದ ಕಾರ್ಯಕ್ಷ ಮತೆಯ ಬಗ್ಗೆ ಒಂದು ವಲಯದಿಂದ ಹೊಗಳಿಕೆಯ ಮಾತುಗಳನ್ನು ಹುಟ್ಟು ಹಾಕಿತ್ತು. ಆದರೆ ಎಸ್ ಐನ್ಡ್ ಪಿ ಸಂಸ್ಥೆ ಯಾವುದೇ ಏರಿಕೆಯನ್ನು ಮಾಡದೆ ಇದ್ದಿದ್ದು ಕೂಡಾ ಮೋದಿಯವರ ಮತ್ತು ಬಿಜೆಪಿ ಸರಕಾರವನ್ನು ಇನ್ನೊಂದು ವಲಯದಿಂದ ಸಾಕಷ್ಟು ಟೀಕೆಗೆ ಗುರಿ ಮಾಡಿತ್ತು. ಸದ್ಯದ ರಾಜಕೀಯ ವಾತಾವರಣದಲ್ಲಿ ಕ್ರೆಡಿಟ್ ರೇಟಿಂಗ್ ಅನ್ನುವುದನ್ನು ಕೂಡಾ ರಾಜಕೀಯವಾಗಿ ಸಾಕಷ್ಟು ಬಳಕೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ಇವೆರಡೂ ಸಂಸ್ಥೆಗಳು ಮುಂಬರುವ ವರ್ಷಗಳಲ್ಲಿ ಭಾರತ ದೇಶವು ಸುಮಾರು 7.5-7.6% ಪ್ರಗತಿಯನ್ನು ಸಾಧಿಸುವ ಅಭಿಪ್ರಾಯವನ್ನು ಹೊಂದಿವೆ. ಅಂತೆಯೇ ಸದ್ಯಕ್ಕೆ 6.5% ಕ್ಕೆ ಕುಸಿದ ನಮ್ಮ ಪ್ರಗತಿಯು ಡಿಮಾನಿಟೈಸೇಶನ್ ಸಲುವಾಗಿ ಉಂಟಾದ ತಾತ್ಕಾಲಿಕ ಹಿಂಜರಿತ ಎನ್ನುವ ಮಾತಿಗೆ ಪುಷ್ಠಿ ಕೊಟ್ಟಿದೆ. ಮೂಡೀಸ್ ಸಂಸ್ಥೆಯು ದೇಶದ ಪ್ರಗತಿಪರ ಹೆಜ್ಜೆಗಳನ್ನು ಶ್ಲಾ ಸಿದರೆ ಸ್ಟಾಂಡರ್ಡ್ ಐನ್ಡ್ ಪುವರ್ ಸಂಸ್ಥೆಯು ದೇಶದಲ್ಲಿ ಏರುತ್ತಿರುವ ಖರೀದಿ, ಹೆಚ್ಚಿದ ವಿದೇಶಿ ವಿನಿಮಯದ ಖಜಾನೆ, ಉತ್ತಮವಾದ ರಾಜಕೀಯ ದೃಡತೆ ಮತ್ತು ಸದೃಡವಾದ ಪ್ರಜಾಸತ್ತಾತ್ಮಕ ಸಂಸ್ಥೆಗಳೇ ಈ ಬೆಳವಣಿಗೆಗೆ ಕಾರಣವೆಂದು ಹೇಳಿದೆ.
ಈ ಸಂದರ್ಭದಲ್ಲಿ ಸಾವರಿನ್ ಕ್ರೆಡಿಟ್ ರೇಟಿಂಗ್ ಬಗ್ಗೆ ಜನ ಸಾಮಾನ್ಯರಲ್ಲಿ ಇನ್ನಿಲ್ಲದಂತೆ ಕುತೂಹಲವನ್ನು ಉಂಟು ಮಾಡಿದೆ. ಇದುವರೆಗೆ ಹತ್ತು ಹಲವು ಬಾರಿ ಇಂತಹ ಹಲವು ರೇಟಿಂಗ್‌ಗಳು ಬಂದಿದ್ದರೂ ಈ ಬಾರಿ ಇದರ ಬಗ್ಗೆ ನಡೆದ ಚರ್ಚೆ ಅತ್ಯಂತ ಕುತೂಹಲಕಾರಿ ಹಾಗೂ ರಾಜಕೀಯ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಈ ಸಾವರಿನ್ ರೇಟಿಂಗ್ ಎಂಬ ವಿಷಯದ ಬಗ್ಗೆ ತುಸು ಪ್ರಾಥಮಿಕ ಮಾಹಿತಿಯನ್ನು ಅಗತ್ಯವಾಗಿ ಚರ್ಚಿಸಬೇಕಾಗಿದೆ.
ಏನಿದು ಕ್ರೆಡಿಟ್ ರೇಟಿಂಗ್?
ಕ್ರೆಡಿಟ್ ಅಂದರೆ ಸಾಲ. ಈ ವಿಚಾರ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಇನ್ನು ಸಾವರಿನ್ ಅಂದರೆ ಸಾರ್ವಭೌಮ ಅಥವಾ ಅದು ಒಂದು ದೇಶದ ಬಗ್ಗೆ ಬಳಸುವ ಪದ. ಹಾಗಾಗಿ ಸಾವರಿನ್ ಕ್ರೆಡಿಟ್ ರೇಟಿಂಗ್ ಎನ್ನುವುದು ಒಂದು ದೇಶದ ಸಾಲಾರ್ಹತೆಯ ಬಗ್ಗೆ ನೀಡುವ ಅಂಕ ಅಥವಾ ರೇಟಿಂಗ್. ಸಾಲ ಪಡೆಯಲು ಉಳ್ಳ ಅರ್ಹತೆ ಅಥವಾ ಸಾಲ ಪಡಕೊಂಡು ಅದನ್ನು ಮರುಪಾವತಿ ಮಾಡುವ ಶಕ್ತಿಯೇ ಸಾಲಾರ್ಹತೆ. ಈ ರೇಟಿಂಗ್ ಮೂಲಕ ಪ್ರತಿಯೊಂದು ದೇಶದ ಸಾಲ ಮರುಪಾವತಿ ಮಾಡುವ ಶಕ್ತಿಯ ಬಗ್ಗೆ ವ್ಯಾಖ್ಯಾನ ನಡೆಯುತ್ತದೆ. ಈ ರೀತಿ ರೇಟಿಂಗ್ ನೀಡುವ ಸಂಸ್ಥೆಗಳನ್ನು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಎಂದು ಕರೆಯುತ್ತಾರೆ. ಮುಖ್ಯವಾಗಿ ಮೂಡೀಸ್, ಸ್ಟಾಂಡರ್ಡ್ ಐನ್ಡ್ ಪುವರ್ ಮತ್ತು ಫಿಚ… ಎಂಬ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಈ ಕೆಲಸವನ್ನು ಮಾಡುತ್ತವೆ ಮತ್ತು ಅವುಗಳ ರೇಟಿಂಗ… ಅಂಕಗಳು ಬಹಳಷ್ಟು ಮಹತ್ವವುಳ್ಳದ್ದು ಆಗಿರುತ್ತವೆ. ಬೇರೆ ಇನ್ನಿತರ ಚಿಕ್ಕಪುಟ್ಟ ರೇಟಿಂಗ… ಸಂಸ್ಥೆಗಳು ಇದ್ದರೂ ಈ ಮೂರು ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಬಹುತೇಕ ಶೇ.90% ಕ್ಕೂ ಮೀರಿದ ಸಂದರ್ಭಗಳಲ್ಲಿ ರೇಟಿಂಗ್ ನೀಡುತ್ತಿವೆ.
ರೇಟಿಂಗ್ ನಿರ್ಣಯ ಹೇಗೆ?
ಒಬ್ಟಾತ ಸಾಲಗಾರನಿಗೆ ಸಾಲ ನೀಡಬೇಕೇ ಬೇಡವೇ ಎನ್ನುವುದನ್ನು ಆತನ ಆರ್ಥಿಕ ಸ್ಥಿತಿಗತಿ ಮತ್ತು ಆತನ ಒಟ್ಟಾರೆ ವಿತ್ತೀಯ ಶಿಸ್ತನ್ನು ನೋಡಿ ನಿರ್ಣಯ ಮಾಡುತ್ತೇವೆ ಅಲ್ಲವೇ? ಹಾಗೆಯೇ ಒಂದು ದೇಶದ ಸಾವರಿನ್ ಕ್ರೆಡಿಟ… ರೇಟಿಂಗ್ ಮಾಡುವಾಗಲೂ ಆ ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಶಿಸ್ತನ್ನು ನೋಡಿಕೊಂಡು ಮಾಡಲಾಗುತ್ತದೆ. ಒಂದು ದೇಶದ ಒಟ್ಟಾರೆ ಸದ್ಯದ ಒಟ್ಟಾರೆ ಸಾಲ, ಒಟ್ಟು ಜಿಡಿಪಿ ಅಥವಾ ಆದಾಯ, ಅದರ ಬೆಳವಣಿಗೆಯ ಪ್ರಮಾಣ, ಹಣದುಬ್ಬರ, ವಿದೇಶಿ ವಿನಿಮಯ ಇತ್ಯಾದಿ ಹತ್ತು ಹಲವು ಆರ್ಥಿಕ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ರೇಟಿಂಗ್ ಅನ್ನು ಕೊಡಲಾಗುತ್ತದೆ. ಅಷ್ಟೇ ಅಲ್ಲ, ದೇಶದ ರಾಜಕೀಯ ಸ್ಥಿರತೆ ಅಥವಾ ಪೊಲಿಟಿಕಲ… ಸ್ಟೆಬಿಲಿಟಿಯನ್ನೂ ಕೂಡಾ ಈ ಸಂಸ್ಥಗಳು ಗಮನಕ್ಕೆ ತೆಗೆದುಕೊಳ್ಳುತ್ತವೆ. ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಈ ಸಂಸ್ಥೆಗಳು ತಮ್ಮದೇ ಆದ ಪ್ರಶ್ನಾವಳಿಯನ್ನು ತುಂಬಿ ಅವಕ್ಕೆ ಅಂಕಗಳನ್ನು ನೀಡಿ ಅಂತಿಮ ರೇಟಿಂಗ್ ಅನ್ನು ಸಿದ್ಧಗೊಳಿಸುತ್ತವೆ. ಇದು ಸಾಮಾನ್ಯ ವಿಧಾನ.
ರೇಟಿಂಗ್ ಯಾವುವು?
ಮೂರೂ ಜನಪ್ರಿಯ ರೇಟಿಂಗ್ ಏಜೆನ್ಸಿಗಳಾದ ಮೂಡೀಸ್, ಸ್ಟಾಂಡರ್ಡ್ ಐನ್ಡ್ ಪುವರ… ಹಾಗೂ ಫಿಚ್ ಸಂಸ್ಥೆಗಳು ಸರಿ ಸುಮಾರಾಗಿ ಅ, ಆ ಮತ್ತು ಇ ಅಕ್ಷರಗಳನ್ನೂ ಮೂಲವಾಗಿ ಉಪಯೋಗಿಸಿಕೊಂಡರೂ ಅವುಗಳ ರೇಟಿಂಗ್ ನಾಮಾವಳಿಯಲ್ಲಿ ತುಸು ವ್ಯತ್ಯಾಸಗಳಿವೆ.
ಮೂಡೀಸ್ ಪ್ರಕಾರ BAAA3 ಯಾ BAAA2 ಅಂದರೆ ಭಾರತವು ಕೆಳಮಧ್ಯಮ ತರಗತಿಯ ಸಾಲಾರ್ಹತೆಯುಳ್ಳ ಒಂದು ದೇಶ. ಅದುವೇ ಸ್ಟಾಂಡರ್ಡ… ಐನ್ಡ್ ಪುವರ… ಸಂಸ್ಥೆಯ ಪ್ರಕಾರ ಆಆಆ ಆಗಿದೆ. ರೇಟಿಂಗ್ ಹೆಸರಿನಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಅರ್ಥದಲ್ಲಿ ಅವು ಸರಿಸುಮಾರು ಒಂದೇ ತರಗತಿಗೆ ಸೇರಿವೆ. ಇನ್ನೂ ಕೆಳಕ್ಕೆ ಇಳಿದರೆ ಅಪಾಯ ಮತ್ತು ಹೂದಿಕೆಗೆ ಅನರ್ಹವಾದ ತರಗತಿಗಳಿವೆ. ಸದ್ಯಕ್ಕೆ ಭಾರತ ದೇಶವು ಅಂತಹ ಅಪಾಯ ಪಂಕ್ತಿಯಿಂದ ಮೇಲೆಯೇ ಇದೆ. ಜಗತ್ತಿನಾದ್ಯಂತ ಹಲವು ದೇಶಗಳು ಡೇಂಜರ್ ಮತ್ತು ಜಂಕ್ ತರಗತಿಯಲ್ಲಿ ತೊಳಲಾಡುತ್ತಿವೆ ಎನ್ನುವುದನ್ನೂ ನಾವು ಗಮನದಲ್ಲಿ ಇಟ್ಟುಕೊಳ್ಳಬೆಕು.
ಮುನ್ನೋಟ
ಸ್ಟಾಂಡರ್ಡ… ಐನ್ಡ್ ಪುವರ್ ಸಂಸ್ಥೆಯ ರೇಟಿಂಗ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಪ್ರತಿಯೊಂದು ರೇಟಿಂಗ್ ಅಂಕಿಯ ಕೊನೆಗೂ + , – ಅಥವಾ ಅವೆರಡೂ ಇಲ್ಲದ ಸಂದರ್ಭಗಳು ಇರುತ್ತವೆ. ಉದಾ: ಅ ರೇಟಿಂಗ್ ಅನ್ನು ತೆಗೆದುಕೊಂಡರೆ, ಅಲ್ಲಿ ಅ, ಅ+ ಮತ್ತು ಆ- ಅನ್ನು ಕಾಣಬಹುದು. ಈ ಪ್ಲಸ್ ಮತ್ತು ಮೈನಸ್ ಚಿನ್ಹೆಗಳು ಔಟ್‌ಲುಕ್ ಅಥವಾ ಮುನ್ನೋಟವನ್ನು ಸೂಚಿಸುತ್ತದೆ. ಅ ಪ್ಲಸ್ ಅಂದರೆ ಇದು ಭವಿಷ್ಯದಲ್ಲಿ ಅಭಿವೃದ್ಧಿ ಹೊಂದುವ ಲಕ್ಷ$ಣವನ್ನು ಸೂಚಿಸುತ್ತದೆ. ಅ ಅಂದರೆ ಅದು ಭವಿಷ್ಯತ್ತಿನಲ್ಲಿ ಇನ್ನಷ್ಟು ಶಿಥಿಲವಾಗುವ ಲಕ್ಷಣ. ಅವೆರಡೂ ಅಲ್ಲದೆ ಬರೇ ಅ ಎಂಬ ರೇಟಿಂಗ್ ಇದ್ದರೆ ನ್ಯೂಟ್ರಲ… ಅಥವಾ ಭವಿಷ್ಯತ್ತಿನಲ್ಲಿ ಅದು ಹಾಗೆಯೇ ಮುಂದುವರಿಯುವ ಲಕ್ಷಣ ಇದೆಯೆಂದರ್ಥ. ಈ ಪ್ಲಸ್-ಮೈನಸ್ ಚಿನ್ಹೆಗಳನ್ನು ಪ್ರತ್ಯೇಕವಾಗಿಯೂ ಕೂಡಾ ಔಟ್‌ಲುಕ್ ಎಂದು ನಮೂದಿಸಬಹುದು.
ರೇಟಿಂಗ… ಮಹತ್ವ:
ಒಂದು ದೇಶದ ಸಾವರಿನ್ ಕ್ರೆಡಿಟ್ ರೇಟಿಂಗ್ ಆ ದೇಶದ ಸಾಲಾರ್ಹತೆಯನ್ನು ಸೂಚಿಸುತ್ತದೆ. ರೇಟಿಂಗ್ ಉತ್ತಮವಾಗಿದ್ದರೆ ಆ ದೇಶಕ್ಕೆ ನೀಡಿದ ಸಾಲದ ಅಸಲು ಹಾಗೂ ಬಡ್ಡಿ ಕ್ಲಪ್ತ ಸಮಯಕ್ಕೆ ವಾಪಾಸು ಪಡೆಯುವ ಭರವಸೆಯನ್ನು ಇಟ್ಟುಕೊಳ್ಳಬಹುದು. ಒಂದು ವೇಳೆ ರೇಟಿಂಗ್ ಕಳಪೆಯಾಗಿದ್ದರೆ ಅಸಲು ಮತ್ತು ಬಡ್ಡಿ ವಾಪಾಸು ಬರುವುದು ಸಂಶಯವೇ ಸರಿ. ಈ ಕಾರಣಕ್ಕಾಗಿ ಜಗತ್ತಿನಾದ್ಯಂತ ವಿತ್ತೀಯ ಸಂಸ್ಥೆಗಳು ಮತ್ತು ಸರಕಾರಗಳು ಸಾಲಗಾರ ಸರಕಾರದ ಸವೆರಿನ್ ರೇಟಿಂಗ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತದೆ.
ರೇಟಿಂಗ್ ಉತ್ತಮವಾಗಿದ್ದರೆ ಯಾರಾದರೂ ಅಂತಹ ದೇಶಕ್ಕೆ ಸಾಲ ನೀಡಲು ಮುಂದೆ ಬಂದಾರು. ವರ್ಲ್ಡ್ ಬ್ಯಾಂಕ್, ಇಂಟರ್‌ನ್ಯಾಷನಲ… ಮಾನೆಟರಿ ಫಂಡ್ ಅಥವಾ ಅಮೆರಿಕಾ, ಜಪಾನ್ ನಂತಹ ದೇಶಗಳು ಸಾಲ ನೀಡಲು ಉತ್ಸಾಹ ತೋರಿಸಿಯಾವು. ಆರ್ಥಿಕವಾಗಿ ಸದೃಡವಾಗಿ ಉಳ್ಳ ಯಾವ ದೇಶಕ್ಕೆ ತಾನೇ ಸಾಲ ಸಿಕ್ಕದೆ ಇರಬಹುದು? ಅಂತಹ ವಾತಾವರಣದಲ್ಲಿ ಸಾಲ ಪಡೆಯುವ ದೇಶಕ್ಕೆ ಸಾಕಷ್ಟು ಮೊತ್ತದಲ್ಲಿ ಸಾಲ ದೊರಕೀತು ಹಾಗೂ ಅದು ಕಡಿಮೆ ಬಡ್ಡಿ ದರದಲ್ಲಿಯೂ ದೊರಕೀತು. ಮರುಪಾವತಿಯ ಖಾತ್ರಿಯಿದ್ದರೆ ಸಾಲದ ಮೇಲಿನ ಬಡ್ಡಿ ದರವನ್ನು ಚೌಕಾಶಿ ಮಾಡಿ ಇಳಿಸಿಕೊಳ್ಳಬಹುದಲ್ಲವೆ? ಈ ರೀತಿ ಬೇಕಾದಷ್ಟು ದುಡ್ಡು ಸಾಲದ ರೂಪದಲ್ಲಿ ಕಡಿಮೆ ಬಡ್ಡಿ ದರಕ್ಕೆ ದೊರಕಿದರೆ ಆ ದೇಶದ ಅಭಿವೃದ್ಧಿ ಸುಲಭವಾದೀತು. ಈ ಕಾರಣಕ್ಕಾಗಿಯೇ ಕ್ರೆಡಿಟ್ ರೇಟಿಂಗ್ ಉತ್ತಮವಾದೊಡನೆ ಆ ದೇಶದ ಶೇರು ಮಾರುಕಟ್ಟೆ ಹಾಗೂ ಸಾಲಪತ್ರಗಳ ಬಾಂಡು ಮಾರುಗಟ್ಟೆ ಏರುಗತಿಯನ್ನು ಕಾಣುತ್ತದೆ. ಬದಲಾಗಿ ಕ್ರೆಡಿಟ್ ರೇಟಿಂಗ್ ಕಳಪೆಯಾದರೆ ಆ ದೇಶಕ್ಕೆ ಸಾಲ ಸಿಕ್ಕುವುದು ದುರ್ಲಭವಾಗಬಹುದು ಮತ್ತು ಸಿಕ್ಕರೂ ಜಾಸ್ತಿ ಬಡ್ಡಿದರ ತೆರಬೇಕಾಗಿ ಬರಬಹುದು. ಅಂತಹ ಸಂದರ್ಭಗಳಲ್ಲಿ ಆ ದೇಶದ ಅಭಿವೃದ್ದಿ ಕುಂಠಿತವಾಗಬಹುದು. ಆ ಕಾರಣಕ್ಕಾಗಿ ಅಲ್ಲಿನ ಶೇರು ಮಾರುಗಟ್ಟೆ ಮತ್ತು ಸಾಲಪತ್ರಗಳ ಬಾಂಡು ಮಾರುಗಟ್ಟೆ ಕುಸಿಯುತ್ತದೆ. ಇದು ಕ್ರೆಡಿಟ್ ರೇಟಿಂಗ್ ಹಾಗೂ ಮಾರುಗಟ್ಟೆಯ ಏರಿಳಿತದ ಹಿಂದಿರುವ ಸರಳವಾದ ತರ್ಕ.
ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.