ಮನೆಯೊಳಗೆ ಕುದುರೆ ಲಾಳ ಇದ್ದರೆ ಏನಾಗುತ್ತೆ?
Team Udayavani, Dec 4, 2017, 2:14 PM IST
ವಾಸ್ತವ ಶಾಸ್ತ್ರದ ರೀತಿ ನೀತಿಗಳು ಬಹು ವಿಚಿತ್ರ ಹಾಗೂ ಸ್ವಾರಸ್ಯಕರ. ಹಿಂದಿನ ವಾರ ಮನೆಯ ಉತ್ತರ ಭಾಗದಲ್ಲಿ ಇರಿಸಬಹುದಾದ ಆಮೆಯ ಬಗೆಗೆ ವಿವರಗಳನ್ನು ಒದಗಿಸಿದ್ದೆ. ಸಂಸ್ಕೃತಿಯಲ್ಲಿ, ಧಾರ್ಮಿಕ ವಿಧಾನಗಳಲ್ಲಿ ಪ್ರತಿ ಪ್ರಾಣಿಯೂ ವಿಧವಿಧ ವಿಷಯಗಳಿಗೆ ಸಂಕೇತವಾಗಿ ನಿಲ್ಲುತ್ತವೆ. ಆಮೆ ಭಗವಾನ್ ಶ್ರೀ ಮಹಾವಿಷ್ಣುವನ್ನು ಪ್ರತಿನಿಧಿಸಿದರೆ, ಕುದುರೆ ದೇವತೆಗಳ ಒಡೆಯನಾದ ದೇವಂದ್ರನನ್ನು ಪ್ರತಿನಿಧಿಸುತ್ತದೆ.
ಏಕೆಂದರೆ, ಕುದುರೆ ಸದೃಢವಾದ ಅಂಗ ರಚನೆ, ಸಂಪನ್ನವಾದ ಆರೋಗ್ಯ, ಅವಿರತವಾದ ಶಕ್ತಿ ಮೂಲ ಇತ್ಯಾದಿಗಳನ್ನು ಪ್ರತಿನಿಧಿಸುವ ಪ್ರಾಣಿ. ಹಾಗೆಯೇ ದೇವೇಂದ್ರ ಅಮಿತವಾದ ವೈಭವ, ಭೋಗ, ಅಷ್ಟೆ„ಶ್ವರ್ಯಗಳನ್ನು, ದೇವಾನು ದೇವತೆಗಳ ಬೆಂಬಲವನ್ನು ರಾಕ್ಷಸ ಶಕ್ತಿಯ ವಿರುದ್ಧ ಅನುಗ್ರಹವಾಗಿ ಪಡೆದುದರ ಸಂಕೇತ. ಅಂದರೆ ದೇವೇಂದ್ರ ಬೇರೆ ಅಲ್ಲ. ಅದೃಷ್ಟ ಬೇರೆ ಅಲ್ಲ. ಹೀಗಾಗಿ ಕುದುರೆಯು ಇಂದ್ರನನ್ನು ಪ್ರತಿನಿಧಿಸುವ, ಜೀವನೋತ್ಸಾಹದ ಪ್ರತೀಕವಾಗಿದೆ. ಕುದುರೆಯ ಕಾಲಿಗೆ ಅದು ಓಡುವ
ಎಲ್ಲ ವಿಷಮವಾದ ದಾರಿಗಳು ಏರುಪೇರುಗಳನ್ನು ಚೂಪಾದ ಮುಳ್ಳು-ಕಲ್ಲುಗಳನ್ನು ಎದುರಿಸುವ ಹಾಗೆ ರಕ್ಷಣೆಗಾಗಿ ಕುದುರೆಯ ಸರದಾರರು ಲಾಳವನ್ನು ಬಡಿಸಿರುತ್ತಾರೆ. ಲಾಳ ಇಂಗ್ಲೀಷ್ ಭಾಷೆಯ ಯು ಎಂಬ ಅಕ್ಷರ ತಲೆಕೆಳಗಾಗಿದ್ದರೆ ಹೇಗಿರುತ್ತದೆಯೋ ಆ ಆಕಾರದಲ್ಲಿ ರೂಪುಗೊಂಡಿದ್ದು, ಕಬ್ಬಿಣದಲ್ಲಿ ಮಾಡಿದ್ದಿರುತ್ತದೆ. ಹೀಗಾಗಿಯೇ ಇದು ರಕ್ಷಣೆ ಹಾಗೂ ಅದೃಷ್ಟಕ್ಕೆ ಸಂಕೇತವಾಗಿದೆ.
ಮನೆಯು ಪೂರ್ವದಿಕ್ಕಿಗೆ ಮುಖ ಮಾಡಿಲ್ಲದಿದ್ದರೆ, ಕುದುರು ಲಾಳವನ್ನು ಉಪಯೋಗಿಸುವ ಅವಶ್ಯಕತೆ ಇಲ್ಲ. ಯಾಕೆಂದರೆ
ಪೂರ್ವದ ಸೂರ್ಯನ ಬೆಳಕನ್ನು ಹೀರುವ ಮನೆಯ ಪೂರ್ವ ಬಾಗಿಲಿಗೆ ಕಬ್ಬಿಣದ ಲಾಳದ ಅವಶ್ಯಕತೆ ಇಲ್ಲ. ಹೀಗಾಗಿ ಪೂರ್ವದಿಕ್ಕಿನ ಬಾಗಿಲಿನ ಮನೆಯವರು ಕುದುರೆಯ ಲಾಳಕ್ಕಾಗಿ ಕಾತರಿಸದಿರಿ. ಆದರೆ ಉತ್ತರ ದಿಕ್ಕನ್ನಾಗಲೀ, ಪಶ್ಚಿಮವನ್ನಾಗಲೀ, ವಾಯುವ್ಯ ದಿಕ್ಕನ್ನಾಗಲೀ ಎದುರಿಸುವ ಮನೆಯ ಬಾಗಿಲುಗಳಿದ್ದರೆ ಅಗತ್ಯವಾಗಿ ಕುದುರೆಯ ಲಾಳವನ್ನು ಬಾಗಿಲು ಮೇಲಾºಗದಲ್ಲಿ, ಲಾಳಲದ
ದ್ವಿಬಾಹುಗಳ ಕೆಳಮುಖವಾಗಿರುವಂತೆ ಬಾಗಿಲುಗಳ ಮೇಲಾºಗದಲ್ಲಿ ಜೋಡಿಸಬೇಕು. ಆಗ್ನೇಯ ದಿಕ್ಕಿನ ಬಾಗಿಲುಗಳಿಗೂ ಕುದುರೆ ಲಾಳ ಉಪಯೋಗಿಸದಿರಿ. ಪೂರ್ವಕ್ಕೂ, ಆಗ್ನೇಯಕ್ಕೂ ಕುದುರೆ ಲಾಳ ಒಳಿತುತಾರದು. ಯಾಕೆಂದರೆ ಲಾಳವು ಕಬ್ಬಿಣದಿಂದ
ರಚನೆಯಾದ ಪದಾರ್ಥವಾದುದರಿಂದ ಇದು ಅಲ್ಲಿ ವರ್ಜವೆನಿಸಿದೆ. ಉಳಿದ ದಿಕ್ಕಿನ ಬಾಗಿಲುಗಳಿಗೆ ಬಾಗಿಲುಗಳ ಮೇಲ್ಪಾಗವೇ ಕುದುರೆ ಲಾಳವು ಜೋಡಣೆಯಾಗುವುದಕ್ಕೆ ಸೂಕ್ತ ಭಾಗವಾಗಿದೆ.
ಪುರಂದರನಾದ ದೇವೇಂದ್ರನ ಕೃಪಾಶೀರ್ವಾದಗಳು ಮನೆ ಮಂದಿಗೆ ಮೇಲಿನಿಂದ ಲಭ್ಯವಾಗುವ ಅಂಶಕ್ಕೆ ಪೂರಕವಾಗಿ ಈ ರೀತಿಯ ಜೋಡಣೆ ಉತ್ತಮ ವಿಚಾರವಾಗಿದೆ. ಮನೆಯ ಹೊರ ಭಾಗದಲ್ಲೇ ಈ ಲಾಳವು ಅಡಕವಾಗಿರಬೇಕು. ಮನೆಯ ಒಳಗಡೆ ಸೇರಿಕೊಳ್ಳಕೂಡದು. ಈ ಎಲ್ಲಾ ಅಂಶಗಳನ್ನು ವ್ಯವಧಾನಗಳೊಡನೆ ಅನುಸರಿಸಿ. ಜೊತೆಗೆ ಬಹಳ ಮುಖ್ಯವಾದುದು
ಕುದುರೆಯ ಪಾದಕ್ಕೆ ಉಪಯೋಗಿಸಿ, ಕುದುರೆಯಿಂದ ಉಪಯೋಗಿಸಲ್ಪಟ್ಟ ಲಾಳವು ಹೆಚ್ಚು ಶುಭಕರವಾಗಿದೆ. ಏಕೆಂದರೆ ಜೀವನೋತ್ಸಾಹ, ಸದೃಢತೆಯೊಡನೆ ಕುದುರೆ ಈ ಲಾಳವನ್ನು ಉಪಯೋಗಿಸಿಕೊಂಡು ಅದಮ್ಯ ಚೈತನ್ಯವನ್ನೂ, ಶಕ್ತಿಯನ್ನೂ ಚಿಮ್ಮಿಸಿರುವುದರಿಂದ ಕುದುರೆಗಳು ಉಪಯೋಗಿಸಿದ ಲಾಳಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಕುದುರೆಯ ಲಾಳದ ಮನೆ ಬಾಗಿಲಿಗೆ
ಪವಿತ್ರವಾದುದು ಎಂಬುದುನ್ನು ನಮ್ಮ ಸಂಸ್ಕೃತಿ ಮಾತ್ರವಲ್ಲ, ಪಾಶ್ಚಾತ್ಯ ದೇಶಗಳೂ ಒಪ್ಪಿಕೊಂಡಿವೆ. ಹೀಗಾಗಿ ಗೃಹವೊಂದರ ಅಭ್ಯದಯಕ್ಕೆ ಇದು ಆಧಾರ.
ಇನ್ನು ದಾಢತೆ ಇದೆ ಎಂದು ಈ ಲಾಳ ಬೆಳ್ಳಿಯಲ್ಲಾಗಲೀ, ಚಿನ್ನದಲ್ಲಾಗಲೀ ಇರಕೂಡದು. ಧನಾತ್ಮಕ ಆಗಿರದ ಸ್ಪಂದನಗಳು ಮನೆಯೊಳಗಡೆ ಬಾರದಂತೆ ತಡೆಯುವುದಕ್ಕೆ ಕಬ್ಬಿಣದಿಂದ ಮಾಡಿದ ಕುದುರೆ ಲಾಳವೇ ಅಪೇಕ್ಷಣೀಯ. ಎಲ್ಲದಕ್ಕೂ ಒಂದೊಂದು ನಿಯಮಗಳಿವೆ. ಸಂವಿಧಾನಗಳಿವೆ. ಹೀಗಾಗಿ ಕಬ್ಬಿಣ ಲಾಳಗಳೇ ಇರಲಿ.
ಅನಂತ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.