ವಾಹನಗಳನ್ನು ನೈಋತ್ಯದ ಮೂಲೆಯಲ್ಲಿ ನಿಲ್ಲಿಸಿದರೆ ಏನಾಗುತ್ತದೆ ಎಂದರೆ…
Team Udayavani, Apr 23, 2018, 11:52 AM IST
ಆಧುನಿಕ ಕಾಲದಲ್ಲಿನ ವಾಹನದ ಕಲ್ಪನೆ ನಮ್ಮ ಭಾರತೀಯ ವಾಸ್ತು ಪರಂಪರೆ ಬರೆದುಕೊಳ್ಳಲ್ಪಟ್ಟ ಕಾಲಕ್ಕಿಂತ ಸಂಪೂರ್ಣವಾಗಿ ಬೇರೆಯದೇ ಆಗಿದೆ. ಆನೆ, ಅಶ್ವ, ರಥದ ಕಲ್ಪನೆಗಳು ಈಗಿಲ್ಲ. ನಮ್ಮ ದೇವರುಗಳ ಕಲ್ಪನೆ ಕೂಡ. ವಿಧವಿಧವಾಗಿದೆ. ಶಿವನ ವಾಹನ ನಂದಿ, ವಿಷ್ಣುವಿನ ವಾಹನ ಗರುಡ, ಗಣಪತಿಯ ವಾಹನ ಇಲಿ, ಷಣ್ಮುಖನದು ನವಿಲು ಇತ್ಯಾದಿ ಇತ್ಯಾದಿ ಇವುಗಳ ಪರಿಕಲ್ಪನೆ ಬೇರೆ ರೀತಿಯನ್ನು ಈಗ ನಮ್ಮ ವಾಹನಗಳಲ್ಲಿ ಕಬ್ಬಿಣ, ಅಲ್ಯುಮಿನಿಯಂಗಳಂಥ ಲೋಹಗಳು, ಪೆಟ್ರೋಲ್, ಗ್ಯಾಸ್‌ಗಳಂಥ ಉರುವಲಗಳು ಒಂದಕ್ಕೊಂದು ವಿರೋಧಾಭಾಸದ್ದು ಇಂಥ ವಾಹನಗಳನ್ನು ನಾವು ಎಲ್ಲೆಲ್ಲೋ ಇಡಿಸುತ್ತೇವೆ. ನಿಲ್ಲಿಸುತ್ತೇವೆ.
ಮನೆ ಎದುರು, ಮನೆಯ ಒಳ ಕಾಂಪೌಂಡ್, ಸೈಕಲ್, ದ್ವಿಚಕ್ರ ವಾಹನಗಳನ್ನು ಮನೆಯ ಒಳಗೂ, ಗೇಟ್‌ಗೆ ಕೊಂಚ ಮಾರ್ಪಾಡು ತರಿಸಿ ಈಶಾನ್ಯದ, ಪೂರ್ವದ ಮೂಲೆಯಲ್ಲೂ ಅವು ಇರಿಸಲ್ಪಡುತ್ತವೆ. ನಿಜ ಹೇಳಬೇಕೆಂದರೆ ಕಬ್ಬಿಣದ ಲೋಹ, ಹೆಚ್ಚಿನ ಪ್ರಮಾಣದ ಸ್ವಯಂ ಅಗ್ನಿ ಸ್ವಪ್ರೇರಿತ ಇಂಧನಗಳನ್ನು ವಾಸ್ತವವಾಗಿ ನೈಋತ್ಯದ ಮೂಲೆಯಲ್ಲಿಡಬಹುದೇ. ವಿನಾ ವಾಯುವ್ಯ, ಈಶಾನ್ಯ, ಆಗ್ನೇಯಗಳಂಥ ಮೂಲೆ ಆತ್ಮನಾಶಕವಾದದ್ದು ಸಹಾ… ಆಗ್ನೇಯ ಮೂಲೆಯಲ್ಲಿ ಇಡಲೇಬಾರದು.
ವಿವಿಧ ರೀತಿಯ ರೋಗಗಳಿಗೆ ಇದರಿಂದ ನಾನೇ ಆಹ್ವಾನ ಕೊಟ್ಟಂತೆ. ಉತ್ತರ, ಪೂರ್ವ, ವಾಯುವ್ಯಗಳು ಕಬ್ಬಿಣದಿಂದಾಗಿ ಅರಿಷ್ಟ. ಶಕ್ತಿಗೂ, ಯಮ ತತ್ವಕ್ಕೂ ಇಂಬು ನೀಡುತ್ತವೆ. ಉತ್ತರದ ಕಡೆಗೂ, ಈಶಾನ್ಯದ ಕಡೆಗೂ ಇದ್ದರೆ ಹಣದ ಚಲನವಲನಗಳು ಭಾರಿ ಆದ ತಾಟಸ್ಥ್ಯ ಸ್ಥಗಿತಕ್ಕೆ ದಾರಿ ಮಾಡಿಕೊಡುತ್ತದೆ. ಸೋರಲ್ಪಡುವ ಪೆಟ್ರೋಲ್ ಹಾಗೂ ಡೀಸೆಲ್‌ಗಳು, ಮೀಥೇನ್ ಕೂಡಿದ ಫ್ಯೂಯಲ್ ಗ್ಯಾಸ್ ನಿಮ್ಮ ಸಂಪಾದನಾ ಶಕ್ತಿಯನ್ನು ತಡೆಯುತ್ತದೆ. ನೈಋತ್ಯದ ಮೂಲೆ ಕೂಡ ಉಚಿತವಾದುದಲ್ಲ.
ಆದರೆ ಜಲ ತತ್ವದ ಪದರಗಳು ಆರೋಗ್ಯದ ವಿಚಾರದಲ್ಲಿ ಹೊಸದೇ ಚೈತನ್ಯವನ್ನು, ವಾಹನಗಳ ಅರಿಷ್ಟ ಯೋಗಗಳನ್ನು ತೊಳೆಯುವ ಸ್ವಾಸ್ಥ್ಯದ ಬಗೆಗಿನ ಸುಲಲಿತ ಸುಳಿಗಳನ್ನು ಹೆಣೆದು ಕೊಡುತ್ತವೆ. ವಾಹನಗಳು ಅನಿವಾರ್ಯವಾಗಿದೆ ಎಂಬ ಕಾರಣಕ್ಕೆ ಬೇಕು. ಆದರೆ ಶನಿ ಕಾಟದ ಸಂದರ್ಭದಲ್ಲಿ ಅವು ( ಒಬ್ಬನ ಪಾಲಿಗೆ) ಹೇಗೋ ಉಳಿಸಿಕೊಳ್ಳಬಹುದಾದ ಶಕ್ತಿ ವಲಯವನ್ನೂ ಹಾಳುಗೆಡಹುತ್ತವೆ. ಕೆಲವರ ವಾಹನಗಳನ್ನು ಗಮನಿಸಿ, ಸರಿಯಾಗಿ ತೊಳೆದಿಡುವುದೂ ಇಲ್ಲ. ಇವು ಕುಜದೋಷವನ್ನು ವೃದ್ಧಿಸುವ ಕೆಲಸ ಮಾಡುತ್ತವೆ.
ವಾಹನಗಳ ಬಣ್ಣದ ವಿಚಾರವಾಗಿಯೂ ಸೂಕ್ತವಾಗಿ ನಿರ್ಧರಿಸಿಕೊಳ್ಳುವ ವಿಚಾರ ಅಗತ್ಯ. ಸೂರ್ಯ, ಚಂದ್ರಾದಿ ನವಗ್ರಹಗಳು ಜನ್ಮದ ಸಂದರ್ಭದಲ್ಲಿ ಒದಗಿಸಿದ ಸಕಾರಾತ್ಮಕ, ನಕಾರಾತ್ಮಕ ಅಂಶಗಳನ್ನು ಗಮನಿಸಿ ಬಣ್ಣ ಯಾವುದೆಂಬುದನ್ನು ನಿರ್ಧರಿಸಿ. ಅಮೇರಿಕಾದ ಅಧ್ಯಕ್ಷರೊಬ್ಬರು ಶನಿಕಾಟದ ಸಂದರ್ಭದಲ್ಲಿ ಬೇಡವೆಂದರೂ ಖರೀದಿಸಿದ ನೀಲಿ ಕಾರಿನಿಂದ ಆಯುಧದ ಏಟಿಗೆ ಗುರಿಯಾದರು. ತೀವ್ರವಾದ ದೈಹಿಕ ಕಾಯಿಲೆ ಎದುರಿಸಿದರು.
ಕರ್ನಾಟಕದ ಹಿರಿಯ ರಾಜಕಾರಣಿಯೋರ್ವರ ಮಗ ತನ್ನ ನಕ್ಷತ್ರಕ್ಕೆ ಸೂಕ್ತವಲ್ಲದ ಬಿಳಿ ಬಣ್ಣದ ಕಾರುಗಳ ಶೋಕಿಯಿಂದಾಗಿ ಅರೆ ಹುಚ್ಚನಂತೆ ಓಡಾಡಿಕೊಂಡಿದ್ದರು. ಭಾರತೀಯ ಚಿತ್ರರಂಗದ ಮಹಾನ್ ತಾರೆ ಬಳಸಬಾರದ ಕಪ್ಪು ಬಣ್ಣವನ್ನು ಇಷ್ಟಪಟ್ಟು ಕುಡುಕಳಾದಳು.ಈಗಲೂ ಚಾಲ್ತಿಯಲ್ಲಿರುವ, ಮಹಾನ್ ತಾರೆಯೊಬ್ಬಳು ಕುಜ ದೋಷವಿದ್ದು ಉಕ್ಕೇಳುವ ರಕ್ತದ ಬಣ್ಣದ ಕಾರಿನ ಶೋಕಿಯಿಂದ,
ಕೆಂಪು ಬಣ್ಣದೊಂದಿಗೆ ಕೂಡಿಕೊಂಡಿರಬಾರದ ಕೆನೆ ಬಣ್ಣಗಳಿಂದ ತೊಂದರೆಯೊಂದಕ್ಕೆ ಸಿಲುಕಿ ಕೊಂಡಿದ್ದಾಳೆ. ನಮ್ಮ ಹುಟ್ಟು ಹಾಗೂ ನಮ್ಮ ವಾಹನಗಳು ಒಂದಕ್ಕೊಂದು ಅನುಪಾತವನ್ನು ಪಡೆದಿವೆ. ಜೊತೆಗೆ ವಾಹನ ನಿಲ್ಲಿಸುವ ಗ್ಯಾರೇಜ್, ಪಾರ್ಕಿಂಗ್ ಲಾಟ್ ಅನುಪಾತ ತಪ್ಪಿ ಕಿರಿಕಿರಿಗೆ ಕಾರಣವಾಗುತ್ತವೆ. ಆಯುಧ ಪೂಜೆಯ ಸಂದರ್ಭದ ಪೂಜೆಗಳಿಂದ ಲಕ್ಷಿಯ ಅನುಗ್ರಹ ಗಳಿಸುವಲ್ಲಿ ವಿಫಲವಾಗುತ್ತಲೇ ಇರುತ್ತದೆ.
* ಅನಂತಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.