ಸಾಲ ಒಪ್ಪಿಗೆ ಅಂದರೆ ಏನು?


Team Udayavani, Jun 12, 2017, 1:51 PM IST

sala.jpg

ಒಂದು ಬ್ಯಾಂಕಿನ ಶಾಖಾ ಮ್ಯಾನೇಜರ್‌ ಬದಲಿಯಾಗಿ ಬಂದಾಗ ನಾಲ್ಕಾರು ದಿನ ಆತ, ಆ ಶಾಖೆಯಲ್ಲಿ ಆವರೆಗೆ ನೀಡಿದ ಸಾಲಗಳಿಗೆ ಸಂಬಂಧಪಟ್ಟ ಎಲ್ಲಾ ಕಾಗದಪತ್ರಗಳನ್ನು ,ದಾಖಲೆಗಳನ್ನು ಮತ್ತು ಸೆಕ್ಯುರಿಟಿಗಳನ್ನು ಪರಿಶೀಲಿಸುತ್ತಾನೆ. ಆ ಶಾಖೆಯಲ್ಲಿ ಬಂಗಾರದ ಆಭರಣದ ಮೇಲೆ ಸಾಲ ಕೊಡುತ್ತಿದ್ದರೆ, ಅಡವು ಇರಿಸಿಕೊಂಡ ಎಲ್ಲಾ ಬಂಗಾರದ ಆಭರಣಗಳನ್ನು ಪರಿಶೀಲಿಸುತ್ತಾನೆ. ಒಮ್ಮೊಮ್ಮೆ ಬ್ಯಾಂಕಿನ ಅಧಿಕೃತ Gold Appraiser ಅನ್ನು ಕರೆಸಿಕೊಂಡು  ಪರೀಕ್ಷಿಸಿಕೊಳ್ಳುವ ಉದಾಹರಣೆಗಳು ಇಲ್ಲದಿಲ್ಲ. ಇವುಗಳಿಗೆ ತೃಪ್ತಿದಾಯಕ ಪ್ರತಿಕ್ರಿಯೆ ದೊರಕಿದಾಗಲೇ ಆತ ಬ್ಯಾಂಕ್‌ ಶಾಖೆಯ ಚಾರ್ಜ್‌ ತೆಗೆದುಕೊಳ್ಳುತ್ತಾನೆ ಅಥವಾ ಏನಾದರೂ  ಲೋಪ-ದೋಷಗಳಿದ್ದರೆ, ಅವುಗಳನ್ನು  ಉಲ್ಲೇಖಿಸಿ ಚಾರ್ಜ್‌ ತೆಗೆದುಕೊಳ್ಳುತ್ತಾನೆ. ಹಾಗೆಯೇ ಬ್ಯಾಂಕಿನಿಂದ ಬದಲಿಯಾಗಿ ಹೋಗುವ  ಮ್ಯಾನೇಜರ್‌ ಕೂಡಾ,  ಶಾಖೆಯನ್ನು ಬಿಟ್ಟು ಹೋಗುವ ಮೊದಲು   ಸಾಲಕ್ಕೆ ಸಂಬಂಧಪಟ್ಟ ಎಲ್ಲಾ ಕಾಗದ ಪತ್ರಗಳು, ದಾಖಲೆಗಳು ಮತ್ತು ಸೆಕ್ಯುರಿಟಿಗಳು  ಇವೆ ಎನ್ನುವುದನ್ನು ಖಾತರಿ ಮಾಡಿಕೊಳ್ಳುತ್ತಾನೆ. ಇವು ಎಲ್ಲಾ ಬ್ಯಾಂಕುಗಳಲ್ಲಿ ಕಾಣಬರುವ ಸಾಮಾನ್ಯ ಪ್ರಕ್ರಿಯೆ. ಇವುಗಳಲ್ಲಿ  ದಾಖಲೆಗಳು, ಕಾಗದಪತ್ರಗಳು ಮತ್ತು ಸೆಕ್ಯರಿಟಿಗಳು ಇವೆ ಮತ್ತು ಅವು ಪ್ರಚಲಿತವಾಗಿ ಇವೆ ಎನ್ನುವ ಮೂರು ಅಂಶಗಳು ಮುಖ್ಯವಾಗಿರುತ್ತವೆ.

ಯಾಕೆ ಈ ಪರಿಶೀಲನೆ?
ಬ್ಯಾಂಕುಗಳು ನೀಡಿದ ಸಾಲಗಳು ಸರಿಯಾಗಿ ಮತ್ತು ಸಮಯ ಪರಿಮಿತಿಯಲ್ಲಿ ಮರುಪಾವತಿಯಾದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ, ಇಂದಿನ ದಿನಗಳಲ್ಲಿ ಮರುಪಾವತಿ ಸಮಸ್ಯೆಯಾಗಿದ್ದು, ಮರುಪಾವತಿಗಾಗಿ ಬ್ಯಾಂಕುಗಳು ಕೋರ್ಟ್‌ ಮೆಟ್ಟಿಲುಗಳನ್ನು ಹತ್ತುವ  ಸಂದರ್ಭಗಳು ಮತ್ತು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ.  ಈ ಸಮಯದಲ್ಲಿ ಈ ಎಲ್ಲಾ ದಾಖಲೆಗಳು ಮತ್ತು ಕಾಗದಪತ್ರಗಳು ಬೇಕಾಗುತ್ತವೆ. ಕೆಲವು ಕಾಗದ ಪತ್ರಗಳಲ್ಲಿ ಅವುಗಳ execution date ಕೂಡಾ  ಅಷ್ಟೇ ಮುಖ್ಯ. ಸಾಲ ನೀಡಿದ ಕಾಗದ ಪತ್ರಗಳು, ಸಾಲ ನೀಡಿದ ದಿನದಿಂದ ಮೂರುವರ್ಷಗಳ ಕಾಲವಷ್ಟೇ ಪ್ರಚಲಿತ ಇರುತ್ತಿದ್ದು, ಮೂರು ವರ್ಷದ  ಕಾಲಾವಧಿ ಮುಗಿಯುವ ಮೊದಲು ಬ್ಯಾಂಕುಗಳು  ಕೆಲವು ನಿರ್ದಿಷ್ಟ ದಾಖಲೆಗಳನ್ನು ನವೀಕರಣ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನವೀಕರಣ ಮಾಡಿಕೊಳ್ಳದಿದ್ದರೆ, ಸಾಲ ಒಪ್ಪಿಗೆ ಪತ್ರ ಪಡೆಯದಿದ್ದರೆ, ಸಾಲ ಮರುಪಾವತಿಗಾಗಿ ಬ್ಯಾಂಕ್‌ ನ್ಯಾಯಾಲಯದ ಮೆಟ್ಟಿಲೇರಿದರೆ, ಸಂಬಂಧಪಟ್ಟ ಸಾಲವನ್ನು Time Barred Debt under Limitation Act ಎಂದು ಕೋರ್ಟ್‌ನಲ್ಲಿ ನಿಲ್ಲುವುದಿಲ್ಲ ಮತ್ತು ಆ ಸಾಲದ ವಸೂಲಿ ಬ್ಯಾಂಕಿಗೆ ಕಷ್ಟದಾಯಕವಾಗುತ್ತದೆ. ಈ ವೈಫ‌ಲ್ಯಕ್ಕೆ ಬ್ಯಾಂಕ್‌ ಸಂಬಂಧಪಟ್ಟ ಮ್ಯಾನೇಜರ್‌ ಅನ್ನು ಹೊಣೆಗಾರರನ್ನಾಗಿ ಮಾಡುತ್ತದೆ. ಇಂಥ ನ್ಯೂನತೆಗಳಿಗಾಗಿ  ಸಾಕಷ್ಟು ಬ್ಯಾಂಕ್‌ ಮ್ಯಾನೇಜರ್‌ಗಳು ತೊಂದರೆಯಲ್ಲಿ ಸಿಲುಕಿಕೊಂಡಿ¨ªಾರೆ. ದಂಡವನ್ನೂ ತೆತ್ತಿ¨ªಾರೆ. ಅಂತೆಯೇ, ಪ್ರತಿಯೊಬ್ಬ ಮ್ಯಾನೇಜರ್‌ಗಳು ದಾಖಲೆ, ಕಾಗದಪತ್ರಗಳು ಮತ್ತು ಅವುಗಳ execution date ಬಗೆಗೆ ತೀವ್ರ ಎಚ್ಚರಿಕೆ ವಹಿಸುತ್ತಾರೆ.

ಸಾಲ ವಸೂಲಾಗುವುದು ಅಥವಾ ಬಿಡುವುದು ಬೇರೆ ಮಾತು. ಆದರೆ, ಸಂಬಂಧಪಟ್ಟ ಮ್ಯಾನೇಜರ್‌ ಮತ್ತು ಅಧಿಕಾರಿಗಳು ಈ ನ್ಯೂನತೆಯಿಂದಾಗುವ ಸಂಭವನೀಯ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಅಭಿಪ್ರಾಯ ಬ್ಯಾಂಕುಗಳಲ್ಲಿ ಕೇಳಿಬರುತ್ತಿದೆ. ಈ ಪತ್ರ ಸಾಲ ಮಂಜೂರಾತಿಗೆ ಬೇಕಾಗಿರದ ಪತ್ರವಾಗಿರದೇ, ಸಾಲ ವಸೂಲಾತಿಗೆ ಕೋರ್ಟ್‌ನ  ಮೆಟ್ಟಿಲನ್ನು ಏರುವ ಸಂದರ್ಭ ಬಂದಾಗ ಅಗತ್ಯ ಬೇಕಾದ ಕಾಗದ/ದಾಖಲೆ ಯಾಗಿರುತ್ತದೆ.

ಸಾಲಗಳ ನವೀಕರಣ ಎಂದರೇನು?
ಕಾನೂನಾತ್ಮಕವಾಗಿ ಒಂದು ಸಾಲದ ದಾಖಲೆಗಳ ವಯಸ್ಸು ಸಾಮಾನ್ಯವಾಗಿ ಮೂರು ವರ್ಷಗಳು. ತಮಾಷೆಯಾಗಿ ಮೂರು ವರ್ಷಕ್ಕೆ ಸಾಲ ನಿರ್ಜೀವ ವಾಗುತ್ತದೆ ಎಂದು ಹೇಳುತ್ತಾರೆ. ಮೂರು ವರ್ಷ  ಮುಗಿಯುವ ಒಳಗಾಗಿ ಅದಕ್ಕೆ  ಜೀವ ತುಂಬಿ ಚಾಲನೆಯಲ್ಲಿ ಇಡಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು ಬ್ಯಾಂಕಿನ ಪರಿಭಾಷೆಯಲ್ಲಿ ನವೀಕರಣ ಎನ್ನುತ್ತಾರೆ.

ಸಾಲ ನವೀಕರಣ, ಸಾಲ ನೀಡುವಿಕೆಯಷ್ಟು ಕ್ಲಿಷ್ಟಕರವಾಗಿರದೇ ತುಂಬಾ ಸರಳವಾಗಿರುತ್ತದೆ. ಒಂದರಡು ದಾಖಲೆಗಳೊಂದಿಗೆ, ಮೂರು ವರ್ಷದ ಅವಧಿ ಮುಗಿಯುವ ಮೊದಲು ಸಾಲದ ಖಾತೆಯಲ್ಲಿರುವ ಬ್ಯಾಲೆನ್ಸಗೆ (ಬಡ್ಡಿಯೂ ಸೇರಿ) ಗ್ರಾಹಕನಿಂದ ರೆವಿನ್ಯೂ ಸ್ಟ್ಯಾಂಪ್‌ ಮೇಲೆ ಒಪ್ಪಿಗೆ ಪತ್ರ ಪಡೆಯುತ್ತಾರೆ. ಮೂರು ವರ್ಷ ಮುಗಿಯುವ ಮೊದಲು ಗ್ರಾಹಕನಿಂದ ತೆಗೆದುಕೊಳ್ಳುವ ಈ ಒಪ್ಪಿಗೆ ಪತ್ರವನ್ನು ಬ್ಯಾಂಕಿನ ಭಾಷೆಯಲ್ಲಿ ಬ್ಯಾಲೆನ್ಸ್‌ ಖಾತರಿ, ಒಪ್ಪಿಗೆ ಅಥವಾ ಖಚಿತ ಪತ್ರ ಎಂದು ಕರೆಯುತ್ತಾರೆ. 

ಇದಕ್ಕೆ  ಪ್ರತಿ ಬ್ಯಾಂಕಿನಲ್ಲೂ ಅವರದೇ ಆದ ವಿಶೇಷ ನಮೂನೆ ಇರುತ್ತದೆ. ಒಕ್ಕಣೆಯಲ್ಲಿ ಕಾನೂನಾತ್ಮಕ ಸುರಕ್ಷಿತತೆ ಇರುತ್ತದೆ. ಕೆಲವು ಬ್ಯಾಂಕುಗಳಲ್ಲಿ ಇದನ್ನು ಬ್ಯಾಲೆನ್ಸ ಖಚಿತ (Balance Confirmation letter)ಪತ್ರ ಎಂದೂ ಕರೆಯತ್ತಾರೆ. ಇದು ಇಂಡಿಯನ್‌ ಲಿಮಿಟೇಷನ್‌ ಆಕ್ಟ ಮತ್ತು ಇಂಡಿಯನ್‌ ಕಾಂಟ್ರಾಕ್ಟ ಆಕ್ಟ ಪರಿಧಿಯಲ್ಲಿ ಬರುತ್ತಿದ್ದು, ಇದನ್ನು ಒಂದು ವ್ಯಕ್ತಿಯು ಇನ್ನೊಬ್ಬನಿಗೆ ತಾನು ಇಂತಿಷ್ಟು ಹಣವನ್ನು ಇನ್ನೊಬ್ಬನಿಗೆ ಕೊಡಬೇಕೆಂದು ಎಂದು ಬರಹದಲ್ಲಿ ತಿಳಿಸುವ ಪತ್ರ ಅಥವಾ ದಾಖಲೆ. ಇದನ್ನು ಕೆಲವು ನ್ಯಾಯಾಲಯಗಳು ಅ ಹಣವನ್ನು ಹಿಂತಿರುಗುವ ಕೊಡುವ ಪರೋಕ್ಷ ಭರವಸೆ ಅಥವಾ ಪ್ರಾಮಿಸ್‌ ಎಂದೂ ಹೇಳಿವೆ. ಸಮಯ ಪರಿಮಿತಿ  ಮುಗಿದ ಸಾಲಕ್ಕೂ ಇದು ಅನ್ವಯವಾಗುತ್ತದೆ. ಈ ಪತ್ರವನ್ನು ಸಾಲ ತೆಗೆದುಕೊಂಡ ವ್ಯಕ್ತಿ ಅಥವಾ ಫ‌ರ್ಮನ ಅಧಿಕೃತ ವ್ಯಕ್ತಿ ಸಹಿ ಮಾಡಬೇಕಾಗುತ್ತಿದ್ದು ಬರಹದಲ್ಲಿ ಇರಬೇಕಾಗುತ್ತದೆ. ಬಾಯಿಮಾತಿನ ಒಪ್ಪಿಗೆಗೆ ಕಾನೂನಿನಲ್ಲಿ  ಮಾನ್ಯತೆ ಇಲ್ಲ. ಈ ಬರಹದಲ್ಲಿ ನೇರವಾಗಿ ಸಾಲದ ಬಾಕಿಯನ್ನು ಒಪ್ಪಿಕೊಳ್ಳುವ ಒಕ್ಕಣೆ ಇರಬೇಕು. ಕಂಪನಿಗಳ ಲೆಕ್ಕದ ಪುಸ್ತಕದಲ್ಲಿ ಕಂಪನಿಯ ಡೈರೆಕ್ಟರ್‌ಗಳು ತಮ್ಮ ಸಹಿಯೊಂದಿಗೆ  ತಮ್ಮ ಸಾಲ ಬಾಕಿಯನ್ನು ಉಲ್ಲೇಖಿಸಿದರೆ, ಅದನ್ನು ಬ್ಯಾಂಕುಗಳು ಸಾಲ ಒಪ್ಪಿಗೆ ಪತ್ರವೆಂದು  ಒಪ್ಪುತ್ತವೆ. ಆದರೆ, ಕಂಪನಿಯ ನೌಕರನ ಸಹಿ ಇದ್ದರೆ ಕಾನೂನು ಪ್ರಕಾರ ಬ್ಯಾಂಕಗಳು ಒಪ್ಪುವುದಿಲ್ಲ.  ಒಪ್ಪಿಗೆ ಪತ್ರದ ದಿನದಿಂದ ಹೊಸ ಸಮಯ ಪರಿಮಿತಿಯ ಲೆಕ್ಕ ಆರಂಭವಾಗುತ್ತದೆ.

ಸುರಕ್ಷಿತತೆಯ ದೃಷ್ಟಿಯಲ್ಲಿ ಕೆಲವು ಬ್ಯಾಂಕುಗಳಲ್ಲಿ ಇಂಥ ಪತ್ರವನ್ನು ವರ್ಷಕ್ಕೊಮ್ಮೆ, ಮತ್ತೆ  ಕೆಲವರು ತ್ತೈಮಾಸಿಕವಾಗಿ, ಇನ್ನೂ ಕೆಲವು ಚಾಣಾಕ್ಷ ಮ್ಯಾನೇಜರ್‌ಗಳು, ಬ್ಯಾಂಕುಗಳ ಮತ್ತು ತಮ್ಮ ವೈಯಕ್ತಿಕ ಸುರಕ್ಷಿತೆಯ ದೃಷ್ಟಿಯಲ್ಲಿ ಒಂದೆರಡು ಪತ್ರಗಳಿಗೆ ಸಾಲಗಾರನಿಂದ ಸಾಲ ನೀಡವಾಗಲೇ ಇನ್ನಿತರ ಕಾಗದಪತ್ರಗಳೊಂದಿಗೆ ಮೊದಲೇ  ಸಹಿ ಪಡೆದು ಪ್ರತ್ಯೇಕವಾಗಿ ಇಟ್ಟಿರುತ್ತಾರೆ. ಸಮಯ ಬಂದಾಗ ಉಪಯೋಗಿಸಿಕೊಳ್ಳುವ ಎಂದು. ಸಾಲ ನೀಡುವ ಹೊತ್ತಿನಲ್ಲಿ ಗ್ರಾಹಕರು ಸಹಿ ಮಾಡಲು ಸಹಕರಿಸುತ್ತಾರೆ ಎನ್ನುವ  ದೃಷ್ಟಿಯಲ್ಲಿ ಬ್ಯಾಂಕಿನವರು ಈ ಮಾರ್ಗವನ್ನು ಅನುಸರಿಸುತ್ತಾರೆ ಎನ್ನುವ  ಆರೋಪವಿದೆ. ಇದಕ್ಕೆ ಮುಖ್ಯ ಕಾರಣ ಕಾರ್ಯ ಬಾಹುಳ್ಯದಿಂದಾಗಿ ಭವಿಷ್ಯದಲ್ಲಿ ಇಂಥ ಪತ್ರಗಳನ್ನು ತೆಗೆದುಕೊಳ್ಳದಿರುವ ಮತ್ತು  ಒಮ್ಮೆ ಸಾಲ ಬಿಡುಗಡೆಯಾದ ಮೇಲೆ ಗ್ರಾಹಕರು ಇಂಥ ಪತ್ರಗಳಿಗೆ ಸಹಿಹಾಕಲು  ಸಹಕರಿಸದಿರುವ ಸಾಧ್ಯತೆ ಮತ್ತು ಈ ನ್ಯೂನತೆಗಳಿಗಾಗಿ ಬ್ಯಾಂಕ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಭಯ. ಇಂಥಹ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳುವುದರಿಂದ ಕೆಲವು ಸಾಲಗಾರರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವುದನ್ನು ತಪ್ಪಿಸಬಹುದು.

ಮೇಲು ನೋಟಕ್ಕೆ ಇದೊಂದು ಸಾಮಾನ್ಯ ಕಾಗದ ಪತ್ರ. ಬ್ಯಾಂಕುಗಳು ಸಾಲ ನೀಡುವಾಗ ತೆಗದೆಕೊಳ್ಳುವ  ಹಲವು ಹತ್ತು  ಕಾಗದ ಪತ್ರಗಳಲ್ಲಿ ಒಂದಾಗಿರುವುದಿಲ್ಲ. ಇದನ್ನು ಸಾಲ ನೀಡಿದ ನಂತರ ಒಂದು ನಿರ್ದಿಷ್ಟ ಅವಧಿಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಆದರೆ, ಇದನ್ನು ಸಮಯಕ್ಕೆ ಸರಿಯಾಗಿ   ತೆಗೆದುಕೊಳ್ಳದಿರುವುದರಿಂದ ಆಗುವ ಅನಾಹುತ ಮಾತ್ರ ವಿಪರೀತವಾಗಿರುತ್ತದೆ. ಬ್ಯಾಂಕುಗಳು ಮತ್ತು ಮ್ಯಾನೇಜರ್‌ಗಳು ಇಬ್ಬರೂ ತೊಂದರೆಯಲ್ಲಿ  ಸಿಕ್ಕಿಕೊಳ್ಳುತ್ತಾರೆ.

– ನಿರಂಜನ

ಟಾಪ್ ನ್ಯೂಸ್

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.