ಹೆಲ್ತ್‌ ಕಾರ್ಡ್‌ನ ಆರೋಗ್ಯ ಹೇಗಿದೆ?


Team Udayavani, Apr 16, 2018, 5:04 PM IST

health.jpg

ಆರೋಗ್ಯ ಕಾರ್ಡ್‌ ಯೋಜನೆಯಲ್ಲಿ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಿಂದಲೇ ಮಾಡಿಸಬೇಕು ಎಂಬ ಷರತ್ತು ಹಲವು ಆಯಾಮಗಳಲ್ಲಿ ಸಮಸ್ಯೆ ಉಂಟುಮಾಡಬಹುದು. ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ ಉಳಿದ ವೇಳೆ ಕೆಳ ಹಂತದ ಸರ್ಕಾರಿ ಆಸ್ಪತ್ರೆಯ ವೈದ್ಯರ ಶಿಫಾರಸನ್ನು ಪಡೆದೇ ಖಾಸಗಿ ಆಸ್ಪತ್ರೆಗೆ ಹೋಗಬೇಕು ಎಂಬ ನಿಯಮ ಲಂಚ ಪ್ರಪಂಚಕ್ಕೆ ಆಹ್ವಾನ ನೀಡಿದಂತೆ.
 
ಈ ಜಗತ್ತು ವೈರುಧ್ಧ್ಯಗಳ ಸಂತೆ. ಎಲ್ಲರಿಗೂ ಆರೋಗ್ಯ ಎಂಬ ಘೋಷಣೆ ಸರ್ಕಾರದಿಂದ ಬರುವ ಸಮಯದಲ್ಲಿಯೇ ಬೀದಿ ಬೀದಿಗಳಲ್ಲಿ ಆಸ್ಪತ್ರೆಗಳು ನಾಯಿಕೊಡೆಯಂತೆ ಹುಟ್ಟುತ್ತವೆ. ಆರೋಗ್ಯ ವೆಚ್ಚವನ್ನು ಸರ್ಕಾರವೋ, ವಿಮಾ ಕಂಪನಿಯೋ ನಿರ್ವಹಿಸುವಂತಾಗುತ್ತದೆ ಎಂಬ ಆಶಯ ವ್ಯಕ್ತಪಡಿಸುತ್ತಿರುವಾಗಲೇ ಅವುಗಳ ಪೂರ್ವ ಷರತ್ತುಗಳು ಕಾಯಿಲೆಯನ್ನು ಹೆಚ್ಚು ಮಾಡುತ್ತವೆ. ಔಷಧ, ವೆಚ್ಚಗಳ ದರಪಟ್ಟಿಯನ್ನು ಸರ್ಕಾರ ನಿಯಂತ್ರಿಸಲೇಬೇಕು ಎಂಬ ಕೂಗು ಕೇಳುತ್ತಿರುವಾಗಲೇ ಆಸ್ಪತ್ರೆ ಬಿಲ್‌ ಎಂಬುದು ಗಣಿತ, ತರ್ಕವನ್ನು ಸೋಲಿಸಿಬಿಡುತ್ತಿದೆ.

ಕರ್ನಾಟಕದ ಈಗಿನ ಜನಸಂಖ್ಯೆ 6.41 ಕೋಟಿ. ಪ್ರತಿಯೊಬ್ಬರಿಂದಲೂ ವಾರ್ಷಿಕ 100 ರೂ. ಪಡೆದರೆ ಸಂಗ್ರಹವಾಗುವ ಹಣ 641 ಕೋಟಿ. ಈ ಮೊತ್ತದಿಂದಲೇ ರಾಜ್ಯದ ಜನರ ಆರೋಗ್ಯ ಸಮಸ್ಯೆಗೆ ಹಣ ಪರಿಹಾರ ಕಂಡುಕೊಳ್ಳಬಹುದು. ಇಂದು ಸರ್ಕಾರ ವಿವಿಧ ಆರೋಗ್ಯ ಯೋಜನೆಯಡಿ ವಾರ್ಷಿಕ ಒಂದು ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನು ವ್ಯಯಿಸುತ್ತದೆ. ಸಾಮುದಾಯಿಕವಾಗಿ ಕೈಜೋಡಿಸಿದರೆ ಆರೋಗ್ಯದ ವಿಚಾರದಲ್ಲಿ ಆರ್ಥಿಕ ಪರಿಸ್ಥಿತಿ ಸಮಸ್ಯೆಯಾಗುವುದಿಲ್ಲ. ಆದರೆ ಪರಿಸ್ಥಿತಿ ಹಾಗಿಲ್ಲ. ಜನ ಆರೋಗ್ಯದ ವಿಚಾರದಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾಗುವುದನ್ನು ಸರ್ಕಾರ ಗಮನಿಸಿರುವ ಕಾರಣದಿಂದಲೋ ಏನೋ, ಜನರಿಗೆ ಸಾರ್ವತ್ರಿಕ ಆರೋಗ್ಯ ಕಾರ್ಡ್‌ ನೀಡಲು ಮುಂದಾಗಿದೆ.

ಡಜನ್‌ಗಟ್ಟಲೆ ಆರೋಗ್ಯ ಯೋಜನೆ!: ಇವತ್ತು ರಾಜ್ಯ ಸರ್ಕಾರ ಆರೋಗ್ಯ ಭಾಗ್ಯ ನೀತಿಯಡಿ ವಾಜಪೇಯಿ ಆರೋಗ್ಯಶ್ರೀ, ಯಶಸ್ವಿನಿ, ಜ್ಯೋತಿ ಸಂಜೀವಿನಿ, ಇಂದಿರಾ ಸುರಕ್ಷಾ ಯೋಜನಾ, ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಪೊಲೀಸ್‌ ಆರೋಗ್ಯ ಭಾಗ್ಯ, ರಾಜೀವ್‌ ಆರೋಗ್ಯ ಭಾಗ್ಯ, ಬಾಲಾ ಸಂಜೀನಿ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ, ರಾಷ್ಟ್ರೀಯ ಬಾಲ ಸುರಕ್ಷಾ ಯೋಜನೆ, ಹಿರಿಯ ನಾಗರಿಕರ ರಾಷ್ಟ್ರೀಯ ಅಸ್ವಸ್ಥ್ಯ ಭೀಮಾ ಯೋಜನೆ, ಕ್ಲೊಯರ್‌ ಇಂಪ್ಲಾಂಟ್‌ ಸ್ಕೀಂ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳನ್ನು ಜಾರಿಯಲ್ಲಿಟ್ಟಿದೆ. ಇವೆಲ್ಲವುಗಳ ಬದಲು ಏಕೈಕ ಸಾರ್ವತ್ರಿಕ ಆರೋಗ್ಯ ಕಾರ್ಡ್‌ ಯೋಜನೆ ರೂಪಿಸಲಾಗಿದೆ.

ನೂರಾ ಎಂಟು ಆರೋಗ್ಯ ಯೋಜನೆಗಳು ಎಂದರೆ ಪ್ರತಿ ಯೋಜನೆಯಡಿಯ ಕ್ಲೈಮ್‌ ಇತ್ಯರ್ಥಕ್ಕೆ ನಿಯಮಗಳ ಭಿನ್ನತೆಯನ್ನೂ ಪರಿಗಣಿಸಬೇಕಾಗುತ್ತದೆ. ಯಶಸ್ವಿನಿಯ ನಿಯಮ ವಾಜಪೇಯಿ ಆರೋಗ್ಯಶ್ರೀಗೆ ಹೊಂದದಿರಬಹುದು. ಇದು ಯೋಜನೆಯ ಫ‌ಲಾನುಭಗಳಿಗೂ ಗೊಂದಲ ಉಂಟುಮಾಡುವ ಸಮಸ್ಯೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳನ್ನೂ ಒಳಗೊಂಡಂತೆ ಆರೋಗ್ಯ ಕಾರ್ಡ್‌ ಜಾರಿಗೊಳ್ಳುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನಿರಂತರವಾಗಿ ಆರೋಗ್ಯ ಕಾರ್ಡ್‌ ವಿತರಣೆ ನಡೆಯುವುದರಿಂದ ಯಶಸ್ವಿನಿ ತರಹ ಕೊನೆಯ ದಿನಾಂಕದ ಅವಸರ ಇದರಲ್ಲಿಲ್ಲ. 

ಆಧಾರ್‌ ಕಾರ್ಡ್‌, ಪಡಿತರ ಹಾಗೂ ಮತದಾರರ ಚೀಟಿ ಸಮೇತ ನೋಂದಣಿ ಮಾಡಲು ಅವಕಾಶ. ತಕ್ಷಣದಿಂದಲೇ ಯೋಜನೆ ಜಾರಿಗೊಂಡಂತಾಗಿದ್ದು, ಮರುದಿನದಿಂದಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಕಾರ್ಡ್‌ ಪಡೆಯಲು ಎಪಿಎಲ್‌ಗೆ 10 ರೂ. ಶುಲ್ಕ. ಬಿಪಿಎಲ್‌ಗೆ ಉಚಿತ. ಇನ್ನಾವುದೇ ವೆಚ್ಚವಿಲ್ಲ. ಒಮ್ಮೆ ನೋಂದಣಿ ಮಾಡಿಸಿದರೆ ಆಜೀವಪರ್ಯಂತ ಕಾರ್ಡ್‌ ಚಾಲ್ತಿಯಲ್ಲಿರುತ್ತದೆ. ಚಿಕಿತ್ಸೆ ಪಡೆಯಲು ಕಾರ್ಡ್‌ ಸಮೇತವೇ ಆಸ್ಪತ್ರೆಗೆ ತೆರಳಬೇಕು. ಸದ್ಯಕ್ಕೆ ಮೂರು ಹಂತಗಳನ್ನು ಗುರುತಿಸಲಾಗಿದೆ. ಪ್ರಾಥಮಿಕ ಹಂತದ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ಪಡೆದುಕೊಳ್ಳುವುದು ಕಡ್ಡಾಯ.

ಹೆಚ್ಚಿನ ಚಿಕಿತ್ಸೆಗೆ ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಬಹುದು. ಸಂಕೀರ್ಣ ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯ ಇಲ್ಲ ಎಂತಾದರೆ ಅಲ್ಲಿನ ವೈದ್ಯರ ಶಿಫಾರಸನ್ನು ಪಡೆದು ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಬಹುದು. ದ್ವಿತೀಯ ಹಂತದ ಕಾಯಿಲೆಗಳಿಗೆ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ 30 ಸಾವಿರ ರೂ.ವರೆಗೆ ಉಚಿತ ಚಿಕಿತ್ಸೆ ಎನ್ನಲಾಗಿದೆ. ವೈಯಕ್ತಿಕವಾಗಿ ಕಾರ್ಡ್‌ ತರಿಸುವ ವ್ಯವಸ್ಥೆಯಲ್ಲಿ ಕುಟುಂಬದ ವ್ಯಾಖ್ಯೆ ಯಾವ ರೀತಿಯಲ್ಲಿ ಎನ್ನುವುದು ಸ್ಪಷ್ಟವಾಗಿಲ್ಲ.

ತೃತೀಯ ಹಂತದ ಕಾಯಿಲೆಗೆ ಕುಟುಂಬಕ್ಕೆ ಒಂದೂವರೆ ಲಕ್ಷ ಹಾಗೂ ತುರ್ತು ಸಂದರ್ಭದಲ್ಲಿ ಹೆಚ್ಚುವರಿ 50 ಸಾವಿರದವರೆಗಿನ ಚಿಕಿತ್ಸೆಯನ್ನು ಮುಫ‌ತ್ತಾಗಿ ಪಡೆಯಲು ಅವಕಾಶವಿದೆ. ಪ್ರಸ್ತುತ ಆರೋಗ್ಯ ಕರ್ನಾಟಕ ಯೋಜನೆಯಡಿ ಕೆಸಿ ಜನರಲ್‌ ಆಸ್ಪತ್ರೆ, ಜಯದೇವ, ಪಿಎಂಎಸ್‌ಎಸ್‌ವೈ ಆಸ್ಪತ್ರೆ, ವಿಕ್ಟೋರಿಯಾ ಕ್ಯಾಂಪಸ್‌, ಮಂಡ್ಯ, ಹುಬ್ಬಳ್ಳಿ, ಗುಲ್ಬರ್ಗ, ವಿಜಯನಗರಗಳ ವೈದ್ಯಕೀಯ ವಿಜಾnನ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸರ್ಕಾರ ಪ್ರಕಟಿಸಿದೆ. ಮುಂದಿನ ಹಂತದಲ್ಲಿ ಇತರ 32 ಪ್ರಮುಖ ಆಸ್ಪತ್ರೆಗಳ ಅಳವಡಿಕೆಯಾಗಲಿದೆ ಎಂಬ ಭರವಸೆ ಸಿಕ್ಕಿದೆ.

ಹುಷಾರಿರಿ, ಜಾರಿ ದೂರ!: ಬಿಪಿಎಲ್‌  ಕಾರ್ಡ್‌ದಾರರಿಗೆ ಮೇಲಿನ ಮಾನದಂಡದಲ್ಲಿ ಶುಲ್ಕ ವಿನಾಯಿತಿ ಸಿಕ್ಕರೆ ಎಪಿಎಲ್‌ ಕಾರ್ಡ್‌ದಾರರಿಗೆ ಬಿಲ್‌ ಮೊತ್ತದಲ್ಲಿ ಶೇ. 30ರ ಶುಲ್ಕ ರಿಯಾಯ್ತಿ ಮಾತ್ರ ಲಭ್ಯವಾಗುತ್ತದೆ. ಹೆಚ್ಚಿನ ಮಾಹಿತಿಗೆ ಉಚಿತವಾದ 104 ಅಥವಾ 1800 425 8330ಗೆ ಕರೆ ಮಾಡಬಹುದು. ಯೋಜನೆ ಇನ್ನೂ ವ್ಯಾಪಕವಾಗಿ ಜಾರಿಗೊಳ್ಳದಿರುವುದು ಪ್ರಾಥಮಿಕ ಸಮಸ್ಯೆ.  ಅಂಗೀಕೃತ ಖಾಸಗಿ ಆಸ್ಪತ್ರೆಗಳ ಆಯ್ಕೆಯಲ್ಲಿ ಕೇಂದ್ರೀಕರಣ ಆಗದಿದ್ದರೆ ಸಮಸ್ಯೆ ಬಿಗಡಾಯಿಸುತ್ತದೆ. ಈವರೆಗೆ ಇತರ ಆರೋಗ್ಯ ಯೋಜನೆಯಡಿ ರಾಜ್ಯದ 183 ಆಸ್ಪತ್ರೆಗಳು ನೋಂದಾಯಿಸಿಕೊಂಡಿವೆ.

ಇದಕ್ಕೆ ಹೆಚ್ಚು ಒತ್ತು ನೀಡಿಯೇ ಯೋಜನೆ ಜಾರಿಗೆ ಮುಂದಾಗುವುದು ಸರ್ಕಾರದ ಆದ್ಯ ಕರ್ತವ್ಯವಾಗಿತ್ತು. ದುರಂತವೆಂದರೆ, ಸರ್ಕಾರ ಈವರೆಗೆ ಖಾಸಗಿ ಆಸ್ಪತ್ರೆಗಳ ಜೊತೆಗೆ ಗಂಭೀರವಾದ ಚರ್ಚೆ ನಡೆಸಿದಂತೆ ಕಾಣುವುದಿಲ್ಲ. ಇವುಗಳ ನಡುನ ಒಪ್ಪಂದ, ಎಂಓಯು ಕೂಡ ಈವರೆಗೆ ಸಿದ್ಧವಾಗಿಲ್ಲ. ಕರಡು ಪ್ರತಿ ಪದೇ ಪದೇ ತಿದ್ದುಪಡಿಗೆ ಒಳಗಾಗುತ್ತಿದೆ. ಈಗಿನ ವೇಗ ನೋಡಿದರೆ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ  2018ರ ಡಿಸೆಂಬರ್‌ ವೇಳೆಗೆ ರಾಜಾದ್ಯಂತ ಜಾರಿಯಾಗುವ ಸಂಭವ ಇಲ್ಲ. 2019ರ ಜೂನ್‌ ಸಮಯದಲ್ಲಿ ಚಾಲ್ತಿಗೆ ಬರಬಹುದು.

ಈಗಾಗಲೇ ಎದುರುಗೊಂಡಿರುವ ವಿಧಾನಸಭಾ ಚುನಾವಣೆ ಒಂದು ಕಾರಣವಾದರೆ ಮುಂಬರಲಿರುವ ಸರ್ಕಾರದ ನೀತಿನಿಲುವುಗಳ ಕೂಡ ಆ ಹಂತದಲ್ಲಿ ಯೋಜನೆಯ ಜಾರಿಯನ್ನು ಪ್ರಭಾವಿಸಬಹುದು! ಸದ್ಯದ ಸರ್ಕಾರ ಈ ಆರೋಗ್ಯ ಕಾರ್ಡ್‌ ಯೋಜನೆಗೆ ಯಾರಧ್ದೋ ಹೆಸರಿಡುವ ಕ್ರಮದಿಂದ ಹಿಂದೆ ಸರಿದಿದೆ. ಅಷ್ಟರಮಟ್ಟಿಗೆ ಇದು ರಾಜಕೀಯ ಪ್ರಣೀತ ಎಂಬ ಆರೋಪದಿಂದ ಹಿಂದೆ ಸರಿದಂತಾಗಿದೆ.

ಈವರೆಗೆ ಅಂದರೆ ಏಪ್ರಿಲ್‌ 7ರ ಅಂಕಿಅಂಶದ ಅನ್ವಯ ಜಿಲ್ಲಾ ಆಸ್ಪತ್ರೆಗಳ ಮಾಹಿತಿಗಳ ಕ್ರೋಢೀಕರಣದ ನಂತರ 50,676 ಪುರುಷರು, 54,353 ಮಹಿಳೆಯರು ಹಾಗೂ 12 ತೃತೀಯ ಲಿಂಗದವರು ಸೇರಿ ಒಟ್ಟು 1,05,041 ಜನ ದಾಖಲಿಸಿಕೊಂಡಿದ್ದಾರೆ. ಒಂದರ್ಥದಲ್ಲಿ ಈ ನೋಂದಣಿಯೇ ನಗಣ್ಯ. ಸರ್ಕಾರದ ಅಂದಾಜಿನ ಪ್ರಕಾರ, ರಾಜ್ಯದಲ್ಲಿ 1.43 ಕೋಟಿ ಕುಟುಂಬಗಳು ಇದರ ಪ್ರಯೋಜನ ಪಡೆಯಬಹುದು. ಇದರಲ್ಲಿ 1.05 ಬಿಪಿಎಲ್‌ ಕುಟುಂಬಗಳು ಒಳಗೊಂಡಿರುತ್ತವೆ ಎಂದು ಅಂದಾಜಿಸಲಾಗಿದೆ. 

ಆರೋಗ್ಯ ಘಾಸಿಯಾಗುವ ಅಂಶಗಳು!: ಆರೋಗ್ಯ ಕಾರ್ಡ್‌ ಯೋಜನೆಯಲ್ಲಿ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಿಂದಲೇ ಮಾಡಿಸಬೇಕು ಎಂಬ ಷರತ್ತು ಹಲವು ಆಯಾಮಗಳಲ್ಲಿ ಸಮಸ್ಯೆ ಉಂಟುಮಾಡಬಹುದು. ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ ಉಳಿದ ವೇಳೆ ಕೆಳ ಹಂತದ ಸರ್ಕಾರಿ ಆಸ್ಪತ್ರೆಯ ವೈದ್ಯರ ಶಿಫಾರಸನ್ನು ಪಡೆದೇ ಖಾಸಗಿ ಆಸ್ಪತ್ರೆಗೆ ಹೋಗಬೇಕು ಎಂಬ ನಿಯಮ ಲಂಚ ಪ್ರಪಂಚಕ್ಕೆ ಆಹ್ವಾನ ನೀಡಿದಂತೆ.

ಖಾಸಗಿ ಆಸ್ಪತ್ರೆಗಳಲ್ಲಿ ನಿರ್ದಿಷ್ಟ ದರಪಟ್ಟಿಯಂತೆ ಶುಲ್ಕ ವಿಧಿಸುವುದನ್ನು ಕಡ್ಡಾಯಗೊಳಿಸಿ ಅದರಂತೆ ಕ್ಷಿಪ್ರವಾಗಿ ಹಣ ಬಿಡುಗಡೆ ಮಾಡುವುದನ್ನು ಸರ್ಕಾರ ರೂಢಿಸಿಕೊಂಡರೆ ನೋಂದಾಯಿತ ಆಸ್ಪತ್ರೆಗೆ ಎಂಬ ಕಟ್ಟುಪಾಡಿನ ಅಗತ್ಯವೇ ಇರುವುದಿಲ್ಲ. ಚಾಲ್ತಿ ಶಾಸನ ಸಭೆಯ ಅವಧಿಯಲ್ಲಿ ಆವಾಗಿನ ಮಂತ್ರಿ ಚಿತ್ರನಟ ಅಂಬರೀಷ್‌ ಅವರ ಆರೋಗ್ಯ ಸಮಸ್ಯೆಗೆ ಸರ್ಕಾರದ ಬೊಕ್ಕಸಕ್ಕೆ ಖಾಸಗಿ ಆಸ್ಪತ್ರೆಗೆ ತೆತ್ತ ಮೊತ್ತ 1.16 ಕೋಟಿ ರೂ. ಸ್ಪಷ್ಟ ಲೆಕ್ಕ ಕೊಡುವುದಾದರೆ, 1,16,90,137 ರೂ.

ಆರೋಗ್ಯ ಕಾರ್ಡ್‌ ಯೋಜನೆಯಲ್ಲಿಯೇ ಮಂತ್ರಿಮಾಗಧರು ಚಿಕಿತ್ಸೆ ಪಡೆಯಬೇಕು ಎಂಬ ಹುಲುಮಾನವರ ನಿಯಮವನ್ನು ಸೇರ್ಪಡೆಗೊಳಿಸಲು ನಮ್ಮ ಜನಪ್ರತಿನಿಧಿಗಳು ಒಪ್ಪುವುದು ಸಂಶಯ. ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆಗೇ ಇನ್ನೂ ನಿಯಮಗಳನ್ನು ರೂಪಿಸದ ಸರ್ಕಾರ ಆರೋಗ್ಯ ಕಾರ್ಡ್‌ ಯೋಜನೆಗೂ ತಕ್ಷಣಕ್ಕೆ ಮುಕ್ತಿ ಕೊಡುವುದಿಲ್ಲ. ಅದರ ಜಾರಿ ಮುಂದಿನ ಸರ್ಕಾರದ ಅಧಿಕಾರ ಸ್ವೀಕರವಾದ ನಂತರವಷ್ಟೇ. ಅಲ್ಲಿಯವರೆಗೆ ನಮ್ಮ ನಿಮ್ಮ ಆರೋಗ್ಯ ಸಮರ್ಪಕವಾಗಿರಲಿ ಎಂದು ಹಾರೈಸಿಕೊಳ್ಳುವುದೊಂದನ್ನು ನಾವು ಮಾಡಬಹುದು!

* ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Choo Mantar Movie Review

Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

6-bng

Actor Darshan: 6 ತಿಂಗಳ ಬಳಿಕ ದರ್ಶನ್‌ ಭೇಟಿ: ಪವಿತ್ರಾ ಭಾವುಕ

Nimma Vasthugalige Neeve Javaabdaararu movie review

Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

5-mudhol

Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.