ಆಹಾರ ಸಂಸ್ಕಾರ ಏನಿದು ಸಂಸ್ಕರಣೆ?
Team Udayavani, Mar 26, 2018, 6:50 PM IST
ನಮ್ಮ ಗ್ರಾಮೀಣ ಅಭಿವೃದ್ಧಿ, ಬೆಳೆವಣಿಗೆಯಲ್ಲಿ ಕೃಷಿ ಪಾತ್ರ ಅತಿ ಮುಖ್ಯ. ಉತ್ಪಾದನೆ-ಪೂರೈಕೆಯ ಕೊಂಡಿ ಕೃಷಿ. ದೇಶದ ಶೇ.50ರಷ್ಟು ಜನರು ಕೃಷಿ ಹಾಗೂ ಕೃಷಿ ಪ್ರೇರಿತ ವಲಯಗಳನ್ನೇ ಜೀವನಾಧಾರಕ್ಕಾಗಿ ಅವಲಂಬಿಸಿಕೊಂಡಿದ್ದಾರೆ. ಕೃಷಿ ಯೋಗ್ಯ ಭೂಮಿಯಲ್ಲಿ ಹವಾಮಾನದ ಬದಲಾವಣೆಗೆ ತಕ್ಕಂತೆ ಬೆಳೆಗಳು ಆಗುತ್ತವೆ. ಹೀಗಿರುವಾಗ ಸಂಸ್ಕರಣೆ ಪಾತ್ರ ಬಹಳ ಮುಖ್ಯವಾಗುತ್ತದೆ. ಅಂದರೆ ನಮ್ಮ ಜಿಡಿಪಿಗೂ ಸಂಸ್ಕರಣೆಗೂ ಅವಿನಾಭವ ಸಂಬಂಧವಿದೆ ಅಂತಲೇ ಅರ್ಥ.
ಏನಿದು ಸಂಸ್ಕರಣೆ?
ದೇಶದ ಉತ್ಪನ್ನಗಳನ್ನು ಪಡೆದು, ಸಂಸ್ಕರಣೆ ಮಾಡಿ ಅದನ್ನೂ ನಾನಾ ರೀತಿ ಪ್ರಾಡಕ್ಟ್ಗಳನ್ನಾಗಿ ಮಾಡುವ ಪ್ರಕ್ರಿಯೆ. ಇದನ್ನು ಲಿಂಕೇಜ್ ಅಂತಲೂ ಕರೆಯುತ್ತಾರೆ. ಉದಾಹರಣೆಗೆ- ಕಾಫೀ ಬೀಜವನ್ನು ಪಡೆದು, ಸಂಸ್ಕರಿಸಿ ನಂತರ ಅದನ್ನು ಕಾಫೀ ಪುಡಿಯನ್ನಾಗಿ ಮಾಡಿ ಮಾರುವ ಪ್ರಕ್ರಿಯೆ. ಇದು ಮೀನು, ಭತ್ತ, ರಾಗಿಯವಿಚಾರಕ್ಕೂ ಅನ್ವಯಿಸುತ್ತದೆ. ಇದನ್ನು ನಮ್ಮ ಸರ್ಕಾರವೇ ಮಾಡುತ್ತದೆ. ಇದರಲ್ಲಿ ನಾಲ್ಕು “ವಿ’ಗಳು ಇವೆ. ಇದನ್ನು ಮೌಲ್ಯಗಳು(ಫೋರ್ ವ್ಯಾಲ್ಯು) ಎನ್ನುತ್ತಾರೆ. ಮಾರುಕಟ್ಟೆ ಮೌಲ್ಯದ ಬಗ್ಗೆ ತಿಳಿಸುವುದು, ಕೃಷಿಯ ಮೌಲ್ಯ ಹೆಚ್ಚಿಸಬೇಕು ಮತ್ತು ಕೃಷಿಕ ಸೇವೆಯ ಮೌಲ್ಯವನ್ನು ಮನದಟ್ಟು ಮಾಡುವುದು ಪ್ರಮುಖ ಕೆಲಸ.
ಏಕೆ ಸಂಸ್ಕರಣೆ ಮಾಡಬೇಕು?
ದೇಶದ ಬಹುತೇಕ ಜನರು ಅವರ ಒಟ್ಟು ಖರ್ಚಿನಲ್ಲಿ ಅರ್ಧಕ್ಕಿಂತ ಹೆಚ್ಚು ಆಹಾರಕ್ಕಾಗಿಯೇ ವ್ಯಯ ಮಾಡುತ್ತಾರೆ. ಬಡವರಿಗೆ, ಸಂಘಟಿತರಿಗೆ, ಕಡಿಮೆ ಆದಾಯ ಇರುವವರಿಗೆ ಉತ್ತಮ ಜೀವನ ನಿರ್ವಹಣೆ ಮತ್ತು ಆಹಾರ ಭದ್ರತೆ ನೀಡುವ ಮೂಲಕ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬಹುದು. ನಗರೀಕರಣದ ಮೂಲಕ ದೇಶದ ಆಹಾರ ಸಂಸ್ಕರಣಾ ವಿಧಾನದಲ್ಲಿ ಅಮೂಲಾಗ್ರಹ ಬದಲಾವಣೆ ತರಲು ಸಾಧ್ಯವಿದೆ. ಆಹಾರ ಪದಾರ್ಥ ಸಂಸ್ಕರಣಾ ವಿಭಾಗದಲ್ಲಿ ಶೇ.100ರಷ್ಟು ವಿದೇಶಿ ನೇರ ಹೂಡಿಕೆ(ಎಫ್ಡಿಐ) ಅಳವಡಿಕೆಗೆ ಅವಕಾಶ ಇದೆ. (ಸಣ್ಣ ಮತ್ತು ಮಧ್ಯಮ ಕೈಗಾರಿಕಗಳಿಂದ ಬರುವ ಉತ್ಪನ್ನ ಹೊರತುಪಡಿಸಿ.).
– ಫುಡ್ ಪಾರ್ಕ್ ಮತ್ತು ಕೃಷಿ ಆಧ್ಯತ ವಲಯಗಳನ್ನು ಸೃಷ್ಟಿಸಿ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸಿ, ವಿಶೇಷ ಪ್ಯಾಕೇಜ್ ನೀಡುವುದು.
– ಹಣ್ಣು ಮತ್ತು ತರಕಾರಿಗಳ ಕೊಯ್ಲು ಮತ್ತು ಕೊಯ್ಲು ನಂತರದ ನಷ್ಟವನ್ನು ಕಡಿಮೆ ಮಾಡುವುದು.
-ಒಪ್ಪಂದ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು. ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಆಹಾರ ಸಂಸ್ಕರಣ ಘಟಕಗಳಿಗೆ ಹೆಚ್ಚಿನ ಬಂಡವಾಳ ಹೂಡಕೆ ಮಾಡುವುದು ಮತ್ತು ಬೇಡಿಕೆ ಹೆಚ್ಚಿಸುವಂತೆ ಮಾಡುವುದು. ಇವೆಲ್ಲವೂ ಸಂಸ್ಕರಣೆಯ ಮೂಲ ಉದ್ದೇಶಗಳೇ ಆಗಿವೆ.
ಭಾರತದ ಆಹಾರ ಮೌಲ್ಯದ ಸರಪಳಿಯು ಬೇರೆ ದೇಶದ ಮಾರುಕಟ್ಟೆಗಿಂತ ಭಿನ್ನ. ಭಾರತದಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯದ ಬಳಕೆ ಮಾದರಿ ಒಂದೇ ರೀತಿಯದ್ದು. ಸಂಸ್ಕರಿಸದ ಉತ್ಪನ್ನಗಳನ್ನೇ ನೇರವಾಗಿ ಬಳಸುತ್ತಾರೆ. ಬೇರೆ ದೇಶಗಳಲ್ಲಿ ಸಂಸ್ಕರಿಸಿದ ಆಹಾರಕ್ಕೆ ಆಧ್ಯತೆ ಹೆಚ್ಚಿರುತ್ತದೆ.
ಜಾಗತಿಕ ಮಟ್ಟದಲ್ಲಿ ಹೀಗಿದೆ…
ಜಾಗತಿಕ ಮಟ್ಟದಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಂಸ್ಕರಣಾ ಸಂಸ್ಥೆಗಳು ಸಿದ್ಧ ಆಹಾರವನ್ನೇ ಪೂರೈಕೆ ಮಾಡುತ್ತಿದೆ. ಅಭಿವೃದ್ಧಿ ಹೊಂದಿದ ದೇಶದ ಮಾರುಕಟ್ಟೆಗಳಲ್ಲಿ ಸಂಸ್ಕರಿಸಿದ ಆಹಾರಕ್ಕೆ ಅತಿ ಹೆಚ್ಚಿನ ಬೇಡಿಕೆ ಇದೆ. ವಿಶ್ವದ ಅತಿ ಹೆಚ್ಚು ಆಹಾರ ಪದಾರ್ಥ ಬೆಳೆಯುವ ದೇಶಗಳಲ್ಲಿ ಭಾರತವು ಒಂದು. ನಮ್ಮಲ್ಲಿ 156.43 ಮಿಲಿಯನ್ ಹೆಕ್ಟರ್ ಕೃಷಿ ಯೋಗ್ಯ ಭೂಮಿ ಇದೆ. ಕಡಲೋತ್ಪನ್ನ ಸೇರಿ ಮೆಣಸು, ದ್ವಿದಳ ದಾನ್ಯ, ಹಾಲು, ಟೀ, ಗೋಡಂಬಿ, ಸೆಣಬು ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ. ಹಾಗೆಯೇ ಗೋಧಿ, ಭತ್ತ, ಕಬ್ಬು, ಹತ್ತಿ, ಹಣ್ಣು ಮತ್ತು ತರಕಾರಿ ಹಾಗೂ ಏಣ್ಣೆ ಬೀಜಗಳನ್ನು ಎರಡನೇ ಆದ್ಯತೆಯಾಗಿ ಬೆಳೆಸಲಾಗುತ್ತದೆ ಎನ್ನುತ್ತದೆ ಕೇಂದ್ರ ಆಹಾರ ಸಂಸ್ಕರಣಾ ಸಚಿವಾಲಯ, ಅಸೊಚಮ್ ನಡೆಸಿದ ಸಮೀಕ್ಷೆ.
2020ರ ವೇಳೆಗೆ ಜಾಗತಿಕ ಆಹಾರ ಮಾರುಕಟ್ಟೆಯಲ್ಲಿ ಯುಎಸ್‌ಡಿ 3.30 ಟ್ರಿಯನ್ ಕೈಗಾರಿಕೆಗಳು ಬರಲಿವೆ. ಸಧ್ಯ
ಭೌಗೋಳಿಕವಾಗಿ ಉತ್ತರ ಅಮೆರಿಕವು ಅತಿ ದೊಡ್ಡ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿದೆ. ನಂತರ ಸ್ಥಾನದಲ್ಲಿ ಯುರೋಪ್, ಎಪಿಎಸಿ ಹಾಗೂ ಲಾಮ್ಯಾ ದೇಶಗಳು ಇವೆ. ಏಷ್ಯಾ ಖಂಡದಲ್ಲಿ ಸಿಎಗಿಆರ್ ಬೆಳವಣಿಗೆ 2015-20ರ ಅವಧಿಯಲ್ಲಿ ಶೇ.5.4ರಷ್ಟು ಆಗಲಿದೆ. ತಲಾ ಆದಾಯ ಹೆಚ್ಚಿಸುವ ಜತೆಗೆ ಆಹಾರ ಜಾಗೃತಿಯ ಬಗ್ಗೆಯೂ ಅರಿವು ಮೂಡಿಸುವ ಕೆಲಸ ಆಗುತ್ತಿದೆ. ಭಾರತ ಮತ್ತು ಚೀನವು ಸಿದ್ಧಪಡಿಸಿದ ಆಹಾರ ಉತ್ಪಾದನೆಯಲ್ಲಿ ಗಣನೀಯ ಬೆಳವಣಿಗೆ ಕಂಡುಕೊಳ್ಳುತ್ತಿದೆಯಂತೆ.
ಭಾರತದಲ್ಲಿ ಹಣ್ಣು, ತರಕಾರಿ, ಡ್ರೈಫುಡ್, ಸಮುದ್ರದ ಮೀನು ಇತ್ಯಾದಿ(ಸೀ ಫೂಡ್), ಮಾಂಸ ಮತ್ತು ಕೋಳಿಯ ಉತ್ಪಾದನೆಯ ಜತೆಗೆ ಇದರ ಬೇಡಿಕೆಯೂ ದೊಡ್ಡ ಪ್ರಮಾಣದಲ್ಲಿದೆ. ಜಗತ್ತಿನ ಎರಡನೇ ಅತಿ ದೊಡ್ಡ ಕೃಷಿಯೋಗ್ಯ ಭೂಮಿ ಮತ್ತು 127 ಕೃಷಿ ಹವಾಮಾನ ವಲಯಗಳು, 46 ಬಗೆಯ ಮಣ್ಣಿನ ಮೂಲಗಳು ಭಾರತದಲ್ಲಿ ಇದೆ. ಕೃಷಿ ವಲಯ, ಹೈನುಗಾರಿಕೆ, ಸ್ಪರ್ಧಾತ್ಮಕ ಬೆಲೆ ಸೇರಿದಂತೆ ಭಾರತವು ಆಹಾರ ಸಂಸ್ಕರಣೆಯ ಮೂಲವಾಗಲು ಬೇಕಾದ ಎಲ್ಲಾ ರೀತಿಯ ಸಾಮರ್ಥ್ಯ ಹೊಂದಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತ, ಚೀನ ಮತ್ತು ರಷ್ಯಾ ತನ್ನ ಉತ್ಪಾದನೆಯ ಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಆಹಾರ ಸಂಸ್ಕರಣಾ ಘಟಕಗಳು ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ಸಮರ್ಥ ಆಹಾರ ಸಂಸ್ಕರಣ ಘಟಕವು ತ್ಯಾಜ್ಯ ಕಡಿಮೆ ಮಾಡುವ ಜತೆಗೆ ಬೆಳೆ ಕಟಾವಿನ ನಂತರದ ನಷ್ಟವನ್ನು ಕಡಿಮೆ ಮಾಡುತ್ತಿದೆ. ಉತ್ಪಾದಕರ ಜೀವನ ಮಟ್ಟವನ್ನು ಸುಧಾರಿಸುತ್ತದೆ. ಕೃಷಿ ಉತ್ಪನ್ನದ ಬೆಲೆಯನ್ನು ಹೆಚ್ಚಿಸುತ್ತದೆ. ರೈತರ ಆದಾಯ ಪ್ರಮಾಣವನ್ನು ಏರಿಸುತ್ತದೆ. ಆಹಾರೋತ್ಪನ್ನದ ಗುಣಮಟ್ಟ ಸುಧಾರಿಸಿ, ಆಹಾರ ಭದ್ರತೆ ಹೆಚ್ಚಿಸುತ್ತದೆ.
ಕ್ಲಸ್ಟರ್ ಮಟ್ಟದಲ್ಲಿ ಸಂಸ್ಕರಣ ಘಟಕ ಸ್ಥಾಪನೆಗೆ ಸರ್ಕಾರ ಆಧುನಿಕ ಸೌಲಭ್ಯ ಒದಗಿಸುತ್ತಿದೆ. ಪೂರೈಕೆಯ ಸರಪಳಿಯನ್ನು ಸಮರ್ಪಕವಾಗಿ ನಿರ್ವಹಿಸಿ, 2022ರ ವೇಳೆಗೆ ಕೃಷಿ ಉತ್ಪನ್ನದ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡಿ, ಕೃಷಿಕರ ಆದಾಯವನ್ನು ದ್ವಿಗುಣ ಮಾಡಲು ಬೇಕಾದ ಕಾರ್ಯತಂತ್ರವನ್ನು ಸರ್ಕಾರ ಮಾಡಿಕೊಂಡಿದೆ. ಸುರಕ್ಷಿತ ಸಂಸ್ಕರಣ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವುದು ಸೇರಿ ಕೇಂದ್ರ ಸರ್ಕಾರವು ಆಹಾರ ಸಂಸ್ಕರಣೆಗೆ ಸಂಬಂಧಿಸಿದಂತೆ ಹಲವು ಕ್ರಮ ತೆಗೆದುಕೊಂಡಿದೆ.
ಆಹಾರ ಸಂಸ್ಕರಣೆ ವಿಭಾಗದಲ್ಲಿ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಕೃಷಿ ವಲಯದ ಉತ್ಪನ್ನವನ್ನು ಉತ್ತಮ ರೀತಿಯಲ್ಲಿ ಸಂಸ್ಕರಿಸುವ ಮೂಲಕ ಕೃಷಿಕರ ಆದಾಯದ ಪ್ರಮಾಣವನ್ನು ದ್ವಿಗುಣ ಮಾಡಬೇಕು. ಹೆಚ್ಚೆಚ್ಚು ಉದ್ಯೋಗಾವಕಾಶ ಸೃಷ್ಟಿಸಲು ಇದರಿಂದ ಸಾಧ್ಯವಿದೆ.
-ಅಮಿತ್ ವಾತ್ಸಾಯನ, ಆಹಾರ ಸಂಸ್ಕರಣಾ ತಜ್ಞ
ರಾಜುಖಾರ್ವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.