ಪೊಲೀಸಪ್ಪನ ವ್ಯಾಟ್ಸಪ್‌ ಕೃಷಿ


Team Udayavani, Mar 11, 2019, 12:30 AM IST

jayavanth-2.jpg

ಲಾಭದಾಯಕ ಬೆಳೆಗಳ ವಿವರ, ಕೃಷಿ ಕ್ಷೇತ್ರದ ನೂತನ ಆವಿಷ್ಕಾರ, ಮಾರುಕಟ್ಟೆಯ ಬೆಲೆ ಏರಿಳಿತದ ಸುದ್ದಿಯಂಥ ವಿವರಗಳು ಎಲ್ಲ ರೈತರಿಗೂ ಗೊತ್ತಾಗಬೇಕು ಎಂಬುದು ಬಸವನ ಗೌಡರ ಆಸೆ. ಅದಕ್ಕೆಂದೇ ಅವರು ವ್ಯಾಟ್ಸಪ್‌ ಗುಂಪವನ್ನು ರಚಿಸಿಕೊಂಡಿದ್ದಾರೆ. ವ್ಯಾಟ್ಸಪ್‌ ಸಂದೇಶದ ಮೂಲಕ ಸಾವಿರಾರು ರೈತರಿಗೆ ಕೃಷಿ ರಂಗದ ಸುದ್ದಿಗಳು ತಲುಪುವಂತೆ ಮಾಡಿದ್ದಾರೆ. 

“ಕೃಷಿಯ ಯಶಸ್ಸು ರೈತ ಅಳವಡಿಸಿಕೊಳ್ಳುವ ತಂತ್ರಜಾnನವನ್ನು ಅವಲಂಭಿಸಿರುತ್ತದೆ. ಹೀಗಾಗಿ, ವಿಜ್ಞಾನಿಗಳ ಸಲಹೆಯನ್ನು ಪಡೆದು ಕೃಷಿಯಲ್ಲಿ ಗೆಲ್ಲಬೇಕು. ಕಳೆದ ಐದು ವರ್ಷಗಳಿಂದ ಅದನ್ನೇ ಮಾಡುತ್ತಿದ್ದೇನೆ’ ಎನ್ನುತ್ತಾ ತಮ್ಮ ಕೃಷಿ ತಾಕು ಸುತ್ತಿಸಿದರು ಬಸನಗೌಡ ಪೊಲೀಸ್‌ ಪಾಟೀಲ್‌.

ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ಬಸನಗೌಡ ಪೊಲೀಸ್‌ ಪಾಟೀಲ್‌ ಅವರಿಗೆ 29 ಎಕರೆ ಜಮೀನಿದೆ. ಕೃಷಿ ಕೆಲಸದೊಂದಿಗೆ ಸಾವಿರಾರು ರೈತರಿಗೆ ಕೃಷಿ ವಿಜ್ಞಾನಿಗಳಿಂದ ಮಾಹಿತಿ ಕೊಡಿಸುವ ಕೆಲಸವನ್ನೂ ಬಸನಗೌಡರು ಮಾಡುತ್ತಿದ್ದಾರೆ.

ಏನೇನಿದೆ?
29  ಎಕರೆಯ ಪೈಕಿ ಹದಿನೈದು ಎಕರೆಯಲ್ಲಿ ಕಬ್ಬಿದೆ. ಮುಂಗಾರಿನಲ್ಲಿ ಈರುಳ್ಳಿ, ಗೋವಿನ ಜೋಳ ಬೆಳೆಯುತ್ತಾರೆ. ಈ ಬೆಳೆ ಕಟಾವಾಗುತ್ತಿದ್ದಂತೆಯೇ ಕಡಲೆ, ಗೋದಿ ಬಿತ್ತುತ್ತಾರೆ. ಎರಡು ಎಕರೆಯಲ್ಲಿ ಮೆಣಸಿನ ಕೃಷಿ ನಡೆಸುತ್ತಾರೆ. ತರಕಾರಿ ಕೃಷಿಗೆಂದೇ ಎರಡು ಎಕರೆ ಜಮೀನು ಉಳಿಸಿಕೊಂಡಿದ್ದಾರೆ. ಬದನೆ, ಮೆಣಸು, ಟೊಮೆಟೋ, ಚೌಳಿ, ಹೀರೆ… ಹೀಗೆ, ಯಾವ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇರುತ್ತದೆಯೋ ಆ ಬೆಳೆ ತಮ್ಮ ಹೊಲದಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಹಬ್ಬದ ಸಂದರ್ಭದಲ್ಲಿ ಇಳುವರಿ ಸಿಗುವಂತೆ ಚಂಡು ಹೂವು, ಸೇವಂತಿಗೆ ಕೃಷಿಯನ್ನು ಮಾಡುತ್ತಾರೆ. ತರಕಾರಿ ಹಾಗೂ ಹೂವಿನ ಬೇಸಾಯ ಕಡಿಮೆ ಅವಧಿಯಲ್ಲಿ ಹಣ ತಂದುಕೊಡುವ ಬೆಳೆ. ಹಾಗಾಗಿ, ರೈತರು ಕನಿಷ್ಠ ಭೂಮಿಯಲ್ಲಿಯಾದರೂ ಈ ಬೆಳೆ ಬೆಳೆಯಬೇಕು ಎನ್ನುತ್ತಾರೆ. ಕಳೆದ ವರ್ಷ ತರಕಾರಿಯಿಂದಲೇ ವಾರ್ಷಿಕ ಮೂರು ಲಕ್ಷ ರೂ.ಗಳನ್ನೂ,  ಹೂವಿನ ಬೆಳೆಯಿಂದ ಎಂಭತ್ತು ಸಾವಿರ ರೂ. ಆದಾಯವನ್ನೂ ಗಳಿಸಿದ್ದಾರೆ.

ಕೃಷಿ ಗ್ರಂಥಾಲಯ ಸ್ಥಾಪನೆ
ಬಸನಗೌಡ ಪಾಟೀಲ್‌,  ಹತ್ತು ವರ್ಷಗಳ ಹಿಂದೆಯೇ ‘ಕೃಷಿ ಗ್ರಂಥಾಲಯ’ವೊಂದನ್ನು ಸ್ಥಾಪಿಸಿದ್ದಾರೆ. ತನ್ಮೂಲಕ ಸಾಗುವಳಿಯ ಮಾಹಿತಿ ಹಂಚುತ್ತಿದ್ದಾರೆ. ಒಂದೂವರೆ ಸಾವಿರಕ್ಕೂ ಅಧಿಕ ಮ್ಯಾಗ್‌ಜಿನ್‌ಗಳು ಇವರಲ್ಲಿದೆ. ಪುಸ್ತಕ ಓದುವ ಆಸಕ್ತ ಕೃಷಿಕರಿಗೆ ಉಚಿತವಾಗಿ ಹಂಚುವುದೂ ಇದೆ.

ದೂರದೂರಿನ ರೈತರು ಕೃಷಿ ಮಾಹಿತಿಯಿಂದ ವಂಚಿತರಾಗಬಾರದು ಎಂದು ನಿರ್ಧರಿಸಿದ ಪೊಲೀಸ್‌ ಪಾಟೀಲ್‌ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಕಳೆದ ಎರಡು ವರ್ಷಗಳಿಂದ “ಅಗ್ರಿ ಸಲ್ಯೂಶನ್‌’ ಎನ್ನುವ ವ್ಯಾಟ್ಸಪ್‌ ಗುಂಪು ರಚಿಸಿಕೊಂಡು ರೈತರಿಗೆ ಮಾಹಿತಿ ಹಂಚುತ್ತಿದ್ದಾರೆ.

ಕೃಷಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಉದ್ದೇಶದಿಂದ ರಚಿತಗೊಂಡ ಈ ಗುಂಪಿನಲ್ಲಿ ನೂರೈವತ್ತಕ್ಕೂ ಅಧಿಕ ರೈತರಿದ್ದಾರೆ. ಒಟ್ಟು 256 ಸದಸ್ಯರಲ್ಲಿ  ಕೃಷಿ ವಿಜ್ಞಾನಿಗಳು, ತಜ್ಞರು, ಸರ್ಕಾರದ ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳನ್ನೂ ಸೇರಿಸಿದ್ದಾರೆ.  ಕೇವಲ ಗುಂಪಿನ ಸದಸ್ಯರಿಗೆ ಮಾತ್ರ ಸಮಸ್ಯೆಗಳು ಉದ್ಭವಿಸುವುದಿಲ್ಲ. ಹೊಲದಲ್ಲಿ ತನ್ನಷ್ಟಕ್ಕೆ ತಾನು ಗೇಯೆ¾ಯಲ್ಲಿ ತೊಡಗಿದ, ಯಾರ ಸಂಪರ್ಕಕ್ಕೂ ಸಿಗದ ಸಹಸ್ರಾರು ರೈತರಿಗೆ ಸಹಜವಾಗಿಯೇ ಸಮಸ್ಯೆಗಳು ಕಾಡುತ್ತಿರುತ್ತದೆ. 

ಬೆಳೆವಾರು ಗುಂಪುಗಳು
ಬೆಳೆವಾರು ಗುಂಪುಗಳನ್ನು ರಚಿಸಿಕೊಂಡು ಆಯಾ ಬೆಳೆ ಬೆಳೆಯುವ ರೈತರನ್ನು ಸಂಬಂಧಿಸಿದ ಗುಂಪಿಗೆ ಸೇರಿಸುತ್ತಿದ್ದಾರೆ. ಹೆಚ್ಚಿನ ರೈತರಿಗೆ ಮಾಹಿತಿ ವಿನಿಮಯವಾಗಬೇಕೆಂದು ನಿರ್ಧರಿಸಿದ ಗೌಡರು ಪಪ್ಪಾಯ, ದ್ರಾಕ್ಷಿ, ದಾಳಿಂಬೆ, ಬಾಳೆ, ರೇಷ್ಮೆ, ಹತ್ತಿ, ಮೆಣಸು, ಟೊಮೆಟೊ, ಕಬ್ಬು, ಕುಂಬಳ ಜಾತಿಯ ಬಳ್ಳಿಗಳು, ಔಷಧೀಯ ಸಸ್ಯಗಳು, ದ್ವಿದಳ ಧಾನ್ಯಗಳು, ಅರಿಶಿನ, ತೆಂಗು, ಹೈನುಗಾರಿಕೆ, ಕೃಷಿ ಉಪಕರಣಗಳು ಹೀಗೆ ಹದಿನೈದಕ್ಕೂ ಅಧಿಕ ಗುಂಪುಗಳನ್ನು ರಚಿಸಿಕೊಂಡಿದ್ದಾರೆ.ಆಯಾ ಗುಂಪಿನಲ್ಲಿ ಆಯಾ ವಿಷಯಕ್ಕೆ ಸಂಬಂಧಿಸಿದ ವಿಜ್ಞಾನಿಗಳನ್ನು ಸೇರಿಸಿದ್ದು ರೈತರ ಸಮಸ್ಯೆಗೆ ಸ್ಪಂದನೆ ದೊರೆಯುತ್ತಿದೆ. ಬೆಳೆವಾರು ಗುಂಪಿನ ಪ್ರತಿಯೊಂದು ಗುಂಪಿನಲ್ಲಿ ನೂರೈವತ್ತಕ್ಕೂ ಅಧಿಕರೈತರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಯಾವ್ಯಾವ ವಿಷಯಗಳು ಹಂಚಿಕೆಯಾಗುತ್ತವೆ?
ರೈತರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಮಾತ್ರವಲ್ಲ, ಕೃಷಿ ಆಗು ಹೋಗುಗಳು ಏನೇ ಇದ್ದರೂ ಗುಂಪಿನಲ್ಲಿ ನೋಡಲು, ಓದಲು ಸಿಗುತ್ತದೆ.  ಆಕಾಶವಾಣಿಯಲ್ಲಿ ಬಿತ್ತರಗೊಳ್ಳುವ ರೈತರಿಗೆ ಸಲಹೆ ಮತ್ತುಕೃಷಿ ರಂಗಕಾರ್ಯಕ್ರಮದಧ್ವನಿ ಮುದ್ರಣಗಳು, ಮೈಸೂರಿನ ಆಲೂಗಡ್ಡೆ, ತರಕಾರಿ, ಈರುಳ್ಳಿ ಮಾರುಕಟ್ಟೆ, ಬ್ಯಾಡಗಿಯ ಮೆಣಸು ಮಾರುಕಟ್ಟೆ ಹೀಗೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿಯಾವ ಬೆಳೆಗೆ ಯಾವ ದರವಿದೆ ಎನ್ನುವ ನಿತ್ಯದ ಮಾಹಿತಿಗಳು ಈ ಗುಂಪಿನಲ್ಲಿಅಪ್‌ಡೇಟ್‌ಆಗುತ್ತವೆ. ಗುಂಪಿನ ನಿರ್ವಹಣೆಯನ್ನು ಒಬ್ಬರಿಂದ ಮಾಡುವುದು ಅಸಾಧ್ಯ. ಹೀಗಾಗಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ರವಿಕುಮಾರ್‌ ಜಿ. ಎಚ್‌. ಅವರು ಬಸನಗೌಡ ಅವರ ಕಾಯಕದಲ್ಲಿ ಕೈಜೋಡಿಸಿದ್ದಾರೆ. ಇವರು ಕೃಷಿ ಸಂಬಂಧಿತಎಲ್ಲಾ ಗುಂಪಿನ ನಿರ್ವಹಣೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ.

– ಕೋಡಕಣಿ ಜೈವಂತ ಪಟಗಾರ

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.