ಒಂದೇ ವಾಟ್ಸ್‌ಆ್ಯಪ್ ಎರಡು ಉಪಕರಣಗಳಲ್ಲಿ…
Team Udayavani, Nov 25, 2019, 5:10 AM IST
ವಾಟ್ಸ್ ಆ್ಯಪ್ ಇಷ್ಟು ದಿನ ಕೇವಲ ಒಂದು ಉಪಕರಣದಲ್ಲಿ ಮಾತ್ರವೇ ಕಾರ್ಯಾಚರಿಸುತ್ತಿತ್ತು. ಅಂದರೆ, ಒಂದು ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಇನ್‌ಸ್ಟಾಲ್ ಆದ ವಾಟ್ಸ್‌ಆ್ಯಪ್ ಅಕೌಂಟನ್ನು ಇನ್ನೊಂದು ಉಪಕರಣದಲ್ಲಿ ತೆರೆಯಲು ಆಗುತ್ತಿರಲಿಲ್ಲ. ಒಂದು ವಾಟ್ಸ್ ಆ್ಯಪ್ ಒಂದು ನಿರ್ದಿಷ್ಟ ಉಪಕರಣದಲ್ಲಿ ಮಾತ್ರವೇ ಕಾರ್ಯಾಚರಿಸುವ ವ್ಯವಸ್ಥೆಯನ್ನು ವಾಟ್ಸ್ ಆ್ಯಪ್ ರೂಪಿಸಿಕೊಂಡಿತ್ತು. ಒಂದು ವೇಳೆ ಆ ಅಕೌಂಟಿನ ಮಾಲೀಕನ ಬಳಿ ಎರಡು ಫೋನುಗಳಿದ್ದು, ಹಳೆಯ ಫೋನಿನಲ್ಲಿ ವಾಟ್ಸ್ ಆ್ಯಪ್ ಇದೆ ಅಂತಿಟ್ಟುಕೊಳ್ಳಿ.
ಒಂದು ವೇಳೆ, ಅದೇ ಅಕೌಂಟನ್ನು ಹೊಸ ಮೊಬೈಲಿನಲ್ಲಿ ಅÂಕ್ಸೆಸ್ ಮಾಡಲು ಹೋದರೆ ಹಳೆಯ ಮೊಬೈಲಿನಲ್ಲಿದ್ದ ವಾಟ್ಸ್ ಆ್ಯಪ್ ಅಕೌಂಟು ಡಿಲೀಟ್ ಆಗುತ್ತದೆ. ಇದು ಸದ್ಯ ಇರುವ ವ್ಯವಸ್ಥೆ. ಈಗ ವಾಟ್ಸ್ ಆ್ಯಪ್ ಈ ವ್ಯವಸ್ಥೆಯನ್ನು ಬದಲಾಯಿಸಲು ಹೊರಟಿದೆ. ಇನ್ನು ಮುಂದೆ, ಒಂದೇ ವಾಟ್ಸ್ ಆ್ಯಪ್ ಅಕೌಂಟನ್ನು ಅದರ ಮಾಲೀಕ ಒಂದೇ ಬಾರಿ ಎರಡು ಉಪಕರಣದಲ್ಲಿ ತೆರೆಯಬಹುದು. ಇದರಿಂದ ವಾಟ್ಸ್ ಆ್ಯಪ್‌ನಲ್ಲಿ ಕಳಿಸಲ್ಪಡುವ ಸಂದೇಶಗಳ ಸುರಕ್ಷತೆಯ ಬಗ್ಗೆ ಆತಂಕ ಮೂಡುವುದು ಸಹಜ. ಆದರೆ, ಇದಕ್ಕೆ ಸಂಸ್ಥೆಯೇ ಸ್ಪಷ್ಟೀಕರಣ ನೀಡಿದೆ. ಅದು ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಬಳಕೆದಾರರ ಖಾಸಗಿತನವನ್ನು ಕಾಪಾಡಲಾಗುವುದಾಗಿ ವಾಗ್ಧಾನ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.