ಬ್ಯಾಂಕಿನಲ್ಲಿ ಜಂಟಿ ಖಾತೆ ಏಕೆ ತೆರೆಯುತ್ತಾರೆ?
Team Udayavani, Nov 6, 2017, 7:05 PM IST
ಜಂಟಿಖಾತೆ ಆರಂಭಿಸಿದ ನಂತರ, ಅದರಲ್ಲಿ ನಡೆಯುವ ವ್ಯವಹಾರಕ್ಕೆ ಇಬ್ಬರೂ ಖಾತೆದಾರರೂ ಜವಾಬ್ದಾರರಾಗುತ್ತಾರೆ. ಅಭಿಪ್ರಾಯ ಬೇಧದಿಂದ ಕಾಲಾಂತರದಲ್ಲಿ ಜಗಳ ಮಾಡಿಕೊಂಡು, ನನ್ನ ಜೊತೆಗಾರ ಮಾಡಿದ ವ್ಯವಹಾರದ ಬಗ್ಗೆ ನನಗೇನೂ ಗೊತ್ತಿಲ್ಲ ಎಂಬಂಥ ಮಾತುಗಳಿಗೆ ಅರ್ಥವೇ ಇರುವುದಿಲ್ಲ.
—
ಬ್ಯಾಂಕಿನಲ್ಲಿ ಜಂಟಿ ಖಾತೆಗಳನ್ನು ವ್ಯವಹಾರದ ಅನುಕೂಲತೆಗಾಗಿ ಗಾಗಿ ತೆರೆಯುತ್ತಿದ್ದು, ಈ ಸೌಲಭ್ಯವನ್ನು ಹೆಚ್ಚಾಗಿ ಬಿಜಿನೆಸ್ ಮಾಡುವವರು ಉಪಯೋಗ ಮಾಡಿಕೊಳ್ಳುತ್ತಾರೆ. ಬಿಜಿನೆಸ್ ಉದ್ದೇಶಕ್ಕಾಗಿ ಖಾತೆದಾರನು ಪ್ರವಾಸದ ಮೇಲೆ ಹೊರಹೋದರೆ, ಅಂಥ ಸಂದರರ್ಭದಲಿ É ಬ್ಯಾಂಕಿಂಗ್ ವ್ಯವಹಾರಕ್ಕೆ ಅಡಚಣೆ ಆಗದಿರಲೆಂದು ಬ್ಯಾಂಕಿನ ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ.
ತಂದೆ ತಾಯಿಗಳು ಅಥವಾ ಪೋಷಕರು ವಯಸ್ಸಾಗಿದವರಾಗಿದ್ದು, ವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಂಕಿಗೆ ಅಲೆದಾಡಲು ಸಾಧ್ಯವಾಗದಿ¨ªಾಗ, ಮಕ್ಕಳೊಂದಿಗೆ ಅಥವಾ ಅಪ್ತರೊಂದಿಗೆ ಜಂಟಿ ಖಾತೆಯನ್ನು ತೆರೆಯುತ್ತಾರೆ. ಸ್ನೇಹಿತರು ತಮ್ಮ ವೈಯಕ್ತಿಕ ಹಣಕಾಸಿನ ಹೊರಗೆ, ಬೇರೆ ಬಿಜಿನೆಸ… ಮಾಡುವಾಗ ಇಂಥ ಖಾತೆಗಳನ್ನು ತೆರೆಯುತ್ತಾರೆ.
ಕೆಲವು ಸಂಘ ಸಂಸ್ಥೆಗಳು ತಮ್ಮ ಹಣಕಾಸಿನ ವ್ಯವಹಾರದಲ್ಲಿ ಹೆಚ್ಚಿನ ನಿಯಂತ್ರಣ ಇರಿಸಿ ಕೊಳ್ಳಲು ಜಂಟಿ ಖಾತೆಯನ್ನು ತೆರೆದು, ಒಬ್ಬರ ಕೈಗೇ ಗಂಟನ್ನು ಕೊಡದಿರಲು ಇಂಥ ಖಾತೆಯನ್ನು ಬಳಕೆಮಾಡುತ್ತವೆ.
ಸರ್ಕಾರಿ ಕಚೇರಿಗಳ ಬ್ಯಾಂಕ್ ಖಾತೆಯಲ್ಲಿ, ಸಾಮಾನ್ಯವಾಗಿ ಇದು ಅವರ ನೀತಿ ನಿಯಮಾವಳಿಗಳ ಪ್ರಕಾರ ಜಂಟಿಯಾಗಿರುತ್ತಿದ್ದು, ಇಲ್ಲಿಯೂ ಕೂಡಾ ಹಣಕಾಸು ನಿಯಂತ್ರಣ ಮತ್ತು ದುರ್ಬಳಕೆಯ ತಡೆ ಮುಖ್ಯವಾಗಿರುತ್ತದೆ.
ತಮ್ಮ ಖಾತೆಯಲ್ಲಿನ ಅಗು ಹೋಗುಗಳು ಮತ್ತು ವ್ಯವಹಾರಗಳು ಸಂಬಂಧಪಟ್ಟ ಸ್ಟೇಕ್ ಹೋಲ್ಡರ್‌ಗಳಿಗೆ ತಿಳಿದಿರಲಿ ಎನ್ನುವ ಕಾರಣಕ್ಕೆ ಜಂಟಿ ಖಾತೆಗಳನ್ನು ತೆರೆಯುತ್ತಿದ್ದು, ಖಾತೆದಾರರು ಯಾವಾಗಲೂ operations ಗಳನ್ನು ನೋಡಬಹುದು.
ಗಂಡ ಹೊರ ಹೋಗುತ್ತಿದ್ದು, ಹೆಂಡತಿ ಅವನ ಬ್ಯಾಂಕಿನ ವ್ಯವಹಾರಗಳನ್ನು ನೋಡಿಕೊಳ್ಳುವ ಅನಿವಾರ್ಯತೆ ಇರುವಾಗ operational convenience ಗಾಗಿ ಜಂಟಿ ಖಾತೆಯನ್ನು ತೆರೆಯುವ ಸಂದರ್ಭ ಇರುತ್ತದೆ.
ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಳ್ಳುವಾಗ ಪತ-ಪತ್ನಿಯರಿಬ್ಬರನ್ನೂ co&borrower ಮಾಡುವ ರೂಢಿ ಇದ್ದು, ಆ
ಸಂದರ್ಭದಲ್ಲೂ ಜಂಟಿ ಖಾತೆಯನ್ನು ತೆರೆಯಲಾಗುತ್ತದೆ. ಅಪ್ರಾಪ್ತರ ಹೆಸರಿನಲ್ಲಿ ಖಾತೆ ತೆರೆಯುವಾಗ, ಸಾಧಾರಣವಾಗಿ, ತಂದೆತಾಯಿ ಸಂಗಡ ಜಂಟಿ ಖಾತೆಯನ್ನು ತೆರೆಯುತ್ತಾರೆ. ಕಾನೂನು ಪ್ರಕಾರ ಮೈನರ್ ಖಾತೆಯನ್ನು operate ಮಾಡಲು ಸಾಧ್ಯವಿಲ್ಲ. ಅಂತೆಯೇ ಈ ರೀತಿ ಖಾತೆಯನ್ನು ತೆರೆಯಲಾಗುತ್ತದೆ.
ಅನಿವಾಸಿ ಭಾರತೀಯರು, 0peratonal convenience ಗಾಗಿ ನಿವಾಸಿ ಭಾರತೀಯರೊಂದಿಗೆ ಜಂಟಿ ಖಾತೆಗಳನ್ನು ತೆರೆಯುತ್ತಾರೆ. ಆದರೆ, ಇದು ಕೆಲವು conditionಗೆ ಒಳಪಟ್ಟಿರುತ್ತದೆ.
ಜಂಟಿ ಖಾತೆಗಳು ಕೇವಲ operational convenienceಗಾಗಿ, ಖಾತೆಯಲ್ಲಿರುವ ಹಣವನ್ನು ನಿಯಂತ್ರಿಸಲು ಮತ್ತು ಕೆಲವು ಬಾರಿ ಕಾನೂನಿನ ನಿಬಂಧನೆಗಳನ್ನು ಪಾಲಿಸಲು ಮಾತ್ರ ವಿನಃ ಖಾತೆದಾರರಿಗೆ ಇನ್ನು ಯಾವುದೇ ಅನುಕೂಲವಿಲ್ಲ.
ಇಂಥಹ ಖಾತೆಗಳಲ್ಲಿ ತೊಡಕುಗಳು ಮತ್ತು ಅಪಾಯಗಳೇನು?
ಮೇಲು ನೋಟಕ್ಕೆ ಇಂಥ ಖಾತೆಗಳಲ್ಲಿ ಯಾವುದೇ ತೊಡಕುಗಳು ಮತ್ತು ಅಪಾಯಗಳಿಲ್ಲ. ಆದರೆ, ಖಾತೆದಾರರಲ್ಲಿ ಯಾವುದಾದರೂ ಕಾರಣಕ್ಕೆ ಒಡಕುಂಟಾದರೆ, ವೈಮನಸ್ಯ ಬಂದರೆ, ಒಬ್ಬರು ಖಾತೆಯಲ್ಲಿ ಮಾಡಿದ ವ್ಯವಹಾರವನ್ನು ಇನ್ನೊಬ್ಬರು ಸಂದೇಹಿಸಿದರೆ, ಸಮಸ್ಯೆಗಳ ಸರಮಾಲೆ ಆರಂಭವಾಗುತ್ತದೆ. ಅಂಥ ಸಂದರ್ಭ ಬಂದಾಗ ಬರವಣಿಗೆಯಲ್ಲಿ ದೂರು ಬಂದರೆ, ಬ್ಯಾಂಕಿನವರು ಕೂಡಲೇ ಖಾತೆಯನ್ನು ಬಂದ್ ಮಾಡುತ್ತಾರೆ. ಜಂಟಿ ಖಾತೆಯಲ್ಲಿನ ವ್ಯವಹಾರಕ್ಕೆ ಎಲ್ಲರೂ ಭಾಗಿದಾರರು. ನಾನು ಸಹಿ ಮಾಡಿಲ್ಲ, ನನಗೆ ಗೊತ್ತಿಲ್ಲ ಮುಂತಾದ ವಾದಗಳಿಗೆ ಅರ್ಥವಿಲ್ಲ. ನೀವು ಅಪರಾಧ ಎಸಗದಿದ್ದರೂ, ನೀವು ಹೊಣೆಯಾಗಬೇಕಾಗುತ್ತದೆ. ಇನ್ನೊಬ್ಬರ liabilityನೀವು ಹೊಣೆ.
ಜಂಟಿ ಖಾತೆಯನ್ನು ತೆರೆಯುವಾಗಲೇ ಖಾತೆದಾರರು operatonಬಗೆಗೆ ಬ್ಯಾಂಕಿಗೆ ಸ್ಪಷ್ಟ ನಿರ್ದೇಶನ ಕೊಡಬೇಕು. ನಿರ್ದೇಶನ ಕೊಡದಿದ್ದರೆ, ಆ ಮೇಲೆ ಪ್ರಶ್ನಿಸಲಾಗದು. ಜಂಟಿ ಶಾತೆಯಲ್ಲಿನ ವ್ಯವಹಾರಕ್ಕೆ ಎಲ್ಲರೂ ಹೊಣೆಗಾರರಿದ್ದು, ಈ ನಿಟ್ಟಿನಲ್ಲಿ ಕಾನೂನು ಏನನ್ನೂ ಮಾಡಲಾಗದು.ಒಬ್ಬ ಖಾತೆದಾರ ಖಾತೆಯನ್ನು ದುರುಪಯೋಗ ಮಾಡಿಕೊಂಡರೆ ಅತನ ವಿರುದ್ದ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗದು. ಖಾತೆದಾರರೇ ಅದಕ್ಕೆ ಹೊಣೆಗಾರರು.
ಖಾತೆಯನ್ನು ತೆರೆಯುವಾಗ ಪ್ರತಿಯೊಬ್ಬ ಖಾತೆದಾರ ನೀತಿ ನಿಯಮಾವಳಿಯನ್ನು ಸ್ಪಷ್ಟವಾದ ತಿಳಿದುಕೊಳ್ಳಬೇಕು ಹಾಗೂ ಅದರಂತೆ ಬ್ಯಾಂಕಿಗೆ ನಿರ್ದೇಶನ ನೀಡಬೇಕು. ಇದಕ್ಕೆ ಎಲ್ಲರ ಒಪ್ಪಿಗೆ ಬೇಕು ಮತ್ತು ಏಕಪಕ್ಷೀಯ ನಿರ್ದೇಶನ ಕೊಡಲಾಗದು. ಜಂಟಿ ಖಾತೆದಾರ ಖಾತೆಯಿಂದ ಹೊರಬರುವಾಗ, ನಿಧನರಾದಾಗ, ಖಾತೆಯ operation ನಿಟ್ಟಿನಲ್ಲಿ ಗೊಂದಲಗಳಾಗುತ್ತಿದ್ದು, ಸ್ಪಷ್ಟವಾಧ ನಿರ್ದೇಶನ ಇಲ್ಲದಿದ್ದರೆ ಕಾನೂನು ಹೋರಾಟಮಾಡಬೇಕಾಗುತ್ತದೆ.
ಜಂಟಿ ಖಾತೆ ಸ್ಥಿರ ಠೇವಣಿಯಾಗಿದ್ದು, 10000 ಕ್ಕಿಂತ ಹೆಚ್ಚು ಬಡ್ಡಿ ಆದಾಯ ಇದ್ದರೆ, ಮೊದಲ ಖಾತೆದಾರನಿಂದ (primary Account holder) ತೆರಿಗೆಯನ್ನು ತೆಗೆದುಕೊಳ್ಳಲಾಗುವದು.
ಜಂಟಿ ಖಾತೆ ನಡೆಯುವದು ಪರಸ್ಪರ ನಂಬಿಕೆಯ ಮೇಲೆ. ಕಾನೂನು ಪ್ರಕಾರ ನಂಬಿಕೆದ್ರೋಹದಿಂದ ರಕ್ಷಿಸಿಕೊಳ್ಳುವದು ಕಷ್ಟ.
– ರಮಾನಂದ ಶರ್ಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.