ಯಾರು ಹಿತವರು ನಿಮಗೆ ಈ ನಾಲ್ಕೊರೊಳಗೆ…


Team Udayavani, Mar 13, 2017, 12:35 PM IST

lead.jpg

ಹಣ ಉಳಿಸೋಕೆ ಇಲ್ಲಿದೆ ದಾರಿ

ಎಟಿಎಂ ವ್ಯವಹಾರದ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ನೋಟು ರದ್ದತಿ ವೇಳೆ ತೆರವುಗೊಳಿಸಿದ್ದು  ಎಲ್ಲರಿಗೂ ಸಂತದ ವಿಷಯವಾಗಿತ್ತು. ಆದರೆ ಎಸ್‌ ಬಿಐ ಬ್ಯಾಂಕು  ಏ.1ರ ಬಳಿಕ ಎಟಿಎಂ ಹೆಚ್ಚುವರಿ ವ್ಯವಹಾರಕ್ಕೆ ಶುಲ್ಕ ಸೇರಿದಂತೆ ತಮ್ಮ ಬ್ಯಾಂಕಿನ ನಿಯಮಗಳನ್ನು ಬದಲಾಯಿಸಲು ಮುಂದಾಗಿದೆ. ಖಾಸಗಿ ಬ್ಯಾಂಕುಗಳು ಈಗಾಗಲೇ ಹೆಚ್ಚುವರಿ ವಹಿವಾಟಿಗೆ ಶುಲ್ಕ ವಿಧಿಸುತ್ತಿವೆ. ಹಾಗಾದರೆ ಏಟಿಎಂ ಶುಲ್ಕದಿಂದ ತಪ್ಪಿಸಿಕೊಳ್ಳುವುದು ಹೇಗೆ, ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ಕೆಲವು ಮಾರ್ಗೋಪಾಯಗಳು.

ಬ್ಯಾಂಕುಗಳು ಅಧುನಿಕ ಜೀವನದ ಅವಿಭಾಜ್ಯ ಅಂಗ. ಎಟಿಎಂಗಳು ಇಲ್ಲದೆ ಬದುಕೇ ಸಾಗದು, ಅನ್ನುವಷ್ಟರ ಮಟ್ಟಿಗೆ ಮನುಷ್ಯ ತಂತ್ರಜ್ಞಾನ ಮತ್ತು ಆರ್ಥಿಕತೆಯ ಅವಲಂಭಿಯಾಗಿದ್ದಾನೆ. ದುಡ್ಡನೇಕೆ ಜೇಬಿನಲ್ಲಿ ಇಟ್ಟುಕೊಂಡು ಹೋಗಬೇಕು ದಾರಿಯಲ್ಲಿ ಯಾವುದಾದರೊಂದು ಎಟಿಎಂ ಸಿಕ್ಕೆ ಸಿಗುತ್ತದೆ. ಸ್ವೆ„ಪ್‌ ಮಾಡಿ ತಮಗೆ ಬೇಕಾದಷ್ಟು ಹಣ ಪಡೆದುಕೊಂಡರಾಯಿತು ಎಂಬ ಇರಾದೆ ಎಲ್ಲರದ್ದು. 

ಅಪನಗದೀಕರಣದಿಂದ ಅನೇಕ ಜನರು ನೋಟು ಬದಲಾವಣೆಗೆ ಎಟಿಎಂಗಳ ಮುಂದೆ ನಿಲ್ಲುವುದೇ ನಿತ್ಯ ಕಾಯಕವನ್ನಾಗಿಸಿಕೊಂಡಿದ್ದದ್ದು ಈಗ ಇತಿಹಾಸ. ನೋಟ್‌ ಬ್ಯಾನ್‌ ವೇಳೆ 2014ರಲ್ಲಿ ಜಾರಿಗೆ ತರಲಾಗಿದ್ದ ಎಟಿಎಂ ವ್ಯವಹಾರದ ಮೇಲಿನ ಶುಲ್ಕವನ್ನು ಪೂರ್ಣವಾಗಿ ರದ್ದು ಮಾಡಲಾಗಿತ್ತು. ಅಲ್ಲದೆ ಯಾವ ಬ್ಯಾಂಕಿನ ಎಟಿಎಂ ಕಾರ್ಡ್‌ನ ಸಹಾಯದಿಂದ ಬೇರಾವ ಬ್ಯಾಂಕಿ ಎಟಿಎಂಗಳಲ್ಲಾದರೂ ಹಣವನ್ನು ಪಡೆಯಲು ಅವಕಾಶ ಮುಕ್ತಗೊಳಿಸಲಾಗಿತ್ತು. 

ಈ ರೀತಿಯ ಆರ್ಥಿಕ ಸ್ವಾತಂತ್ರ್ಯ ಎಲ್ಲರೂ ಎಟಿಎಂ ಕಾರ್ಡ್‌ಗಳನ್ನು ಹೆಚ್ಚಿನ ಮಟ್ಟದಲ್ಲಿ ಬಳಸಲು ಪ್ರಚೋದಿಸಿತ್ತು. ಆದರೆ ಎಸ್‌ಬಿಐ ಬ್ಯಾಂಕು ಏಪ್ರಿಲ್‌ 1 ಬಳಿಕ ಎಟಿಎಂನಲ್ಲಿ ಪ್ರತಿ ನಾಲ್ಕು ಬಾರಿಗೂ ಹೆಚ್ಚು ಆರ್ಥಿಕ ವಹಿವಾಟನ್ನು ನಡೆಸಿದರೆ ಶುಲ್ಕ ವಿಧಿಸುವ ನಿಯಮ ಜಾರಿಗೆ ತರಲು ಮುಂದಾಗಿದೆ. ಇದು ಜನರಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.

ಹಾಗಾದರೆ  ಈಗ ಎಟಿಎಂನಲ್ಲಿ ವ್ಯವಹರಿಸುವಾಗ ತಿಂಗಳಿಗೆ ಎಷ್ಟು ಬಾರಿ ಬಳಸಬೇಕು? ಬೇರೆ ಮಾರ್ಗೋಪಾಯವೇನು? ಶುಲ್ಕದಿಂದ ತಪ್ಪಿಸಿಕೊಳ್ಳಲು ಮಾಡಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕೆಲವು ಪರಿಹಾರೋಪಾಯಗಳು ಇಲ್ಲಿವೆ.

ಇ- ಬ್ಯಾಂಕಿಂಗ್‌ ವ್ಯವಹಾರ ಉತ್ತಮ
ಬ್ಯಾಂಕಿನ ಖಾತೆೆ ಮಾಡಿಸುವಾಗಲೇ ಇ-ಬ್ಯಾಂಕಿಂಗ್‌ ವ್ಯವಸ್ಥೆ ಅವಕಾಶವನ್ನು ಪಡೆಯುವುದು ಒಳಿತು. ದೊಡ್ಡ ಪ್ರಮಾಣದ ಹಣವನ್ನು ಕುಳಿತಲ್ಲಿಂದಲೇ ವರ್ಗಾಯಿಸುವ, ಸಂಸ್ಥೆಗಳಿಗೆ ದೇಣಿಗೆ ನೀಡುವ, ಖಾತೆಯಲ್ಲಿ ಹಣವೆಷ್ಟಿದೆ ಎಂದು ಪರಿಶೀಲಿಸುವ, ಆರ್ಥಿಕ ವ್ಯವಹಾರಗಳನ್ನು ಮಾಡಲು ಇ ಬ್ಯಾಂಕಿಂಗ್‌ ಅನುಕೂಲ. ಈ ವ್ಯವಹಾರಕ್ಕೆ ಸಾಮಾನ್ಯವಾಗಿ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.  ಇದು ನಗದು ರಹಿತ ವಹಿವಾಟಾಗಿರುವುದರಿಂದ ಎಟಿಎಂಗೆ ಹೋಗುವ ಅವಶ್ಯಕತೆಯೂ ಇರುವುದಿಲ್ಲ.

ಇತ್ತೀಚೆಗೆ ಆ್ಯಪ್‌ಗ್ಳ ಮೂಲಕ ಬ್ಯಾಂಕುಗಳು ಮೊಬೈಲ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಕಲ್ಪಿಸಿವೆ. ಇದರಿಂದಲೂ ಫೋನ್‌ ರೀಚಾರ್ಜ್‌, ಹಣ ವರ್ಗಾವಣೆ, ಕರೆಂಟ್‌ ಬಿಲ್‌ ಪಾವತಿ ಇತ್ಯಾದಿ ಕೆಲಸಗಳನ್ನು ಸರಾಗವಾಗಿ ಮಾಡಬಹುದು. 

ಇ ವ್ಯಾಲೆಟ್‌ಗಳ ಮೊರೆ ಹೋಗಿ 
ಪೇಟಿಎಂ, ಪ್ರೀಚಾರ್ಜ್‌, ಮೊಬಿಕ್ವಿಕ್‌, ಪೇಯುಮನಿ, ಸಿಟ್ರಾಸ ಕ್ಯಾಶ್‌, ಎರ್‌ಟೆಲ್‌ ಮನಿ, ಆಕ್ಸಿಜನ್‌ ವ್ಯಾಲೆಟ್‌, ಎಚ್‌ಡಿಎಫ್ಸಿ ಪೇಜ್ಯಾಪ್‌, ಭೀಮ್‌ ಇತ್ಯಾದಿ ಅನೇಕ  ಇ-ವ್ಯಾಲೆಟ್‌ ಅಥವಾ ಡಿಜಿಟಲ್‌ ವ್ಯಾಲೆಟ್‌ಗಳು ಭಾರತದಲ್ಲಿ ಖಾತೆದಾರರು ಉಚಿತವಾಗಿ ಆರ್ಥಿಕ ವ್ಯವಹಾರಗಳನ್ನು ನಡೆಸಲು ತಮ್ಮ ಆ್ಯಪ್‌(ಅಪ್ಲಿಕೇಷನ್‌)ಗಳನ್ನು ನೀಡಿವೆ. ಆ್ಯಪ್‌ಗ್ಳಲ್ಲಿ ನಮೂದಿಸಿರುವ ಬ್ಯಾಂಕುಗಳ ಖಾತೆಯನ್ನು  ಹೊಂದಿರುವವರು ಸಾವಕಾಶವಾಗಿ ವ್ಯಾಲೆಟ್‌ ಉಪಯೋಗವನ್ನು ಪಡೆಯಬಹುದು. 

ಇಲ್ಲಿಯೂ ಸಹ ಎಟಿಎಂಗೆ ಹೋಗುವ ಅವಶ್ಯಕತೆಯಿರುವುದಿಲ್ಲ. ಜೊತೆಗೆ ಆರ್ಥಿಕ ವ್ಯವಹಾರಕ್ಕೆ ಶುಲ್ಕವನ್ನು ವಿಧಿಸುವುದಿಲ್ಲ. ನೀರಿನ ಬಿಲ್‌ ಪಾವತಿ, ಕರೆಂಟ್‌ ಬಿಲ್‌ ಪಾವತಿ, ಡಿಟಿಎಚ್‌ ರೀಚಾರ್ಜ್‌, ಆನ್‌ಲೈನಿನಲ್ಲಿ ತಮಗೆ ಬೇಕಾದ ವಸ್ತುಗಳನ್ನು ಕೊಳ್ಳುವ, ಹಣ ವರ್ಗಾಯಿಸುವ ಇತ್ಯಾದಿ ಅನೇಕ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಬಹುದು.

ನೇರವಾಗಿ ಕಾರ್ಡ್‌ನ್ನೇ ಬಳಸಿ 
ಎಟಿಎಂ ಬಿಟ್ಟು ಬೇರೆಡೆ ನಾವು ನಡೆಸುವ ಆರ್ಥಿಕ ವ್ಯವಹಾರವನ್ನು ನೇರವಾಗಿ ಕ್ರೆಡಿಟ್‌, ಡೆಬಿಟ್‌ ಕಾರ್ಡಿನಿಂದಲೇ ಮಾಡಿದರೆ ಶುಲ್ಕ ಪಾವತಿಯನ್ನು ಉಳಿಸಬಹದು. ಅಂದರೆ ಮಾಲ್‌ಗ‌ಳಲ್ಲಿ ಬಟ್ಟೆ- ಬರೆ ಖರೀದಿಸಲು, ಎಪಿಎಂಸಿ ಯಾರ್ಡ್‌ಗಳಲ್ಲಿ ದಿನಸಿಯನ್ನು ತರಲು, ಹೋಟೆಲ್ಲಿನಲ್ಲಿ ತಿನ್ನಲು ಇನ್ನೂ ವಿವಿಧೆಡೆ ನೇರವಾಗಿ ಎಟಿಎಂ ಕಾರ್ಡ್‌ಗಳ ಮುಖಾಂತರವೇ ವ್ಯವಹಾರ ನಡೆಸುವುದು ಒಳಿತು. ಇದರಿಂದ ಜೇಬಿನಲ್ಲಿರುವ ಹಣ ಹಾಗೆಯೇ ಉಳಿಯುತ್ತದೆ. ಆದರೆ ಕಾರ್ಡನ್ನು ಅತಿ ಜಾಗರೂಕತೆಯಿಂದ ಬಳಸುವುದು ಸೂಕ್ತ.

ದೊಡ್ಡ ಮೊತ್ತದ ಹಣ ಡ್ರಾ ಮಾಡಿ
ಬ್ಯಾಂಕುಗಳು ಹೆಚ್ಚುವರಿ ಆರ್ಥಿಕ ವ್ಯವಹಾರಕ್ಕೆ ಶುಲ್ಕ ವಿಧಿಸುವ ಸೂಚನೆ ನೀಡಿರುವುದರಿಂದ ಮೂರರಿಂದ- ನಾಲ್ಕು ಬಾರಿಯಂತೂ ಹಣವನ್ನು ತೆಗೆಯಬಹುದು. ಹೀಗಾಗಿ ಹಣವನ್ನು ತೆಗೆಯುವಾಗಲೇ ಮನೆಯ ಬಾಡಿಗೆ, ತಿಂಗಳ ಹಾಲಿನ ಖರ್ಚು, ಮಕ್ಕಳ ಸ್ಕೂಲಿನ ಫೀಸು, ದಿನವಹಿ ಮನೆಯ ಖರ್ಚು ಸೇರಿದಂತೆ ಎಲ್ಲ ಆಯವ್ಯಯವನ್ನು ಲೆಕ್ಕಾಹಾಕಿ ಒಟ್ಟಿಗೆ ಹಣವನ್ನು ಎಟಿಎಂನಿಂದ ತೆಗೆಯುವುದು ಒಂದು ಸೂಕ್ತ ಪರಿಹಾರ. ಇದರಿಂದಾಗಿ ಬ್ಯಾಂಕ್‌ ನಿಗದಿ ಪಡಿಸಿರುವ ಆಯ್ಕೆಗೆ ಅನುಸಾರವಾಗಿ ನಡೆದಂತೆಯೂ ಆಗುತ್ತದೆ. ಜೊತೆಗೆ ತಾವು ಎಟಿಎಂನಲ್ಲಿ ಹಣ ತೆಗೆದ ಸಮಾಧಾನವೂ ಇರುತ್ತದೆ. ಆದರೆ ಹೆಚ್ಚು ಹಣ ತೆಗೆದೆವೆಂದು ಅನಗತ್ಯವಾಗಿ ಖರ್ಚುಮಾಡುವುದನ್ನು ನೀವೇ ನಿಯಂತ್ರಿಸಬೇಕು. 

ನಿಮ್ಮ ಬ್ಯಾಂಕ್‌ ಖಾತೆಗಳಿಗೆ ಭೇಟಿ ನೀಡಿ
ಬ್ಯಾಂಕಿನ ಎಟಿಎಂನಲ್ಲಿ ಹೆಚ್ಚು ಬಾರಿ ಹಣವನ್ನು ತೆಗೆಯಲು ಅವಕಾಶ ಇಲ್ಲದೇ ಇದ್ದರೆ ಏನಂತೆ ಬ್ಯಾಂಕಂತೂ ಇದೆಯಲ್ಲಾ , ಬ್ಯಾಂಕಿಗೇ ನೇರವಾಗಿ ಹೋಗಿ ಚಲನ್‌ ತುಂಬಿ ಹಣವನ್ನು ತೆಗೆದುಕೊಳ್ಳುವಷ್ಟು  ಸಮಯಾವಕಾಶವಿದೆ ಎಂದರೆ ಇದಕ್ಕಿಂತ ಮತ್ತೂಂದು ಉತ್ತಮ ಆಯ್ಕೆ ಮತ್ತೂಂದಿಲ್ಲ. ಇದು ನಿಮ್ಮ ಬ್ಯಾಂಕಿನ ಜೊತೆಗೆ ಹೊಂದುವ ನೇರ ಸಂಬಂಧವಾಗಿದ್ದು, ತಮ್ಮ ಬ್ಯಾಂಕ್‌ ಯಾವ ಯಾವ ರೀತಿ ಕೊಡುಗೆಗಳನ್ನು ನೀಡುತ್ತಿವೆ. ಲೋನ್‌ ಇತ್ಯಾದಿ ಮಾಡಿಸಬಹುದಾ ಎಂದು ವಿಚಾರಿಸಲು ಎಲ್ಲರೂ ನಿಮಗೆ ಅಲ್ಲಿಯೇ ಸಿಗುತ್ತಾರೆ. ಜೊತೆಯಲ್ಲಿ  ತಮ್ಮ ಖಾತೆಯ ಪಾಸ್‌ ಪುಸ್ತಕವನ್ನು ತೆಗೆದುಕೊಂಡು ಹೋದರೆ ಎಂಟ್ರಿ ಮಾಡಿಸಿಕೊಂಡು ಬರಬಹುದು.

ಎಟಿಎಂನಲ್ಲಿ  ನಾಲ್ಕು ವಹಿವಾಟಿನ ನಂತರ ಹೆಚ್ಚುವರಿ ವ್ಯವಹಾರಕ್ಕೆ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಶುಲ್ಕ ವಿಧಿಸುವುದಾಗಿ ತಿಳಿಸಿದೆ. ಎಸ್‌ ಬಿಐ ಎಟಿಎಂ ಕಾರ್ಡ್‌ನ್ನು  ಬೇರೆ ಎಟಿಎಂಗಳಲ್ಲಿ ಮೂರು ಬಾರಿ ಬಳಸಲು ಅವಕಾಶವಿದ್ದು ಅದರ ಬಳಿಕ ನಡೆಸುವ ಪ್ರತಿ ವಹಿವಾಟಿಗೆ 20ರೂ ಶುಲ್ಕ ವಿಧಿಸಲಿದೆ. ಅಲ್ಲದೆ ಪ್ರತಿ ಖಾತೆದಾರರೂ ತಮ್ಮ ಉಳಿತಾಯ ಖಾತೆಗಳಲ್ಲಿ ಕನಿಷ್ಠ 1000 ದಿಂದ 5 ಸಾವಿರ ರೂ. ಉಳಿಸಿಕೊಳ್ಳದಿದ್ದರೆ  ಏಪ್ರಿಲ್‌ ಪ್ರಾರಂಭದಿಂದ ದಂಡ ವಿಧಿಸುವುದಾಗಿ ತಿಳಿಸಿದೆ. ಎಚ್‌ಡಿಎಫ್ಸಿ, ಆಕ್ಸಿಸ್‌, ಐಸಿಐಸಿಐ ಬ್ಯಾಂಕುಗಳು  2017ರ ಪ್ರಾರಂಭದಿಂದಲೇ ಎಟಿಎಂ ವಹಿವಾಟಿನ ಮೇಲೆ ಶುಲ್ಕ ವಿಧಿಸಲು ಪ್ರಾರಂಭಿಸಿವೆ. ಅಲ್ಲದೆ 25 ಸಾವಿರ, 50 ಸಾವಿರಕ್ಕಿಂತ ಹೆಚ್ಚಿಗೆ ನಡೆಸುವ ವಹಿವಾಟಿಗೂ ಸಾವಿರಕ್ಕೆ ಇಂತಿಷ್ಟು  ಪ್ರಮಾಣದಲ್ಲಿ ಶುಲ್ಕ ವಿಧಿಸಲಾಗುತ್ತಿದೆ. ಕೆಲವೊಮ್ಮೆ ಈ ಮಾದರಿಯ ನಿಯಮಗಳು ಬ್ಯಾಂಕುಗಳು ಮಾಡಿಕೊಂಡಿರುವುದು ಶ್ರೀ ಸಾಮಾನ್ಯನ ಅರಿವಿಗೆ ಬರುವ ವೇಳೆಗೆ ಕಾಣದಂತೆ ತಮ್ಮ ಖಾತೆಯಿಂದ ಹಣ ಶುಲ್ಕವಾಗಿ ಪಾವತಿಯಾಗಿಬಿಟ್ಟಿರುತ್ತದೆ. ಹೀಗಾ ಗಿ ಎಟಿಎಂನಲ್ಲಿ ಹಣವನ್ನು ವಿತ್‌ ಡ್ರಾ ಮಾಡುವಾಗಲೇ ಯೋಚಿಸಿ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಿದರೆ ಶುಲ್ಕ ಪಾವತಿಯ ಹೊರೆಯಿಂದ ತಪ್ಪಿಸಿಕೊಳ್ಳಬಹುದು.

ಸ್ವಲ್ಪ ಎಚ್ಚರಿಕೆ ಇರಲಿ…
– ಇ- ವ್ಯಾಲೆಟ್‌ಗಳನ್ನು ಉಪಯೋಗಿಸುವಾಗ ದೊಡ್ಡ ಮಟ್ಟದ ಆರ್ಥಿಕ ವಹಿವಾಟಿಗೆ ವಹಿಸುವ ಸೇವಾ ಶುಲ್ಕದ ಬಗ್ಗೆ ಜಾಗರೂಕತೆಯನ್ನು ವಹಿಸುವುದು ಒಳ್ಳೆಯದು. ಉದಾಹರಣೆಗೆ ಪೇಟಿಯಂನಲ್ಲಿ ತಮ್ಮ ಅಕೌಂಟ್‌ ತೆರೆದು ಹಣವಿರಿಸಬಹದು. ಆದರೆ ಅದೇ ಅಕೌಂಟಿನಿಂದ ನಡೆಸುವ ಆರ್ಥಿಕ ವಹಿವಾಟಿಗೆ ಶೇಕಡಾವಾರು ಪ್ರಮಾಣದಲ್ಲಿ ಶುಲ್ಕವನ್ನು ತೆರಬೇಕಾಗುತ್ತದೆ. ಹೀಗೆ ಪ್ರತಿಯೊಂದು ವ್ಯಾಲೆಟ್‌ ಬೇರೆ ಬೇರೆ ರೀತಿಯಲ್ಲಿ ಸೇವಾಶುಲ್ಕವನ್ನು ಗ್ರಾಹಕರ ಮೇಲೆ ಹೇರುತ್ತವೆ. ಹೀಗಾಗಿ ಇದರ ಬಗ್ಗೆ ಜಾಗೃತರಾಗಿರಿ. 

– ನೆಟ್‌ ಬ್ಯಾಂಕಿಂಗ್‌ ಮಾಡಲು ಇಂಟರ್‌ ನೆಟ್‌ ಮುಖ್ಯ. ಆದರೆ ದೇಶದಲ್ಲಿ ಅಂತರ್ಜಾಲದ ಸಮಸ್ಯೆ ಸಾಮಾನ್ಯ. ಜೊತೆಗೆ ನೆಟ್‌ ಬ್ಯಾಂಕಿಂಗ್‌ ಮಾಡುವವರು ಹೆಚ್ಚು ಭದ್ರತೆಯಿಂದ ವ್ಯವಹರಿಸಬೇಕು ಏಕೆಂದರೆ ಆಗಂತುಕರು ತಮ್ಮ ಅಕೌಂಟನ್ನು ಹ್ಯಾಕ್‌ ಮಾಡುವ ಸಾಧ್ಯತೆಗಳರುತ್ತದೆ. ಇನ್ನೊಂದು ತೊಡಕೆಂದರೆ ನೀವು ಬಳಸುವ ಇಂಟರ್‌ ನೆಟ್‌ ಬ್ಯಾಂಕಿನ ಸರ್ವರ್‌ ಸಮಸ್ಯೆಯಾದರೆ ಆರ್ಥಿಕ ವಹಿವಾಟಿಗೆ ಕತ್ತರಿ ಬೀಳುವುದು ಖಚಿತ. ಅಲ್ಲದೆ ಪಾಸ್‌ ವರ್ಡ್‌ ಮರೆತುಹೋದರೆ ಮತ್ತೆ ಪಡೆಯುವುದು ಸುಲಭವಲ್ಲ.

– ಇತ್ತೀಚೆಗೆ ಮತ್ತಷ್ಟು ಜನಪ್ರಿಯವಾಗಿರುವ ಬ್ಯಾಂಕಿಂಗ್‌ ಎಂದರೆ ಮೊಬೈಲ್‌ ಬ್ಯಾಂಕಿಂಗ್‌. ನಿಮ್ಮ ಬೆರಳ ತುದಿಯಲ್ಲೆ ಆರ್ಥಿಕ ವ್ಯವಹಾರ ಎಂಬ ಘೋಷಣೆಯೂ ಇದಕ್ಕಿದೆ. ಮೊಬೈಲ್‌ ಬ್ಯಾಂಕಿಂಗ್‌ ಮಾಡುವವರು ಸಾಮಾನ್ಯವಾಗಿ ತಮ್ಮ ಖಾತೆಯನ್ನು ಮೊಬೈಲಿನಲ್ಲಿ ಒಮ್ಮೆ ಓಪನ್‌ ಮಾಡಿಕೊಂಡರೆ ಅದನ್ನು ಮತ್ತೆ ಲಾಗ್‌ಔಟ್‌ ಮಾಡುವುದಿಲ್ಲ. ಜೊತೆಗೆ ಖಾತೆ ನಂಬರ್‌ ಇತ್ಯಾದಿಗಳನ್ನು ಒಮ್ಮೆ ಫೀಡ್‌ ಮಾಡಿದರೆ ಅದು ಅಳಿಸಿಹೋಗುವುದಿಲ್ಲ. ಹೀಗಾಗಿ ನೀವು ಬೇರೆ ಯಾರಿಗಾದರೂ ಮೊಬೈಲನ್ನು ನೀಡಿದರೆ ನಿಮ್ಮ ಖಾತೆಯಿಂದ ಅವರು ತಮಗೆ ಬೇಕಾದ ಆರ್ಥಿಕ ವ್ಯವಹಾರ ನಡೆಸುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿ ಆರ್ಥಿಕ ವ್ಯವಹಾರಕ್ಕೆ ಬಳಸುವ ಯಾವುದೇ ಆ್ಯಪ್‌ಗೆ ಮೊದಲು ಪಾಸ್‌ವರ್ಡ್‌ ಹಾಕಿಕೊಳ್ಳಿ

– ಅಂತರ್ಜಾಲದ ಮೂಲಕ ಆರ್ಥಿ ಕ ವ್ಯವಹಾರ ನಡೆಸುವವರು ಸೈಬರ್‌ ಕ್ರೈಂ ಗಳ ಬಗ್ಗೆ ಹುಷಾರಾಗಿರಿ, ಅಲ್ಲದೆ ನಿಮ್ಮ ಮೊಬೈಲಿಗೆ ಯಾವುದೇ ಆಫ‌ರ್‌ ನೀಡುತ್ತೇವೆಂದು ಬರುವ ಹುಸಿಕರೆಯನ್ನು ನಂಬಿ ತಮ್ಮ ಅಕೌಂಟ್‌ ನಂಬರ್‌, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ನಂಬರ್‌ ಮತ್ತು ಪಾಸ್‌ವರ್ಡ್‌ಗಳನ್ನು ಹೇಳಬೇಡಿ.

– ಅನಂತನಾಗ್‌

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.