ಸಗಟು ವ್ಯಾಪಾರಕ್ಕಾಗಿ ವೈಡಿಆರ್ ಚಾಟ್
Team Udayavani, Oct 2, 2017, 11:27 AM IST
ಭಾರತದ ಅತಿದೊಡ್ಡ ಸಗಟು ಮಾರುಕಟ್ಟೆ ಇ ತಾಣವಾಗಿರುವ ವೈಡಿಆರ್ ಡಾಟ್ ಇನ್ (Wydr.in)) ‘ವೈಡಿಆರ್ ಚಾಟ್’ (WydrChat) ಎನ್ನುವ ಹೊಸ ಆಪ್ ಫೀಚರ್ ಪರಿಚಯಿಸಿದೆ. ಖರೀದಿದಾರರು ಮತ್ತು ಮಾರಾಟಗಾರರು ಈ ಮೂಲಕ ಸಂಭಾಷಣೆ ನಡೆಸಿ ಪರಸ್ಪರ ಒಪ್ಪಿಗೆಯಾಗುವಂತೆ ವಹಿವಾಟನ್ನು ಅಂತಿಮಗೊಳಿಸಲು ಸಾಧ್ಯವಿದೆ.
ವೈಡಿಆರ್ ಚಾಟ್ ಸಗಟು ಮಾರುಕಟ್ಟೆಯ ವಾಸ್ತವ ಅನುಭವವನ್ನು ನೀಡಲಿದೆ. ಮಾರಾಟಗಾರರು ಮತ್ತು ಖರೀದಿದಾರರು ಇಬ್ಬರು ಮಾರುಕಟ್ಟೆಗೆ ಹೋಗದೆಯೇ ತಮಗೆ ಬೇಕಾದ ವ್ಯಾಪಾರವನ್ನು ಇದರ ಮೂಲಕ ಕುದುರಿಸಬಹುದು. ಹೊಸ ಫೀಚರ್ ರಿಟೇಲ್ ಮಾರಾಟಗಾರರನ್ನು ಬಹುದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುವ ಸಾಧ್ಯತೆ ಇದೆ ಎಂದು ವೈಡಿಆರ್ ಡಾಟ್ ಇನ್ ವಿಶ್ವಾಸ ವ್ಯಕ್ತಪಡಿಸಿದೆ.
ಸೆಪ್ಟೆಂಬರ್ ಎರಡನೇ ವಾರದಲ್ಲಿ ನಡೆದ ಭಾರತದ ಮೊದಲ ಸಗಟು ಲೈಫ್ಸ್ಟೈಲ್ ಮತ್ತು ಫ್ಯಾಷನ್ ಇ ಫೇರ್‌ನಲ್ಲಿ ಚಿಲ್ಲರೆ ಮಾರಾಟಗಾರರು ಮೊದಲ ಬಾರಿಗೆ ವೈಡಿಆರ್ ಚಾಟ್‌ನಲ್ಲಿ ಉತ್ಪಾದಕರು ಮತ್ತು ಸಗಟು ಮಾರಾಟಗಾರರೊಂದಿಗೆ ನೇರವಾಗಿ ಚರ್ಚೆ ನಡೆಸಿ ಡೀಲ್‌ಗಳನ್ನು ಅಂತಿಮಗೊಳಿಸಿದ್ದರು.
ಆನ್‌ಲೈನ್ ಸಗಟು ಖರೀದಿಯನ್ನು ಸರಳ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಪ್ರತ್ಯಕ್ಷ ಸಗಟು ಮಾರುಕಟ್ಟೆಯ ಅನುಕೂಲಗಳನ್ನೇ ಇದು ಕಟ್ಟಿಕೊಡಲಿದೆ. ವಹಿವಾಟಿನೊಂದಿಗೆ ವಹಿವಾಟಿಗೆ ಆನ್‌ಲೈನ್‌ನಲ್ಲಿಯೇ ವ್ಯಾಪಾರ ಮಾಡುವ ಪರಿಕಲ್ಪನೆ ಹೊಸದಾಗಿದ್ದು, ನಾವೀನ್ಯತೆಯ ಸ್ಪರ್ಶವನ್ನು ಆಪ್‌ನಲ್ಲಿ ಒದಗಿಸಲಾಗಿದೆ ಎಂದು ವೈಡಿಆರ್ ಡಾಟ್ ಇನ್‌ನ ಸ್ಥಾಪಕ ಹಾಗೂ ಸಿಇಒ ದೇವೇಶ್ ರೈ ಹೇಳಿದರು.
ವೈಡಿಆರ್ ಡಾಟ್ ಇನ್ ಆಪ್‌ನಲ್ಲಿ ಅರ್ಧ ಮಿಲಿಯಕ್ಕೂ ಹೆಚ್ಚು ಸದಸ್ಯರಿದ್ದು, 2018ರ ವೇಳೆಗೆ ಒಂದು ಮಿಲಿಯನ್ ಜನರನ್ನು ಸದಸ್ಯರನ್ನಾಗಿ ಪಡೆಯುವ ಗುರಿ ಹೊಂದಲಾಗಿದೆ. ಎಲ್ಲ ಸದಸ್ಯರ ನಡುವೆ ರಿಯಲ್ ಟೈಮ್ ಸಂಭಾಷಣೆಗೆ ಇಲ್ಲಿ ಅವಕಾಶವಿದೆ.
ಭಾರತದ ರಿಯಲ್ ಟೈಮ್ ಮಾರುಕಟ್ಟೆ 600 ಶತಕೋಟಿ ಡಾಲರ್‌ನಷ್ಟು ದೊಡ್ಡದಾಗಿದ್ದು, 400 ಶತಕೋಟಿ ಡಾಲರ್ ವಹಿವಾಟು ಅಸಂಘಟಿತವಾಗಿಯೇ ನಡೆಯುತ್ತಿದೆ. ಬೆಂಗಳೂರಿನಲ್ಲಿಯೇ ಈ ಮಾರುಕಟ್ಟೆ 25 ಶತಕೋಟಿ ಡಾಲರ್‌ಗಳಷ್ಟಿದೆ. ಎರಡು ಲಕ್ಷ ಚಿಲ್ಲರೆ ಮಾರಾಟಗಾರರು ಮತ್ತು ಆರು ಸಾವಿರ ಸಗಟು ವ್ಯಾಪಾರಿಗಳನ್ನು ಹೊಂದಿರುವ ಬೆಂಗಳೂರು ವೈಡಿಆರ್‌ಗೆ ದೊಡ್ಡ ಮಾರುಕಟ್ಟೆ ಎನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.