ಇಯರ್ ಎಂಡ್ ಕಾರ್ ಸೇಲ್
Team Udayavani, Dec 9, 2019, 6:05 AM IST
ಡಿಸೆಂಬರ್ ತಿಂಗಳಲ್ಲೇ ತನ್ನಲ್ಲಿರುವ ಸ್ಟಾಕ್ ಕ್ಲಿಯರ್ ಮಾಡಿಕೊಳ್ಳಬೇಕು ಎಂಬ ಆಸೆ ಕಾರು ಕಂಪನಿಗಳಿಗೆ. ಹಾಗೇ, ಏನಾದರೂ ಆಫರ್ ಸಿಕ್ಕಿಯೇ ಸಿಕ್ಕುತ್ತದೆ. ಈ ತಿಂಗಳೇ ಖರೀದಿ ಮಾಡೋಣ ಎಂಬ ಆಸೆ ಗ್ರಾಹಕರಿಗೆ…
ಡಿಸೆಂಬರ್ ಬಂತೆಂದರೆ ಸಾಕು, ಇದು ಕಾರು, ಬೈಕುಗಳ ಖರೀದಿಗೆ ಸುಗ್ಗಿ ಕಾಲ. ಒಂದು ವರ್ಷ ಮುಗಿಯುವ ವೇಳೆ, ಮತ್ತೂಂದು ಆಫರ್‌ಗಳ ಮೇಳ. ಈ ತಿಂಗಳೇ ತನ್ನಲ್ಲಿರುವ ಸ್ಟಾಕ್ ಕ್ಲಿಯರ್ ಮಾಡಿಕೊಳ್ಳಬೇಕು ಎಂಬ ಆಸೆ ಕಾರು ಕಂಪನಿಗಳಿಗೆ. ಹಾಗೆಯೇ, ಏನಾದರೂ ಆಫರ್ ಸಿಕ್ಕಿಯೇ ಸಿಕ್ಕುತ್ತದೆ. ಈ ತಿಂಗಳೇ ಖರೀದಿ ಮಾಡೋಣ ಎಂಬ ಆಸೆ ಗ್ರಾಹಕರಿಗೆ. ಹೀಗಾಗಿ, ಈ ತಿಂಗಳು ಕಾರು ಮಾರಾಟದಲ್ಲಿ ಒಂದಷ್ಟು ಬ್ಯುಸಿ ಕಾಲ.
ಇದರ ನಡುವೆಯೇ ದೇಶದ ಪ್ರಮುಖ ಕಾರು ತಯಾರಕ ಕಂಪನಿಗಳು, ಗ್ರಾಹಕರಿಗೆ ಒಂದಷ್ಟು ಸರ್‌ಪ್ರ„ಸ್ ಶಾಕ್ ಅನ್ನೂ ನೀಡಿವೆ. 2020ರ ಜನವರಿ 1ರಿಂದಲೇ ಕಾರುಗಳ ದರ ಏರಿಕೆ ಮಾಡುತ್ತೇವೆ ಎಂದು ಹೇಳಿವೆ. ಇದರ ಸಾಲಿನಲ್ಲಿ ದೇಶದ ಅಗ್ರ ಕಾರು ಮಾರಾಟಗಾರ ಸಂಸ್ಥೆ ಮಾರುತಿಯೇ ಪ್ರಮುಖವಾಗಿ ನಿಂತಿದೆ. ಇದಕ್ಕೆ ಕಾರಣ, ಬಿಎಸ್6 ಅಳವಡಿಸಿಕೊಂಡ ಮೇಲೆ ನಮಗೆ ಬೆಲೆ ಏರಿಕೆ ಅನಿವಾರ್ಯ. ಹೀಗಾಗಿ, ಈ ತಿಂಗಳು ಕಳೆದ ಮೇಲೆ ಬೆಲೆ ಏರಿಕೆ ಮಾಡುತ್ತೇವೆ ಎಂದಿದೆ.
ಮಾರುತಿ ಜತೆಗೆ, ಟೊಯೋಟಾ, ಮಹೀಂದ್ರಾ ಆಂಡ್ ಮಹೀಂದ್ರಾ, ಮರ್ಸಿಡಿಸ್ ಬೆಂಜ್ ಸೇರಿದಂತೆ ಇತರೆ ಕಾರು ತಯಾರಕ ಸಂಸ್ಥೆಗಳು ಸಹ ಜನವರಿಯಲ್ಲಿ ದರ ಏರಿಕೆ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿವೆ. ಆದರೆ, ಹುಂಡೈ ಮತ್ತು ಹೋಂಡಾ ಕಂಪನಿಗಳು ಮಾತ್ರ, ಸದ್ಯಕ್ಕೆ ದರ ಏರಿಕೆಯ ಯಾವುದೇ ಯೋಜನೆ ಇಲ್ಲ. ಆದರೂ, ನಮ್ಮ ಕಾರುಗಳ ಬಿಎಸ್6 ಮಾಡೆಲ್‌ಗಳು ಮಾರುಕಟ್ಟೆಗೆ ಪ್ರವೇಶಿಸುವ ವೇಳೆಯೇ ದರವನ್ನು ಅದಕ್ಕೆ ತಕ್ಕಂತೆ ಪರಿಷ್ಕರಿಸಿ ಮಾರಾಟ ಮಾಡುತ್ತೇವೆ ಎಂದು ಹೇಳಿಕೊಂಡಿವೆ. ಫೋರ್ಡ್ ಕಂಪನಿ ಕೂಡ ದರ ಹೆಚ್ಚಳದ ಬಗ್ಗೆ ಹೇಳಿದ್ದು, ಎಷ್ಟು ಏರಿಸಬೇಕು ಎಂಬ ಬಗ್ಗೆ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದೆ.
ಆಫರ್‌ಗಳ ಸುರಿಮಳೆ: ಟೊಯೋಟಾ, ಮಹೀಂದ್ರಾ ಮತ್ತು ಮಹೀಂದ್ರಾ, ಫೋರ್ಡ್, ಹೋಂಡಾದಂಥ ಕಂಪನಿಗಳೂ ಹಲವಾರು ಆಫರ್ ನೀಡುತ್ತಿವೆ. ಇವು ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್, ಕಾರ್ಪೊರೇಟ್ ಆಫರ್, ಕನ್ಸೂಮರ್ ಆಫರ್ ನೀಡಿ ಗ್ರಾಹಕರನ್ನು ಸೆಳೆಯುತ್ತಿವೆ. ಇದಷ್ಟೇ ಅಲ್ಲ, ಬ್ಯಾಂಕ್‌ಗಳೂ ಪ್ರೊಸೆಸ್ಸಿಂಗ್ ಚಾರ್ಜ್, ಪ್ರೀ ಕ್ಲೋಸಿಂಗ್ ಚಾರ್ಜ್ ಅನ್ನು ಬಿಡುವುದು ಸೇರಿದಂತೆ, ಕಡಿಮೆ ಬಡ್ಡಿದರದ ಆಫರ್ ಅನ್ನೂ ನೀಡುತ್ತಿವೆ.
ಮಾರುತಿ ಸುಜುಕಿ: ಮಾರುತಿ ಸಂಸ್ಥೆ, ತನ್ನೆಲ್ಲಾ ಕಾರುಗಳ ಮೇಲೆ ಕನ್ಸೂಮರ್, ಎಕ್ಸ್ಚೇಂಜ್, ಕಾರ್ಪೊರೇಟ್ ಸೇರಿದಂತೆ ಹಲವಾರು ಆಫರ್‌ಗಳನ್ನು ನೀಡುತ್ತಿದೆ. ಇದು ಮಾರುತಿಯ ಆಲ್ಟೋ, ಆಲ್ಟೋ ಕೆ10, ಸ್ವಿಫ್ಟ್, ವಿಟಾರಾ ಬ್ರಿಜಾ, ಡಿಸೈರ್, ಸೆಲಾರಿಯೋ ಮತ್ತು ಇಕೋಗೂ ಅನ್ವಯವಾಗಲಿದೆ. ಕನ್ಸೂಮರ್ ಆಫರ್ 25 ಸಾವಿರದಿಂದ ಆರಂಭವಾಗಿ 40,000 ರೂ. ವರೆಗೆ ಇದೆ. ಹಾಗೆಯೇ ಎಕ್ಸ್ಚೇಂಜ್ ಆಫರ್, 15 ರಿಂದ 20 ಸಾವಿರದ ತನಕ ಇದೆ. ಕಾರ್ಪೊರೇಟ್ ಆಫರ್ 2,500 ಯಿಂದ 10 ಸಾವಿರದವರೆಗೆ ನೀಡಲಾಗಿದೆ. ಹಾಗೆಯೇ ನೆಕ್ಸಾದಲ್ಲಿ ಮಾರಾಟ ಮಾಡುವ ಎಕ್ಸ್‌ಎಲ್6, ಸಿಯಾಜ್, ಬಲೆನೋ, ಎಸ್ ಕ್ರಾಸ್, ಇಗ್ನಿಸ್‌ನಲ್ಲಿಯೂ ಆಫರ್‌ಗಳನ್ನು ಘೋಷಿಸಲಾಗಿದೆ.
ಹುಂಡೈ: ಹುಂಡೈ ಕೂಡ ಆಫರ್ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸ್ಯಾಂಟ್ರೋಗೆ 50 ಸಾವಿರ, ಗ್ರಾಂಡ್ ಐ10ಗೆ 75 ಸಾವಿರ, ಗ್ರಾಂಡ್ ಐ10 ನಿಯೋಸ್ ಗೆ 20 ಸಾವಿರ, ಎಲೈಟ್ ಟಿ20ಗೆ 65 ಸಾವಿರ, ಎಕ್ಸೆಂಟ್‌ಗೆ 95 ಸಾವಿರ, ಕ್ರೀಟಾಗೆ 95 ಸಾವಿರ, ವರ್ನಾಗೆ 60 ಸಾವಿರ, ಟುಸ್ಕಾನ್‌ಗೆ 2 ಲಕ್ಷದವರೆಗೆ ಗ್ರಾಹಕರಿಗೆ ಪ್ರಯೋಜನಗಳನ್ನು ಕಲ್ಪಿಸಿಕೊಡಲಾಗಿದೆ. ಈ ಆಫರ್‌ಗಳು ವಿವಿಧ ಮಾಡೆಲ್‌ಗಳಲ್ಲಿ ಬದಲಾಗುತ್ತದೆ ಎಂದು ಹುಂಡೈ ಹೇಳಿಕೊಂಡಿದೆ.
ಟಾಟಾ: ಟಾಟಾ ಕಂಪನಿ ಕೂಡ ಡಿಸೆಂಬರ್‌ಗಾಗಿ ಹಲವಾರು ಆಫರ್ ಬಿಟ್ಟಿದೆ. ಟಿಯಾಗೋದಿಂದ ಹಿಡಿದು, ನಿಕ್ಸಾನ್, ಟಾಟಾ ಹ್ಯಾರಿಯರ್, ಹೆಕ್ಸಾದ ವರೆಗೆ ಹಲವಾರು ರೀತಿಯ ಆಫರ್‌ಗಳನ್ನು ನೀಡುತ್ತಿದೆ. ಎಕ್ಸ್‌ಜೇಂಜ್ ಆಫರ್, ಕನ್ಸೂಮರ್ ಆಫರ್, ಕಾರ್ಪೊರೆಟ್ ಆಫರ್ ನೀಡುತ್ತಿದೆ. ಇದು 15 ಸಾವಿರದಿಂದ ಹಿಡಿದು, 50 ಸಾವಿರ ರೂ.ಗಳ ವರೆಗೂ ಆಫರ್ ಸಿಗುತ್ತದೆ. ಕೆಲವು ವೆಬ್‌ಸೈಟ್‌ಗಳ ಪ್ರಕಾರ, 15 ಸಾವಿರದಿಂದ ಡಿಸ್ಕೌಂಟ್ ಆರಂಭವಾಗಿ, 50 ಸಾವಿರ ರೂ.ಗೂ ಹೆಚ್ಚು ನೀಡಲಾಗುತ್ತಿದೆ. ಹಾಗೆಯೇ, ವಾರೆಂಟಿಯಂಥ ಆಫರ್‌ಗಳನ್ನೂ ನೀಡಲಾಗುತ್ತಿದೆ.
ಹುಂಡೈ ವೆನ್ಯೂ 1,00,000 ಕಾರುಗಳ ಬುಕ್ಕಿಂಗ್: ಆಟೋ ಮೊಬೈಲ್ ಇಂಡಸ್ಟ್ರಿ ಕುಸಿತ ಕಾಣುತ್ತಿದೆ ಎಂಬ ಆತಂಕಗಳ ನಡುವೆಯೇ ದೇಶದ ಪ್ರಮುಖ ಕಾರು ಮಾರಾಟಗಾರ ಕಂಪನಿ ಹುಂಡೈನ ವೆನ್ಯೂ ಕಾರು, 2019ರಲ್ಲಿ 1,00000 ಕಾರುಗಳ ಮಾರಾಟದ ಸನಿಹಕ್ಕೆ ಬಂದು ನಿಂತಿದೆ. ಈ ವರ್ಷದ ಮೇ ತಿಂಗಳಲ್ಲಿ ಈ ಕಾರನ್ನು ಲಾಂಚ್ ಮಾಡಲಾಗಿದ್ದು, ಅಲ್ಲಿಂದ ನವೆಂಬರ್ ವೇಳೆಗೆ 90 ಸಾವಿರ ಕಾರುಗಳ ಬುಕ್ಕಿಂಗ್ ಆಗಿದೆ. ಅತ್ಯಾಧುನಿಕ ತಾಂತ್ರಿಕತೆ ಹೊಂದಿರುವ ಈ ಕಾರನ್ನು ಜನರೂ ಇಷ್ಟಪಡುತ್ತಿದ್ದಾರೆ ಎಂದು ಹುಂಡೈ ಕಂಪನಿಯ ಎಸ್.ಎಸ್.ಕಿಮ್ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ, ಇದು ಮೇಡ್ ಇನ್ ಇಂಡಿಯಾ ಕಾರಾಗಿದ್ದು, ಇದನ್ನು ದಕ್ಷಿಣ ಆಫ್ರಿಕಾಗೂ ರಫ್ತು ಮಾಡಲು ಆರಂಭಿಸಲಾಗಿದೆ. ಡಿ.2 ರಂದು ಚೆನ್ನೈ ಬಂದರಿನಿಂದ 1400 ಕಾರುಗಳನ್ನು ಕಳುಹಿಸಲಾಗಿದೆ.
* ಸೋಮಶೇಖರ ಸಿ. ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.