ನಿಮ್ಮ ಆರೋಗ್ಯದ ಸಿದ್ದಿಗೆ ಇವೆಲ್ಲ ತಿಳಿದಿರಬೇಕು…
Team Udayavani, Sep 11, 2017, 7:50 AM IST
ಮಾನವನ ಸಂಬಂಧವಾಗಿ ಅವನ ಚೈತನ್ಯ ಲವಲವಿಕೆ ಉತ್ಸಾಹಗಳೆಲ್ಲ ವಾಸ್ತುವಿನ ಆವರಣದಲ್ಲಿ ತಮ್ಮ ಶಕ್ತಿ ಅಥವಾ
ದೌರ್ಬಲ್ಯಗಳನ್ನು ಪಡೆಯುತ್ತದೆ. ಇಡೀ ವಿಶ್ವವು ಒಂದು ಶಕ್ತಿಯ ಸಕಾರಾತ್ಮಕ, ನಕಾರಾತ್ಮಕ ಹೊಯ್ದಾಟಗಳ ನಡುವೆ
ಅಳಿವು ಉಳಿವುಗಳನ್ನು ರೂಪಿಸಿಕೊಳ್ಳುತ್ತ ಇರುತ್ತದೆ.
ಈಗಾಗಲೇ ಹಲವು ವಾಸ್ತು ವಿಚಾರಗಳನ್ನು ದಿಕ್ಕುಗಳು ಹಾಗೂ ಪಂಚಭೂತಗಳ ನೆಲೆಯಲ್ಲಿ ಈ ಅಂಕಣದಲ್ಲಿ
ವಿವರಿಸಲಾಗಿದೆ. ಮಾನವನ ಸಂಬಂಧವಾಗಿ ಅವನ ಚೈತನ್ಯ ಲವಲವಿಕೆ ಉತ್ಸಾಹಗಳೆಲ್ಲ ವಾಸ್ತುವಿನ ಆವರಣದಲ್ಲಿ ತಮ್ಮ ಶಕ್ತಿ ಅಥವಾ ದೌರ್ಬಲ್ಯಗಳನ್ನು ಪಡೆಯುತ್ತದೆ. ಇಡೀ ವಿಶ್ವವು ಒಂದು ಶಕ್ತಿಯ ಸಕಾರಾತ್ಮಕ, ನಕಾರಾತ್ಮಕ ಹೊಯ್ದಾಟಗಳ ನಡುವೆ ಅಳಿವು ಉಳಿವುಗಳನ್ನು ರೂಪಿಸಿಕೊಳ್ಳುತ್ತ ಇರುತ್ತದೆ. ಹೀಗಾಗಿ ವಿಶ್ವವೇ ತನ್ನ ಅಸ್ತಿತ್ವಕ್ಕಾಗಿ ನಿರಂತರವಾಗಿ ತನ್ನನ್ನು ಕಸನಗೊಳಿಸಿಕೊಳ್ಳುತ್ತಿರುವಾಗ ವಿಶ್ವದ ಭಾಗವೇ ಆದ ನಾವು ಮನುಷ್ಯರು ಸಾಧಕ ಬಾಧಕಗಳ ನಡುವೆ ನಮ್ಮನ್ನು ಸಂರಕ್ಷಿಸಿಕೊಳ್ಳಬೇಕು. ಇದು ಅನಿವಾರ್ಯ. ಉತ್ತರದಿಕ್ಕನ್ನು ನೀವು ಮಹತ್ವದ ಅಧ್ಯಯನದ ಸಂದರ್ಭದಲ್ಲಿ, ಪರಿಣಾಮಕಾರಿಯಾದ ಬರಹದ ಸಮಯದಲ್ಲಿ ಅಥವಾ ಏನೋ ಹೊಸದನ್ನು ಸಂಶೋಧಿಸುವ ಸಮಯವೇ ಇರಲಿ ಮುಖ ಮಾಡಿರುವುದು ಸೂಕ್ತ. ಪೂರ್ವವೂ ಕೂಡಾ ಇದಕ್ಕೆ ಸೂಕ್ತ. ನಿಮ್ಮ ಬಿಸಿನೆಸ್ ಅಥವಾ ಇನ್ನೇನೆ ವ್ಯವಹಾರಿಕ ವಿಚಾರಗಳನ್ನು ನಿಮ್ಮ ಗ್ರಾಹಕರೊಡನೆ ಮಾತನಾಡುವಾಗಲೂ ಇಷ್ಟಾರ್ಥ ಸಿದಿಟಛಿಗಾಗಿ ಉತ್ತರ ಅಥವಾ ಪೂರ್ವ ದಿಕ್ಕುಗಳನ್ನು ಗಮನಿಸಿ ಮುಖ ಮಾಡಿಯೇ ಮಾತಾಡಬೇಕು.
ಬೆಳಗಿನ ದಿಕ್ಕು ಪೂರ್ವವಾದುದರಿಂದ ಉತ್ತರದಲ್ಲಿ ಕ್ರಿಯಾಶೀಲತೆಯನ್ನು ಚಿಮ್ಮಿಸುವ ಸ್ಪಂದನವಿರುವುದರಿಂದ ಈ ದಿಕ್ಕುಗಳು ಸಕಾರಾತ್ಮಕ ಫಲಿತಾಂಶಗಳಿಗೆ ಒಳ್ಳೆಯದು ಎಂದೇ ಅನ್ನಬೇಕು. ಯೋಗೀಶ್ವರ ಶಕ್ತಿಯ ಸಂಪನ್ನತೆಯು
ಒಗ್ಗೂಡಿ ಬರಲು ಉತ್ತರ ಹಾಗೂ ಪೂರ್ವದಿಕ್ಕುಗಳ ಫಲವಂತಿಕೆ ಉತ್ತಮವಾಗಿದೆ.
ಉತ್ತರ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡಬಾರದು.
ಕುಡಿಯುವುದಕ್ಕೆ ಕೂಡ ಉತ್ತರ ದಿಕ್ಕು ನಿಷೇಧ ಎಂಬುದನ್ನು ಗಮನಿಸಿ. ಪೂರ್ವದತ್ತ ಮುಖ ಮಾಡುವುದು ಉತ್ತಮ
ಆಹಾರ ಸಂವರ್ಧನ ತಯಾರಿಕಾ ಪ್ರಗತಿ ಸಾಫಲ್ಯ ರುಚಿ ಪ್ರಸನ್ನತೆಗಳೆಲ್ಲ ಪೂರ್ವದಿಕ್ಕಿನ ಕಡೆಯಿಂದಲೇ ಲಭ್ಯ. ಉತ್ತಮ
ಜೀರ್ಣಕ್ರಿಯೆ ಆರೋಗ್ಯದ ಸಂವರ್ಧನೆಗಳಿಲ್ಲ ಇದು ಸೂಕ್ತ. ಒಲೆಯೊ, ಗ್ಯಾಸ್ ಬರ್ನರ್ ಇತ್ಯಾದಿಗಳೆಲ್ಲ ಪೂರ್ವಕ್ಕೆ
ಸಂಯೋಜನೆಗೊಂಡ ಆಗ್ನೇಯ ದಿಕ್ಕಿನಲ್ಲಿ ಸ್ಥಿರಗೊಳ್ಳಬೇಕು. ಈ ವಿಚಾರವನ್ನು ಅಳತೆಬದಟಛಿವಾಗಿ ರೂಪಗೊಳಿಸಲು
ಮನೆಯ ಖಾಲಿ ಇರುವ ಜಾಗ ಉತ್ತರ ಮತ್ತು ಪೂರ್ವ ಭಾಗದಲ್ಲಿ ವಿಸ್ತರಿಸಿಕೊಂಡಿರಲಿ. ಹೆಚ್ಚಿನ ಸೂರ್ಯ ಪ್ರಕಾಶ ಪೂರ್ವ ದಿಂದ ಒಳಹೊಮ್ಮುವಂತಿದ್ದು, ಶಾಖವು ಸೂಕ್ತವಾಗಿ ಹೊರ ಹೋಗುವಂತೆ ನೈಸರ್ಗಿಕ ವಾತಾಯನ ವ್ಯವಸ್ಥೆ ಸೂಕ್ತವಾಗಿರಬೇಕು. ದೈಹಿಕ ಸಮೃದಿಟಛಿಗೆ, ಆರೋಗ್ಯ ಚಟುವಟಿಕೆಗಳ ಗಟ್ಟಿತನಗಳಿಗೆ ಇದರಿಂದ ದಾರಿ ಲಭ್ಯ.
ಮಾನಸಿಕ ನೆಮ್ಮದಿಗೂ ಇದರಿಂದ ದಾರಿ ಸಾಧ್ಯ. ಮಲಗುವ ಮನೆಯಲ್ಲಿ ಎಲೆಕ್ಟ್ರಾನಿಕ್ ಗೂಡ್ಸ್ ಬೇಡ. ಇದ್ದರೂ ಒಂದು
ಮಿತಿ ಇರಲಿ. ಮಿತಿಮೀರಿದ ಉಪಯೋಗವೇನೇ ಇದ್ದರೂ ನಿಯಂತ್ರಿಸಿ. ಹಾಸಿಗೆಯ ಎದುರಿಗೆ ಕನ್ನಡಿಯನ್ನು ನಿಷೇಧಿಸಿ.
ಇದ್ದರೂ ಕನ್ನಡಿಯನ್ನು ರಾತ್ರಿ ಬಟ್ಟೆಯಿಂದ ಮುಚ್ಚಿಡಬೇಕು. ಮನೆಯ ಎಲ್ಲಾ ಗೋಡೆಗಳಿಗೂ ಒಂದೇ ಬಣ್ಣದ ಅಲಂಕಾರ
ಬೇಡ. ತುಳಸಿ ಗಿಡಗಳು ಮನೆಯ ವಾಯು ಶುದಿಟಛಿಗಾಗಿ ಈಶಾನ್ಯ ದಿಕ್ಕಿನಲ್ಲಿ ಬೆಳೆದಿರಲಿ. ಮನೆಯಲ್ಲಿ ಭಾರಿ
ತೊಲೆಗಳು ಅಚ್ಚು ಅಥವಾ ಅಡ್ಡಪಟ್ಟಿಗಳಿರುವ ರೂμನ ಕೆಳಗೆ ಮಲಗಬೇಡಿ. ಭಯಾನಕ ಕನಸುಗಳಿಗೆ, ಖನ್ನತೆಗಳಿಗೆ ಇದರಿಂದ ದಾರಿಯಾಗುತ್ತದೆ. ಇದೇ ರೀತಿ ಲೋಹದ ಮಂಚಗಳು ಹಾಸಿಗೆ ಹಾಸಲು ಉಪಯೋಗಿಸಬೇಡಿ. ಹೃದಯ ವ್ಯಾಧಿಗೆ ಇದರಿಂದ ದಾರಿಯಾಗುತ್ತದೆ. ಮೆದುಳಿಗೆ ಬಾಧೆ. ಮಂಚಗಳು ಕಟ್ಟಿಗೆಯದೇ ಇರಲಿ.
ಈಶಾನ್ಯದ ಕಡೆ ಗರ್ಭಣಿಯರು ಮಲಗಿರಲಿ. ಉತ್ತರದ ಕಡೆ ತಲೆ ಇಡುವುದು ಬೇಡ. ಅವರೇ ಎಂದೇ ಅಲ್ಲ. ಯಾರಿಗೂ ಉತ್ತರ ದಿಕ್ಕಿನತ್ತ ಮಲಗುವುದು ಬೇಡ. ಕಾಂತೀಯವಾದ ಉದ್ವಿಗ್ನ ತರಂಗಗಳು ಅಶಾಂತಿಗೆ, ಅಪ್ರಸನ್ನತೆಗೆ ಉದ್ವಿಗ್ನತೆ ತುಂಬಿದ ಮನೋಸ್ಥಿತಿಗೆ ಕಾರಣವಾಗುತ್ತದೆ. ಉತ್ತರ ಮತ್ತು ಪೂರ್ವ ದಿಕ್ಕಿನ ಕಿಟಕಿಗಳು ತೆರೆದಿರಲಿ. ಹೊರಗಿನ ಜನ ಕೈ ಹಾಕದಂತೆ ಉತ್ತಮ ಜಾಲರಿ ಸಂಯೋಜನೆಗೊಂಡಿರಲಿ.
– ಅನಂತಶಾಸ್ತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.