ಯೂಟ್ಯೂಬ್ ಲರ್ನಿಂಗ್
Team Udayavani, Sep 9, 2019, 5:15 AM IST
ಸಾಂಬಾರಿಗೆ ಉಪ್ಪು ಎಷ್ಟು ಹಾಕಬೇಕು ಎನ್ನುವುದರಿಂದ ಮೊದಲುಗೊಂಡು, ಟೈ ಕಟ್ಟುವುದು ಮತ್ತಿತರ ಸಣ್ಣಪುಟ್ಟ ಸಂಗತಿಗಳನ್ನೂ ಯೂಟ್ಯೂಬ್ ಜಾಲತಾಣಕ್ಕೆ ಭೇಟಿ ನೀಡಿ ತಿಳಿದುಕೊಳ್ಳುವ ಜಮಾನಾ ಇದು. ಪ್ರತಿನಿತ್ಯ ಜಗತ್ತಿನಾದ್ಯಂತ ಸಾವಿರಾರು ವಿಡಿಯೋಗಳು ಯೂಟ್ಯೂಬ್‌ಗ ಅಪ್‌ಲೋಡ್ ಆಗುತ್ತವೆ. ಜೀವಮಾನವಿಡೀ ಕೂತು ನೋಡಿದರೂ ಮುಗಿಯದಷ್ಟು ವಿಡಿಯೋಗಳು ಯೂಟ್ಯೂಬ್‌ನಲ್ಲಿವೆ.
ಈಗಿನ ಟ್ರೆಂಡ್ ಎಂದರೆ ಶೈಕ್ಷಣಿಕ ಕ್ಷೇತ್ರಕ್ಕೂ ಯೂಟ್ಯೂಬ್ ಕಾಣಿಕೆ ಸಲ್ಲಿಸುತ್ತಿರುವುದು. ವಿದ್ಯಾರ್ಥಿಗಳು, ವೃತ್ತಿಪರರು ಯೂಟ್ಯೂಬ್‌ನಲ್ಲಿ ಕಲಿಕಾ ವಿಡಿಯೋಗಳನ್ನು ನೋಡಿ ಅಭ್ಯಸಿಸುತ್ತಿದ್ದಾರೆ. ಹೀಗಾಗಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬಗ್ಗೆ ಯೂಟ್ಯೂಬ್ ಸಂಸ್ಥೆ ಎಂದಿನಿಂದಲೂ ತಲೆ ಕೆಡಿಸಿಕೊಂಡಿದೆ. “ಯೂಟ್ಯೂಬ್ ಲರ್ನಿಂಗ್’ ಎನ್ನುವ ಒಂದು ವಿಭಾಗವೇ ಅಲ್ಲಿ ಕೆಲಸ ನಿರ್ವಹಿಸುತ್ತಿದೆ. ಅದು, ಶೈಕ್ಷಣಿಕ ವಿಡಿಯೋಗಳ ತಯಾರಕರನ್ನು ಪ್ರೋತ್ಸಾಹಿಸುತ್ತಲೇ ಬಂದಿದೆ.
ಇತ್ತೀಚಿಗಷ್ಟೆ ಅಂಥ ವಿಡಿಯೋ ತಯಾರಕರ ಸಮ್ಮೇಳನವನ್ನು ಗೂಗಲ್ ಆಯೋಜಿಸಿತ್ತು. ಇಂಗ್ಲೀಷ್ ಸ್ಪೀಕಿಂಗ್, ಪರಿಸರ ವಿಜ್ಞಾನ, ರಾಜಕೀಯ, ಗಣಿತ, ಜೆನೆಟಿಕ್ಸ್, ರಸಾಯನಶಾಸ್ತ್ರ ವಿಷಯಗಳ ಕುರಿತಾಗಿ ವಿಡಿಯೋಗಳನ್ನು ತಯಾರಿಸುವ 200 ಮಂದಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸಿದ 8 ಜನರನ್ನು ಆರಿಸಲಾಯಿತು. ಅವರಿಗೆ ಒಟ್ಟು 2 ಕೋಟಿಯಷ್ಟು ಮೊತ್ತವನ್ನು ಸಹಾಯಾರ್ಥವಾಗಿ ನೀಡಲಾಯಿತು.
ಸಹಾಯ ಪಡೆದ ಆ 8 ಯೂಟ್ಯೂಬ್ ಚಾನೆಲ್‌ಗಳು ಇವು-
ExamFear
Education Hindi,
Learn Engineering,
Don’t Memorise,
Study IQ Education,
D’art of Science,
Learnex – English
GetSetFlySCIENCE
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.