10Th ಕ್ರಾಸ್: ಎಸ್ಸೆಸ್ಸೆಲ್ಸಿ, ಪಿಯುಸಿ ಆದವರಿಗೆ ಸಿಹಿಕರೆ
Team Udayavani, Jan 9, 2018, 12:16 PM IST
ಅಯ್ಯೋ ನಾನು ಓದಿರೋದು ಕೇವಲ ಎಸ್ಸೆಸ್ಸೆಲ್ಸಿ, ಪಿಯುಸಿ ಮಾತ್ರ. ಎಲ್ಲೇ ಇಂಟರ್‌ವ್ಯೂಗೆ ಹೋದರೂ, ಡಿಗ್ರಿ ಸರ್ಟಿಫಿಕೇಟ್ ಕೇಳ್ತಾರೆ. ಕೈಯಲ್ಲೊಂದು ಡಿಗ್ರಿ ಇದ್ದಿದ್ದರೆ ಒಳ್ಳೆ ಕೆಲಸನಾದ್ರೂ ಸಿಗ್ತಾಯಿತ್ತೇನೋ ಎಂದು ಹಲುಬುವವರು ಬಹಳಷ್ಟಿದ್ದಾರೆ. ಆದರೆ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಓದಿದವರಿಗೂ ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳಿವೆ. ಹೊಸವರ್ಷದ ಹೊಸ್ತಿಲಲ್ಲಿ ಇಂಥವರಿಗಾಗಿಯೇ ಬಹಳಷ್ಟು ಹುದ್ದೆಗಳು ಖಾಲಿಯಿದ್ದು, ಅರ್ಜಿ ಆಹ್ವಾನಿಸಲಾಗಿದೆ…
ರಾಜು ಮನೆಗೆ ಹಿರಿಯ ಮಗ. ಆತನ ನಂತರ ಒಬ್ಬ ತಮ್ಮ, ತಂಗಿ. ಅವನು ಒಂಬತ್ತನೇ ತರಗತಿಯಲ್ಲಿದ್ದಾಗ, ಮನೆಯ ಆಧಾರಸ್ತಂಭವಾಗಿದ್ದ ತಂದೆ ತೀರಿಹೋದರು. ಅನಿವಾರ್ಯವಾಗಿ ಅಮ್ಮ, ತಮ್ಮ, ತಂಗಿಯ ಜವಾಬ್ದಾರಿ ಹೊತ್ತುಕೊಂಡ ರಾಜುವಿನ ಓದು ಎಸ್ಸೆಸ್ಸೆಲ್ಸಿಗೇ ನಿಂತು ಹೋಯ್ತು.
ಚಂದ್ರುವಿಗೆ ಓದಿನಲ್ಲಿ ಆಸಕ್ತಿ ಕಡಿಮೆ. ಕಷ್ಟಪಟ್ಟು ಪಿಯುಸಿ ಪಾಸಾದ ಅವನು ಮುಂದೆ ಓದಲು ಮನಸ್ಸು ಮಾಡಲೇ ಇಲ್ಲ. ಈಗ ಎಲ್ಲಿ ಇಂಟರ್‌ವ್ಯೂಗೆ ಹೋದರೂ ಡಿಗ್ರಿ ಸರ್ಟಿಫಿಕೇಟ್ ತನ್ನಿ ಅಂತ ಕೇಳ್ತಾರೆ. ಛೇ, ಓದೋ ಸಮಯದಲ್ಲಿ ಓದಬೇಕಿತ್ತು ಅಂತ ದಿನಕ್ಕೆ ಹತ್ತು ಬಾರಿ ಹೇಳಿಕೊಳ್ಳುತ್ತಾನೆ.
ಇದು ಕೇವಲ ಇಬ್ಬರ ಪರಿಸ್ಥಿತಿಯಲ್ಲ. ರಾಜು, ಚಂದ್ರುವಿನಂಥ ಸಾವಿರಾರು ಜನರು, ಜಾಸ್ತಿ ಓದದೆ, ಒಳ್ಳೆಯ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಇಂಥವರಿಗಾಗಿ ಅವಕಾಶದ ಬಾಗಿಲು ತೆಗೆದಿದೆ. ಪದವಿ ಇಲ್ಲದಿದ್ದರೂ ಪರವಾಗಿಲ್ಲ, ದೈಹಿಕ ಸಾಮರ್ಥ್ಯ, ಕಂಪ್ಯೂಟರ್ ಕೌಶಲ್ಯ, ಜೊತೆಗೊಂದಿಷ್ಟು ಭಾಷಾಜ್ಞಾನ ಇದ್ದರೆ ಸಾಕು. ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ, ಸಿಐಆರ್‌ಎಫ್ ಹಾಗೂ ನಾರ್ತನ್ ರೈಲ್ವೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು.
ಇಂಡೋ- ಟಿಬೆಟಿಯನ್ ಬಾರ್ಡರ್- 241 ಹುದ್ದೆಗಳು
ಇಂಡೋ- ಟಿಬೆಟ್ ಬಾರ್ಡರ್‌ನಲ್ಲಿ 60 ಹೆಡ್ ಕಾನ್‌ಸ್ಟೆಬಲ್ ಮತ್ತು 181 ಕಾನ್‌ಸ್ಟೆಬಲ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಹೆಡ್ ಕಾನ್‌ಸ್ಟೆಬಲ್ ಹುದ್ದೆಗೆ ಪಿಯುಸಿ, ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಮತ್ತು ಕಾನ್‌ಸ್ಟೆಬಲ್ ಹುದ್ದೆ ಪಡೆಯಲು ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿರಬೇಕು. ಜನವರಿ 31ಕ್ಕೆ ಸಲ್ಲುವಂತೆ 18 ರಿಂದ 25ವರ್ಷ ವಯೋಮಿತಿಯವರಾಗಿರಬೇಕು. ಪರಿಶಿಷ್ಟರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಹೆಡ್ ಕಾನ್‌ಸ್ಟೆಬಲ್‌ಗೆ 25,500 ರೂ. ಇಂದ 81,100 ರೂ. ಮತ್ತು ಕಾನ್‌ಸ್ಟೆಬಲ್ ಹುದ್ದೆಗೆ 21,700 ರೂ. ಇಂದ 69,100 ರೂ. ವೇತನವನ್ನು ನಿಗದಿ ಮಾಡಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜ.31 ಕೊನೆದಿನ.
ಹೆಚ್ಚಿನ ಮಾಹಿತಿಗೆ: goo.gl/Z6FMDx
ಸಿಐಆರ್‌ಎಫ್- 400ಕ್ಕೂ ಹೆಚ್ಚು ಹುದ್ದೆಗಳು
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್‌ನಲ್ಲಿ ಕಾನ್‌ಸ್ಟೆಬಲ್/ ಫೈರ್ 332 ಹುದ್ದೆಗಳಿಗೆ ದೇಶಾದ್ಯಂತ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ್ದು, 18ರಿಂದ 23 ವರ್ಷ ವಯೋಮಿತಿಯವರಾಗಿರಬೇಕು. ಪರಿಶಿಷ್ಟರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 11.
ಹೆಚ್ಚಿನ ಮಾಹಿತಿಗೆ: goo.gl/ajtyLb
ಸಿಆರ್‌ಪಿಎಫ್ನಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್ಸ್ಪೆಕ್ಟರ್ 31 ಮತ್ತು ಹೆಡ್ ಕಾನ್‌ಸ್ಟೆಬಲ್ 87 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 20 ರಿಂದ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಪರಿಶಿಷ್ಟರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಅಸಿಸ್ಟೆಂಟ್ ಸಬ್ ಇನ್ಸ್…ಸ್ಪೆಕ್ಟರ್ ಹುದ್ದೆಗೆ ಪದವಿ ತತ್ಸಮಾನ ಮತ್ತು ಹೆಡ್ ಕಾನ್‌ಸ್ಟೆಬಲ್ ಹುದ್ದೆಗೆ ಪಿಯುಸಿ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಕೆಗೆ ಜನವರಿ 25 ಕೊನೆಯದಿನ.
ಮಾಹಿತಿಗೆ: : goo.gl/PA7Tq8
ನಾರ್ದನ್ ರೈಲ್ವೆ- 3,162 ಅಪ್ರಂಟಿಸ್ ಹುದ್ದೆಗಳು
ಉತ್ತರ ರೈಲ್ವೆಯಲ್ಲಿ 3,162 ಅಪ್ರಂಟಿಸ್ ಹುದ್ದೆಗಳಿಗಾಗಿ ದೇಶಾದ್ಯಂತ ಅರ್ಜಿ ಆಹ್ವಾನಿಸಲಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆ ಆದವರು ದೆಹಲಿಯಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಅರ್ಜಿ ಸಲ್ಲಿಕೆಗೆ ಎಸ್ಸೆಸ್ಸೆಲ್ಸಿ, ಪಿಯುಸಿ ಜೊತೆಗೆ ತತ್ಸಮಾನ ವಿದ್ಯಾರ್ಹತೆ, ಐಟಿಐ ಮಾಡಿದವರಿಗೆ ಅವಕಾಶವಿದೆ. 16 ವರ್ಷದಿಂದ 24 ವರ್ಷ ವಯೋಮಿತಿ ಹೊಂದಿದ್ದು, ದೈಹಿಕ ಸಾಮರ್ಥ್ಯ ಹೊಂದಿದ ಅಭ್ಯರ್ಥಿಯನ್ನು ಮೆರಿಟ್ ಮತ್ತು ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಜನವರಿ 27 ಕೊನೆಯ ದಿನ. ಮಾಹಿತಿಗೆ: goo.gl/zBc9uz
ಅನಂತನಾಗ್ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.