2 ಸವಾಲಿನ ಕೆಲಸ…ಜೈಲರ್ ವಾರ್ಡರ್
Team Udayavani, Jan 2, 2018, 9:33 AM IST
ಯಾವ್ಯಾವುದೋ ತಪ್ಪು ಮಾಡಿ ಜೈಲು ಪಾಲಾಗುವ ಮಂದಿಯನ್ನು ಕಾಯುವ, ಅವರು ಮತ್ತೆಂದೂ ಕ್ರೈಂಗೆ ಕೈ ಹಾಕದಂತೆ ಬುದ್ಧಿ ಹೇಳುವ ಗುರುತರ ಜವಾಬ್ದಾರಿ ಜೈಲರ್‌ಗಳದ್ದು. ಜೈಲಿನ ಮುಖ್ಯಾಧಿಕಾರಿ ಎಂದೇ ಕರೆಸಿಕೊಳ್ಳುವ ಜೈಲರ್‌ನ ನಂತರದ ಸ್ಥಾನ ವಾರ್ಡರ್‌ಗಳದ್ದಾಗಿರುತ್ತದೆ. ಸಮಾಜದ ಕಣ್ಣಲ್ಲಿ ಕೆಟ್ಟವರು ಅನ್ನಿಸಿಕೊಂಡ ಮಂದಿಯನ್ನು ಕಾಯುವುದು ಒಂದು ರೀತಿಯಲ್ಲಿ ಸವಾಲಿನ ಕೆಲಸ. ಸರ್ಕಾರಿ ನೌಕರಿ ಆಗಿರುವುದರಿಂದ ಈ ಸವಾಲಿನ ಕೆಲಸ ಪಡೆಯಲು ವಿಪರೀತ ಎನ್ನುವಷ್ಟರ ಮಟ್ಟಿಗೆ ಪೈಪೋಟಿ ಇದೆ.
“ಪೊಲೀಸ್ ಕೆಲಸ ಸಿಗದಿದ್ರೆ ಬೇಡ, ಅದಕ್ಕಿಂತ ದೊಡ್ಡ ಗ್ರೇಡ್ ಇರುವ ಜೈಲರ್ ಕೆಲಸಕ್ಕೇ ಟ್ರೈ ಮಾಡ್ತೀನಿ…’ ಕೆಲಸದ ಬೇಟೆಯಲ್ಲಿರುವ ಹಲವರು ಹೀಗೆ ಹೇಳುವುದುಂಟು. ಒಂದು ವೇಳೆ ಜೈಲರ್ ಹುದ್ದೆ ಸಿಗದಿದ್ರೆ ವಾರ್ಡರ್ ಹುದ್ದೆಯಾದ್ರೂ ಸಿಗಲಿ ಎಂದು ಹಂಬಲಿಸುವ ಜನರೂ ಇದ್ದಾರೆ. ನಿಜ ಹೇಳಬೇಕೆಂದರೆ, ತುಂಬಾ ಜವಾಬ್ದಾರಿಯುತ ಹುದ್ದೆಗಳಿವು. ಕೋಪದ ಹುಚ್ಚಿನಲ್ಲಿ, ದ್ವೇಷ ಸಾಧನೆಯ ಅಮಲಿನಲ್ಲಿ ಕ್ರೈಂ ಮಾಡಿ ಜೈಲು ಪಾಲಾಗುವ ಮಂದಿಯನ್ನು ಕಾಯುವುದು, ಅವರು ಮತ್ತೆ ಅಪರಾಧಿ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ತಡೆಯುವುದು ಸುಲಭದ ಮಾತಲ್ಲ. ಅಂಥದ್ದೊಂದು ಗುರುತರ ಜವಾಬ್ದಾರಿಯ ಹುದ್ದೆಗೆ ಸೇರಿದವರೇ ಆನಂತರದಲ್ಲಿ, ಕೈದಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವರಲ್ಲಿ ಆಗಿರುವ ಬದಲಾವಣೆ ಕುರಿತು ಮಾಹಿತಿ ನೀಡುತ್ತಾರೆ. ಈ ಮಾಹಿತಿಯನ್ನು ಆಧರಿಸಿಯೇ, “ಸನ್ನಡತೆಯ ಆಧಾರದ ಮೇಲೆ’ ಕೈದಿಗಳ ಬಿಡುಗಡೆ ಮಾಡಲಾಗುತ್ತದೆ. ಇಂಥ ಹಿನ್ನೆಲೆಯ ಜೈಲರ್ ಹಾಗೂ ವಾರ್ಡರ್ ಹುದ್ದೆಗಳಿಗೆ ಇದೀಗ ಅರ್ಜಿ ಕರೆಯಲಾಗಿದೆ.
ಹುದ್ದೆಗಳು:
ಜೈಲರ್ – 32
ವಾರ್ಡರ್ – 1070
ಒಟ್ಟು – 1102
ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾತಿ ಮತ್ತು ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದ, ಮೂಲವೃಂದಕ್ಕೆ ಅನುಗುಣವಾಗಿ ಈ ಹುದ್ದೆಗಳನ್ನು ವಿಂಗಡನೆ ಮಾಡಲಾಗಿದೆ.
ಅರ್ಹತೆ:
ಜೈಲರ್ ಹುದ್ದೆಗೆ ಕನಿಷ್ಠ ಯಾವುದಾದರೂ ಬ್ಯಾಚುಲರ್ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ. ವಾರ್ಡರ್ ಹುದ್ದೆಗೆ ಎಸ್ಸೆಸ್ಸೆಲ್ಸಿ, ತತ್ಸಮಾನ ವಿದ್ಯಾರ್ಹತೆ ಅಗತ್ಯ. ಅರ್ಜಿ ಸಲ್ಲಿಕೆಗೆ 2018, ಜನವರಿ 9ಕ್ಕೆ ಅನುಗುಣವಾಗಿ ಕನಿಷ್ಠ ವರ್ಷ 20 ವರ್ಷ ಆಗಿರಬೇಕು. ಪರಿಶಿಷ್ಟರಿಗೆ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಜೈಲರ್ ಹುದ್ದೆಗಳಿಗೆ 17,650 ರೂ. ನಿಂದ 32,000 ರೂ. ಮತ್ತು ವಾರ್ಡರ್ ಹುದ್ದೆಗಳಿಗೆ 11,600 ರೂ. ನಿಂದ 21,000 ರೂ.ವರೆಗೆ ವೇತನ ಶ್ರೇಣಿಯನ್ನು ನಿಗದಿ ಪಡಿಸಲಾಗಿದೆ.
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಲಿಖೀತ ಪರೀಕ್ಷೆ, ದೇಹಧಾಡ್ಯì ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
*ಲಿಖೀತ ಪರೀಕ್ಷೆ:
ಜೈಲರ್ ಹುದ್ದೆಗೆ ಸಂಬಂಧಿಸಿದಂತೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ 100 ಅಂಕಗಳಿಗೆ ಒಂದೂವರೆ ಗಂಟೆಯ ಆಬೆjಕ್ಟಿವ್ ಮಾದರಿಯ ಪ್ರಶ್ನೆಗಳಿಗೆ ಉತ್ತರಿಸಬೇಕು.
*ದೇಹಧಾರ್ಡ್ಯ:
ಪುರುಷ ಅಭ್ಯರ್ಥಿಗಳ ಎತ್ತರ 168 ಸೆಂ.ಮೀ ಮತ್ತು ಪೂರ್ಣ ಉಸಿರೆಳೆದಾಗ ಎದೆಯ ಸುತ್ತಳತೆ ಕನಿಷ್ಠ 86 ಸೆಂ.ಮೀ ಇದ್ದು, 5 ಸೆಂ.ಮೀ ಗಳಷ್ಟು ವಿಸ್ತರಿಸಬೇಕು ಜೊತೆಗೆ ಶ್ರವಣ ಮತ್ತು ದೃಷ್ಟಿ ಸಾಮರ್ಥ್ಯ ಚೆನ್ನಾಗಿರಬೇಕು.
ಮಹಿಳಾ ಅಭ್ಯರ್ಥಿಗಳ ಎತ್ತರ 117 ಸೆಂ. ಮೀ ಇದ್ದು, 46 ಕೆ.ಜಿ ತೂಕ ಹೊಂದಿರಬೇಕು.
*ದೈಹಿಕ ಸಾಮರ್ಥ್ಯ ಪರೀಕ್ಷೆ:
ಪರೀಕ್ಷೆ ಪುರುಷರಿಗೆ ಮಹಿಳೆಯರಿಗೆ
100 ಮೀ. ಓಟ 15 ಸೆಕೆಂಡ್ 18.5 ಸೆಕೆಂಡ್
ಎತ್ತರ ಜಿಗಿತ 1.20 ಮೀಟರ್ 0.90 ಮೀಟರ್
ಉದ್ದ ಜಿಗಿತ 3.80 ಮೀಟರ್ 2.50 ಮೀಟರ್
ಗುಂಡು ಎಸೆತ 5.60 ಮೀಟರ್ 3.75 ಮೀಟರ್
800 ಮೀ. ಓಟ 2.50 ನಿಮಿಷ —-
200 ಮೀ. ಓಟ —- 40 ಸೆಕೆಂಡ್
ಈ ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಂದರ್ಶನದ ಮೂಲಕ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಅಭ್ಯರ್ಥಿಯ ಆಯ್ಕೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿಗಳನ್ನು http://kpdonline.co.in ಜಾಲತಾಣದ ಮೂಲಕ ಭರ್ತಿ ಮಾಡಿ, ಅಗತ್ಯ ದಾಖಲೆ( ಭಾವಚಿತ್ರ, ಅಂಕಪಟ್ಟಿ, ಸಹಿ ಇತ್ಯಾದಿ)ಗಳನ್ನು ತುಂಬಿ, ಚಲನ್ ಪಡೆದು ಬ್ಯಾಂಕಿನಲ್ಲಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಜನವರಿ 9 ಕೊನೆಯ ದಿನ. ಶುಲ್ಕ ಪಾವತಿ ಮಾಡಲು ಜನವರಿ 11 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ: http://kpdonline.co.in/PDF/ Notification.pdf ಸಂಪರ್ಕಿಸಿ.
ಎನ್. ಅನಂತನಾಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.