2000 ಪುಟಗಳು, 5 ವಿದ್ಯಾರ್ಥಿನಿಯರು!

Team Udayavani, May 30, 2017, 12:18 PM IST

copy1.jpg

ಕಾಪಿ ಹೊಡೆಯೋದು ಬರೀ ಎಸ್ಸೆಸ್ಸೆಲ್ಸಿ, ಪಿಯುಸಿ, ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಮಾತ್ರವೇ ಅಲ್ಲ. ನಾವು ಮೆಡಿಕಲ… ವಿದ್ಯಾರ್ಥಿಗಳೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಮುನ್ನಾಭಾಯಿ ಎಂ.ಬಿ.ಬಿ.ಎಸ್‌ ಸಿನಿಮಾ ನೋಡಿದ್ದೀರಿ ತಾನೇ? ನೋಡಿದ್ದರೆ, ಅದರಲ್ಲಿ ಸಂಜಯ್‌ ದತ್‌ ಹೇಗೆ ಕಾಪಿ ಹೊಡೆಯುತ್ತಾರೆ ಎಂಬುದು ತಿಳಿದಿರುತ್ತದೆ. ನಮ್ಮ ಪರಿಸ್ಥಿತಿ ಹೇಗೆಂದರೆ ಎಷ್ಟೋ ಸಲ ಕಾಪಿ ಹೊಡೆದೂ ಪ್ರಯೋಜನವಾಗುವುದಿಲ್ಲ. ಮೆಡಿಕಲ್‌ ಪಾಸು ಮಾಡುವುದೆಂದರೆ ಅಷ್ಟು ಕಷ್ಟ! ನಿಜಕ್ಕೂ ಅದು ಯುದ್ಧವೇ ಸರಿ. 

ಇಷ್ಟು ದಿನ ಕಷ್ಟಪಟ್ಟು, ಓತ್ಲಾ ಹೊಡೆದು ಓದಿ ಉಪಯೋಗವಾಗುತ್ತಿಲ್ಲ ಎಂದೆನಿಸಿ ನಾವೊಂದಷ್ಟು ಮಂದಿ ಸ್ನೇಹಿತರು ಸೇರಿ ಕ್ಯಾಂಟೀನಿನಲ್ಲಿ ದುಂಡು ಮೇಜಿನ ಸಭೆ ನಡೆಸಿದೆವು. ಸಭೆಯಲ್ಲಿ ಒಂದು ಪ್ಲಾನು ರಚನೆಯಾಯ್ತು. ಅದರ ಪ್ರಕಾರ ಎಲ್ಲರೂ ಸಾಮೂಹಿಕವಾಗಿ ಕಾಪಿ ಮಾಡುವುದು ಅಂತಾಯ್ತು. ಒಬಿಜಿ ಅನ್ನೋ ಮಹಾಸಾಗರದಂಥ  ಸಬೆjಕ್ಟ್ ಅನ್ನು ಒಂದೇ ದಿನದಲ್ಲಿ ಓದಿ ಮುಗಿಸೋದು ಅಸಾಧ್ಯವಾಗಿತ್ತು. ಹೀಗಾಗಿ 2000 ಪುಟಗಳ ಟೆಕ್ಸ್ಟ್ಬುಕ್ಕನ್ನು ನಾವೈದು ಮಂದಿ ಸ್ನೇಹಿತರು ಭಾಗ ಮಾಡಿಕೊಂಡು ಕಾಪಿ ಚೀಟಿಗಳನ್ನು ಸಿದ್ಧಪಡಿಸುವ ಪುಣ್ಯಕಾರ್ಯದಲ್ಲಿ ಮಗ್ನರಾದೆವು. ಅಂತೂ ಇಂತೂ ಹೇಗೋ ಕಾರ್ಯ ಮುಗಿಯಿತು. ಮರುದಿನ ಪರೀಕ್ಷೆ. 

ಮೇಷ್ಟ್ರು ಬಂದ್ರು. ಅವರು ತುಂಬಾ ಸ್ಟ್ರಿಕುr. ಅಯ್ಯೋ ಈ ಆಸಾಮಿ ಬಂದಿದ್ದಾರಲ್ಲ, ಇವತ್ತು ಕಾಪಿ ಹೊಡೆದಂತೆಯೇ ಎಂದುಕೊಂಡು ಪಾಸಾಗುವ ಆಸೆ ಬಿಟ್ಟೆವು. ಹಾಲ್‌ ಒಳಗೆ ರೋಲ್‌ ನಂಬರ್‌ ಪ್ರಕಾರವಾಗಿ ಕುಳಿತೆವು. ಆದರೆ ಮೇಷ್ಟ್ರ ಪ್ಲಾನೇ ಬೇರೆಯಾಗಿತ್ತು. ಅವರು ಅಲ್ಫಾಬೆಟಿಕಲ್‌ ಆರ್ಡರ್‌ನಲ್ಲಿ ಕೂರುವಂತೆ ಹೇಳಿದರು. ನಮ್ಮ ದುರಾದೃಷ್ಟ ಎಷ್ಟು ಚೆನ್ನಾಗಿತ್ತೆಂದರೆ ನಾವೈದು ಮಂದಿಯ ಹೆಸರುಗಳು “ಎ’ ಇಂದಲೇ ಶುರುವಾಗುತ್ತಿದ್ದಿದ್ದರಿಂದ ಮೊದಲನೇ ಸಾಲಿನಲ್ಲಿ ನಮ್ಮನ್ನು ಕೂರಿಸಿದರು. 

ನಾವೆಲ್ಲರೂ ಮುಖ ಮುಖ ನೋಡಿಕೊಂಡೆವು. ಮೊದಲನೇ ಸಾಲಿನಲ್ಲಿ ಕೂತು ಕಾಪಿ ಹೇಗೆ ಹೊಡೆಯುವುದು ಎಂಬುದೇ ದೊಡ್ಡ ಸವಾಲಾಯ್ತು. ಹಾಗೂ ಹೀಗೂ ಅತ್ತಿಂದಿತ್ತ, ಇತ್ತಿಂದತ್ತ ಉತ್ತರಗಳನ್ನು ನೋಡಿಕೊಂಡು ಉತ್ತರಪತ್ರಿಕೆ ತುಂಬಿಸಿದೆವು. ಕಾಪಿ ಹೊಡೆಯುವುದಕ್ಕಿಂತ ಓದುವುದೇ ಎಷ್ಟೋ ಸುಲಭ ಅನ್ನೋದು ಅವತ್ತು ನಾವು ಕಲಿತ ಪಾಠ. ಕಾಪಿ ಹೊಡೆದಿದ್ದು ಅದೇ ಕೊನೆ.
ಅದ್ಯಾವ ಮಾಯೆಯೋ ಏನೋ, ಆ ಪರೀಕ್ಷೆಯಲ್ಲಿ ನಾವು ಪಾಸಂತೂ ಆದ್ವಿ!

– ಚಿನ್ನಿ, ಮೈಸೂರು

ಟಾಪ್ ನ್ಯೂಸ್

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.