ಕಡಲ ಮೇಲೆ ತೇಲುವ ಹುಡುಗ


Team Udayavani, Oct 17, 2017, 7:15 AM IST

17-1.jpg

ನಮ್ಮ ಕನಸುಗಳು ಕೈಗೂಡಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ ತನ್ನಿಂತಾನೆ ಜಗತ್ತು ನಮ್ಮ ಆಶಯಗಳು ಕೈಗೂಡಲು ಸಹಾಯ ಹಸ್ತ ಚಾಚುತ್ತದೆ ಎಂಬುದಕ್ಕೆ S V Delos ಒಂದು ಉದಾಹರಣೆಯಷ್ಟೇ…

“ಕಾಣದ ಕಡಲಿಗೆ ಹಂಬಲಿಸಿದೆ ಮನ’… ರಾಷ್ಟ್ರಕವಿ ಜಿ. ಎಸ್‌. ಶಿವರುದ್ರಪ್ಪನವರ ಪ್ರಸಿದ್ಧ ರಚನೆ. ಕೇವಲ ಕವಿಗಷ್ಟೇ ಅಲ್ಲ, ಸಾಮಾನ್ಯನಿಗೂ ಕಡಲು ಬಹುವಾಗಿ ಕಾಡಬಲ್ಲದು. ಮಾನವ ನಡೆದು ಬಂದ ಹಾದಿಯನ್ನು ಗಮನಿಸಿದಾಗ ಎಲ್ಲ ಕಾಲಘಟ್ಟಗಳಲ್ಲೂ ಕಡಲನ್ನು ದಾಟಿದ್ದಾನೆ, ದಾಟಲು ಯತ್ನಿಸಿದ್ದಾನೆ. ಸುಸಜ್ಜಿತ ನಾವೆಗಳಲ್ಲಿದ, ನಾಗರಿಕತೆ ಅಷ್ಟಾಗಿ ಬೆಳೆಯದ 17 ಮತ್ತು 18ನೇ ಶತಮಾನದಲ್ಲಿಯೂ ಕಡಲ ಯಾನದ ಹುಚ್ಚು ಜೋರಾಗಿಯೇ ಇತ್ತು.

ಹೀಗೆ ಮನುಷ್ಯ ನೀರನ್ನು ಬಿಟ್ಟು, ಆಕಾಶದಲ್ಲಿ ಹಾರುವಷ್ಟರ ಮಟ್ಟಿಗೆ ವಿಜ್ಞಾನ ಬೆಳೆದಿದ್ದರೂ ಮನುಷ್ಯ ಕಡಲ ಸೆಳೆತದಿಂದ ಮುಕ್ತನಾಗಿಲ್ಲ. ಹೀಗೆ ಉಪ್ಪುನೀರಿನೆಡೆಗೆ ಆಕರ್ಷಿತರಾದವರಲ್ಲಿ ಅಮೆರಿಕದ ಸಿಯಾಟಲ್‌ನ ಬ್ರಿಯಾನ್‌ ಟ್ರಾಟ್‌ಮನ್‌ ಕೂಡ ಒಬ್ಬರು. ಆಕರ್ಷಣೆ ಎಷ್ಟರಮಟ್ಟಿಗಿತ್ತೆಂದರೆ 2009ರ ಸುಮಾರಿನಲ್ಲಿ ಬ್ರಿಯಾನ್‌ ಮಾಡುತ್ತಿದ್ದ ಕೆಲಸ ಬಿಟ್ಟು, ಕೈಲಿದ್ದದ್ದನ್ನೆಲ್ಲಾ ಮಾರಿ ಕಡಲಿಗಿಳಿದೇ ಬಿಟ್ಟರು. ಆಸ್ತಿ ಮಾರಿದ ಹಣದಲ್ಲಿ ಖರೀದಿಸಿದ ನಾವೆಯ ಹೆಸರು SV Delos (ಸೇಲಿಂಗ್‌ ವೆಸಲ್‌ ಡೆಲೊಸ್‌). ನಂತರದಲ್ಲಿ 53 ಅಡಿ ಉದ್ದದ ಅಮೆಲ್‌ ಸುಪರ್‌ ಮರಮು (ಸೇಲಿಂಗ್‌ ಬೋಟ್‌) ಅನ್ನೇ ಈತ ಮನೆ ಮಾಡಿಕೊಂಡಿದ್ದಾನೆ.

ಸಿಯಾಟಲ್‌ನಿಂದ ಹೊರಟ ಈ ನಾವೆ ಈಗಾಗಲೇ ಜಗತ್ತಿನ ಪ್ರಮುಖ ಸಾಗರಗಳನ್ನು ದಾಟಿದೆ. ನೂರಾರು ದ್ವೀಪ, ಬಂದರುಗಳಲ್ಲಿ ಲಂಗರು ಹಾಕಿದೆ. ಕೇವಲ ಕಡಲು ದಾಟಿದ್ದರೆ ಈತ ಇಷ್ಟೊಂದು ಪ್ರಖ್ಯಾತನಾಗುತ್ತಿರಲಿಲ್ಲ. ಆದರೆ, ಈತ ಹೋದಲ್ಲೆಲ್ಲ ಸ್ಥಳೀಯರೊಂದಿಗೆ ಬೆರೆತಿದ್ದಾನೆ, ಬೆರೆತು ಕಲಿತಿದ್ದಾನೆ. ಈ ಮಹಾ ಪರ್ಯಟನೆಯಲ್ಲಿ ಬ್ರಿಯಾನ್‌ಗೆ ಸಾಥ್‌ ಕೊಟ್ಟಿರುವವರು ಆತನ ತಮ್ಮ ಬ್ರಾಡಿ ಟ್ರಾಟ್‌ವಾನ್‌ ಮತ್ತು ಗೆಳತಿ ಕರಿನ್‌ ಸೈರೆನ್‌. ಈ ಮೂವರು ಸಮುದ್ರಯಾನದ ಕಾಯಂ ಸಹಯಾತ್ರಿಕರು. ಮಾರ್ಗ ಮಧ್ಯದಲ್ಲಿ 14 ದೇಶಗಳ 50ಕ್ಕೂ ಹೆಚ್ಚು ಮಂದಿ ಸಹ ಪ್ರಯಾಣಿಕರಾಗಿ ಇವರ ಜೊತೆಗೂಡಿದ್ದಾರೆ, ನಂತರದಲ್ಲಿ ಬೀಳ್ಕೊಟ್ಟಿದ್ದಾರೆ. ಇವರ ಯಾನ ಮಾತ್ರ ಮುಂದೆ ಸಾಗುತ್ತಲೇ ಇದೆ.

ಈ ಅಭೂತ ಪೂರ್ವ ಪಯಣವನ್ನು ತಮ್ಮ ವ್ಲಾಗ್‌ನ (ಬ್ಲಾಗ್‌ನಂಥದೇ ಆದರೆ ದೃಶ್ಯ ಮಾಧ್ಯಮದ ಬಳಕೆಯಿರುತ್ತದೆ) ಮೂಲಕ ಸಂಕ್ಷಿಪ್ತವಾಗಿ ಯೂ ಟ್ಯೂಬ್‌ನಲ್ಲಿ ಬಿತ್ತರಿಸಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಾಗೆಯೇ ಲಂಗರು ಹಾಕಿದಲ್ಲೆಲ್ಲ ನೂರಾರು ಗೆಳೆಯರನ್ನು ಸಂಪಾದಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಇಂಥ ಹಲವಾರು ವ್ಲಾಗ್‌ಗಳಿವೆ. ಆದರೆ, ತಮ್ಮ ವ್ಯಕ್ತಿತ್ವ ಮತ್ತು ನಿರೂಪಣೆಯಿಂದ ಎಲ್ಲರನ್ನೂ ತಮ್ಮತ್ತ ಸೆಳೆಯುತ್ತಿದ್ದಾರೆ ಈ ಸಾಗರದ ಅಲೆಮಾರಿಗಳು. ಇವರ ಈ ನಿರಂತರ ಯಾನಗಳಿಗೆ ದುಡ್ಡು ಎಲ್ಲಿಂದ ಬರುತ್ತೆ? ಯಾರು ಕೊಡುತ್ತಾರೆ ಎಂದು ಯೋಚಿಸುತ್ತಿದ್ದೀರಾ? ಇದನ್ನೂ ಜನರೇ ಕೊಡುತ್ತಿದ್ದಾರೆ! ತಮ್ಮ ಕೈಲಾದಷ್ಟು ಹಣವನ್ನು ಇವರ ಪರ್ಯಟನೆಗೆಂದು ಕೊಡುವವರ ಸಂಖ್ಯೆ ಬಹಳಷ್ಟಿದೆ. ಉಳಿದಂತೆ ಪ್ಯಾಟ್ರಿಯಾನ್‌ (Patreon.com) ಎಂಬ ಕ್ರೌಡ್‌ ಫ‌ಂಡಿಂಗ್‌ ಜಾಲತಾಣದ ಮೂಲಕ ಪ್ರತಿ ತಿಂಗಳೂ ಇವರಿಗೆ ನೆರವಾಗುವವರೂ ಇದ್ದಾರೆ.

ಜಗತ್ತಿನಲ್ಲಿ ಅನೇಕರಿಗೆ ಇಂಥ ಕನಸುಗಳಿರುತ್ತವೆ. ಆದರೆ, ಹಲವು ಕಾರಣಗಳಿಂದ ಇವೆಲ್ಲ ಸಾಕಾರಗೊಳ್ಳುವುದೇ ಇಲ್ಲ. ಕನಿಷ್ಠ ಪಕ್ಷ ತಮ್ಮ ಆಸೆ- ಆಕಾಂಕ್ಷೆಗಳ ಈಡೇರಿಕೆಗೆ ಪ್ರಯತ್ನವನ್ನೂ ನಾವು ಮಾಡುವುದಿಲ್ಲ. ಅಂಥ ಹಲವರಿಗೆ S V Delosನ ಮಂದಿ ಅಪವಾದ. ಸದಾ ಹಣ, ಪ್ರತಿಷ್ಠೆಗಳ ಹಿಂದೆ ಓಡುತ್ತಿರುವ ಜಗತ್ತಿನಿಂದ ದೂರವಾಗಿ ದೂರ ಕಡಲಿನಲ್ಲಿ ಕಣ್ಮರೆಯಾಗುವ ಇವರು ನಿಜಕ್ಕೂ ಗ್ರೇಟ್‌.

ಕಾರ್ತಿಕ್‌ ಎನ್‌. 

ಟಾಪ್ ನ್ಯೂಸ್

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.